Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೊಟ್ಟೆಯ ಹಳದಿ ಲೋಳೆಯಲ್ಲಿದೆ ಸೌಂದರ್ಯ ರಹಸ್ಯ..!
ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯವಾಗಿರಬಹುದು ಎನ್ನುವ ಮಾತಿದೆ. ಮೊಟ್ಟೆ ತುಂಬಾ ರುಚಿಕರ ಹಾಗೂ ವಿವಿಧ ರೀತಿಯ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಇದರ ಇನ್ನೊಂದು ಗುಣವೆಂದರೆ ಇದರಲ್ಲಿ ಕೆಲವು ಸೌಂದರ್ಯ ಹೆಚ್ಚಿಸುವ ಗುಣಗಳು ಇವೆ. ಮೊಟ್ಟೆಯ ಲೋಳೆಯನ್ನು ಬಳಸಿಕೊಂಡು ನೀವು ಸೌಂದರ್ಯವನ್ನು ವೃದ್ಧಿಸಬಹುದು. ಆದರೆ ಮೊಟ್ಟೆಯ ವಾಸನೆಯಿಂದಾಗಿ ಇದನ್ನು ಸೌಂದರ್ಯ ವರ್ಧಕವಾಗಿ ಬಳಸುವ ಜನರು ತುಂಬಾ ಕಡಿಮೆ. ಇದರಿಂದ ಮೊಟ್ಟೆಯ ಲೋಳೆಯಲ್ಲಿ ಅಡಗಿರುವಂತಹ ಸೌಂದರ್ಯ ರಹಸ್ಯಗಳು ಯಾರಿಗೂ ತಿಳಿದಿಲ್ಲ.

ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಎ, ಇ, ಡಿ, ಬಿ12 ಮತ್ತು ಬಿ16 ಇದ್ದು, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಡಿಸುವುದು. ಮೊಟ್ಟೆಯ ಹಳದಿಯಲ್ಲಿರುವ ಪ್ರೋಟೀನ್ ಹಾಗೂ ಇತರ ಕೆಲವೊಂದು ಪೋಷಕಾಂಶಗಳು ಕೂದಲು, ಚರ್ಮ ಹಾಗೂ ಉಗುರಿಗೆ ತುಂಬಾ ಸಹಕಾರಿ. ಮೊಟ್ಟೆಯ ಹಳದಿ ಲೋಳೆಯಿಂದ ಆಗುವ ಲಾಭಗಳನ್ನು ಈ ಲೇಖನದಲ್ಲಿ ತಿಳಿದುಕೊಂಡು ಅದನ್ನು ಅಳವಡಿಸಿಕೊಂಡರೆ ನಿಮಗೆ ಹೆಚ್ಚಿನ ಲಾಭವಾಗಬಹುದು. ಮುಖದ ಸೌಂದರ್ಯಕ್ಕೆ ಮೊಟ್ಟೆ ಸಿಪ್ಪೆಯಿಂದ ಮ್ಯಾಜಿಕ್ ಚಿಕಿತ್ಸೆ!
ಕೂದಲು ಬುಡ ಬಲಗೊಳ್ಳುವುದು
ಆಲಿವ್ ಎಣ್ಣೆ, ಜೇನುತುಪ್ಪ ಮತ್ತು ಮೊಟ್ಟೆಯ ಹಳದಿ ಲೋಳೆ ಹಾಗೂ ಸ್ವಲ್ಪ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದರಿಂದ ಕೂದಲಿನ ಬುಡ ಬಲಗೊಳ್ಳುವುದು.
ಕಪ್ಪು ಕಲೆಗಳ ನಿವಾರಣೆ
ಇದಕ್ಕಾಗಿ ನೀವು ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಮುಖವನ್ನು ಪೇಪರ್ ನಿಂದ ಮುಚ್ಚಿಕೊಳ್ಳಿ. ಇನ್ನೊಂದು ಸಲ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸ್ವಲ್ಪ ಸಮಯ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಹೊರಚರ್ಮಕ್ಕೆ ಚಿಕಿತ್ಸೆ
ಕೈ ಬೆರಳುಗಳನ್ನು ಮೊಟ್ಟೆಯ ಲೋಳೆಯಲ್ಲಿ ಮುಳುಗಿಸಿ ಇಡಿ. 5-20 ನಿಮಿಷ ಹಾಗೆ ಇರಲಿ. ಇದರಿಂದ ಚರ್ಮದಲ್ಲಿ ತೇವಾಂಶ ಉಂಟಾಗಿ ಹೊರಚರ್ಮವು ಮೃಧುವಾಗುವುದು. ಕೂದಲಿನ ಸಮಸ್ಯೆಗೆ ಮೊಟ್ಟೆಯ ಶಾಂಪೂ ಬಳಸಿ ನೋಡಿ!
ಉಗುರುಗಳು ಬಲಗೊಳ್ಳುವುದು
ಮೊಟ್ಟೆಯ ಬಿಳಿ ಲೋಳೆ ಮತ್ತು ಜೇನು ತುಪ್ಪ ಹಾಕಿ ಒಂದು ಮಿಶ್ರಣ ಮಾಡಿಕೊಳ್ಳಿ. ಇದನ್ನು ಉಗುರುಗಳಿಗೆ ಹಚ್ಚಿಕೊಂಡು 15 ನಿಮಿಷ ಹಾಗೆ ಬಿಟ್ಟುಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.



Click it and Unblock the Notifications

