ಕೂದಲಿನ ಅಂದ-ಚೆಂದ ಹೆಚ್ಚಿಸುವ 'ಎಣ್ಣೆಗಳು' ಪ್ರಯತ್ನಿಸಿ ನೋಡಿ...

By: Hemanth
Subscribe to Boldsky

ಸಮಯದ ಅಭಾವದಿಂದ ಪ್ರತಿಯೊಂದು ತುಂಬಾ ವೇಗವಾಗಿ ಆಗಬೇಕು ಎನ್ನುವ ತವಕ. ತಿನ್ನುವ ಆಹಾರದಿಂದ ಹಿಡಿದು ಮಾಡುವಂತಹ ಕೆಲಸದ ತನಕ ಪ್ರತಿಯೊಂದರಲ್ಲೂ ನಾವು ಅವಸರದಲ್ಲೇ ಇರುತ್ತೇವೆ. ಇದರಿಂದ ಆರೋಗ್ಯದೊಂದಿಗೆ ಕೆಲಸಗಳೂ ಕೆಡುತ್ತದೆ. ಹಿಂದೆ ದೇಹದ ಆರೋಗ್ಯಕ್ಕೆ ಹೆಚ್ಚಿನ ಸಮಯ ವ್ಯಯಿಸಲಾಗುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಅದಕ್ಕೆಲ್ಲಾ ಸಮಯವೇ ಇಲ್ಲ.

ಹಿಂದಿನ ದಿನಗಳಲ್ಲಿ ವಾರದಲ್ಲಿ ಎರಡರಿಂದ ಮೂರು ದಿನವಾದರೂ ಕೂದಲಿಗೆ ಎಣ್ಣೆ ಹಾಕಿಕೊಂಡು ಮಸಾಜ್ ಮಾಡುತ್ತಾ ಇದ್ದರು. ಆಗ ಮಹಿಳೆಯರ ಕೂದಲು ದಷ್ಟಪುಷ್ಟವಾಗಿ ಉದ್ದಗೆ ಇರುತ್ತಿತ್ತು. ಇಂದು ಕೂದಲು ಕೂಡ ಸಣ್ಣದಾಗಿದೆ ಮತ್ತು ಎಣ್ಣೆ ಹಚ್ಚಿಕೊಂಡು ಕುಳಿತುಕೊಳ್ಳಲು ಸಮಯವೂ ಇಲ್ಲ. ಇದರಿಂದಾಗಿಯೇ ಇರುವ ಕೂದಲು ಕೂಡ ಉದುರಲು ಆರಂಭವಾಗಿದೆ. ಕೂದಲಿನ ಆರೈಕೆಗೆ ವಿವಿಧ ರೀತಿಯ ಎಣ್ಣೆಗಳನ್ನು ಬಳಸಿಕೊಳ್ಳಬಹುದು.

ಕೂದಲುದುರುವ ಸಮಸ್ಯೆಗೆ ಬಿಸಿ ಎಣ್ಣೆಯ ಮಸಾಜ್...

ಬಿಡುವಿಲ್ಲದ ಕೆಲಸದ ನಡುವೆಯೂ ಕೂದಲಿನ ಆರೈಕೆ ಮಾಡುವುದು ಅತೀ ಅಗತ್ಯವಾಗಿದೆ. ಯಾಕೆಂದರೆ ಕೂದಲು ಉದುರಿ ಹೋದರೆ ಮತ್ತೆ ಬೆಳೆಯಲು ತುಂಬಾ ಕಷ್ಟವಾಗುವುದು. ಇದರಿಂದ ರಾತ್ರಿ ವೇಳೆ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ಕೂದಲಿಗೆ ಸ್ನಾನ ಮಾಡಿಕೊಳ್ಳಬಹುದು. ಕೂದಲಿಗೆ ಎಣ್ಣೆ ಹಚ್ಚಿಕೊಂಡರೆ ಅದರಿಂದ ಕೂದಲಿಗೆ ಒಳ್ಳೆಯ ಪೋಷಣೆ ಸಿಗುವುದು ಮತ್ತು ಕೂದಲು ಕೂಡ ಕಾಂತಿಯುತವಾಗಿ ಕಾಣುವುದು. ಕೂದಲಿನ ಆರೈಕೆ ಮಾಡಲು ಯಾವೆಲ್ಲಾ ಎಣ್ಣೆಗಳನ್ನು ಬಳಸಿಕೊಳ್ಳಬಹುದು ಮತ್ತು ಅದು ಕೂದಲಿನ ಆರೋಗ್ಯವನ್ನು ಯಾವ ರೀತಿಯಿಂದ ನೋಡಿಕೊಳ್ಳಲಿದೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.. ಮುಂದೆ ಓದಿ....

ಹರಳೆಣ್ಣೆ

ಹರಳೆಣ್ಣೆ

ಉದ್ದ ಕೂದಲು ಬೆಳೆಸಬೇಕೆಂದು ಬಯಸುತ್ತಾ ಇದ್ದರೆ ನೀವು ಹರಳೆಣ್ಣೆ ಬಳಸುವುದು ಅತೀ ಅಗತ್ಯ. ವಿಭಿನ್ನ ರೀತಿಯ ಎಣ್ಣೆಯಂತೆ ಈ ಎಣ್ಣೆಯು ಕೂದಲಿನ ಬೆಳವಣಿಗೆ ಹಾಗೂ ಕೂದಲು ಉದ್ದವಾಗಲು ನೆರವಾಗುವುದು. ಹರಳೆಣ್ಣೆಯು ತುಂಬಾ ಜಿಡ್ಡು ಆಗಿರುವ ಕಾರಣದಿಂದ ಕೂದಲಿಗೆ ಇದನ್ನು ಬಳಸಿದ ಬಳಿಕ ಸ್ನಾನ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಹರಳೆಣ್ಣೆಯನ್ನು ನೇರವಾಗಿ ಹಚ್ಚಿಕೊಂಡರೆ ಕ್ಷಿಪ್ರವಾಗಿ ಫಲಿತಾಂಶ ಪಡೆಯಬಹುದು. ಇದನ್ನು ಎಳ್ಳಿನ ಎಣ್ಣೆ, ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಂಡು ಬಳಸಬಹುದು.

ಕೂದಲಿಗೆ 'ಹರಳೆಣ್ಣೆ'ಯ ಮುಂದೆ ಯಾವುದೇ ಎಣ್ಣೆ ಸರಿಸಾಟಿಯಾಗದು!

 ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿ ತಿನ್ನುವುದರಿಂದ ದೇಹಕ್ಕೆ ಹೇಗೆ ಒಳ್ಳೆಯದೋ ಅದೇ ರೀತಿಯಾಗಿ ಬಾದಾಮಿ ಎಣ್ಣೆಯು ಕೂದಲಿನ ಆರೈಕೆಗೆ ಅತ್ಯುತ್ತಮ. ಬಾದಾಮಿ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರೋಟೀನ್, ವಿಟಮಿನ್ ಇ ಮತ್ತು ಕೊಬ್ಬಿನಾಮ್ಲಗಳು ಇವೆ. ಇದು ತಲೆಹೊಟ್ಟು, ಕೂದಲು ತುಂಡಾಗುವುದು ಮತ್ತು ತುರಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲಿದೆ. ಹೆಚ್ಚಾಗಿ ಬಾದಾಮಿ ಎಣ್ಣೆಯ ಲಾಭ ಮಹಿಳೆಯರಿಗೆ ಸಿಗದೆ ಇರಲು ಪ್ರಮುಖ ಕಾರಣವೆಂದರೆ ಕೂದಲು ತೊಳೆಯುವ ಮೊದಲು ಅವರು ಇದನ್ನು ಬಳಸುತ್ತಾರೆ. ಕೂದಲಿಗೆ ಸ್ನಾನ ಮಾಡಿಕೊಂಡ ಬಳಿಕ ಕೂದಲು ಒದ್ದೆಯಾಗಿರುವಾಗಲೇ ಬಾದಾಮಿ ಎಣ್ಣೆ ಹಚ್ಚಿಕೊಳ್ಳಿ. ಒದ್ದೆ ಕೂದಲಿನಲ್ಲಿ ಆಗುವಂತಹ ಗೋಜಲುಗಳನ್ನು ಬಾದಾಮಿ ಎಣ್ಣೆಯು ನಿವಾರಣೆ ಮಾಡುವುದು.

ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆಯಿಂದ ಕೂದಲಿಗೆ ಹಲವಾರು ರೀತಿಯ ಲಾಭಗಳು ಇವೆ. ಕೂದಲಿಗೆ ತೆಂಗಿನೆಣ್ಣೆ ಹಚ್ಚಿಕೊಳ್ಳಲು ಹಲವಾರು ವಿಧಾನಗಳಿವೆ. ಕೂದಲಿಗೆ ತೆಂಗಿನ ಎಣ್ಣೆ ಬಳಸಲು ನಿರ್ಧರಿಸಿದ್ದರೆ ಎಕ್ಸ್ ಟ್ರಾ ವರ್ಜಿನ್ ಎಣ್ಣೆ ಬಳಸಿ. ತೆಂಗಿನೆಣ್ಣೆಯನ್ನು ಕೇವಲ ಕೂದಲಿಗೆ ಮಾತ್ರ ಬಳಸಿಕೊಳ್ಳಿ. ಸಂಪೂರ್ಣ ಕೂದಲಿಗೆ ತೆಂಗಿನೆಣ್ಣೆಯನ್ನು ಹಚ್ಚಿಕೊಳ್ಳಿ. ಕೂದಲಿಗೆ ತೆಂಗಿನೆಣ್ಣೆ ಮಸಾಜ್ ಮಾಡಿಕೊಂಡ ಬಳಿಕ ಕೂದಲನ್ನು ಬಾಚಿಕೊಳ್ಳಬಹುದು.

ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಒಳ್ಳೆಯದು ಏಕೆ ಗೊತ್ತೇ?

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವುದು ಹಾಗೂ ಗಾಢ ಬಣ್ಣ ನೀಡುವುದು. ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಿದರೆ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಸಾಸಿವೆ ಎಣ್ಣೆಯನ್ನು ನೇರವಾಗಿ ಕೂದಲಿಗೆ ಬಳಸಿಕೊಳ್ಳಬಹುದು ಅಥವಾ ಇತರ ಕೆಲವೊಂದು ಸಾಮಗ್ರಿಗಳೊಂದಿಗೆ ಇದನ್ನು ಮಿಶ್ರಣ ಮಾಡಿಕೊಂಡು ಬಳಸಬಹುದು.

ನಂಬಲೇಬೇಕು 'ಸಾಸಿವೆ ಎಣ್ಣೆ' ಕೂದಲಿಗೆ ಬಹಳ ಒಳ್ಳೆಯದು....

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೆಲವು ಹನಿ ಆಲಿವ್ ಎಣ್ಣೆಯನ್ನು ಬಿಸಿಮಾಡಿ ತಣಿಯಲು ಬಿಡಿ. ಇದು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ಎಣ್ಣೆಯಿಂದ ತಲೆಗೂದಲಿಗೆ ನಯವಾದ ಮಸಾಜ್ ಮೂಲಕ ಹಚ್ಚಿ. ಇದರಿಂದ ಕೂದಲ ಹೊಳಪು ಹೆಚ್ಚುತ್ತದೆ. ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವ ಮೂಲಕ ಕೂದಲು ಹೆಚ್ಚು ಎಣ್ಣೆಪಸೆಯಿಂದ ಕೂಡಿದ್ದು ಧೂಳನ್ನು ಸುಲಭವಾಗಿ ಆಕರ್ಶಿಸುತ್ತದೆ. ಆದರೆ ಆಲಿವ್ ಎಣ್ಣೆಯಲ್ಲಿ ಹೆಚ್ಚು ಎಣ್ಣೆ ಪಸೆ ಇಲ್ಲದ ಕಾರಣ ಹೊರಗೆ ಹೋಗುವಾಗ ಹಚ್ಚಿಕೊಳ್ಳಲು ಸೂಕ್ತವಾಗಿದೆ.

ಜೋಜೊಬಾ ಎಣ್ಣೆ

ಜೋಜೊಬಾ ಎಣ್ಣೆ

ತ್ವಚೆಗೆ ಪೋಷಣೆ ನೀಡುವ ಜೊಜೊಬಾ ಎಣ್ಣೆ ಕೂದಲಿಗೂ ತುಂಬಾ ಸಹಕಾರಿ. ಅಂಟಿಲ್ಲದಿರುವುದ ಜೊಜೊಬಾ ಎಣ್ಣೆಯ ಮತ್ತೊಂದು ಗುಣ. ಇದನ್ನು ಹಚ್ಚಿಕೊಂಡರೆ ಕೂದಲು ಎಣ್ಣೆ ಹಚ್ಚಿದಂತೆ ಕಾಣುವುದಿಲ್ಲ. ಬಟ್‍ ತುಂಬಾ ಕಾಸ್ಲ್ಟೀ.. ಒಟ್ಟಿನಲ್ಲಿ ನಿಮ್ಮ ಕೂದಲಿಗೆ ಈ ಎಣ್ಣೆಗಳನ್ನು ಅಪ್ಲೈ ಮಾಡೋದು ಸೂಕ್ತ. ಅದು ಬಿಟ್ಟು ಇತರೆ ಯಾವ್ಯಾವುದೇ ಮಿಶ್ರಣದ ಎಣ್ಣೆಗಳನ್ನು ಬಳಸಿ ಕೂದಲ ಸಮಸ್ಯೆಗೆ ನೀವೇ ಮುನ್ನುಡಿ ಬರೆದುಕೊಳ್ಳಬೇಡಿ.

 

English summary

Different Oils That Promise Healthy And Happy Hair

With addition of new hair cosmetics and hair-based beauty products, one of the old-school hair care products that is becoming extinct is hair oil. Oily hair is now counted as a down market trend and therefore, women are putting a stop on using hair oil. Again, it is the same women who put a stop to the use of hair oil, yet get complaining about the rising hair-related problems. Well, hair oiling is one of the primitive ways of treating, pampering and taking care of your hair.
Subscribe Newsletter