For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

|

ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯಕರವಾದ ಮತ್ತು ಸುಂದರವಾದ ಕೂದಲನ್ನು ಹೊಂದುವುದು ಅತ್ಯಂತ ಕಷ್ಟಕರವಾದ ಕೆಲಸ. ಒತ್ತಡ ಮತ್ತು ಪರಿಸರ ಮಾಲಿನ್ಯವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ ಮತ್ತು ಕೂದಲನ್ನು ಹಾಳು ಮಾಡುತ್ತದೆ. ಇವುಗಳಿಂದ ಕೂದಲನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುವುದು ಉತ್ತಮ.

ನಿಮ್ಮ ಕೂದಲನ್ನು ಕಾಪಾಡಲು ಯಾವಾಗಲು ರಾಸಾಯನಿಕಯುಕ್ತವಾದ ಉತ್ಪನ್ನಗಳ ಮೇಲೆ ಅವಲಂಬಿಸುವುದು ಒಳ್ಳೆಯದಲ್ಲ. ಕೂದಲ ಬೆಳವಣಿಗೆಗಾಗಿ ಸುಲಭವಾದ ಮತ್ತು ಸ್ವಾಭಾವಿಕವಾದ ಮಾರ್ಗಗಳನ್ನು ಅನುಸರಿಸುವುದು ಒಳ್ಳೆಯದು. ಅದರಲ್ಲಿಯೂ ಈ ನಿಟ್ಟಿನಲ್ಲಿ ಆಮ್ಲಾ ಅಥವಾ ಬೆಟ್ಟದ ನೆಲ್ಲಿಕಾಯಿಗಳು ತುಂಬಾ ಪ್ರಯೋಜನಕಾರಿಯಾಗಿರುತ್ತವೆ. ನೆಲ್ಲಿಕಾಯಿ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ 14 ಲಾಭ

ಈ ಬೆಟ್ಟದ ನೆಲ್ಲಿಕಾಯಿಯು ಕೂದಲ ಬುಡಕ್ಕೆ ರಕ್ತದ ಪರಿಚಲನೆಯನ್ನು ಹೆಚ್ಚಿಸಿ, ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯುವಂತೆ ಮಾಡುತ್ತದೆ. ಆದ್ದರಿಂದ ನಿಮ್ಮ ಕೂದಲು ಸುಂದರವಾಗಿ ಬೆಳೆಯುತ್ತದೆ. ಈ ಆಮ್ಲಾವು ಕೂದಲ ಬುಡದಲ್ಲಿ ಕಂಡು ಬರುವ ತಲೆ ಹೊಟ್ಟು ಮತ್ತು ಶಿಲೀಂಧ್ರದ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಜೊತೆಗೆ ಇದು ಕೂದಲಿಗೆ ಅಗತ್ಯವಾದ ಮೊಯಿಶ್ಚರನ್ನು ನೀಡಿ, ಒಣ ಕೂದಲ ಸಮಸ್ಯೆಯಿಂದ ಪಾರು ಮಾಡುತ್ತದೆ ಮತ್ತು ಅದನ್ನು ಸದೃಢವನ್ನಾಗಿ ಮಾಡುತ್ತದೆ. ಇದಕ್ಕಾಗಿ ನೀವು ಮನೆಯಲ್ಲಿಯೇ ಆಮ್ಲಾದ ಹೇರ್ ಮಾಸ್ಕ್ ಅನ್ನು ತಯಾರಿಸಿಕೊಂಡು ನಿಮ್ಮ ಕೂದಲ ಆರೋಗ್ಯವನ್ನು ಮರಳಿ ಪಡೆಯಬಹುದು. ಬನ್ನಿ ಆಮ್ಲಾದ ಹೇರ್ ಮಾಸ್ಕ್ ಅನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ...

ಆಮ್ಲಾ ಜ್ಯೂಸ್ ಮತ್ತು ಮೊಟ್ಟೆ ಪ್ಯಾಕ್

ಆಮ್ಲಾ ಜ್ಯೂಸ್ ಮತ್ತು ಮೊಟ್ಟೆ ಪ್ಯಾಕ್

ಆಮ್ಲಾವನ್ನು ಮೂರು ಭಾಗಗಳಾಗಿ ಕತ್ತರಿಸಿ, ಅದನ್ನು ಜ್ಯೂಸರ್‌ನಲ್ಲಿ ಹಾಕಿಕೊಳ್ಳಿ. ಈಗ ಇದಕ್ಕೆ ಮೊಟ್ಟೆಯನ್ನು ಬೆರೆಸಿ, ಚೆನ್ನಾಗಿ ಕಲೆಸಿಕೊಡಿ. ಇದನ್ನು ಕೂದಲು ಮತ್ತು ಬುಡಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು, ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.

ಆಮ್ಲಾ ಪುಡಿಯನ್ನು ಹೇಗೆ ಮಾಡುವುದು

ಆಮ್ಲಾ ಪುಡಿಯನ್ನು ಹೇಗೆ ಮಾಡುವುದು

ತಾಜಾ ಆಗಿರುವ ಆಮ್ಲಾ ಹಣ್ಣುಗಳನ್ನು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ಆಮ್ಲಾ ಹಣ್ಣುಗಳನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀವು ಇತರ ಪದಾರ್ಥಗಳ ಜೊತೆಗೆ ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಬಹುದು.

ಆಮ್ಲಾ ಪುಡಿ ಮತ್ತು ತೆಂಗಿನ ಎಣ್ಣೆಯ ಮಸಾಜ್

ಆಮ್ಲಾ ಪುಡಿ ಮತ್ತು ತೆಂಗಿನ ಎಣ್ಣೆಯ ಮಸಾಜ್

ಒಂದು ಟೇಬಲ್ ಚಮಚ ಆಮ್ಲಾ ಪುಡಿಗೆ ಎರಡು ಟೇಬಲ್ ಚಮಚ ಬಿಸಿಯಾಗಿರುವ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಕೂದಲ ಬುಡಕ್ಕೆ ಲೇಪಿಸಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ. ಎರಡು ಗಂಟೆ ಬಿಟ್ಟು ನಂತರ ಮೈಲ್ಡ್ ಶಾಂಪೂವಿನಿಂದ ತೊಳೆಯಿರಿ.

ಅಮ್ಲಾ ಮತ್ತು ಮೆಂತ್ಯೆ ಪುಡಿ

ಅಮ್ಲಾ ಮತ್ತು ಮೆಂತ್ಯೆ ಪುಡಿ

ಒಂದು ಚಮಚ ಆಮ್ಲಾ ಪುಡಿಯನ್ನು ಮೆಂತೆ ಪುಡಿಯ ಜೊತೆಗೆ ಬೆರೆಸಿ. ಇದಕ್ಕೆ ಮೂರು ಟೇಬಲ್ ಚಮಚ ಹರಳೆಣ್ಣೆಯನ್ನು ಬೆರೆಸಿ. ಇದನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ, ಮೃದುವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ನಂತರ ಇದನ್ನು ತೊಳೆಯಿರಿ.

ಆಮ್ಲಾ ಎಣ್ಣೆ ಕೂದಲ ಬೆಳವಣಿಗೆಗಾಗಿ

ಆಮ್ಲಾ ಎಣ್ಣೆ ಕೂದಲ ಬೆಳವಣಿಗೆಗಾಗಿ

ಸ್ವಲ್ಪ ಆಮ್ಲಾವನ್ನು ತೆಗೆದುಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಮೂರು ಟೇಬಲ್ ಚಮಚ ಮೆಂತೆ ಪುಡಿಯನ್ನು ಮತ್ತು ಅರ್ಧ ಕಪ್ ತೆಂಗಿನ ಎಣ್ಣೆಯನ್ನು ಬೆರೆಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಹೊಂಬಣ್ಣಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಕಾಯಿಸಿ. ನಂತರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಇದನ್ನು ಗಾಳಿಯಾಡದ ಜಾರ್‌ಗೆ ವರ್ಗಾಯಿಸಿ ಬಳಸಿ.

English summary

Amla Juice Recipes For Hair Growth

In this stressful life maintaining a healthy and beautiful hair is a tough job to do. Stress and environmental pollutants cause hair fall and damage your hair. There must be some quick and ways remedy to fix your hair.Take a look at some effective amla hair masks at home
Story first published: Friday, June 19, 2015, 14:40 [IST]
X
Desktop Bottom Promotion