Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲುದುರುವ ಸಮಸ್ಯೆ ಹಿಂದಿರುವ ಸತ್ಯಾಸತ್ಯತೆ
ತಲೆಗೂದಲು ಉದುರುವ ಸಮಸ್ಯೆ ಹಲವಾರು ಕಾರಣಗಳಿಗೆ ನಡೆಯುತ್ತಿರುತ್ತದೆ. ನೀರಿನ ಬದಲಾವಣೆ, ನೀವು ತೆಗೆದುಕೊಳ್ಳುತ್ತಿರುವ ಆಹಾರ, ಹೆಚ್ಚು ರಾಸಾಯನಿಕ ಶಾಂಪೂಗಳ ಬಳಕೆ, ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳದೇ ಇರುವುದು ಹೀಗೆ ಕೂದಲುದುರುವ ಸಮಸ್ಯೆಗೆ ಹಲವಾರು ಅಂಶಗಳು ಕಾರಣವಾಗಿರುತ್ತವೆ. ಇಳಿವಯಸ್ಸಿನಲ್ಲಿ ಕೂದಲುದುರುವ ಸಮಸ್ಯೆ- ಕಾರಣ ತಿಳಿದುಕೊಳ್ಳಿ
ಅದಾಗ್ಯೂ ನಿಮ್ಮ ಕೂದಲುದುರುವ ಸಮಸ್ಯೆಗೆ ನೀವು ಅರಿಯದೇ ಇರುವ ಕೆಲವೊಂದು ಅಂಶಗಳನ್ನು ಇಂದಿನ ಲೇಖನದಲ್ಲಿ ಪಟ್ಟಿ ಮಾಡುತ್ತಿದ್ದೇವೆ. ನಿತ್ಯದ ಕೆಲಸದ ವೇಳೆಯಲ್ಲೂ ಈ ಅಂಶಗಳು ಮುಖ್ಯವಾಗಿ ಎದ್ದುಕಾಣುವಂತಿದ್ದು ಕೂದಲು ಬುಡದಿಂದ ಕಿತ್ತು ಬರುವಂತೆ ಇವುಗಳು ಮಾಡುತ್ತವೆ. ನೀವು ಇದೇ ರೀತಿಯ ಅಂಶಗಳನ್ನು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ಅದನ್ನು ಬದಲಾಯಿಸಿಕೊಳ್ಳಿ ಮತ್ತು ಕೂದಲಿನ ಆರೋಗ್ಯದ ಕಡೆಗೆ ಗಮನ ಹರಿಸಿ. ಮಳೆಗಾಲ ಬಂತೆಂದರೆ ಸಾಕು ಕೂದಲುದುರುವ ಸಮಸ್ಯೆ!

ವಂಶಪಾರಂಪರ್ಯ
ಜನೆಟಿಕ್ಸ್ ಕಾರಣದಿಂದಾಗಿ ಕೂಡ ಕೂದಲುದುರುವ ಸಮಸ್ಯೆ ತಲೆದೋರುತ್ತದೆ. ನಿಮ್ಮ ಹೆತ್ತವರು ಅಥವಾ ತಾತ, ಮತ್ತಾತ ಪುರುಷ/ಮಹಿಳೆ ಬಕ್ಕತಲೆ ಸಮಸ್ಯೆಯಿಂದ ಬಳಲಿದ್ದಲ್ಲಿ, ನೀವು ಇದೇ ಅನುಭವವನ್ನು ಅನುಭವಿಸುವಂತಿರುತ್ತದೆ.

ತೂಕದಲ್ಲಿ ಇಳಿಕೆ
ಹೆಚ್ಚು ಡಯಟ್ ಅನುಕರಣೆ ಮಾಡಿ ತೂಕದಲ್ಲಿ ದಿಢೀರ್ ಇಳಿಕೆಯಾಗುವುದೂ ಕೂಡ ನಿಮ್ಮ ತಲೆಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಕೂದಲುದುರುದಕ್ಕೆ ಕಾರಣವಾಗುತ್ತದೆ.

ದೀರ್ಘ ಸಮಯದ ಜ್ವರ
ವೈರಲ್ ಫ್ಲು ಅಥವಾ ಜ್ವರದಿಂದ ನೀವು ಬಹಳಷ್ಟು ದಿನ ಬಳಲಿದ್ದಿರಿ ಎಂದಾದಲ್ಲಿ, ಕೂದಲುದುರಲು ಇದೂ ಕೂಡ ಕಾರಣವಾಗಿರುತ್ತದೆ.

ಜನನ ನಿಯಂತ್ರಣ ಮಾತ್ರೆಗಳು
ಹೆಚ್ಚಿನ ಸಂದರ್ಭಗಳಲ್ಲಿ ಸ್ತ್ರೀಯರು ಸೇವಿಸುವ ಜನನ ನಿಯಂತ್ರಣ ಮಾತ್ರೆಗಳಿಂದ ಹಾರ್ಮನು ಏರಿಳಿತವುಂಟಾಗಿ ಕೂದಲು ಉದುರಿ ಹೋಗುತ್ತದೆ.

ಪ್ರೊಟೀನ್ ಕೊರತೆ
ಆರೋಗ್ಯಕರ ಕೂದಲಿಗಾಗಿ ಸಾಕಷ್ಟು ಪ್ರೊಟೀನ್ ಆಹಾರಗಳನ್ನು ನೀವು ಸೇವಿಸಬೇಕಾಗುತ್ತದೆ, ನಿಮ್ಮ ಆಹಾರದಲ್ಲಿ ಹೆಚ್ಚು ಪ್ರೊಟೀನ್ ಅಂಶ ಇರುವಂತೆ ನೋಡಿಕೊಳ್ಳಿ.

ವಿಟಮಿನ್ ಎ ಪೂರೈಕೆ
ವಿಟಮಿನ್ ಎ ಅಂಶವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೂದಲಿನ ಬೇರು ಕೃಶಗೊಳ್ಳುತ್ತದೆ, ಇದರಿಂದ ಕೂದಲುದುರುವುದು ನಡೆಯುತ್ತದೆ.

ಆಘಾತಕಾರಿ ವಿಷಯಗಳು
ಅಪಘಾತ, ಪ್ರೀತಿ ಪಾತ್ರರ ಮರಣ ಈ ಅಂಶಗಳು ವ್ಯಕ್ತಿಯನ್ನು ಖಿನ್ನತೆಗೆ ನೂಕಿ ಕೂದಲುದುರುವಂತೆ ಮಾಡುತ್ತದೆ.



Click it and Unblock the Notifications
