ಬೊಕ್ಕ ತಲೆಯಲ್ಲಿ ಕೂಡಲೇ ಕೂದಲು ಚಿಗುರಿಸುವ ಮನೆ ಮದ್ದುಗಳು

By: manu
Subscribe to Boldsky

ಬೋಳು ಅಥವಾ ಬೊಕ್ಕ ತಲೆ ಹೊಂದಿದ್ದರೆ ಅವರ ಸಮಸ್ಯೆ ಹೇಳತೀರದು. ಈ ಬೋಳುತಲೆಯನ್ನು ಹಿಡಿದುಕೊಂಡು ಎಲ್ಲಿಗೂ ಹೋಗುವಂತಿಲ್ಲ. ನಾಲ್ಕು ಜನರ ಮಧ್ಯೆ ನಿಂತರೆ ಬೋಳುತಲೆಯೇ ಎದ್ದು ಕಾಣುವಂತಿರುತ್ತದೆ. ಇನ್ನೂ ದುಃಖಕರ ವಿಷಯವೇನೆಂದರೆ ಪುರುಷರಿಗೇ ಈ ಸಮಸ್ಯೆ ಜಾಸ್ತಿ ಕಾಡುತ್ತಿರುವುದು....

ಇದಕ್ಕೆ ಕಾರಣವೇನು, ಅದರಲ್ಲೂ ಪುರುಷರನ್ನೇ ಕಾಡುವುದಕ್ಕೆ ಏನು ಕಾರಣವಿರಬಹುದು ಎಂಬ ವಿಷಯದ ಮೇಲೆ ಹಲವಾರು ಸಂಶೋಧನೆಗಳು ನಡೆಯುತ್ತಿದ್ದರೂ ಇದಕ್ಕೆ ಪುರುಷರಲ್ಲಿರುವ ಟೆಸ್ಟ್ರೋಸ್ಟೆರೋನ್ ಹಾರ್ಮೋನುಗಳೇ ಕಾರಣ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆಯೇ ವಿನಃ ಯಾರೂ ಮತ್ತೆ ತಲೆಯಲ್ಲಿ ಹೊಸ ಕೂದಲು ಚಿಗುರಿಸುತ್ತೇವೆ ಎಂದು ಎದೆ ತಟ್ಟಿ ಹೇಳುತ್ತಿಲ್ಲ...

ಮಹಿಳೆಯರ ಬೊಕ್ಕತಲೆ ಸಮಸ್ಯೆ ನಿವಾರಣೆಗೆ ಟಾಪ್ ಸಲಹೆಗಳು

ಆದರೆ ಚಿಂತಿಸಬೇಡಿ, ಬೊಕ್ಕ ತಲೆಯ ಮೇಲೆ ಕೂದಲು ಬೆಳೆಯಲು ಮನೆಯಲ್ಲಿಯೇ ಹಲವಾರು ಮನೆ ಮದ್ದುಗಳು ದೊರೆಯುತ್ತವೆ. ಅವುಗಳನ್ನು ಸುಲಭವಾಗಿ ಬಳಸಿಕೊಂಡು, ಸ್ವಾಭಾವಿಕವಾಗಿ ನಿಮ್ಮ ತಲೆಯಲ್ಲಿ ಕೂದಲನ್ನು ಬೆಳೆಯುವ ಹಾಗೆ ಮಾಡಬಹುದು!, ಬನ್ನಿ ಅದಕ್ಕಾಗಿ ಯಾವ ಮನೆ ಮದ್ದುಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ ಮುಂದೆ ಓದಿ...

ಹರಳೆಣ್ಣೆಯ ಮಸಾಜ್

ಹರಳೆಣ್ಣೆಯ ಮಸಾಜ್

ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.

ಮೊಸರು ಮತ್ತು ಕಡಲೆಹಿಟ್ಟಿನ ಲೇಪ

ಮೊಸರು ಮತ್ತು ಕಡಲೆಹಿಟ್ಟಿನ ಲೇಪ

* ಎರಡರಿಂದ ಮೂರು ದೊಡ್ಡಚಮಚ ಹುಳಿಮೊಸರು ಮತ್ತು ಎರಡು ದೊಡ್ಡಚಮಚ ಕಡೆಹಿಟ್ಟು ಬೆರೆಸಿ ಅತಿ ದಪ್ಪನೆಯೂ ಅಲ್ಲದ, ಅತಿ ತೆಳುವೂ ಅಲ್ಲದ ಲೇಪನ ತಯಾರಿಸಿ.

* ಈ ಲೇಪನವನ್ನು ತಲೆಗೆ ಹಚ್ಚಿ ಒಂದು ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ.

* ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಅನುಸರಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಬಕ್ಕತಲೆಯಲ್ಲಿ ಕೂದಲು ಹುಟ್ಟುವ ಸಾಧ್ಯತೆ ಹೆಚ್ಚುತ್ತದೆ.

ಈರುಳ್ಳಿ

ಈರುಳ್ಳಿ

* ಬಿಳಿ ಅಥವಾ ಕೆಂಪಗಿರುವ ದೊಡ್ಡ ಗಾತ್ರದ ಈರುಳ್ಳಿಯ ಸಿಪ್ಪೆ ಸುಲಿದು ಅಡ್ಡಲಾಗಿ ಎರಡು ಭಾಗಗಳಾಗಿ ಕತ್ತರಿಸಿ. ಈ ಭಾಗದಿಂದ ಒಸರುತ್ತಿರುವ ರಸವನ್ನು ಕೂದಲು ಹೋಗಿರುವ ಭಾಗದ ಮೇಲೆ ದಿನಕ್ಕೆರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ನಯವಾಗಿ ಉಜ್ಜಿ.

* ಈ ಭಾಗದ ಚರ್ಮ ಕೊಂಚ ಕೆಂಪಗಾಗುವವರೆಗೂ ಉಜ್ಜಿ. ಈರುಳ್ಳಿಯ ರಸ ಖಾಲಿಯಾದಂತೆ ಅನ್ನಿಸಿದರೆ ಕೊಂಚ ಭಾಗ ಕತ್ತರಿಸಿ ಹೊಸ ಪಾರ್ಶ್ವದಿಂದ ಉಜ್ಜಿ.

* ಬಳಿಕ ಈ ಭಾಗಕ್ಕೆ ಕೊಂಚವೇ ಜೇನುತುಪ್ಪ ಹಚ್ಚಿ ಕೊಂಚ ಕಾಲ ಬಿಟ್ಟು ತೊಳೆದುಕೊಳ್ಳಿ. ಪ್ರತಿದಿನ ಈ ವಿಧಾನ ಅನುಸರಿಸಿದರೆ ಕೆಲವೇ ದಿನಗಳಲ್ಲಿ ಹೊಸ ಕೂದಲು ಹುಟ್ಟುತ್ತದೆ.

 ನೆಲ್ಲಿಕಾಯಿ

ನೆಲ್ಲಿಕಾಯಿ

* ನೆಲ್ಲಿಕಾಯಿಯನ್ನು ಚೆನ್ನಾಗಿ ಒಣಗಿಸಿ ಈ ತುಂಡುಗಳನ್ನು ಮುಳುಗುವಷ್ಟು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ.

* ಕುದಿಯಲು ಪ್ರಾರಂಭವಾದ ಬಳಿಕ ಒಂದೆರಡು ನಿಮಿಷ ಬಿಟ್ಟು ಉರಿ ಆರಿಸಿ ತಣಿಯಲು ಬಿಡಿ.

* ಬಳಿಕ ಈ ಎಣ್ಣೆಯನ್ನು ಸೋಸಿ ಒಂದು ಭದ್ರವಾದ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಮುಚ್ಚಳ ಮುಚ್ಚಿ ಸಂಗ್ರಹಿಸಿ.

* ಈ ಎಣ್ಣೆಯನ್ನು ನಿಮ್ಮ ತಲೆಗೆ ನಿತ್ಯವೂ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ಸ್ನಾನ ಮಾಡಿ.

* ಇದರಿಂದ ಕೂದಲು ಉದುರುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಹೊಸ ಕೂದಲು ಹುಟ್ಟಲೂ ನೆರವಾಗುತ್ತದೆ.

ಮದರಂಗಿ ಎಲೆಗಳು

ಮದರಂಗಿ ಎಲೆಗಳು

ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕೇಶವರ್ಧಕ ಮತ್ತು ಕೂದಲನ್ನು ಕಪ್ಪಾಗಿಡಲು ಬಳಸುವ ಔಷಧ. ಇದು ಮದುವೆಯ ಸಮಯದಲ್ಲಿ ಕೈಯಲ್ಲಿ ಬಿಡಿಸುವ ವಿವಿಧ ಚಿತ್ತಾರಗಳ ಕಾರಣದಿಂದಲೂ ಬಹಳ ಪ್ರಸಿದ್ಧ. ಸಾಸಿವೆ ಎಣ್ಣೆಯಲ್ಲಿ ಮದರಂಗಿ ಎಲೆಗಳನ್ನು ಬೇಯಿಸಬೇಕು ಇದನ್ನು ಸಾಮಾನ್ಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಾಗೂ ತಲೆಯ ಮೇಲೆ ಹಚ್ಚಿಕೊಳ್ಳಿ.

ಮೆಂತೆ ಕಾಳುಗಳು

ಮೆಂತೆ ಕಾಳುಗಳು

ಮೆಂತೆ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

ಪೇರಳೆ ಎಲೆಗಳು

ಪೇರಳೆ ಎಲೆಗಳು

ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ.

ಎಲ್ಲರ ಗೋಜಲು, ಪದೇಪದೇ ಉದುರುವ ತಲೆಕೂದಲು

English summary

Effective Ways To Stop Hair Loss in Men

For millions of men all across the world, regardless of culture, class, nationality, religion, or color, hair loss is an unavoidable aspect of growing older. There are those fortunate men who never seem to lose a single hair and take their full head of hair well into their 70s and 80s, but for the vast majority of men, losing their hair is a problem they begin to face in their 40s or 50s, or even earlier for some people.
Subscribe Newsletter