For Quick Alerts
ALLOW NOTIFICATIONS  
For Daily Alerts

ಫಳಫಳ ಹೊಳಪಿನ ಕೂದಲಿಗಾಗಿ ಬಳಸಿ ಬೆಟ್ಟದ ನೆಲ್ಲಿಕಾಯಿ

By Manasa K M
|

"ಆಮ್ಲ" ಎಂದರೆ "ಬೆಟ್ಟದ ನೆಲ್ಲಿಕಾಯಿ". ಯಾವ ಕೂದಲಿನ ಶಾಂಪೂ ಅಥವಾ ಎಣ್ಣೆಯ ಜಾಹೀರಾತು ನೋಡಿದರೂ ಅದರಲ್ಲಿ ಆಮ್ಲದ ಮಹತ್ವ ಹೇಳಿ ನಮ್ಮ ಪದಾರ್ಥದಲ್ಲಿ ಆಮ್ಲ ಇದೆ ಎಂದು ಮಾರುಕಟ್ಟೆ ಮಾಡುತ್ತಾರೆ.

ಆಮ್ಲದ ಗುಣಗಳ ಮೇಲೆ ಎಷ್ಟೋ ಸಂಶೋಧನೆಗಳು ನಡೆದಿವೆ ಹಾಗೂ ನಡೆಯುತ್ತಿವೆ. ಇದರಲ್ಲೇ ತಿಳಿಯುತ್ತದೆ ಆಮ್ಲ ನಮ್ಮ ಕೂದಲಿಗೆ ಎಷ್ಟು ಉಪಯೋಗಿ ಎಂದು. ಬನ್ನಿ ಈ ಆಮ್ಲದ ಬಗ್ಗೆ ಹೆಚ್ಚು ತಿಳಿಯೋಣ.

ಆಮ್ಲ ಅಥವಾ "ಇಂಡಿಯನ್ ಗೂಸ್ಬೆರಿ" ಯ ವೈಜ್ಞಾನಿಕ ಹೆಸರು - "ಫಿಲ್ಲಾಂಥಸ್ ಎಂಬ್ಲಿಕ". ಆಮ್ಲ "ವಿಟಮಿನ್ ಸಿ" ಆಗರವಾಗಿದೆ. ಇದು ಬಹಳ ಒಳ್ಳೆಯ "ಆಂಟಿ ಆಕ್ಸಿಡೆಂಟ್" ಆಗಿದ್ದು ಕೂದಲಿಗೆ ಅಲ್ಲದೆ ಚರ್ಮಕ್ಕೂ ಬಹಳ ಒಳ್ಳೆಯದು. ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

ಆಮ್ಲದ ಉಪಯೋಗಗಳನ್ನು ನಮ್ಮ ಭಾರತದಲ್ಲಿ ಎಷ್ಟೋ ಶತಮಾನಗಳ ಮುಂಚಿತವಾಗಿಯೇ ತಿಳಿಯಲಾಗಿತ್ತು. ಆಮ್ಲ ಎಣ್ಣೆಯನ್ನು ನಮ್ಮ ಹೆಣ್ಣು ಮಕ್ಕಳು ತಮ್ಮ ಕೇಶ ಸೌಂದರ್ಯದ ರಕ್ಷಣೆಗೆ ಬಳಸುತ್ತಿದ್ದರು.

ಆಮ್ಲವು ಅತ್ಯುತ್ತಮ ಕೇಶ ವಾರ್ಧಕ ವಾಗಿದೆ. ಆಮ್ಲವು ಕೂದಲಿಗೆ ಬಲವನ್ನೂ ಮಾತ್ರವಲ್ಲ ಕೂದಲಿಗೆ ಕಡುಗಪ್ಪು ಬಣ್ಣ, ಮೃದುತ್ವ, ರೇಷ್ಮೆಯಂತಹ ನುಣುಪು ಕೂಡ ಕೊಡುತ್ತದೆ. ನಾವು ನಮ್ಮ ಕೂದಲಿಗೆ ಕೊಡಬಹುದಾದ ಅತ್ಯುತ್ತಮ ಕೊಡುಗೆ ಆಮ್ಲ. ಇದರ ವಿವಿಧ ರೀತಿಯ ಉಪಯೋಗಗಳನ್ನು ನೋಡೋಣ.....

ಕೇಶ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಕೇಶ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಆಮ್ಲದಲ್ಲಿ ಇರುವ ಅನೇಕ ಪೋಷಕಾಂಶಗಳು ನಮ್ಮ ಕೇಶದ ಬೇರಿನ ವರೆಗೂ ಆರೈಕೆ ನೀಡಿ ಕೂದಲಿಗೆ ಬೆಳೆಯುವ ಸತ್ವ ನೀಡುತ್ತದೆ. ಹೀಗಾಗಿ ಕೂದಲು ಸಮೃದ್ಧಿಯಾಗಿ ಹಾಗೂ ಆರೋಗ್ಯವಾಗಿ ಬೆಳೆಯುತ್ತದೆ. ಕೇಶವು ಸಮೃದ್ಧಿಯಾಗಿ ಬೆಳೆಯಲು, ಹಾಗೂ ಬೆಳೆದ ಕೂದಲು ಸೀಳುಗಳು ಇಲ್ಲದೆ ಆರೋಗ್ಯವಾಗಿ ಕಾಣಲು ಬಹಳಷ್ಟು ಪೋಷಕಾಂಶಗಳ ಅವಶ್ಯಕತೆ ಇದೆ. ಇದೆಲ್ಲವನ್ನೂ ಆಮ್ಲ ನಮಗೆ ನೀಡುತ್ತದೆ.

ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ನಮ್ಮ ಭಾರತೀಯ ಸೌಂದರ್ಯದ ಒಂದು ಮುಖ್ಯ ಮಾನದಂಡವಾದ "ಕರ್ಮೊಡದಂತಹ ಕಡುಗಪ್ಪು ಕೂದಲು" ಪಡೆಯಲು ಆಮ್ಲದ ಮೊರೆ ಹೋಗದೆ ವಿಧಿ ಇಲ್ಲ. ಆಮ್ಲದಿಂದ ಕೂದಲು ಗಾಢ ಕಪ್ಪು ಬಣ್ಣವನ್ನು ಪಡೆಯುತ್ತದೆ. ಎಷ್ಟೆಲ್ಲ ಬಣ್ಣಗಳು ಇದ್ದರೂ ಕಪ್ಪು ಬಣ್ಣವು ಕೂದಲಿಗೆ ಕೊಡುವ ಅಂದ ಇನ್ನೇನು ಕೊಡದು. ಕಪ್ಪನೆಯ ಮುಂಗುರುಳು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಬಿಳಿ ಕೂದಲಿನ ಸಮಸ್ಯೆಗೆ ರಾಮಬಾಣ

ಆಮ್ಲ ನೆರೆ ಕೂದಲಿನ ಅತಿ ದೊಡ್ಡ ಶತ್ರುವು. ಇದು ಕೂದಲು ನೆರೆಯುವುದನ್ನು ತಡೆಗಟ್ಟಲು ಅತ್ಯುತ್ತಮ ವಿಧಾನ. ಆಮ್ಲ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಅದರ ಪೋಷಕಾಂಶಗಳು ಕೂದಲಿಗೆ ದೊರೆತು ಕೂದಲು ಕಪ್ಪಗೆ ಹೊಳೆಯುತ್ತಾ ಇರುತ್ತದೆ.

ತಲೆ ಹೊಟ್ಟಿನ ನಿವಾರಣೆ

ತಲೆ ಹೊಟ್ಟಿನ ನಿವಾರಣೆ

ತಲೆಹೊಟ್ಟು ಕೂದಲಿನ ಅತಿ ದೊಡ್ಡ ಸಮಸ್ಯೆ. ತಲೆಹೊಟ್ಟಿನಿಂದ ಕೂದಲಿನ ಅಂದ ಹಾಳಾಗುವುದೇ ಅಲ್ಲದೆ ಆರೋಗ್ಯವೂ ಹಾಳು. ತಲೆಹೊಟ್ಟು ಹೋಗಲಾಡಿಸುವುದು ಬಹಳ ಕಷ್ಟದ ಕೆಲಸ. ಇದಿಗೊ ಹೋಯ್ತು ಅಂದುಕೊಂಡರೆ ಹಾಗೆಯೇ ಮತ್ತೆ ಪ್ರತ್ಯಕ್ಷವಾಗಿರಿತ್ತದೆ. ತಲೆ ಹೊಟ್ಟಿಗೆ ಕಾರಣಗಳು ಅನೇಕ. ಮಾಲಿನ್ಯ, ಬಿಸಿ, ಒಣ ಹವಾಮಾನ, ನಮ್ಮ ಜೀವನ ಶೈಲಿ ಹಾಗೂ ಮಾನಸಿಕ ಒತ್ತಡವು ಸಹ.

ತಲೆ ಹೊಟ್ಟಿನ ನಿವಾರಣೆ

ತಲೆ ಹೊಟ್ಟಿನ ನಿವಾರಣೆ

ಇಂತಹ ಸಮಸ್ಯೆಯು ಕೂಡ ಆಮ್ಲಕ್ಕೆ ಭಯಪಡುತ್ತದೆ. ಏನು ನಂಬೋಲ್ಲವೇ? ಬಳಸಿ ನೋಡಿ. ನೀವೇ ತಿಳಿದುಕೊಳ್ಳುತ್ತೀರಾ. ಆಮ್ಲ ಪುಡಿಯನ್ನು ಕೂದಲಿಗೆ ಪ್ಯಾಕ್ ತರಹ ವಾರಕ್ಕೊಮ್ಮೆ ಬಳಸಿದರೂ ಡ್ಯಾಂಡ್ರಫ್ ನಂತಹ ಸಮಸ್ಯೆಗಳು ಹತ್ತಿರ ಕೂಡ ಸುಳಿಯುವುದಿಲ್ಲ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ನಾವು ತಲೆ ಬಾಚುವಾಗ, ಸ್ನಾನದ ನಂತರ, ಕೆಲವೊಮ್ಮೆ ಕೈ ಆಡಿಸಿದರು ಸಹ ಕೂದಲು ಉದುರುತ್ತಿರುತ್ತದೆ. ಇಷ್ಟು ಕೂದಲು ಉದುರತೊಡಗಿದರೆ ಇನ್ನು ನಾವು ಬಯಸುವಂತೆ ಅಲಂಕಾರ ಮಾಡುವುದೆಲ್ಲಿ? ಸಣ್ಣಗೆ ಇಲಿ ಬಾಲದಂತಹ ಕೂದಲು ಯಾರಿಗೆ ಬೇಕು. ದಪ್ಪನೆ ನೀಳವಾದ ಜಡೆ ಇರಬೇಕೆಂದರೆ ಕೂದಲು ಉದುರುವುದನ್ನು ನಿಲ್ಲಿಸುವುದು ಬಹು ಮುಖ್ಯ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ಕೂದಲು ಉದುರುವುದು ನಿಯಂತ್ರಣದಲ್ಲಿ ಇಡಬೇಕಾದ ವಿಷಯ. ಆಮ್ಲವು ತನ್ನಲ್ಲಿರುವ ಪೋಷಕಾಂಶಗಳನ್ನು ಕೂದಲಿಗೆ ಹಾಗೂ ನೆತ್ತಿಗೆ ನೀಡಿ ಕೂದಲನ್ನು ಬೇರು ಸಮೇತ ಬಲ ಪಡಿಸುತ್ತದೆ. ಹೀಗಾಗಿ ದುರ್ಬಲ ಕೂದಲುಗಳು ಕೂಡ ಬಲವಾಗುತ್ತವೆ.

ಶ್ರೇಷ್ಟ ಕಂಡೀಶನರ್

ಶ್ರೇಷ್ಟ ಕಂಡೀಶನರ್

ಆಮ್ಲ ಎಣ್ಣೆ ಹಾಗೂ ಆಮ್ಲ ಇರುವ ಶಾಂಪೂ ಬಳಸುವುದರಿಂದ ಕೂದಲು ಸಿಕ್ಕು ಸಿಕ್ಕಾಗದೆ ಮೃದುವಾಗಿರುತ್ತದೆ. ರೇಶಿಮೆಯಂತಹ ನುಣುಪು ಬೇಕೇ.. ಹಾಗಾದರೆ ಆಮ್ಲದ ಮೊರೆ ಹೋಗಲೇ ಬೇಕಿದೆ. ನುಣುಪಾದ ನೇವರಿಸಬೇಕು ಎನಿಸುವ ಕೂದಲು ಯಾರಿಗೆ ಬೇಡ. ಇಂತಹ ಕೂದಲು ಇದ್ದರೆ ಬಾಚುವುದು, ಸ್ಟೈಲ್ ಮಾಡುವುದು ಎಷ್ಟು ಸುಲಭ ಅಲ್ಲವೇ. ಹಾಗೆಯೇ ಕೂದಲನ್ನು ಕಟ್ಟಿ ಹಾಕದೆ ಬಿಟ್ಟಾಗಲೂ ಅದು ಸಿಕ್ಕಾಗದೆ ನಿರ್ವಹಿಸಲು ಸುಲಭವಾಗಿ ಇರಬೇಕೆ ಹಾಗಾದರೆ ಬಳಸಿ ಆಮ್ಲ.

English summary

Unknown benefits amla oil for healthy hair

Amla, since ages has been known for its goodness in terms of hair growth. Amla or gooseberries is a fruit that has been used in many recipes especially for pickles in India but besides being a tasty dish, it is worth a lot more. Amla oil is considered excellent for hair growth.
Story first published: Friday, September 2, 2016, 20:33 [IST]
X
Desktop Bottom Promotion