For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವ ಸಮಸ್ಯೆಯೇ-ಇಲ್ಲಿವೆ ಸೂಕ್ತ ಮನೆಮದ್ದುಗಳು

ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು-ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ. ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಇಲ್ಲಿದೆ ನೋಡಿ ಸರಳ ಟಿಪ್ಸ್

By Arshad
|

ಕೂದಲು ಉದುರುತ್ತಿರುವ ಸಮಸ್ಯೆಯೇ? ಇಂದು ಲಭ್ಯವಿರುವ ರಾಸಾಯನಿಕ ಆಧಾರಿತ ಪ್ರಸಾಧನಗಳು ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ. ಆದ್ದರಿಂದ ಕೊಂಚ ನಿಧಾನವಾಗಿಯಾದರೂ ಸರಿ, ಯಾವುದೇ ಅಡ್ಡಪರಿಣಾಮಗಳಿಲ್ಲದ ಹಾಗೂ ಸಮರ್ಥವಾದ ಮನೆಮದ್ದುಗಳೇ ಇದಕ್ಕೆ ಸೂಕ್ತ ಪರಿಹಾರವಾಗಿದೆ. ಕೂದಲ ತಜ್ಞರ ಪ್ರಕಾರ ಪ್ರತಿದಿನ ಐವತ್ತರಿಂದ ನೂರು ಕೂದಲುಗಳನ್ನು ಕಳೆದುಕೊಳ್ಳುವುದು ಸಾಮಾನ್ಯವಾಗಿದ್ದು ಸರಿಸುಮಾರು ಇಷ್ಟೇ ಕೂದಲುಗಳು ಮತ್ತೆ ಹುಟ್ಟುತ್ತವೆ. ಕೂದಲುದುರುವ ಸಮಸ್ಯೆಗೆ ಬಿಸಿ ಎಣ್ಣೆಯ ಮಸಾಜ್...

ಆದರೆ ಉದುರುವ ಪ್ರಮಾಣ ಇದಕ್ಕಿಂತ ಹೆಚ್ಚಾದರೆ ಮಾತ್ರ ಚಿಂತೆಗೆ ಕಾರಣವಾಗಿದೆ. ಆದರೆ ಈಗ ಚಿಂತೆ ಬೇಡ. ಕೆಳಗೆ ವಿವರಿಸಿರುವ ಕೆಲವು ಸುಲಭ ವಿಧಾನಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸಿದರೆ ಕೂದಲು ಉದುರುವುದನ್ನು ನಿಲ್ಲಿಸುವುದು ಮಾತ್ರವಲ್ಲ, ಈಗಿರುವ ಕೂದಲನ್ನು ಇನ್ನಷ್ಟು ಸೊಂಪಗಾಗಿಸಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ.....

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

*ಕೊಂಚ ಅಪ್ಪಟ ಕೊಬ್ಬರಿ ಎಣ್ಣೆಯನ್ನು ಉಗುರುಬೆಚ್ಚಗೆ ಬಿಸಿಮಾಡಿ ಕೂದಲ ಬುಡದಿಂದ ತುದಿಯವರೆಗೂ ನಯವಾದ ಮಸಾಜ್ ಮೂಲಕ ಹಚ್ಚಿ

*ಒಂದು ಗಂಟೆಯ ಬಳಿಕ ತೊಳೆದುಕೊಳ್ಳಿ.

*ಪರ್ಯಾಯವಾಗಿ ಒಂದು ಕಾಯಿಯನ್ನು ತುರಿದು ಹಿಂಡಿ ಹಾಲನ್ನು ಸಂಗ್ರಹಿಸಿ. ಈ ಹಾಲನ್ನು ಕೊಂಚ ನೀರಿನೊಂದಿಗೆ ಬೆರೆಸಿ ನಿಮ್ಮ ತಲೆಯಲ್ಲಿ ಯಾವ ಭಾಗದಲ್ಲಿ ಕೂದಲು ಹೆಚ್ಚು ಹೋಗಿದೆಯೋ ಅಲ್ಲಿ ದಪ್ಪನಾಗಿ ರಾತ್ರಿ ಮಲಗುವ ಮುನ್ನ ಹಚ್ಚಿ. *ಇಡಿಯ ರಾತ್ರಿ ಹಾಗೇ ಬಿಟ್ಟು ಮರುದಿನ ಬೆಳಿಗ್ಗೆ ಸ್ನಾನ ಮಾಡಿ.

ಈರುಳ್ಳಿ ರಸ

ಈರುಳ್ಳಿ ರಸ

*ಒಂದು ಮಧ್ಯಮ ಗಾತ್ರದ ನೀರುಳ್ಳಿಯನ್ನು ಕೊಚ್ಚಿ ನುಣ್ಣಗೆ ಕಡೆದು ಹಿಂಡಿ ರಸ ಸಂಗ್ರಹಿಸಿ.

*ಈ ರಸವನ್ನು ತಲೆಯ ಚರ್ಮಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ

ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಬಳಿಕ ಕೂದಲನ್ನು ಹರಡಿ ಒಣಗಲು ಬಿಡಿ.

*ಉತ್ತಮ ಪರಿಣಾಮಕ್ಕಾಗಿ ವಾರಕ್ಕೆರಡು ದಿನ ಈ ವಿಧಾನವನ್ನು ಅನುಸರಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

*ಕೆಲವು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಜಜ್ಜಿಟ್ಟುಕೊಳ್ಳಿ.

ಬಳಿಕ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಈ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕೆಲವು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ.

*ನಂತರ ಉರಿ ಆರಿಸಿ ತಣಿಯಲು ಬಿಡಿ. ಸುಮಾರು ಉಗುರುಬೆಚ್ಚನೆಯಷ್ಟು ತಣ್ಣಗಾದ ಬಳಿಕ ಈ ಎಣ್ಣೆಯನ್ನು ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮಾಡುತ್ತಾ ಇಡಿಯ ತಲೆಗೆ ಹಚ್ಚಿ. ಸುಮಾರು ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಕೂದಲನ್ನು ತೊಳೆದುಕೊಳ್ಳಿ.

*ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ.

ದಾಸವಾಳ

ದಾಸವಾಳ

*ದಾಸವಾಳದ ಹೂವಿನ ಕೆಲವು ದಳಗಳನ್ನು ಚೆನ್ನಾಗಿ ಜಜ್ಜಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನುಣ್ಣಗೆ ಕಡೆಯಿರಿ.

*ಈ ಲೇಪನವನ್ನು ತಲೆಗೂದಲಿಗೆ ಹಚ್ಚಿ ಕೆಲವು ಘಂಟೆಗಳ ಕಾಲ ಹಾಗೇ ಇರಿಸಿ.

ಬಳಿಕ ತಣ್ಣೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

English summary

Hair fall treatment at home remedies that work!

Hair fall problem? Looking for a treatment that works without the side-effects of chemicals or medications? You should try these home remedies. According to hair experts, losing 50-100 strands of hair every day is fairly normal. It is only a cause of concern when you lose more than that
Story first published: Tuesday, May 9, 2017, 10:49 [IST]
X
Desktop Bottom Promotion