ಚಿಟಿಕೆಯಷ್ಟು 'ಅಡುಗೆ ಸೋಡಾ'-ಮಹಿಮೆ ಮಾತ್ರ ಅಪಾರ!

By: Arshad
Subscribe to Boldsky

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಇರುವ ಸಾಮಾನ್ಯವಾದ ಸಾಮಾಗ್ರಿ ಎಂದರೆ ಅಡುಗೆ ಸೋಡಾ. ದೋಸೆಯನ್ನು ಗರಿಮುರಿಯಾಗಿಸುವ ಈ ಉತ್ಪನ್ನವನ್ನು ಕೂದಲಿನ ಆರೈಕೆಗೂ ಬಳಸಬಹುದು! ಇದೊಂದು ಅಗ್ಗವಾದ ಹಾಗೂ ಇದರ ಉಪಯೋಗದಿಂದ ಯಾವುದೇ ಅಲರ್ಜಿ ಇಲ್ಲದ ಕಾರಣ ಎಲ್ಲಾ ಬಗೆಯ ಕೂದಲಿಗೂ ಉಪಯೋಗಿಸಬಹುದು.

ಅಡುಗೆ ಸೋಡಾ ಕ್ಷಾರೀಯವಾಗಿದ್ದು ಈ ಗುಣ ಬ್ಯಾಕ್ಟೀರಿಯಾಗಳನ್ನು, ಶಿಲೀಂಧ್ರಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಇದರ ಉರಿಯೂತ ನಿವಾರಕ ಗುಣ ತಲೆಯ ಚರ್ಮದ ಸೂಕ್ಷ್ಮರಂಧ್ರಗಳು ತುಂಬಿಕೊಂಡಿದ್ದರೆ ತೆರೆದು ಕೂದಲು ಉತ್ತಮ ಬೆಳವಣಿಗೆಯನ್ನು ಪಡೆಯಲು ನೆರವಾಗುತ್ತದೆ. ಆದರೆ ಇದರ ಗುಣ ಕೊಂಚ ಪ್ರಬಲವಾಗಿರುವುದರಿಂದ ಇದನ್ನು ಕೊಂಚ ಹೊತ್ತಿಗಾಗಿ ಮಾತ್ರವೇ ಉಪಯೋಗಿಸಬೇಕು ಹಾಗೂ ತಾತ್ಕಾಲಿಕ ಅವಧಿಗಾಗಿ ಮಾತ್ರ ಬಳಸಬಹುದು. 

ಇದನ್ನೂ ಓದಿ - ಮುಖದ ಸೌಂದರ್ಯಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ!

ಅಂದರೆ ಕೂದಲಿನಲ್ಲಿ ಏನಾದರೂ ತೊಂದರೆ ಇದ್ದರೆ ಅದನ್ನು ಸರಿಪಡಿಸಲು ಮಾತ್ರವೇ ಉಪಯೋಗಿಸಬೇಕು. ಸತತ ಬಳಕೆಯಿಂದ ಇದು ಕೂದಲಿಗೆ ಮತ್ತು ಚರ್ಮಕ್ಕೆ ಹಾನಿಯುಂಟುಮಾಡಬಹುದು. ಬನ್ನಿ, ಅಡುಗೆ ಸೋಡಾವನ್ನು ಯಾವುದೇ ಅಪಾಯವಿಲ್ಲದೇ ತಲೆಗೂದಲು ಸೊಂಪಾಗಿ ಬೆಳೆಯಲು ಹೇಗೆ ಬಳಸಬಹುದು ಎಂಬುದನ್ನು ನೋಡೋಣ..... 

ತಲೆಗೂದಲು ಅಂಟಂಟಾಗಿದ್ದು ದುರ್ವಾಸನೆ ಸೂಸುತ್ತಿದ್ದರೆ...

ತಲೆಗೂದಲು ಅಂಟಂಟಾಗಿದ್ದು ದುರ್ವಾಸನೆ ಸೂಸುತ್ತಿದ್ದರೆ...

ಕೆಲವೊಮ್ಮೆ ಚರ್ಮದ ಸೂಕ್ಷ್ಮರಂಧ್ರಗಳು ಭರ್ತಿಯಾಗಿ ಇದರಲ್ಲಿರುವ ಬ್ಯಾಕ್ಟೀರಿಯಾಗಳು ರಂಧ್ರದಲ್ಲಿ ತುಂಬಿಕೊಂಡಿದ್ದ ಕೊಳೆಯನ್ನು ಕೊಳೆಸುವ ಮೂಲಕ ದುರ್ವಾಸನೆ ಸೂಸುತ್ತದೆ. (ತಲೆ ಸ್ನಾನ ಮಾಡದೇ ಕೆಲದಿನ ಹಾಗೇ ಇದ್ದರೆ ದುರ್ವಾಸನೆ ಸೂಸುವುದು ಇದೇ ಕಾರಣಕ್ಕೆ). ಒಂದು ವೇಳೆ ನಿಮಗೆ ಈ ತೊಂದರೆ ಕಾಡುತ್ತಿದ್ದರೆ ಅಡುಗೆ ಸೋಡಾ ನಿಮ್ಮ ನೆರವಿಗೆ ಬರುತ್ತದೆ. ಒಂದು ಚಿಕ್ಕ ಚಮಚ ಅಡುಗೆ ಸೋಡಾವನ್ನು ಕೊಂಚ ನೀರಿನೊಂದಿಗೆ ಬೆರೆಸಿ ಗಾಢವಾದ ಲೇಪನ ತಯಾರಿಸಿ. ಈ ಲೇಪನವನ್ನು ತಲೆಗೂದಲ ಬುಡಕ್ಕೆ ತಗಲುವಂತೆ ಹಚ್ಚಿ ಇಪ್ಪತ್ತು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ತಲೆಗೂದಲನ್ನು ಸೊಂಪಗಾಗಿಸಲು...

ತಲೆಗೂದಲನ್ನು ಸೊಂಪಗಾಗಿಸಲು...

ಒಂದು ಬಾರಿ ತಲೆಗೆ ಹಚ್ಚಿಕೊಳ್ಳುವಷ್ಟು ಶಾಂಪೂವಿಗೆ ಒಂದರಿಂದ ಎರಡು ಚಿಕ್ಕಚಮಚ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಬಳಸಿ ತಲೆಗೆ ನೊರೆಬರುವಂತೆ ಚೆನ್ನಾಗಿ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಶೀಘ್ರವೇ ಹೆಚ್ಚಿನ ತಲೆಗೂದಲು ಹುಟ್ಟಿ ಕೂದಲು ಸೊಂಪಗಾಗಿಸಲು ನೆರವಾಗುತ್ತದೆ.

ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಶಾಂಪೂವಿನಂತೆ ಬಳಸಲು...

ಶಾಂಪೂವಿನಂತೆ ಬಳಸಲು...

ಒಂದು ವೇಳೆ ನಿಮ್ಮ ತಲೆಗೂದಲು ಎಣ್ಣೆಪಸೆಯಿಂದ ಕೂಡಿದ್ದು ಅಂಟಂಟಾಗಿರುವಂತಿದ್ದರೆ ಈ ವಿಧಾನ ಬಳಸಬಹುದು. ಒಣ ಶಾಂಪೂವಿನ ಬದಲಿಗೆ ಅಡುಗೆ ಸೋಡಾವನ್ನು ಅದೇ ರೀತಿಯಾಗಿ ಬಳಸಿ. ಅಂದರೆ ಒಣಕೂದಲಿಗೆ ಅಡುಗೆಸೋಡಾವನ್ನು ಕೂದಲಿಗೆ ಅಂಟುವಂತೆ ಸಿಂಪಡಿಸಿ. ಇದರಿಂದ ಕೂದಲಿಗೆ ಅಂಟಿಕೊಂಡಿದ್ದ ಎಣ್ಣೆಯ ಪಸೆಯನ್ನು ಅಡುಗೆ ಸೋಡಾ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಕೊಂಚ ಹೊತ್ತಿನ ಬಳಿಕ ಬಾಚಣಿಗೆಯಿಂದ ಬಾಚಿಕೊಳ್ಳಿ. ಆದರೆ ಈ ಅವಧಿಯಲ್ಲಿ ತಲೆಗೂದಲನ್ನು ಕೈಗಳಿಂದ ಮುಟ್ಟಬೇಡಿ.

 ತಲೆಹೊಟ್ಟು ನಿವಾರಿಸಲು....

ತಲೆಹೊಟ್ಟು ನಿವಾರಿಸಲು....

ಒಂದು ಚಿಕ್ಕ ಚಮಚ ಅಡುಗೆ ಸೋಡಾವನ್ನು ಸಮಪ್ರಮಾಣದ ಲಿಂಬೆರಸದೊಂದಿಗೆ ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ತಲೆಗೂದಲ ಬುಡಕ್ಕೆ ತಗಲುವಂತೆ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಂಡರೆ ತಲೆಹೊಟ್ಟು ಸುಲಭವಾಗಿ ನಿವಾರಣೆಯಾಗುತ್ತದೆ.

ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು

English summary

Different Ways To Include Baking Soda In Your Hair Care Routine

Baking soda is effective when it is used for a short period and hence you should prefer using these remedies if you are looking for a temporary fix for your hair problems. So, check out the several ways in which you could use baking soda to promote healthy hair growth minus the damage.
Subscribe Newsletter