For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗೆ ಮನೆಯಲ್ಲಿಯೇ ಇದೆ ಮ್ಯಾಜಿಕ್ ಚಿಕಿತ್ಸೆ!

By Super Admin
|

ಕೂದಲ ಪೋಷಣೆ ಉತ್ತಮವಾಗಿರಬೇಕಾದರೆ ತಲೆಯ ಚರ್ಮವನ್ನು ಒಣಗಲು ಬಿಡಬಾರದು. ತಲೆಗೂದಲ ಬುಡಕ್ಕೆ ಉತ್ತಮ ಪೋಷಣೆ ದೊರೆತಾಗಲೇ ಸೊಂಪಾದ, ಉದ್ದ ಮತ್ತು ಕಾಂತಿಯುಕ್ತ ಕೂದಲು ಲಭ್ಯವಾಗಲು ಸಾಧ್ಯ.

ಆರೋಗ್ಯಕ ಬುಡವಿದ್ದರೆ ಕೂದಲು ತೆಳುವಾಗುವುದು, ತುದಿ ಸೀಳುವುದು, ಉದುರುವುದು ಮೊದಲಾದ ತೊಂದರೆಗಳು ಎದುರಾಗುವುದಿಲ್ಲ. ತಲೆಯ ಚರ್ಮದ ಆರೈಕೆಗಾಗಿ ಶತಮಾನಗಳಿಂದ ಹರಳೆಣ್ಣೆಯನ್ನು ಬಳಸಲಾಗುತ್ತಾ ಬರಲಾಗಿದೆ.

The magic potion for healthy and lustrous hair

ಕೂದಲಿಗೆ ಮಾತ್ರವಲ್ಲದೇ ಹಲವು ರೀತಿಯಲ್ಲಿ ಸೌಂದರ್ಯವರ್ಧಕವೂ ಆಗಿದೆ. ಇದರ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣದ ಕಾರಣ ಕೂದಲಿಗೆ ಎದುರಾಗುವ ವಿವಿಧ ಕ್ರಿಮಿಗಳ ಸೋಂಕಿನಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಹಲವು ಸೌಂದರ್ಯ ಪ್ರಸಾದನಗಳಲ್ಲಿ ಹರಳೆಣ್ಣೆಯನ್ನು ಬಳಸಲಾಗುತ್ತದೆ.

ವಿವಿಧ ಪ್ರೋಟೀನುಗಳು, ಖನಿಜಗಳು ಮತ್ತು ವಿಶೇಷವಾಗಿ ವಿಟಮಿನ್ ಇ ಇರುವ ಹರಳೆಣ್ಣೆ ಕೂದಲ ಪೋಷಣೆಯ ಮಟ್ಟಿಗೆ ಒಂದು ಮ್ಯಾಜಿಕ್ ಮಾಡುವ ದ್ರವವೇ ಆಗಿದೆ. ಬನ್ನಿ, ಇದರ ಕೂದಲ ಮೇಲಿನ ಪರಿಣಾಮ ಹಾಗೂ ಇದರ ಬಳಕೆಯ ವಿಧಾನವನ್ನು ನೋಡೋಣ:

ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ ಮತ್ತು ಉದುರುವುದನ್ನು ತಡೆಗಟ್ಟುತ್ತದೆ
ಒಂದು ಚಿಕ್ಕ ಬೋಗುಣಿಯಲ್ಲಿ ಸಮಪ್ರಮಾನದ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆ ಬೆರೆಸಿ. ಕೊಂಚವೇ ಬಿಸಿ ಮಾಡಿದರೆ ಉತ್ತಮ. ಇದನ್ನು ಬೆರಳುಗಳಿಗೆ ಹಚ್ಚಿಕೊಂಡು ಕೂದಲ ಬುಡಕ್ಕೆ ಚೆನ್ನಾಗಿ ಹಚ್ಚುವಂತೆ ನಯವಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿಕೊಳ್ಳಿ. ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?

ಮುಗಿದ ಬಳಿಕ ತಲೆಗೆ ಶವರ್ ಕ್ಯಾಪ್ ಒಂದನ್ನು ಧರಿಸಿ ಇಡಿಯ ರಾತ್ರಿ ಹಾಗೇ ಬಿಡಿ. ಇಡಿರಾತ್ರಿ ಸಾಧ್ಯವಾಗದಿದ್ದರೆ ನಾಲ್ಕಾರು ಗಂಟೆಗಳ ಕಾಲವಾದರೂ ಹಾಗೇ ಇರಿಸಿ. ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ತಲೆಯ ಚರ್ಮದ ಸೋಂಕು ಮತ್ತ ತಲೆಹೊಟ್ಟಿನಿಂದ ರಕ್ಷಿಸುತ್ತದೆ
ತಲೆಯ ಚರ್ಮ ಒಣಗಿ ಸೋಂಕಿಗೆ ಒಳಗಾದರೆ ಚರ್ಮದ ಹೊರಪದರ ಒಣಗಿ ಪದರದಂತೆ ಏಳುತ್ತದೆ. ಇದೇ ತಲೆಹೊಟ್ಟು. ತಲೆಹೊಟ್ಟಿನ ತೊಂದರೆ ಇದ್ದರೆ ಒಂದು ದೊಡ್ಡ ಚಮಚದಷ್ಟು ಸಮಪ್ರಮಾಣದಲ್ಲಿ ಹರಳೆಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿ. ಹರಳೆಣ್ಣೆ ಬೋಳು ತಲೆಯಲ್ಲಿ ಕೂದಲು ಮೂಡಿಸುವುದೇ?
ಇದಕ್ಕೆ ಅರ್ಧ ಲಿಂಬೆಯ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ಸುಮಾರು ಅರ್ಧಗಂಟೆಯ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.

ಕೂದಲ ತುದಿ ಸೀಳಿದ್ದರೆ
ಹರಳೆಣ್ಣೆಯ ಸಾಂದ್ರತೆ ಹೆಚ್ಚಾಗಿದ್ದು ಇದನ್ನು ನೇರವಾಗಿ ಹೆಚ್ಚಲು ಕೊಂಚ ಕಷ್ಟವಾಗಬಹುದು. ಬದಲಿಗೆ ಕೊಂಚ ಆಲಿವ್ ಎಣ್ಣೆ ಅಥವಾ ಹೋಹೋಬಾ ಎಣ್ಣೆ ಬೆರೆಸಿ ಹಚ್ಚಿದರೆ ಉತ್ತಮ. ಕೂದಲಿನ ಎಲ್ಲಾ ಸಮಸ್ಯೆಗೆ ಪರ್ಫೆಕ್ಟ್ ಹೇರ್ ಪ್ಯಾಕ್

ಈ ಮಿಶ್ರಣ ಹಚ್ಚಿದ ಕೂದಲು ಗುಂಗುರು ಮತ್ತು ಸಿಕ್ಕುಸಿಕ್ಕಾಗಿದ್ದರೆ ಬಿಡಿಸಲು ಸುಲಭವಾಗಿ ಸಾಧ್ಯವಾಗುತ್ತದೆ. ಈ ಮಿಶ್ರಣವನ್ನು ತಲೆಗೂದಲ ಬುಡದಿಂದ ತುದಿಯವರೆಗೂ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ.

ಕೂದಲಿಗೆ ನೈಸರ್ಗಿಕ ಕಂಡೀಶನರ್ ಮತ್ತು ತೇವಕಾರಕದ ರೂಪದಲ್ಲಿ ನೆರವಾಗುತ್ತದೆ
ಪ್ರತಿ ಬಾರಿ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳುವ ಹದಿನೈದು ನಿಮಿಷ ಮುನ್ನ ಕೊಂಚ ಹರಳೆಣ್ಣೆಯನ್ನು ಹಚ್ಚಿಕೊಳ್ಳಿ. ಸಾಧ್ಯವಾದರೆ ಹರಳೆಣ್ಣೆಯ ಕೆಲವು ಹನಿಗಳನ್ನು ಕಂಡೀಶನರ್ ದ್ರವದೊಂದಿಗೆ ಮಿಶ್ರಣ ಮಾಡಿಯೂ ಉಪಯೋಗಿಸಿ.

ಇನ್ನೊಂದು ವಿಧಾನವೆಂದರೆ ಹರಳೆಣ್ಣೆಯೊಂದಿಗೆ ಕೊಂಚ ಲೋಳೆಸರದ ರಸ, ಜೇನು ಮತ್ತು ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡುವುದು. ಈ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

English summary

The magic potion for healthy and lustrous hair

One of the most effective home remedies for dry scalp, hair thinning, split ends and hair loss, castor oil is widely used since decades in various beauty treatments. Owing to its anti-inflammatory and anti-bacterial properties, it is also a common ingredient in many cosmetics and beauty products.
Story first published: Thursday, September 1, 2016, 10:31 [IST]
X
Desktop Bottom Promotion