ಹಿತ್ತಲ ಗಿಡದ 'ದಾಸವಾಳ' ಹೂವನ್ನು ಎಷ್ಟು ಹೊಗಳಿದರೂ ಸಾಲದು!

By: Jaya subramanya
Subscribe to Boldsky

ಇಂದಿನ ಕಲುಷಿತ ವಾವಾತರಣವು ನಮ್ಮ ಕೂದಲಿನ ಸೌಂದರ್ಯಕ್ಕೆ ಒಂದು ಶಾಪವಾಗಿ ಪರಿಣಮಿಸಿದೆ. ಎಷ್ಟೇ ಬಗೆಯ ಉತ್ಪನ್ನಗಳನ್ನು ಬಳಸಿದರೂ ಕೂಡ ಕೂದಲುದುರುವುದು ಮತ್ತು ತಲೆಹೊಟ್ಟು ಅಂತೆಯೇ ಕೂದಲಿನ ಹೊಳಪು ಕುಗ್ಗುವುದು ಇಂದಿನ ಯುವಕ ಯುವತಿಯರು ಎದುರಿಸುತ್ತಿರುವ ಪ್ರಮುಖ ಸೌಂದರ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ದಾಸವಾಳ ಹೂವಿನಲ್ಲಿದೆ 14 ಔಷಧೀಯ ಗುಣಗಳು!

ನೈಸರ್ಗಿಕ ವಿಧಾನಗಳನ್ನು ಅನುಸರಿಸಲು ನಮಗೆ ಸಮಯದ ಅಭಾವ ಎದುರಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ದೊರೆಯುವ ಕೃತಕ ರಾಸಾಯನಿಕ ವಸ್ತುಗಳನ್ನೇ ಬಳಸಿಕೊಳ್ಳುತ್ತೇವೆ. ಆದರೆ ಇದರಿಂದ ನಮ್ಮ ಕೂದಲು ಇನ್ನಷ್ಟು ಹಾನಿಗೆ ಒಳಗಾಗುತ್ತಿದೆ. ದಾಸವಾಳ ಹೂವಿನ ಹತ್ತಾರು ಔಷಧೀಯ ಗುಣಗಳು!

ಇದರ ಬದಲಿಗೆ ನೀವು ನೈಸರ್ಗಿಕ ಉತ್ಪನ್ನಗಳಿಂದ ತಯಾರಾದ ವಸ್ತುಗಳನ್ನು ಸಿದ್ಧಪಡಿಸಿಕೊಂಡು ಅದನ್ನು ಬಳಸುತ್ತಿದ್ದರೆ ನಿಮ್ಮ ಸಮಯವೂ ಹಾಳಾಗುವುದಿಲ್ಲ ಮತ್ತು ಕೂದಲಿನ ಸಮಸ್ಯೆಗಳಿಗೂ ವಿರಾಮವನ್ನು ಹಾಕಬಹುದು. ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?

ಹೌದು ಓದುಗರೇ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿರುವ ದಾಸವಾಳದ ಎಣ್ಣೆ ಒಂದು ಸಿದ್ಧಪಡಿಸಿದ ಎಣ್ಣೆಯಾಗಿದ್ದು ಇದನ್ನು ಬಹಳಷ್ಟು ಕಾಲ ಸ್ಟೋರ್ ಮಾಡಿ ಬಳಸಿಕೊಳ್ಳಬಹುದಾಗಿದೆ. ನಿಮ್ಮ ತಲೆಹೊಟ್ಟು, ಕೂದಲುದುರುವ ಸಮಸ್ಯೆ, ನೆರೆಗೂದಲೂ, ಬೊಕ್ಕತಲೆ ಹೀಗೆ ಬಹಳಷ್ಟು ವಿಷಯಗಳಿಗೆ ದಾಸವಾಳದೆಣ್ಣೆ ಒಂದು ವರದಾನವಾಗಿದೆ. ಹಾಗಿದ್ದರೆ ದಾಸವಾಳದೆಣ್ಣೆಯ ಬಗೆ ಬಗೆಯ ಪ್ರಯೋಜನಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ....   

ಕೂದಲಿನ ಒಣತ್ವವನ್ನು ಹೋಗಲಾಡಿಸಿ ಮೃದು ಕೂದಲನ್ನು ಪಡೆದುಕೊಳ್ಳಲು

ಕೂದಲಿನ ಒಣತ್ವವನ್ನು ಹೋಗಲಾಡಿಸಿ ಮೃದು ಕೂದಲನ್ನು ಪಡೆದುಕೊಳ್ಳಲು

ನಿಮ್ಮ ಕೂದಲು ತುಂಬಾ ಒರಟಾಗಿದೆ ಮತ್ತು ಸೀಳುಕೂದಲಿನ ಸಮಸ್ಯೆಯಿಂದ ತೊಳಲಾಡುತ್ತಿದ್ದೀರಿ ಎಂದಾದಲ್ಲಿ ದಾಸವಾಳದ ಮಾಸ್ಕ್ ಅನ್ನು ಬಳಸಿಕೊಂಡು ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದು ನೈಸರ್ಗಿಕ ಕಂಡೀಷನರ್‌ನಂತೆ ನಿಮ್ಮ ಕೂದಲಿಗೆ ಪ್ರಯೋಜನವನ್ನು ಉಂಟುಮಾಡಲಿದೆ. ಸ್ವಲ್ಪ ದಾಸವಾಳದ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕುದಿಸಿ. ಇದಕ್ಕೆ ಒಂದೆರಡು ಚಮಚ ಕಡಲೆ ಹುಡಿಯನ್ನು ಬೆರೆಸಿ ನಂತರ ಪೇಸ್ಟ್‌ನಂತೆ ಇದನ್ನು ತಯಾರಿಸಿಕೊಳ್ಳಿ. ನಿಮ್ಮ ತಲೆಬುರುಡೆಗೆ ಇದನ್ನು ಹಚ್ಚಿಕೊಳ್ಳಿ ನಂತರ ಮೂವ್ವತ್ತು ನಿಮಿಷಗಳ ನಂತರ ಕೂದಲು ತೊಳೆದುಕೊಳ್ಳಿ.

ಕೂದಲಿನ ಕೋಶಗಳನ್ನು ಮತ್ತು ತಲೆಬುರುಡೆಯನ್ನು ಆರೋಗ್ಯವಾಗಿರಿಸಲು

ಕೂದಲಿನ ಕೋಶಗಳನ್ನು ಮತ್ತು ತಲೆಬುರುಡೆಯನ್ನು ಆರೋಗ್ಯವಾಗಿರಿಸಲು

ನಿಮ್ಮ ಕೂದಲಿನ ಕೋಶಗಳು ಮತ್ತು ತಲೆಬುರುಡೆಯನ್ನು ಆರೋಗ್ಯವಾಗಿರಿಸಲು ನಿಮಗೆ ಬೇಕಾಗಿರುವುದು ಐದರಿಂದ ಆರು ಚಮಚಗಳಷ್ಟು ದಾಸವಾಳದ ಎಣ್ಣೆ ಮತ್ತು ಐದರಿಂದ ಆರು ಚಮಚ ನೆಲ್ಲಿಕಾಯಿ ಹುಡಿಯಾಗಿದೆ. ಇದಕ್ಕೆ ಸ್ವಲ್ಪ ಲಿಂಬೆ ರಸವನ್ನು ಬೆರೆಸಿಕೊಂಡು ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿ ನಂತರ ನಲ್ವತ್ತು ನಿಮಿಷ ಹಾಗೆಯೇ ಬಿಡಿ. ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ.

ಮುಪ್ಪಿನ ಬಿಳಿಕೂದಲಿನ ಸಮಸ್ಯೆಗೆ

ಮುಪ್ಪಿನ ಬಿಳಿಕೂದಲಿನ ಸಮಸ್ಯೆಗೆ

ಇದಕ್ಕಾಗಿ ಮೆಹೆಂದಿಯೊದಿಗೆ ದಾಸವಾಳವನ್ನು ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಬಹುದಾಗಿದೆ. ಮೆಹೆಂದಿ ಎಲೆಗಳು ಮತ್ತು ದಾಸವಾಳ ಹೂವನ್ನು ಚೆನ್ನಾಗಿ ಅರೆದುಕೊಳ್ಳಿ. ಇದನ್ನು ಸ್ವಲ್ಪ ಲಿಂಬೆ ರಸ ಮತ್ತು ಮೊಸರಿನೊಂದಿಗೆ ಮಿಶ್ರ ಮಾಡಿಕೊಳ್ಳಿ. ಸ್ವಲ್ಪ ದಾಸವಾಳ ಎಣ್ಣೆಯೊಂದಿಗೆ ಇದನ್ನು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಮಸಾಜ್ ಮಾಡಿಕೊಳ್ಳಿ. ಹದಿನೈದು ನಿಮಿಷಗಳ ತರುವಾಯ ಶ್ಯಾಂಪೂ ಮಾಡಿಕೊಂಡು ಕೂದಲನ್ನು ತೊಳೆಯಿರಿ.

ತಲೆಹೊಟ್ಟು ಸಮಸ್ಯೆಗಳಿಗೆ

ತಲೆಹೊಟ್ಟು ಸಮಸ್ಯೆಗಳಿಗೆ

ದಾಸವಾಳವನ್ನು ಮೆಂತೆಯೊಂದಿಗೆ ಬೆರೆಸಿ ಬಳಸುವುದು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲಿದೆ. ರಾತ್ರಿಯೇ ಮೆಂತೆಯನ್ನು ನೀರಿನಲ್ಲಿ ನೆನೆಹಾಕಿ ಮತ್ತು ಇದನ್ನು ಸ್ವಲ್ಪ ಆಲೀವ್ ಎಣ್ಣೆಯೊಂದಿಗೆ ಮಿಕ್ಸರ್‌ನಲ್ಲಿ ರುಬ್ಬಿ. ಈ ಪೇಸ್ಟ್‌ಗೆ ಎರಡು ಚಮಚ ದಾಸವಾಳದ ಹುಡಿಯನ್ನು ಬೆರೆಸಿ ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಕೂದಲಿನ ಬುಡಕ್ಕೆ ಇದನ್ನು ಚೆನ್ನಾಗಿ ಹಚ್ಚಿಕೊಳ್ಳಿ. ಒಣಗಲು ಬಿಡಿ ನಂತರ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ.

ದೃಢವಾದ ಕೂದಲಿಗಾಗಿ

ದೃಢವಾದ ಕೂದಲಿಗಾಗಿ

ಕೂದಲಿನ ಬುಡವನ್ನು ಗಟ್ಟಿಗೊಳಿಸಬೇಕು ಎಂದಾದಲ್ಲಿ ದಾಸವಾಳದ ಎಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ಬಳಸಿ. ದಾಸವಾಳದ ಎಣ್ಣೆ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚುವುದು ಕೂದಲಿನ ಬುಡವನ್ನು ಧೃಢಗೊಳಿಸಲಿದೆ. ದಾಸವಾಳದ ಹುಡಿಯನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿಕೊಂಡು ಸ್ವಲ್ಪ ಹೊತ್ತು ಕಾಯಿಸಿ. ನಂತರ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ಕೂದಲನ್ನು ತೊಳೆದುಕೊಳ್ಳಿ. ಇದು ನಿಮ್ಮ ಕೂದಲಿನ ಬುಡವನ್ನು ದೃಢಗೊಳಿಸಲಿದೆ.

ನೆರೆಗೂದಲು ಸಮಸ್ಯೆಗಳಿಗೆ

ನೆರೆಗೂದಲು ಸಮಸ್ಯೆಗಳಿಗೆ

ಹೆಚ್ಚಿನವರು ಎಳೆಯ ವಯಸ್ಸಿನಲ್ಲಿಯೇ ನೆರೆಗೂದಲು ಸಮಸ್ಯೆಗಳಿಗೆ ಒಳಗಾಗುವುದು ಹಾರ್ಮೋನುಗಳಿಂದ ಆಗಿದೆ. ದಾಸವಾಳದೆಣ್ಣೆಯು ನಿಮ್ಮ ತಲೆಗೂದಲಿನ ಸಕಲ ಸಮಸ್ಯೆಗಳನ್ನು ನಿವಾರಿಸಲಿದ್ದು ಕೂದಲಿನ ಬೆಳವಣಿಗೆಯನ್ನು ಸರಳವಾಗಿ ಮಾಡುತ್ತದೆ. ದಾಸವಾಳದ ಎಲೆಗಳನ್ನು ತೆಗೆದುಕೊಂಡು ಅದನ್ನು ಮಿಕ್ಸಿಯಲ್ಲಿ ಅರೆದುಕೊಳ್ಳಿ ಮತ್ತು ಇದನ್ನು ಮೊಸರಿನೊಂದಿಗೆ ಬೆರೆಸಿ. ಸ್ವಲ್ಪ ದಾಸವಾಳದ ಎಣ್ಣೆಯೊಂದಿಗೆ ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಕಾದು ನಂತರ ತಣ್ಣೀರಿನಲ್ಲಿ ಕೂದಲನ್ನು ತೊಳೆದುಕೊಳ್ಳಿ. ನಿಯಮಿತವಾಗಿ ಈ ವಿಧಾನವನ್ನು

ಪಾಲಿಸುವುದರಿಂದ ಕೂದಲಿನ ಯಾವುದೇ ಬಗೆಯ ಸಮಸ್ಯೆಗಳನ್ನು ದೂರಮಾಡಿಕೊಳ್ಳಬಹುದಾಗಿದೆ.

ತಲೆಬುರುಡೆಯ ತುರಿಕೆ

ತಲೆಬುರುಡೆಯ ತುರಿಕೆ

ದಾಸವಾಳದೆಲೆಯಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳಿದ್ದು ಇದು ತಲೆಬುರುಡೆಯ ತುರಿಕೆಯನ್ನು ನಿವಾರಿಸಲಿದೆ. ಮೊದಲಿಗೆ ನೀರಿನಲ್ಲಿ ದಾಸವಾಳದ ಹೂವುಗಳನ್ನು ಬೇಯಿಸಿಕೊಳ್ಳಿ ಮತ್ತು ಈ ನೀರನ್ನು ಬೇರೆಯದೇ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನೀರು ತಣಿದ ನಂತರ ಕೂದಲು ತೊಳೆಯಲು ಇದನ್ನು ಬಳಸಿ. ಇದರಿಂದ ತಯಾರಾದ ಎಣ್ಣೆ ಮತ್ತು ಈ ನೀರು ಕೂದಲಿನ ಸಕಲ ಸಮಸ್ಯೆಗಳಿಗೆ ಪರಿಹಾರ ಎಂದೆನಿಸಲಿದೆ.

ದಟ್ಟವಾದ ಕೂದಲಿಗೆ

ದಟ್ಟವಾದ ಕೂದಲಿಗೆ

ದಾಸವಾಳವನ್ನು ಕರಿಬೇವಿನ ಸೊಪ್ಪಿನೊಂದಿಗೆ ಬೆರೆಸಿ ಉಪಯೋಗಿಸಿದಾಗ ನಿಮಗೆ ಅದ್ಭುತ ಪ್ರಯೋಜವನ್ನು ನೀಡಲಿದೆ. ಇದು ದಟ್ಟವಾದ ಕೂದಲನ್ನು ನಿಮಗೆ ನೀಡಲಿದೆ. ಸ್ವಲ್ಪ ದಾಸವಾಳದ ಎಣ್ಣೆಯನ್ನು ತೆಗೆದುಕೊಳ್ಳಿ ಮತ್ತು ಕರಿಬೇವಿನ ಹುಡಿಯೊಂದಿಗೆ ಇದನ್ನು ಬೆರೆಸಿ ಇದನ್ನು ಕುದಿಸಿಕೊಳ್ಳಿ. ನಿಮ್ಮ ತಲೆಬುರುಡೆಗೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಇದನ್ನು ಹಾಗೆಯೇ ಬಿಡಿ ನಂತರ ಕೂದಲನ್ನು ತೊಳೆದುಕೊಳ್ಳಿ.

English summary

Amazing Ways To Use Hibiscus For Your Hairs

You must have heard of hibiscus oil. This oil has many benefits for the hair. Keep reading to find out what they are in this article.
Story first published: Monday, April 3, 2017, 23:40 [IST]
Please Wait while comments are loading...
Subscribe Newsletter