ಕೂದಲು ತೊಳೆದ ಬಳಿಕ, ಆರೈಕೆ ಹೀಗಿರಲಿ.. ಯಾವ ಸಮಸ್ಯೆಯೂ ಬಾರದು!

By: Hemanth
Subscribe to Boldsky

ಸುಂದರವಾಗಿ ಕಾಣಲು ನಮ್ಮಿಂದ ಹೆಚ್ಚಿನ ಶ್ರಮ, ಬದ್ಧತೆ ಇದ್ದರೆ ಮಾತ್ರ ಸಾಧ್ಯವಾಗುವುದು. ದೇವರು ನೀಡಿರುವಂತಹ ಸೌಂದರ್ಯವನ್ನು ಇಂದಿನ ಕಲುಷಿತವಾಗಿರುವಂತಹ ವಾತಾವರಣದಲ್ಲಿ ಕಾಪಾಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಪ್ರತೀ ದಿನ ಹೊರಗಡೆ ಹೋಗುವಾಗ ವಾತಾವರಣದಲ್ಲಿರುವ ಧೂಳು ಹಾಗೂ ಇನ್ನಿತರ ಪದಾರ್ಥಗಳು ನಮ್ಮ ಕೂದಲು ಹಾಗೂ ದೇಹವನ್ನು ಸೇರಿಕೊಳ್ಳುವುದು. ಉದ್ದ, ದಪ್ಪ ಹಾಗೂ ಕಪ್ಪಗಿನ ಕೂದಲು ಪ್ರತಿಯೊಬ್ಬರಿಗೂ ಇಷ್ಟವಾಗಿರುವಂತದ್ದಾಗಿದೆ. ಅದೇ ಕೂದಲನ್ನು ಆರೈಕೆ ಮಾಡಲು ತುಂಬಾ ಕಷ್ಟಪಡಬೇಕಾಗುತ್ತದೆ. 

ಇಂತಹ ಎಣ್ಣೆ ಕೂದಲಿಗೆ ಬಳಸಿ, ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯುತ್ತೆ

ಯಾಕೆಂದರೆ ಸಮಯದ ಅಭಾವ. ಕೂದಲಿನ ಆರೈಕೆಗೆ ಸಮಯವಿಲ್ಲದೆ ಇರುವ ಕಾರಣ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ದುಬಾರಿ ಉತ್ಪನ್ನಗಳನ್ನು ತಂದು ಕೂದಲಿನ ಆರೈಕೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಇಂತಹ ಉತ್ಪನ್ನಗಳ ಬದಲಿಗೆ ನೈಸರ್ಗಿಕವಾಗಿ ಲಭ್ಯವಾಗುವಂತಹ ಕೂದಲಿನ ಆರೈಕೆಯ ಸಾಮಗ್ರಿ ಬಳಸಿಕೊಂಡರೆ ಅದರಿಂದ ಕೂದಲು ಉದ್ದ, ದಪ್ಪ ಹಾಗೂ ಕಪ್ಪಾಗಿ ಬೆಳೆಯುವುದು.

ಕೂದಲುದುರುವ ಸಮಸ್ಯೆಗೆ, ಮನೆಯಂಗಳದ 'ದಾಸವಾಳದ ಎಣ್ಣೆ'

ಇನ್ನು ಕೆಲವರು ಸ್ಪಾ ಗಳಿಗೆ ಹೋಗಿ ಕೂದಲಿಗೆ ತೈಲ ಹಾಗೂ ಬೇರೆ ರೀತಿಯ ಮಸಾಜ್ ಮಾಡಿಸಿಕೊಳ್ಳುವರು. ಇದು ದುಡ್ಡು ವೆಚ್ಚ ಮಾಡುವುದೇ ಹೊರತು ಇದರಿಂದ ಬೇರೆ ಯಾವುದೇ ಪ್ರಯೋಜನವಿಲ್ಲ. ಕೂದಲು ತೊಳೆದ ಬಳಿಕ ಅದರ ಅರೈಕೆ ಯಾವ ರೀತಿ ಮಾಡಬಹುದು ಎಂದು ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ.... 

ಶಾಂಪೂ, ಕಂಡೀಷನಿಂಗ್

ಶಾಂಪೂ, ಕಂಡೀಷನಿಂಗ್

ನಿಮ್ಮ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುವಂತಹ ಕೂದಲು ಉದುರದಂತೆ, ತುಂಡಾಗದಂತೆ ಆರೈಕೆ ಮಾಡಲು ಬೇಕಾಗುವಂತಹ ನಾಲ್ಕು ಪ್ರಮುಖ ಕ್ರಮಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಕೂದಲಿನ ರಕ್ಷಣೆಯೊಂದಿಗೆ ಸಮಯ ಹಾಗೂ ಹಣ ಉಳಿಸಲಿದೆ. ಕೂದಲು ತೊಳೆದ ಬಳಿಕ ಪ್ರತೀ ಸಲ ಈ ನಾಲ್ಕು ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಕೂದಲು ಮತ್ತೆ ಕಾಂತಿ ಪಡೆಯುವುದು.

ಮೊದಲ ಕ್ರಮ

ಮೊದಲ ಕ್ರಮ

ಒಣಗಿಸುವುದು

ಕೂದಲಿಗೆ ಸ್ನಾನ ಮಾಡಿಕೊಂಡು ಬಂದ ಬಳಿಕ ಟವೆಲ್‌ನ್ನು ಕೂದಲಿಗೆ ಸುತ್ತಿಕೊಂಡು ಹೆಚ್ಚುವರಿ ಇರುವ ನೀರನ್ನು ತೆಗೆಯಿರಿ. ಕೂದಲಿನಿಂದ ನೀರು ಬರುವುದು ನಿಲ್ಲುವ ತನಕ ಇದನ್ನು ಮುಂದುವರಿಸಿ. ಕೂದಲಿನ ದಪ್ಪ ಹಾಗೂ ಉದ್ದದ ಮೇಲೆ ಸಮಯ ನಿರ್ಧಾರಿತವಾಗಿರುವುದು.

ಎರಡನೇ ಕ್ರಮ

ಎರಡನೇ ಕ್ರಮ

ಎಣ್ಣೆ ಹಚ್ಚಿಕೊಳ್ಳುವುದು

ಹೆಚ್ಚಿನವರು ತಲೆಗೆ ಸ್ನಾನ ಮಾಡಿಕೊಳ್ಳುವ ಮೊದಲು ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವರು. ಆದರೆ ಸ್ನಾನ ಮಾಡಿದ ಬಳಿಕವೂ ತಲೆಗೆ ಎಣ್ಣೆ ಹಚ್ಚಬೇಕು. ಇದರಿಂದ ತಲೆ ಜಿಡ್ಡಾಗಿರುವುದು ಎಂದು ನಿಮಗನಿಸಬಹುದು. ಆದರೆ ಇದಕ್ಕೂ ಪರಿಹಾರವಿದೆ. ಆಲಿವ್ ತೈಲವು ತುಂಬಾ ದುಬಾರಿ. ಆದರೆ ಕೆಲವು ಹನಿ ಹಚ್ಚಿಕೊಂಡರೆ ಅದ್ಭುತವಾಗಿ ಕೆಲಸ ಮಾಡುವುದು. ಕೂದಲಿನ ಅಂತ್ಯಕ್ಕೆ ಹಚ್ಚಿಕೊಳ್ಳಿ. ಆಲಿವ್ ತೈಲ ಅತಿಯಾಗಿ ಹಚ್ಚಬೇಡಿ. ಕೂದಲನ್ನು ಒಣಗಿಸಿದ ಬಳಿಕ ಇದು ಮಾಡಬೇಕಾದ ಮೊದಲ ಕೆಲಸ.

ಮೂರನೇ ಕ್ರಮ

ಮೂರನೇ ಕ್ರಮ

ನೇರವಾಗಿಸುವುದು

ಕೂದಲಿಗೆ ಸ್ನಾನ ಮಾಡಿದ ಬಳಿಕ ಕೂದಲು ಸುರುಳಿಯಾಗಿರುವುದು. ಇದನ್ನು ನೇರವಾಗಿಸಬೇಕು. ಆದರೆ ಒಣ ಕೂದಲು ತುಂಡಾಗುವುದು ಎಂದು ನಿಮಗೆ ಅನಿಸಿರಬಹುದು. ಆದರೆ ಚಿಂತೆ ಮಾಡಬೇಡಿ. ಯಾಕೆಂದರೆ ಈಗಾಗಲೇ ಕೂದಲು ಒಣಗಿಸಿ ತೈಲ ಹಚ್ಚಿದ್ದೀರಿ. ಇದರಿಂದ ಕೂದಲು ನೇರವಾಗಿಸಲು ಭೀತಿ ಪಡಬೇಡಿ. ದೊಡ್ಡ ಹಲ್ಲುಗಳು ಇರುವ ಬಾಚಣಿಗೆಯಿಂದ ಕೂದಲನ್ನು ನೇರವಾಗಿಸಿ. ಅಂತ್ಯದಿಂದ ಆರಂಭಿಸಿ. ಬಳಿಕ ಮೇಲಿನ ಭಾಗಕ್ಕೆ ಹೋಗಿ.

ನಾಲ್ಕನೇ ಕ್ರಮ

ನಾಲ್ಕನೇ ಕ್ರಮ

ಗಂಟು ಕಟ್ಟುವಿಕೆ ತೆಗೆಯುವುದು

ಕೂದಲಿನಲ್ಲಿ ಗಂಟು ಕಟ್ಟುವಿಕೆ ತೆಗೆಯಲು ಒಂದು ಪ್ರಮುಖ ಸಾಮಗ್ರಿಯ ಬಗ್ಗೆ ನಿಮಗೆ ಹೇಳಲಿದ್ದೇವೆ. ಇದು ಚರ್ಮದ ಆರೈಕೆಯಲ್ಲಿ ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಆದರೆ ಕೂದಲಿನ ಆರೈಕೆಗೆ ಬಳಕೆಯಾಗುವುದು ಕಡಿಮೆ. ಇಲ್ಲಿ ಹೇಳುತ್ತಿರುವುದು ಅಲೋವೆರಾದ ಬಗ್ಗೆ. ಕೂದಲನ್ನು ಒಣಗಿಸಿದ ಬಳಿಕ ಕೆಲವೊಂದು ಸಲ ಸಣ್ಣ ಗಂಟು ಕೂದಲಿನಲ್ಲಿ ಕಾಣಿಸುವುದು. ಸ್ವಲ್ಪ ಅಲೋವೆರಾ ತೆಗೆದುಕೊಂಡು ಅದನ್ನು ಕೂದಲಿಗೆ ಉಜ್ಜಿಕೊಳ್ಳಿ. ಇದರಿಂದ ಸಣ್ಣ ಗಂಟುಗಳು ಮಾಯವಾಗುವುದು.

English summary

After-wash Steps To Get Healthy Hair

With the escalating amount of pollution and the lack of time we all have, it is hard to take care of one of our beloved assets - our hair. We all tend to take basic care of our hair, from using natural hair care tips to opting for commercially available expensive hair care products; we do not give up on taking attempts in saving our hair. We all think that taking care of the hair before hair wash is the primary solution.
Subscribe Newsletter