ಸೌಂದರ್ಯ ಪ್ರಿಯರಿಗೆ ಬೇವಿನ ಎಣ್ಣೆಯ ಬ್ಯೂಟಿ ಟಿಪ್ಸ್

By: manu
Subscribe to Boldsky

ಸಾವಿರಾರು ವರ್ಷಗಳಿಂದ ದಟ್ಟ ಕಾಡುಗಳಿಂದ ಹುಡುಕಿಕೊಂಡು ತಂದಂತಹ ಗಿಡಮೂಲಿಕೆಗಳಿಂದ ಔಷಧಿಯನ್ನು ತಯಾರಿಸಲಾಗುತ್ತಿತ್ತು. ಆದರೆ ಸಮಯ ಕಳೆದಂತೆ ಆಧುನಿಕತೆಗೆ ಒಗ್ಗಿಕೊಂಡು ಗಿಡಮೂಲಿಕೆಗಳು ಕೂಡ ಕಡಿಮೆಯಾದವು. ಬೇವಿನ ಸೌಂದರ್ಯವರ್ಧಕ ಗುಣಗಳು ಒಂದೇ, ಎರಡೇ?

ಕೆಲವೊಂದು ಅಮೂಲ್ಯವಾದ ಗಿಡಮೂಲಿಕೆಗಳು ಅಳಿದು ಹೋದವು. ಆದರೆ ಈಗಲೂ ಆಯುರ್ವೇದ ದಲ್ಲಿರುವ ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿಕೊಂಡು ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೇನಿನ ಸಿಹಿ, ಬೇವಿನ ಕಹಿ-ಇದುವೇ ಸೌಂದರ್ಯದ ಕೀಲಿಕೈ

ಅದರಲ್ಲೂ ಕೆಲವೊಂದು ತೈಲಗಳು ತ್ವಚೆ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು. ಬೇವಿನ ಎಣ್ಣೆಯಲ್ಲಿರುವ ಕೆಲವೊಂದು ಔಷಧೀಯ ಗುಣಗಳನ್ನು ನಾವು ಕಡೆಗಣಿಸುತ್ತಲೇ ಬಂದಿದ್ದೇವೆ. ಆದರೆ ಬೇವಿನ ಎಣ್ಣೆಯು ತ್ವಚೆ ಹಾಗೂ ಕೂದಲಿಗೆ ಯಾವ ರೀತಿಯಿಂದ ನೆರವಾಗಲಿದೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.....   

ಕಲೆಗಳ ನಿವಾರಣೆಗೆ

ಕಲೆಗಳ ನಿವಾರಣೆಗೆ

ಬೇವಿನ ಎಣ್ಣೆಯನ್ನು ತ್ವಚೆಗೆ ಬಳಸುವುದರಿಂದ ಕಲೆಗಳು ಹಾಗೂ ಮೊಡವೆಯನ್ನು ನಿವಾರಣೆ ಮಾಡಬಹುದು. ಆ್ಯಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿರುವ ಬೇವಿನ ಎಣ್ಣೆಯು ಕಲೆ ಹಾಗೂ ಮೊಡವೆಯನ್ನು ನಿವಾರಣೆ ಮಾಡುತ್ತದೆ.

ಕಲೆಗಳ ನಿವಾರಣೆಗೆ

ಕಲೆಗಳ ನಿವಾರಣೆಗೆ

ಕಲೆಗಳನ್ನು ನಿವಾರಣೆ ಮಾಡಲು ಕೆಲವು ಹನಿ ಬೇವಿನ ಎಣ್ಣೆಯನ್ನು ಕೆಲವು ಹನಿ ಲ್ಯಾವೆಂಡರ್ ಎಣ್ಣೆಯೊಂದಿಗೆ ಸೇರಿಸಿ ಅದನ್ನು ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ನೆನಪಿಡಿ ಬೇವಿನ ಎಣ್ಣೆಯನ್ನು ನೇರವಾಗಿ ಚರ್ಮಕ್ಕೆ ಹಚ್ಚಬೇಡಿ.

ತಲೆಹೊಟ್ಟು ನಿವಾರಣೆಗೆ

ತಲೆಹೊಟ್ಟು ನಿವಾರಣೆಗೆ

ಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡರೆ ತಲೆಹೊಟ್ಟನ್ನು ನಿವಾರಣೆ ಮಾಡಬಹುದು. ಈ ಕ್ರಮವನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಫಂಗಲ್ ಸೋಂಕಿನಿಂದಾಗಿ ತಲೆಹೊಟ್ಟು ಉಂಟಾಗುತ್ತದೆ.ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

ತಲೆಹೊಟ್ಟು ನಿವಾರಣೆಗೆ

ತಲೆಹೊಟ್ಟು ನಿವಾರಣೆಗೆ

ಬೇವಿನ ಎಣ್ಣೆಯಿಂದ ಇದನ್ನು ಸಂಪೂರ್ಣವಾಗಿ ನಿವಾರಿಸಬಹುದು. ಕೆಲವು ಹನಿ ಬೇವಿನ

ಎಣ್ಣೆಯನ್ನು ನೀವು ಬಳಸುವಂತಹ ಶಾಂಪೂವಿನೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿಕೊಳ್ಳಿ. ಇದನ್ನು ಸಾಮಾನ್ಯವಾಗಿ ತೊಳೆಯಬಹುದು.

ಸೊಳ್ಳೆ ನಿವಾರಣೆಗೆ

ಸೊಳ್ಳೆ ನಿವಾರಣೆಗೆ

ನಾವೆಲ್ಲರೂ ಸೊಳ್ಳೆ ಕಚ್ಚುತ್ತದೆ ಎಂದು ಹಲವಾರು ರೀತಿಯ ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಮೈಗೆ ಹಚ್ಚಿಕೊಳ್ಳುತ್ತೇವೆ. ಆದರೆ ಇದು ಖಂಡಿತವಾಗಿಯೂ ಚರ್ಮಕ್ಕೆ ಒಳ್ಳೆಯದಲ್ಲ. ಬೇವಿನ ಎಣ್ಣೆಯು ನೈಸರ್ಗಿಕ ಹಾಗೂ ತುಂಬಾ ಪರಿಣಾಮಕಾರಿಯಾಗಿ ಸೊಳ್ಳೆಯನ್ನು ಓಡಿಸುತ್ತದೆ.ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ

ಸೊಳ್ಳೆ ನಿವಾರಣೆಗೆ

ಸೊಳ್ಳೆ ನಿವಾರಣೆಗೆ

ಬೇವಿನ ಎಣ್ಣೆಯು ಸೊಳ್ಳೆ ಕಚ್ಚದಂತೆ ತಡೆಯುವುದು. 10-15 ಹನಿ ಬೇವಿನ ಎಣ್ಣೆಯನ್ನು ¼ ಕಪ್ ತೆಂಗಿನ ಎಣ್ಣೆಯೊಂದಿಗೆ ಸೇರಿಸಿಕೊಂಡು ಮೈಗೆ ಹಚ್ಚಿಕೊಂಡರೆ ಸೊಳ್ಳೆ ಕಚ್ಚುವುದನ್ನು ತಡೆಯಬಹುದು.

ಚರ್ಮ ಒಣಗುವುದನ್ನು ತಡೆಯುವುದು

ಚರ್ಮ ಒಣಗುವುದನ್ನು ತಡೆಯುವುದು

ಒಣ ಹಾಗೂ ಚರ್ಮ ಎದ್ದುಬರುವ ಸಮಸ್ಯೆ ಇರುವವರು ಬೇವಿನ ಎಣ್ಣೆಯನ್ನು ಬಳಸಬಹುದು. ಇದು ಮುಖ ಹಾಗೂ ಚರ್ಮವು ಒಣಗುವುದನ್ನು ತಡೆಯುವುದು. ಬೇವಿನ ಎಣ್ಣೆಯು ಚರ್ಮಕ್ಕೆ ತೇವಾಂಶವನ್ನು ನೀಡುವುದು.

ಚರ್ಮ ಒಣಗುವುದನ್ನು ತಡೆಯುವುದು

ಚರ್ಮ ಒಣಗುವುದನ್ನು ತಡೆಯುವುದು

ಸ್ವಲ್ಪ ಬೇವಿನ ಎಣ್ಣೆಯನ್ನು ಸ್ವಲ್ಪ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಂಡು ಮೈಗೆ

ಹಚ್ಚಿಕೊಂಡು ಸ್ವಲ್ಪ ಸಮಯ ಹಾಗೆ ಬಿಡಿ. ಇದರಿಂದ ಮೈ ಒಣಗುವುದನ್ನು ತಡೆಯಬಹುದು. ಬೇವಿನ ಎಣ್ಣೆ ಮತ್ತು ತೆಂಗಿನ ಎಣ್ಣೆಯು ಚರ್ಮ ಒಣಗುವುದಂತೆ ರಕ್ಷಣೆ ನೀಡುವುದು.

 
English summary

Amazing Benefits Of Neem Oil & Ways To Use It For Skin & Hair

Neem oil is known as a natural medicine that helps to cure several disorders and infections. Apart from the medicinal uses, let's check how neem oil can be used on skin and hair. We are letting you know how to use neem oil on skin and hair, by listing some of the simplest ways.
Please Wait while comments are loading...
Subscribe Newsletter