Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲಿನ ಎಲ್ಲಾ ಸಮಸ್ಯೆಗೆ ಪರ್ಫೆಕ್ಟ್ ಹೇರ್ ಪ್ಯಾಕ್
ತಲೆಯಲ್ಲಿ ಹೊಟ್ಟು, ತುರಿಕೆ, ಕೂದಲು ಉದುರುವುದು, ತುದಿ ಸೀಳುವುದು, ತಲೆಯ ಚರ್ಮ ಒಣಗಿರುವುದು ಮೊದಲಾದವು ಆರೈಕೆಯ ಕೊರತೆಯ ಮೂಲಕ ಎದುರಾಗುವ ತೊಂದರೆಗಳು. ತಲೆ ಒಣಗಿದರೆ ತಕ್ಷಣ ಆಳವಾದ ಕಂಡೀಶನಿಂಗ್ ಮಾಡುವುದು ಅನಿವಾರ್ಯ.
ಇದರೊಂದಿಗೆ ಆರ್ದತೆ ಮತ್ತು ತೇವ ನೀಡುವುದೂ, ಹೊಟ್ಟನ್ನು ನಿವಾರಿಸುವುದೂ ಅಗತ್ಯ. ಈ ಸೇವೆಗಳನ್ನು ಸೌಂದರ್ಯ ಮಳಿಗೆಗಳಲ್ಲಿ ಪಡೆಯಬಹುದಾದರೂ ಸಾಮಾನ್ಯವಾಗಿ ಇವು ದುಬಾರಿಯಾಗಿರುತ್ತವೆ.

ಇದಕ್ಕೂ ಉತ್ತಮ ಪರಿಣಾಮ ಬೀರುವ ಮತ್ತು ಅತಿ ಅಗ್ಗವಾಗಿ ತಯಾರಿಸಬಹುದಾದ ಲೇಪನಗಳು ಈ ಕೊರತೆಯನ್ನು ನೀಗಿಸಬಲ್ಲವು. ಬನ್ನಿ, ಸುಲಭವಾಗಿ ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಕೆಲವು ವಿಧಾನಗಳನ್ನು ಈಗ ನೋಡೋಣ:
ತುದಿ ಸೀಳಿದ ಕೂದಲುಗಳಿಗೆ ಸೀಳುತುದಿಯನ್ನು ತಪ್ಪಿಸಲು ಕೆಲವು ಟಿಪ್ಸ್
ಒಂದು ವೇಳೆ ಕೂದಲು ಶಿಥಿಲವಾಗಿದ್ದು ತುದಿಗಳು ಸೀಳಿದ್ದರೆ ಇದಕ್ಕೆ ಪ್ರೂಟೀನ್ ಯುಕ್ತ ಮೊಟ್ಟೆಯ ಕೂದಲ ಲೇಪನವೇ ಸಾಕಾಗುತ್ತದೆ. ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್ ಇ ಕೂದಲ ದಂಡವನ್ನು ದೃಢಗೊಳಿಸಿ ಸುಲಭವಾಗಿ ಬಾಗುವಂತೆ ಮಾಡುತ್ತದೆ. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಹಾಗೂ ತಲೆಹೊಟ್ಟಿನ ಸಮಸ್ಯೆಯೂ ನೀಗಿಸುತ್ತದೆ. ಇದರ ಆರೈಕೆಗಾಗಿ ಹೀಗೆ ಮಾಡಿ:
* ಎರಡು ಮೊಟ್ಟೆಗಳನ್ನು ಒಂದು ಕಪ್ ನಲ್ಲಿ ಅರ್ಧ ಕಪ್ ಮಾಯೋನ್ನೀಸ್ ನೊಂದಿಗೆ ಚೆನ್ನಾಗಿ ಬೆರೆಸಿ.
* ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಬುಡದಿಂದ ತುದಿಯವರೆಗೆ ಆವರಿಸುವಂತೆ ಹಚ್ಚಿ.
* ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಒಣಗಲು ಬಿಡಿ. ತಲೆಹೊಟ್ಟಿನ ಸಮಸ್ಯೆಗೆ 'ಬೇವಿನ' ಹೇರ್ ಪ್ಯಾಕ್
* ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಕಿರಿಕಿರಿ ನೀಡುವ ಒಣ ಮತ್ತು ಘಾಸಿಗೊಂಡ ಕೂದಲಿಗೆ ಒಂದು ವೇಳೆ ನಿಮ್ಮ ಕೂದಲಿಗೆ ತೇವ ಅಥವಾ ಆರ್ದ್ರತೆಯ ಕೊರತೆಯಾದರೆ ಕೂದಲು ಒಣಗಿ ಸುಲಭವಾಗಿ ಘಾಸಿಗೊಳ್ಳುತ್ತದೆ.
ಇದರ ಆರೈಕೆಗಾಗಿ ಹೀಗೆ ಮಾಡಿ:
* ಅರ್ಧ ಕಪ್ ಬೆಣ್ಣೆ ಹಣ್ಣಿನ ತಿರುಳು ಮತ್ತು ಅರ್ಧ ಕಪ್ ಮಾಯೋನ್ನೀಸ್ ಅನ್ನು ಬ್ಲಂಡರ್ ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ
* ಬಳಿಕ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ, ಒಂಚು ಚಿಕ್ಕಚಮಚ ಆಲಿವ್ ಎಣ್ಣೆ, ಒಂದು ದೊಡ್ಡ ಚಮಚ ಜೇನು ಸೇರಿಸಿ ಬ್ಲೆಂಡರಿನಲ್ಲಿಯೇ ಬೆರೆಸಿ.
* ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಎಲ್ಲೆಡೆ ಆವರಿಸುವಂತೆ ಹಚ್ಚಿ ದೊಡ್ಡ ಹಲ್ಲುಗಳ ಬಾಚಣಿಗೆಯಿಂದ ಬಾಚುವ ಮೂಲಕ ಹರಡಿಸಿ.
* ಬಳಿಕ ಶವರ್ ಕ್ಯಾಪ್ ಒಂದನ್ನು ಧರಿಸಿ ಕನಿಷ್ಠ ಹದಿನೈದು ನಿಮಿಷ ಹಾಗೇ ಬಿಡಿ
* ಒಂದು ವೇಳೆ ಸಮಯವಿದ್ದರೆ ಬಳಿಕ ಇನ್ನಷ್ಟು ಕೊಬ್ಬರಿ ಎಣ್ಣೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಬಳಿಕ ಸೌಮ್ಯ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.



Click it and Unblock the Notifications


