ಕೂದಲಿನ ಸರ್ವ ರೋಗಕ್ಕೂ ಮನೆಯಲ್ಲೇ ತಯಾರಿಸಿ 'ನೈಸರ್ಗಿಕ ಎಣ್ಣೆ'

By: Hemanth
Subscribe to Boldsky

ಪ್ರತಿಯೊಬ್ಬರಿಗೂ ಸೌಂದರ್ಯವೆನ್ನುವುದು ದೇವರು ಕೊಟ್ಟಿರುವ ವರ. ಎಲ್ಲರಲ್ಲೂ ಒಂದೇ ರೀತಿಯ ಸೌಂದರ್ಯವಿರುವುದಿಲ್ಲ. ದೇಹದ ಪ್ರತಿಯೊಂದು ಅಂಗವು ಎಲ್ಲಾ ರೀತಿಯ ಗುಣಮಟ್ಟವನ್ನು ಹೊಂದಿದ್ದರೆ ಅದನ್ನು ಸೌಂದರ್ಯವೆನ್ನಬಹುದು. ಸುಂದರವಾಗಿ ಕಾಣಲು ಎಲ್ಲರೂ ಬಯಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಇದು ಸಾಧ್ಯವಾಗಲ್ಲ. ಯಾಕೆಂದರೆ ಇದಕ್ಕೆ ಕಠಿಣ ಶ್ರಮ ಬೇಕಾಗುವುದು.

ಸೌಂದರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಕೇಶರಾಶಿಯ ಆರೈಕೆ ಮಾಡಲು ಕಷ್ಟವಾಗುತ್ತಿರುವ ಕಾರಣದಿಂದಲೇ ಇಂದಿನ ದಿನಗಳಲ್ಲಿ ಹೆಚ್ಚಿನವರು ಕೂದಲನ್ನು ಕತ್ತರಿಸಿಕೊಂಡು ಚಿಕ್ಕದಾಗಿಸಿಕೊಳ್ಳುತ್ತಾ ಇದ್ದಾರೆ. ಸುಂದರವಾಗಿರುವ ಉದ್ದಗಿನ ಕೂದಲು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು. ಸುಂದರವಾಗಿರುವ ಕೂದಲು ಬೇಕಾದರೆ ಅದಕ್ಕೆ ಪರಿಶ್ರಮ ಬೇಕಾಗುತ್ತದೆ. 

ನಿಮ್ಮ ಕೂದಲಿಗೆ ಹೊಂದುವ ಎಣ್ಣೆ ಯಾವುದು?

ಅದೇ ರೀತಿ ಒಳ್ಳೆಯ ಆರೈಕೆಯೂ ಬೇಕಾಗುವುದು. ಹೊರಗಿನ ಕಲುಷಿತ ವಾತಾವರಣದಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಕೂಡ ಅತೀ ಅಗತ್ಯವಾಗಿದೆ. ಧೂಳು ಹಾಗೂ ಕಲುಷಿತ ವಾತಾವರಣದಿಂದಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ನಿಸ್ತೇಜವಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಕೂದಲಿನ ಆರೈಕೆಯಲ್ಲಿ ಸರಿಯಾದ ತೈಲವನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ಮನೆಯಲ್ಲೇ ತಯಾರಿಸಿದ ಎಣ್ಣೆಯನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು. ಇದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ವಿವರವಾಗಿ ಹೇಳಿಕೊಡಲಿದೆ. ಇದನ್ನು ತಿಳಿದುಕೊಂಡು ಬಳಸಿಕೊಂಡು ಕೂದಲಿನ ಆರೈಕೆ ಮಾಡಿ.....

ತೆಂಗಿನೆಣ್ಣೆ + ದಾಸವಾಳದ ಹೂವು

ತೆಂಗಿನೆಣ್ಣೆ + ದಾಸವಾಳದ ಹೂವು

ಒಂದು ಲೀಟರ್ ತೆಂಗಿನೆಣ್ಣೆಗೆ 10ರಷ್ಟು ದಾಸವಾಳದ ಎಲೆಗಳು ಹಾಗೂ ಹೂಗಳನ್ನು ಹಾಕಿಕೊಳ್ಳಿ. ಹೂಗಳು ಸಂಪೂರ್ಣವಾಗಿ ಸಂಕೋಚನಗೊಳ್ಳುವ ತನಕ ಇದನ್ನು ಬಿಸಿಲಿನಲ್ಲಿ ಇಡಿ. ಇದರ ಬಳಿಕ ಒಂದು ತವಾದಲ್ಲಿ ಎಣ್ಣೆ ಬಿಸಿ ಮಾಡಿ. ತಂಪು ಮಾಡಿಕೊಂಡ ಬಳಿಕ ಎರಡು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ. ಈ ಎಣ್ಣೆಯು ಕೂದಲಿನ ಬಣ್ಣ ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಮಲ್ಲಿಗೆ ಹೂ+ನೀರು

ಮಲ್ಲಿಗೆ ಹೂ+ನೀರು

ಒಂದು ಸಣ್ಣ ಪಾತ್ರೆಯಲ್ಲಿ ನೀರು(ಕೋಣೆಯ ತಾಪಮಾನಕ್ಕೆ ಸರಿಯಾಗಿರಲಿ) ಹಾಕಿ ಮತ್ತು ಅದರಲ್ಲಿ ಸುಮಾರು 100ರಷ್ಟು ಮಲ್ಲಿಗೆ ಹೂಗಳನ್ನು ಸುಮಾರು ಎರಡು ರಾತ್ರಿ ತನಕ ನೆನೆಸಿಡಿ. ಇದರ ಮುಚ್ಚಳ ಮುಚ್ಚಿಡಿ. ಎರಡು ದಿನಗಳ ಬಳಿಕ ನೀರಿನ ಮೇಲೆ ಎಣ್ಣೆಯಂಶ ತೇಳುವುದನ್ನು ನೋಡಬಹುದು. ಹೂಗಳನ್ನು ತೆಗೆದುಹಾಕಿ ಮತ್ತು ಎಣ್ಣೆಯನ್ನು ಪ್ರತೀ ರಾತ್ರಿ ಹಚ್ಚಿಕೊಳ್ಳಿ. ಇದು ಕೂದಲಿಗೆ ಸುಗಂಧವನ್ನು ನೀಡುವುದು. ಎಣ್ಣೆಯು ಕೂದಲಿಗೆ ಕಾಂತಿ ನೀಡುವುದು ಮಾತ್ರವಲ್ಲದೆ ತಲೆನೋವು ನಿವಾರಣೆ ಮಾಡುವುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ಸುಮಾರು ಹತ್ತರಷ್ಟು ನೆಲ್ಲಿಕಾಯಿಯನ್ನು ಒಂದು ಲೀಟರ್ ತೆಂಗಿನೆಣ್ಣೆಯಲ್ಲಿ ರಾತ್ರಿಯಿಡಿ ನೆನೆಸಿಡಿ. ಇದನ್ನು ಮರುದಿನ ಬಿಸಿ ಮಾಡಿ ಮತ್ತು ತಣ್ಣಗಾಗಲು ಬಿಡಿ. ವಾರದಲ್ಲಿ ಮೂರು ಸಲ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ನೆಲ್ಲಿಕಾಯಿಯು ಒಳ್ಳೆಯ ಶುದ್ಧೀಕರಣ ಮಾಡುವುದು ಮಾತ್ರವಲ್ಲದೆ ಕೂದಲಿಗೆ ಬಣ್ಣ ನೀಡುವುದು. ಇದು ಕೂದಲಿನ ಗುಣಮಟ್ಟ ಹೆಚ್ಚಿಸುವುದು.

ಫಳಫಳ ಹೊಳಪಿನ ಕೂದಲಿಗಾಗಿ ಬಳಸಿ ಬೆಟ್ಟದ ನೆಲ್ಲಿಕಾಯಿ

ದಾಸವಾಳದ ಹೂ, ಮೆಹಂದಿ ಎಲೆಗಳು, ಕರಿಬೇವಿನ ಎಲೆ

ದಾಸವಾಳದ ಹೂ, ಮೆಹಂದಿ ಎಲೆಗಳು, ಕರಿಬೇವಿನ ಎಲೆ

ದಾಸವಾಳದ ಹೂ, ಮೆಹಂದಿ ಎಲೆಗಳು, ಕರಿಬೇವಿನ ಎಲೆ, ನೀರಿನಲ್ಲಿ ನೆನೆಸಿಟ್ಟ ಗಸೆಗಸೆ, ಬೇವಿನ ಎಲೆಗಳು, ಮೆಂತೆ ಕಾಳುಗಳು. ಕೋಣೆಯ ವಾತಾವರಣದಲ್ಲಿ ಎಲ್ಲವೂ ಸರಿಯಾಗಿ ಒಣಗಿಸಿ. ಎಲ್ಲವನ್ನು ರುಬ್ಬಿಕೊಂಡು ಒಂದು ಮಾತ್ರೆಯಂತೆ ಮಾಡಿ. ಇದನ್ನು ತೆಂಗಿನೆಣ್ಣೆ ಮತ್ತು ಎಳ್ಳೆಣ್ಣೆಯ ಮಿಶ್ರಣದಲ್ಲಿ ನೆನೆಸಿ. ಇದು ಕೂದಲನ್ನು ಕಲ್ಮಶದಿಂದ ರಕ್ಷಿಸುವುದು. ಇದರಿಂದ ಕೂದಲು ಆರೋಗ್ಯವಾಗುವುದು.

ರಾತ್ರಿ ವೇಳೆ

ರಾತ್ರಿ ವೇಳೆ

ರಾತ್ರಿ ವೇಳೆ ಎಣ್ಣೆ ಹಚ್ಚಿಕೊಳ್ಳಿ. ಕೂದಲು ಎಣ್ಣೆಯನ್ನು ರಾತ್ರಿಯಿಡಿ ಹೀರಿಕೊಳ್ಳಲಿ. ಕೂದಲನ್ನು ಹಾಗೆ ಬಿಟ್ಟುಕೊಂಡರೆ ಧೂಳು ಕೂದಲಿನಲ್ಲಿ ಅಂಟಿಕೊಳ್ಳುವುದು. ಮನೆಯಿಂದ ಹೊರಗೆ ಹೋಗುವ ಮೊದಲು ಕೂದಲು ತೊಳೆಯಿರಿ.

ನೆಲ್ಲಿಕಾಯಿ ಮತ್ತು ರೀತಾ

ನೆಲ್ಲಿಕಾಯಿ ಮತ್ತು ರೀತಾ

ನೆಲ್ಲಿಕಾಯಿ ಮತ್ತು ರೀತಾವನ್ನು ರಾತ್ರಿಯಿಡಿ ನೆನೆಸಿಡಿ. ಮತ್ತು ಅದನ್ನು ಬಿಸಿ ಮಾಡಿಕೊಳ್ಳಿ. ಎರಡನ್ನು ಪುಡಿ ಮಾಡಿಕೊಂಡು ಅದರ ಪೇಸ್ಟ್ ನ್ನು ಕೂದಲಿಗೆ ಬಳಸಿಕೊಳ್ಳಬಹುದು. ಇದರಿಂದ ಕೂದಲು ರೇಷ್ಮೆಯಂತೆ ಹೊಳೆಯುವುದು.

 

English summary

Amazing Homemade Hair Oil Recipes For Hair Regrowth

Your tresses is the crown of your beauty. A beautiful mane over a showy dress elegantly completes your look. Your hair plays a great role in your looks. It gives your face the desired shape, it gives your dress the desired look and it enhances your beauty too. Thus, it is very important to take good care of your hair.
Subscribe Newsletter