For Quick Alerts
ALLOW NOTIFICATIONS  
For Daily Alerts

ಕೂದಲಿನ ಸರ್ವ ಸಮಸ್ಯೆಗೂ-ಮೊಟ್ಟೆಯ ಹೇರ್ ಪ್ಯಾಕ್

By Manu
|

ತಲೆಗೂದಲು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ರಾಸಾಯನಿಕಗಳಿಗಿಂತ ನೈಸರ್ಗಿಕ ಉತ್ಪನ್ನಗಳೇ ಅತ್ಯುತ್ತಮ ಎಂದು ಇಂದು ಸಾಬೀತಾಗಿದೆ. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ತಲೆಗೂದಲಿಗೆ ಕಂಡೀಶನರ್ ಆರೈಕೆ ಒದಗಿಸಲು ಮೊಟ್ಟೆ ಒಂದು ಸಮರ್ಥವಾದ ನೈಸರ್ಗಿಕ ಸಾಮಾಗ್ರಿಯಾಗಿದ್ದು ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನು, ವಿಟಮಿನ್ ಗಳು ಮತ್ತು ವಿವಿಧ ಪೋಷಕಾಂಶಗಳಿದ್ದು ಕೂದಲ ಪೋಷಣೆಗೆ ಅಗತ್ಯವಾಗಿವೆ. ಮೊಟ್ಟೆಯ ಹಳದಿ ಲೋಳೆಯಲ್ಲಿದೆ ಸೌಂದರ್ಯ ರಹಸ್ಯ..!

ಇದರಿಂದ ಕೂದಲು ಉತ್ತಮ ಹೊಳಪು ಮತ್ತು ಪೋಷಣೆ ಪಡೆದು ಸೊಂಪಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ. ಇದರ ಬಳಕೆಯ ವಿಧಾನವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ....

ಮೊಟ್ಟೆ ಮತ್ತು ಹರಳೆಣ್ಣೆ

ಮೊಟ್ಟೆ ಮತ್ತು ಹರಳೆಣ್ಣೆ

ಮೊಟ್ಟೆಯ ಸುಲಭವಾದ ಬಳಕೆ ಎಂದರೆ ಹರಳೆಣ್ಣೆ ಬೆರೆಸಿ ಬಳಸುವುದು. ಇದಕ್ಕಾಗಿ ಎರಡು ಮಧ್ಯಮ ಗಾತ್ರದ ಮೊಟ್ಟೆಗಳನ್ನು ಚೆನ್ನಾಗಿ ಗೊಟಾಯಿಸಿ ಇದಕ್ಕೆ ಒಂದು ದೊಡ್ಡ ಚಮಚ ಹರಳೆಣ್ಣೆ ಸೇರಿಸಿ, ಕೆಲವು ಹನಿ ಜೇನು ಮತ್ತು ಕೊಂಚವೇ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆ ಮತ್ತು ಹರಳೆಣ್ಣೆ

ಮೊಟ್ಟೆ ಮತ್ತು ಹರಳೆಣ್ಣೆ

ಈ ಮಿಶ್ರಣವನ್ನು ಕೂದಲ ಬುಡದಿಂದ ತುದಿಯವರೆಗೂ ಬರುವಂತೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಬಳಿಕ ಸುಮಾರು ಮೂವತ್ತು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದು ವೇಳೆ ತಲೆಹೊಟ್ಟಿನ ತೊಂದರೆ ಇದ್ದರೆ ಈ ದ್ರವಕ್ಕೆ ಕೊಂಚ ಲಿಂಬೆರಸವನ್ನು ಸೇರಿಸಿ.

ಮೊಟ್ಟೆ ಮತ್ತು ಬಾದಾಮಿ ಎಣ್ಣೆ

ಮೊಟ್ಟೆ ಮತ್ತು ಬಾದಾಮಿ ಎಣ್ಣೆ

ಕೂದಲ ಬೆಳವಣಿಗೆ ಕಡಿಮೆ ಇದ್ದರೆ ಎರಡು ಮೊಟ್ಟೆಗಳಿಗೆ ಒಂದು ದೊಡ್ಡಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ ತಲೆಗೂದಲಿಗೆ ಮೊದಲಿನ ವಿಧಾನದಲ್ಲಿ ಹಚ್ಚಿ.

ಕೂದಲಿಗೆ ಉತ್ತಮ ಕಂಡೀಶನರ್....

ಕೂದಲಿಗೆ ಉತ್ತಮ ಕಂಡೀಶನರ್....

ಕೂದಲಿಗೆ ಕಂಡೀಶನ್ ನೀಡಲು ಒಂದು ಮೊಟ್ಟೆಯನ್ನು ಗೊಟಾಯಿಸಿ ಇದಕ್ಕೆ ಒಂದು ದೊಡ್ಡ ಚಮಚ ನೀರು ಸೇರಿಸಿ ಕೂದಲ ಬುಡದಿಂದ ತುದಿಯವರೆಗೆ ಹೆಚ್ಚಿ ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಮೊಟ್ಟೆ ಒಂದು ನೈಸರ್ಗಿಕ ಕಂಡೀಶನರ್ ಆಗಿದೆ.

ಮೊಟ್ಟೆ ಮತ್ತು ವಿನೇಗರ್

ಮೊಟ್ಟೆ ಮತ್ತು ವಿನೇಗರ್

ಎರಡು ಮೊಟ್ಟೆಗಳನ್ನು ಗೊಟಾಯಿಸಿ ನೇರವಾಗಿ ತಲೆಗೂದಲಿಗೆ ಹಚ್ಚಿ. ಸುಮಾರು ಮೂರು ನಿಮಿಷ ಬೆರಳುಗಳಿಂದ ಮಸಾಜ್ ಮಾಡಿ ಒಣಗಲು ಬಿಡಿ. ಬಳಿಕ ಸೌಮ್ಯ ಶಾಂಪೂ ಬಳಸಿ ತೊಳೆದುಕೊಂಡು ನಂತರ ಕೊಂಚ ಶಿರ್ಕಾ ಬೆರೆಸಿದ ನೀರಿನಿಂದ ಕೂದಲನ್ನು ತೇವವಾಗಿಸಿ. ಇದರಿಂದ ಕೂದಲು ಸೌಮ್ಯವಾಗಿ ಸುಲಭವಾಗಿ ಬಾಚಲು ಸಾಧ್ಯವಾಗುತ್ತದೆ. ಗುಂಗುರು ಕೂದಲಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಮೊಟ್ಟೆ ಮತ್ತು ಮೊಸರು

ಮೊಟ್ಟೆ ಮತ್ತು ಮೊಸರು

ಒಂದು ಮೊಟ್ಟೆ ಮತ್ತು ಸಮಪ್ರಮಾಣದಲ್ಲಿ ಮೊಸರು ಹಾಗೂ ಕೆಲವು ಹನಿ ಲಿಂಬೆರಸ ಸೇರಿಸಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಉತ್ತಮ ಕಂಡೀಶನರ್ ಪರಿಣಾಮ ಪಡೆಯಬಹುದು.

ಮೊಟ್ಟೆ ಮತ್ತು ಲಿಂಬೆ

ಮೊಟ್ಟೆ ಮತ್ತು ಲಿಂಬೆ

ಒಂದು ಮೊಟ್ಟೆಯನ್ನು ಗೊಟಾಯಿಸಿ ಕೊಂಚ ಲಿಂಬೆರಸವನ್ನು ಸೇರಿಸಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಬಳಿಕ ತೊಳೆದುಕೊಂಡರೆ ತಲೆಹೊಟ್ಟು ಇಲ್ಲವಾಗುತ್ತದೆ. ಅಲ್ಲದೇ ಕೂದಲ ಕಾಂತಿಯನ್ನೂ ಹೆಚ್ಚಿಸುತ್ತದೆ. ಕಳೆಗುಂದಿದ ಕೂದಲಿಗೆ ಈ ವಿಧಾನ ಸೂಕ್ತವಾಗಿದೆ.

ಕೂದಲ ಉದುರುವಿಕೆ ತಪ್ಪಿಸಲು

ಕೂದಲ ಉದುರುವಿಕೆ ತಪ್ಪಿಸಲು

ಕೂದಲು ಉದುರುವುದು, ಕಾಂತಿ ಇಲ್ಲದಿರುವುದು ಮೊದಲಾದ ತೊಂದರೆಗಳಿ ಮೊಟ್ಟೆಯ ಬಿಳಿಭಾಗ ಉತ್ತಮವಾಗಿದೆ. ಅಲ್ಲದೇ ಇದೊಂದು ನೈಸರ್ಗಿಕ ಕಂಡೀಶನರ್ ಸಹಾ ಆಗಿದೆ. ಪ್ರತಿದಿನ ಮೊಟ್ಟೆಯ ಬಿಳಿಭಾಗವನ್ನು ತೈಲದಂತೆ ಹಚ್ಚಿಕೊಂಡು ಕೊಂಚ ಕಾಲ ಬಿಟ್ಟು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳುವ ಮೂಲಕ ಕೂದಲು ಉದುರುವುದನ್ನು ತಪ್ಪಿಸಬಹುದು ಹಾಗೂ ಉತ್ತಮ ಪೋಷಣೆ ಒದಗಿಸಬಹುದು.

English summary

Tips to Use Egg for Hair Growth

If you want to nourish your hair naturally and make it look shiny and strong then there are natural hair care products like egg to condition the hair. Yes An egg is rich source of proteins, vitamins and nutrients which fulfills the protein and nutrients requirements of the hair and help keep them shiny and healthy.
X
Desktop Bottom Promotion