ನೈಸರ್ಗಿಕ ಹೇರ್ ಪ್ಯಾಕ್-ಕೂದಲಿಗೆ ಯಾವುದೇ ಸಮಸ್ಯೆ ಬರಲ್ಲ...

By: manu
Subscribe to Boldsky

ಭಾರತೀಯರೂ ಸೌಂದರ್ಯ ಪ್ರಿಯರು, ಸಾವಿರಾರು ವರ್ಷಗಳ ಹಿಂದಿನಿಂದಲೂ ಮಹಿಳೆಯರು ತಮ್ಮ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಲು ಶ್ರಮ ವಹಿಸಿಕೊಂಡು ಬರುತ್ತಾ ಇದ್ದಾರೆ. ಉದ್ದಗಿನ, ರೇಷ್ಮೆಯಂತಹ ಹಾಗೂ ಕಾಂತಿಯುತ ಕೂದಲು ಭಾರತೀಯ ಮಹಿಳೆಯರ ಸೌಂದರ್ಯದ ಪ್ರತೀಕ. ಆದರೆ ಆಧುನಿಕ ಯುಗದಲ್ಲಿ ಹಲವಾರು ರೀತಿಯ ಸಮಸ್ಯೆಯಿಂದ ಕೂದಲು ಉದುರುವುದು ಸಾಮಾನ್ಯವಾಗಿದೆ. ಕೂದಲು ಸುಂದರ ಹಾಗೂ ಉದ್ದವಾಗಿದ್ದರೆ ಅದು ಆರೋಗ್ಯದ ಲಕ್ಷಣವೆನ್ನಬಹುದು.

ಇಂದಿನ ದಿನಗಳಲ್ಲಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಕರ. ಕಲುಷಿತ ವಾತಾವರಣ, ಅನಿಯಮಿತ ಹವ್ಯಾಸ, ಒತ್ತಡ, ಚಟ, ಆಹಾರ ಕ್ರಮ ಸರಿಯಾಗಿ ಇಲ್ಲದೆ ಇರುವುದು ಮತ್ತು ಇತರ ಕೆಲವೊಂದು ಕಾರಣಗಳಿಂದಾಗಿ ಕೂದಲು ಹಾಗೂ ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು. ಕೂದಲು ನಿಸ್ತೇಜವಾಗಿ ಉದುರುತ್ತಾ ಇದ್ದರೆ ಆಗ ನಿಮ್ಮ ದೇಹದಲ್ಲಿ ಏನಾದರೂ ಸಮಸ್ಯೆಯಿದೆ ಎಂದು ಹೇಳಬಹುದು. ಇದನ್ನು ಸರಿಪಡಿಸಬೇಕು. ನಾವು ಬಳಸುವಂತಹ ಗಡಸು ನೀರಿನಲ್ಲಿ ಹಲವಾರು ರೀತಿಯ ಖನಿಜಾಂಶಗಳು ಇವೆ. 

ಬರೀ ಎರಡೇ ದಿನಗಳಲ್ಲಿ ಕೂದಲುದುರುವ ಸಮಸ್ಯೆ ನಿಯಂತ್ರಣಕ್ಕೆ!

ಇದು ಕೂಡ ಕೂದಲಿಗೆ ಹಾನಿ ಮಾಡಬಹುದು. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಮತ್ತು ಕೂದಲಿನ ಉತ್ಪನ್ನಗಳು ಬಳಸುವುದರಿಂದಲೂ ಕೂದಲಿಗೆ ಹಾನಿಯುಂಟಾಗುವುದು. ಕೂದಲಿನ ಆರೋಗ್ಯ ಕಾಪಾಡಲು ಮನೆಯಲ್ಲೇ ತಯಾರಿಸುವಂತಹ ಕೆಲವು ಹೇರ್ ಪ್ಯಾಕ್ ನ್ನು ಬಳಸಿಕೊಳ್ಳಿ. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಅದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.

ನೈಸರ್ಗಿಕ ಹೇರ್ ಪ್ಯಾಕ್

ನೈಸರ್ಗಿಕ ಹೇರ್ ಪ್ಯಾಕ್

ಈ ಹೇರ್ ಪ್ಯಾಕ್ ಮಾಡಲು ತಲಾ ಎರಡು ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ, ಕಡಲೆ ಹಿಟ್ಟು ಮತ್ತು ದಾಸವಾಳ ಹೂವಿನ ಪುಡಿ, ಬೇವಿನ ಪುಡಿ, ತುಳಸಿ ಪುಡಿಗಳನ್ನು ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಈಗ ಎರಡು ಟೇಬಲ್ ಚಮಚದಷ್ಟು ಮೊಸರನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ಬುಡಕ್ಕೆ ಲೇಪಿಸಿ, 30 ನಿಮಿಷಗಳ ಕಾಲ ಬಿಡಿ. ನಿಮಗೆ ಅಗತ್ಯವಾದಲ್ಲಿ, ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಮುಚ್ಚಿಕೊಳ್ಳಬಹುದು. ನಂತರ ಇದನ್ನು ಗಿಡಮೂಲಿಕೆಗಳ ಶಾಂಪೂವಿನಿಂದ ತೊಳೆಯಿರಿ.

ಪಪ್ಪಾಯಿ+ಮೊಸರು ಬೆರೆಸಿ ಮಾಡಿದ ಹೇರ್ ಪ್ಯಾಕ್

ಪಪ್ಪಾಯಿ+ಮೊಸರು ಬೆರೆಸಿ ಮಾಡಿದ ಹೇರ್ ಪ್ಯಾಕ್

ಒಂದು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಂಡು, ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ. ಇದು ಒಡೆದ ಮತ್ತು ಹಾಳಾದ ಕೂದಲಿಗೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ

ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ

ಬಟ್ಟಲೊ೦ದರಲ್ಲಿ ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿರಿ. ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊ೦ಡ ಬಳಿಕ, ಮಿಶ್ರಣವನ್ನು ಕೇಶರಾಶಿಗೆ ಲೇಪಿಸಿಕೊಳ್ಳಿರಿ.ನೆತ್ತಿಯನ್ನೂ ಹಾಗೂ ಕೂದಲ ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವ೦ತೆ ಹಚ್ಚಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರಿನಿ೦ದ ಕೇಶರಾಶಿಯನ್ನು ತೊಳೆದುಕೊ೦ಡು ತದನ೦ತರ ಶ್ಯಾ೦ಪೂವಿನಿ೦ದ ತೊಳೆಯಿರಿ.

ಸಾಸಿವೆ ಎಣ್ಣೆ+ ದಾಲ್ಚಿನ್ನಿ ಪುಡಿ

ಸಾಸಿವೆ ಎಣ್ಣೆ+ ದಾಲ್ಚಿನ್ನಿ ಪುಡಿ

*ಸಾಸಿವೆ ಎಣ್ಣೆ- ಎರಡು ಟೇಬಲ್ ಚಮಚ

*ದಾಲ್ಚಿನ್ನಿ ಪುಡಿ- 2 ಟೀಚಮಚ

ತಯಾರಿಸುವ ಮತ್ತು ಬಳಸುವ ವಿಧಾನ

•ಮೇಲೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಸಣ್ಣ ಬೌಲ್‌‌ಗೆ ಹಾಕಿಕೊಂಡು ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ಸರಿಯಾಗಿ ಕಲಸಿಕೊಳ್ಳಿ.

•ಇನ್ನು ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಅದರಲ್ಲೂ ತಲೆಬುರುಡೆಗೆ ಹೆಚ್ಚು ಹಚ್ಚಿಕೊಳ್ಳಿ.

•ಕೆಲವು ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿಕೊಳ್ಳಿ.

•25 ನಿಮಿಷಗಳ ಕಾಲ ಕೂದಲನ್ನು ಹಾಗೆ ಬಿಡಿ.

•ನಂತರ ಕೂದಲನ್ನು ಉಗುರುಬೆಚ್ಚಗಿನ ನೀರು ಹಾಗೂ ಶಾಂಪೂನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಮೂರು ಬಾರಿ ಮಾಡಿ......

ಮದರಂಗಿ ಮತ್ತು ಸಾಸಿವೆ ಎಣ್ಣೆ

ಮದರಂಗಿ ಮತ್ತು ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಮತ್ತು ಮದರಂಗಿಯ ಮಾಸ್ಕ್ ಕೂದಲಿನ ಬೆಳವಣಿಗೆ ಹಾಗೂ ಕೂದಲಿನ ಬುಡದಲ್ಲಿರುವ ಕಿರುಚೀಲಗಳನ್ನು ಬಲಗೊಳಿಸುತ್ತದೆ. ಒಂದು ಕಪ್ ಮದರಂಗಿ ಹುಡಿಗೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಚಮಚ ನಿಂಬೆ ರಸ ಮತ್ತು ಎರಡು ಚಮಚ ಮೊಸರು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

English summary

Easy Homemade Hair Mask Recipes for Beautiful Hair

Now a days it is not that easy to get thick and lustrous hair. In this modern life, hair is subjected to various chemical treatments in salons, hair colours also contribute to hair damage. When you leave for work, you blow dry your hair to dry them fast. Let's have a look at some of the natural homemade hair mask for damaged hair. Following are some of the home remedies that make your hair healthy and shiny.
Story first published: Monday, July 10, 2017, 23:31 [IST]
Subscribe Newsletter