Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೂದಲಿನ ಸಹಜಕಾಂತಿಗೆ-ಕ್ಯಾರೆಟ್ ಹೇರ್ ಮಾಸ್ಕ್!
ಕ್ಯಾರೆಟ್ ಅಥವಾ ಗಜ್ಜರಿಯ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ ಎಂಬುದು ನಮಗೆ ಗೊತ್ತೇ ಇದೆ... ಆದರೆ ಇನ್ನೊಂದು ಸಂತಸದ ಸುದ್ದಿ ಎಂದರೆ ಕೂದಲಿನ ಆರೈಕೆಯಲ್ಲೂ ಎತ್ತಿದ ಕೈ...
ಸೌಂದರ್ಯವನ್ನು ಅಳೆಯುವುದು ಯಾವುದರಿಂದ ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರಿಸುವುದು ಸ್ವಲ್ಪ ಕಷ್ಟವಾಗಬಹುದು! ಯಾಕೆಂದರೆ ದೇಹದ ಪ್ರತಿಯೊಂದು ಅಂಗವು ಸರಿಯಾಗಿದ್ದು, ಅದು ಹೊಳಪನ್ನು ಹೊಂದಿದ್ದರೆ ಮಾತ್ರ ಸೌಂದರ್ಯವು ಎದ್ದು ಕಾಣುತ್ತದೆ. ಎಲ್ಲವೂ ಸರಿಯಾಗಿದ್ದು, ಕೂದಲು ಜೀವ ಕಳೆದುಕೊಂಡಿದ್ದರೆ ಆಗ ಅದು ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಕೂದಲಿನ ಸರ್ವ ಸಮಸ್ಯೆಗೂ ಅಂಗೈಯಲ್ಲಿಯೇ ಇದೆ ಮದ್ದು!
ನಿರ್ಜೀವ ಕೂದಲನ್ನು ರೇಷ್ಮೆಯ ಹಾಗೆ ಹೊಳೆಯುವಂತೆ ಮಾಡಲು ನೀವು ಹಲವಾರು ಪ್ರಯತ್ನ ಮಾಡಿರಬಹುದು. ಆದರೆ ಇದು ಸಾಲದು. ನೀವು ಮನೆಮದ್ದನ್ನು ಬಳಸಿದರೆ ಖಂಡಿತವಾಗಿಯೂ ರೇಷ್ಮೆಯಂತಹ ಕೂದಲನ್ನು ಪಡೆಯುವುದರಲ್ಲಿ ಸಂಶಯವೇ ಇಲ್ಲ. ಕೂದಲಿನ ಸೌಂದರ್ಯಕ್ಕೆ ಸರಳ ಟಿಪ್ಸ್-ತ್ವರಿತ ಫಲಿತಾಂಶ
ಕೂದಲಿನ ಸರಿಯಾದ ಆರೈಕೆ ಮಾಡದಿರುವುದು, ಆಹಾರ ಕ್ರಮ ಮತ್ತು ಧೂಳೂ ಹಾಗೂ ಕಲ್ಮಶ ಕೂದಲು ತನ್ನ ಕಾಂತಿಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಆರೋಗ್ಯಕರವಾದ ಕೂದಲು ಪಡೆಯಬೇಕೆಂದರೆ ಪೋಷಕಾಂಶಗಳು ಅಗತ್ಯವಾಗಿ ಬೇಕೇ ಬೇಕು... ಬನ್ನಿ ಇಂದು ಬೋಲ್ಸ್ ಸ್ಕೈ ಕ್ಯಾರೆಟ್ ಹೇರ್ ಮಾಸ್ಕ್ ಬಗ್ಗೆ ಮಾಹಿತಿ ನೀಡಿದ್ದು, ನೀವೂ ಒಮ್ಮೆ ಪ್ರಯತ್ನಿಸಿ ನೋಡಿ....

ಹಂತ #1
ಮೊದಲು ಒಂದು ಬೆಣ್ಣೆಹಣ್ಣಿನ (ಆವಕಾಡೊ) ತೆಗೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಬೆಣ್ಣೆಹಣ್ಣು ಒಂದು ಆರೋಗ್ಯಕರ ಫಲವಾಗಿದ್ದು ಇದರ ಎಣ್ಣೆಯೂ ಉತ್ತಮ ಸೌಂದರ್ಯವರ್ಧಕವಾಗಿದೆ. ಇದರಲ್ಲಿರುವ ವಿಟಮಿನ್ A, B1, B2 ಮತ್ತು D, ಲಿಸೈಥಿನ್, ಪೊಟ್ಯಾಶಿಯಂ ಮತ್ತು ವಿಟಮಿನ್ ಇ ಚರ್ಮಕ್ಕೆ ಹಾಗೂ ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತವೆ.

ಹಂತ #2
ಇನ್ನು ಒಂದೆರಡು ಕ್ಯಾರೆಟ್ ಅನ್ನು ತುರಿದುಕೊಂಡು ಅದರಿಂದ ರಸವನ್ನು ತಯಾರಿಸಿಕೊಳ್ಳಿ. ನಿಮ್ಮ ಕೂದಲಿನ ಉದ್ದಕ್ಕೆ ತಕ್ಕಂತೆ ರಸವನ್ನು ತಯಾರಿಸಿ

ಹಂತ #3
ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು, ಕ್ಯಾರೆಟ್ ರಸ, ಅವಕಾಡೊ ಪೇಸ್ಟ್ ಅನ್ನು ಸೇರಿಸಿ ಇದಕ್ಕೆ 1 ಚಮಚ ಆಲೀವ್ ಎಣ್ಣೆಯನ್ನು ಸೇರಿಸಿ. ಮೊಸರನ್ನು ಬಳಸಿಕೊಂಡು, ಮೃದುವಾದ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಹೆಚ್ಚು ದಪ್ಪ ಅಂತೆಯೇ ತೆಳು ಕೂಡ ಆಗಿರಬಾರದು. ಮಧ್ಯಮ ಗತಿಯಲ್ಲಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ ಇದರಿಂದ ತೊಳೆಯಲೂ ಅನುಕೂಲಕರವಾಗಿರುತ್ತದೆ.

ಹಂತ #4
ಇನ್ನಷ್ಟು ಪೋಷಣೆಯನ್ನು ನೀಡಲು ಕ್ಯಾರೆಟ್ ಹೇರ್ ಮಾಸ್ಕ್ಗೆ ರೋಸ್ ಮೇರಿ ಎಣ್ಣೆಯನ್ನು ಸೇರಿಸಿ. ರೋಸ್ ಮೇರಿಯಲ್ಲಿರುವ ಅಂಶಗಳು ಕೂದಲಿನ ಬುಡದ ಪೋಷಣೆಯನ್ನು ಮಾಡುತ್ತದೆ, ಕೂದಲಿನ ಬೆಳವಣಿಗೆ ಕೂಡ ನಡೆಯುತ್ತದೆ.

ಹಂತ #5
ಅಗಲವಾದ ಹಲ್ಲುಳ್ಳ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಳ್ಳಿ. ಸಿಕ್ಕುಗಳನ್ನು ಬಿಡಿಸಿ ಅಂತೆಯೇ ಸ್ವಲ್ಪ ಕೂದಲನ್ನು ತೆಗೆದುಕೊಂಡು ಮಧ್ಯದವರೆಗೆ ಹಿಡಿದುಕೊಂಡು ನಂತರವಷ್ಟೇ ಬಾಚಿಕೊಳ್ಳಿ. ಇದರಿಂದ ಕೂದಲಿಗೆ ಉಂಟಾಗುವ ಹಾನಿಯನ್ನು ತಪ್ಪಿಸಬಹುದಾಗಿದೆ.

ಹಂತ #6
ಬ್ರಶ್ ಅನ್ನು ಬಳಸಿಕೊಂಡು ಮಾಸ್ಕ್ ಅನ್ನು ಕೂದಲಿನ ಬುಡ ಮತ್ತು ಕೂದಲಿನ ಉದ್ದಕ್ಕೆ ಸಮನಾಗಿ ಹಚ್ಚಿಕೊಳ್ಳಿ. 10 ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಿ.

ಹಂತ #7
ಒಂದು ಗಂಟೆಯಷ್ಟು ಕಾಲ ಮಾಸ್ಕ್ ಅನ್ನು ಹಾಗೆಯೇ ಬಿಡಿ. ನಂತರ ಮೃದುವಾದ ಶಾಂಪೂ ಬಳಸಿಕೊಂಡು ಕೂದಲನ್ನು ತೊಳೆದುಕೊಳ್ಳಿ. ಇದಕ್ಕೆ ಸೂಕ್ತವಾದ ಕಂಡೀಷನರ್ ಅನ್ನು ಹಚ್ಚಿಕೊಳ್ಳಿ. ಈ ಹೇರ್ ಮಾಸ್ಕ್ ಅನ್ನು ಪ್ರಯತ್ನಿಸಿ ಮತ್ತು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
{promotion-urls}



Click it and Unblock the Notifications
