For Quick Alerts
ALLOW NOTIFICATIONS  
For Daily Alerts

ಕೂದಲು ಶೀಘ್ರವಾಗಿ ಬೆಳೆಯಲು ಸರಳ ಟಿಪ್ಸ್‌ಗಳು

By Jaya Subramanya
|

ಇಂದಿನ ಕಲುಷಿತ ವಾತಾವರಣದಿಂದ ನಿಮ್ಮ ಕೂದಲನ್ನು ಕಾಪಾಡಿಕೊಳ್ಳುವುದು ಸವಾಲಿನ ವಿಷಯವೇ ಆಗಿದೆ. ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ಕೂದಲಿಗೆ ಉಂಟಾಗುವ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಾಪಾಡಿಕೊಳ್ಳಬಹುದಾಗಿದ್ದರೂ ಇದು ತಾತ್ಕಾಲಿಕವಾಗಿದೆ. ಧೂಳು, ಹೊಗೆ, ತಲೆಬುರುಡೆಯಲ್ಲಿ ತುಂಬಿಕೊಳ್ಳುವ ಕೊಳೆಯಿಂದ ಕೂದಲಿನ ಪೋಷಣೆಯಾಗದೇ ಕೂದಲು ತುಂಡಾಗುತ್ತದೆ. ನೀಳ ಕೇಶರಾಶಿ ಬಯಸುವ ಚೆಲುವೆಗೆ ಸೀಬೆ ಎಲೆಗಳ ಚಿಕಿತ್ಸೆ!

ಅದಾಗ್ಯೂ ಕೂದಲನ್ನು ಅಂದಗೊಳಿಸಲು ನೀವು ಬಳಸುವ ಹೀಟ್ ಉತ್ಪನ್ನಗಳು ಕೂಡ ಕೂದಲನ್ನು ಹಾನಿಗೊಳಪಡಿಸುತ್ತವೆ ಹಾಗಿದ್ದರೆ ಅಂದವಾದ ಕೂದಲಿಗೆ ಮತ್ತು ನೀಳ ಕೂದಲನ್ನು ಪಡೆದುಕೊಳ್ಳಲು ನೀವು ಮಾಡಬೇಕಾದ ತಯಾರಿಗಳೇನು ಮತ್ತು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ. ಸೊಂಪಾದ ಕಪ್ಪಗಿನ ಕೂದಲಿಗೆ ಇಲ್ಲಿದೆ ನೈಸರ್ಗಿಕ ಎಣ್ಣೆ!

ಮೊಟ್ಟೆಯ ಮಾಸ್ಕ್

ಮೊಟ್ಟೆಯ ಮಾಸ್ಕ್

ನಿಮ್ಮ ಕೂದಲು ಹಾನಿಗೊಳಗಾಗಿದೆ ಎಂದಾದಲ್ಲಿ ಮೊಟ್ಟೆಯ ಮಾಸ್ಕ್ ಅತ್ಯುತ್ತಮವಾದುದಾಗಿದೆ. ಎರಡು ಮೊಟ್ಟೆಗಳನ್ನು ತೆಗೆದುಕೊಂಡು ಬಿಳಿಭಾಗವನ್ನು ಬೇರ್ಪಡಿಸಿ. ಇದಕ್ಕೆ ಆಲೀವ್ ಎಣ್ಣೆಯನ್ನು ಹಾಕಿ ಮೊಟ್ಟೆಯ ಮಾಸ್ಕ್ ತಯಾರಿಸಿ. ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಇದನ್ನು ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ಕೂದಲನ್ನು ತೊಳೆದುಕೊಳ್ಳಿ.

ಹರಳೆಣ್ಣೆ

ಹರಳೆಣ್ಣೆ

ಹರಳೆಣ್ಣೆಯಲ್ಲಿ ಹೆಚ್ಚು ಪ್ರಮಾಣದ ಫ್ಯಾಟಿ ಆಸಿಡ್‌ಗಳಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ನಿಮ್ಮ ತಲೆಬುರುಡೆಯನ್ನು ಹರಳೆಣ್ಣೆಯಿಂದ ಮಸಾಜ್ ಮಾಡಿ ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ. ಈ ರೀತಿ ಮಸಾಜ್ ಮಾಡುವುದರಿಂದ ತಲೆಬುರುಡೆಯಲ್ಲಿ ರಕ್ತಸಂಚಾರವುಂಟಾಗುತ್ತದೆ ಮತ್ತು ಕೂದಲು ಬೆಳೆಯುತ್ತದೆ.

ಅಲೊವೇರಾ ಜೆಲ್

ಅಲೊವೇರಾ ಜೆಲ್

ಅಲೊವೇರಾ ಜೆಲ್ ಅನ್ನು ಹಚ್ಚಿಕೊಳ್ಳುವುದರಿಂದ ಕೂದಲು ಹೆಚ್ಚು ಪ್ರಮಾಣದಲ್ಲಿ ಹಾನಿಯಾಗುವುದಿಲ್ಲ. ಅಂತೆಯೇ ಅಂಟಿನ ಅನುಭವವನ್ನು ನಿಮಗೆ ಉಂಟುಮಾಡುವುದಿಲ್ಲ. ನಿಮ್ಮ ಕೂದಲಿಗೆ ಇದು ಶೀಘ್ರವಾಗಿ ತಲುಪುತ್ತದೆ ಮತ್ತು ಕೂದಲು ವೇಗವಾಗಿ ಬೆಳೆಯಲು ಸಾಕಷ್ಟು ಪೋಷಣೆಯನ್ನು ನೀಡುತ್ತದೆ.

ಬೆಣ್ಣೆ

ಬೆಣ್ಣೆ

ನಿಮ್ಮ ಕೂದಲಿನ ತುದಿಗೆ ಬೆಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಕೂಡ ಹೆಚ್ಚಿನ ಹಾನಿಯನ್ನು ತಡೆಗಟ್ಟಬಹುದಾಗಿದೆ.

ಮೊಸರಿನ ಮಾಸ್ಕ್

ಮೊಸರಿನ ಮಾಸ್ಕ್

ಮೊಟ್ಟೆಯನ್ನು ಬಳಸುವುದು ಕೆಲವರಿಗೆ ಇರಿಸುಮುರಿಸನ್ನು ಉಂಟುಮಾಡುತ್ತದೆ ಎಂದಾದಲ್ಲಿ ಅಂತಹವರು ಮೊಸರಿನ ಮಾಸ್ಕ್ ಅನ್ನು ಕೂದಲಿನ ಪೋಷಣೆ ಮತ್ತು ವೇಗವಾಗಿ ಬೆಳೆಯಲು ಬಳಸಬಹುದಾಗಿದೆ. ಮೊಸರು ತಲೆಬುಡಕ್ಕೆ ಮತ್ತು ತುದಿಗೆ ಹಚ್ಚಿಕೊಂಡು ಗಂಟೆಗಳ ನಂತರ ಕೂದಲನ್ನು ತೊಳೆದುಕೊಳ್ಳಿ ಫಲಿತಾಂಶವನ್ನು ಖುದ್ದು ನೀವೇ ನೋಡಬಹುದಾಗಿದೆ.

ಸಲ್ಫೇಟ್ ರಹಿತ ಶ್ಯಾಂಪೂ

ಸಲ್ಫೇಟ್ ರಹಿತ ಶ್ಯಾಂಪೂ

ನಿಮ್ಮ ಕೂದಲಿಗೆ ಉಂಟಾಗುವ ಹಾನಿಯನ್ನು ತಡೆಗಟ್ಟಲು ಸಲ್ಫೇಟ್ ರಹಿತ ಶ್ಯಾಂಪೂವನ್ನು ಬಳಸಿ ನೋಡಿ. ಇದರಿಂದ ಕೂದಲು ಅಷ್ಟೊಂದು ಹಾನಿಗೊಳಗಾಗುವುದಿಲ್ಲ.

ತೆಂಗಿನೆಣ್ಣೆ

ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ಬಳಸಿ ಕೂಡ ಕೂದಲಿಗೆ ಉಂಟಾದ ಹಾನಿಯನ್ನು ತಡೆಗಟ್ಟಬಹುದಾಗಿದೆ. ತುಸು ತೆಂಗಿನೆಣ್ಣೆಯನ್ನು ಬೆಚ್ಚಗೆ ಮಾಡಿಕೊಂಡು ನಿಮ್ಮ ತಲೆಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ ಮತ್ತು ಕೂದಲಿನ ಬೆಳವಣಿಗೆಯನ್ನು ಕಂಡುಕೊಳ್ಳಿ.

ಕೂದಲನ್ನು ಆಗಾಗ್ಗೆ ತೊಳೆದುಕೊಳ್ಳದಿರಿ

ಕೂದಲನ್ನು ಆಗಾಗ್ಗೆ ತೊಳೆದುಕೊಳ್ಳದಿರಿ

ನಿಮ್ಮ ಕೂದಲನ್ನು ಆಗಾಗ್ಗೆ ತೊಳೆದುಕೊಳ್ಳುವುದು ಕೂದಲಿನ ನೈಸರ್ಗಿಕ ಎಣ್ಣೆಯನ್ನು ಹಾನಿ ಗೊಳಪಡಿಸಬಹುದು. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಕೂಡ ಇರುತ್ತದೆ.

ನಿಯಮಿತ ಕಂಡೀಷನಿಂಗ್ ಮಾಡಿ

ನಿಯಮಿತ ಕಂಡೀಷನಿಂಗ್ ಮಾಡಿ

ಹೆಚ್ಚಿನ ಮಹಿಳೆಯರು ವಾರಕ್ಕೊಮ್ಮೆ ಕಂಡೀಷನಿಂಗ್ ಮಾಡುತ್ತಾರೆ. ಇದಕ್ಕೆ ಬದಲಾಗಿ ಪ್ರತೀ ಸಲ ಕೂದಲಿಗೆ ಶ್ಯಾಂಪೂ ಮಾಡಿಕೊಂಡ ನಂತರ ಕಂಡೀಷನಿಂಗ್ ಮಾಡಲು ಮರೆಯದಿರಿ. ಇದರಿಂದ ಕೂಡ ಕೂದಲಿಗೆ ಉಂಟಾಗುವ ಹಾನಿಯನ್ನು ತಪ್ಪಿಸಿಕೊಳ್ಳಬಹುದಾಗಿದೆ.

ಹೇರ್ ಸ್ಪ್ರೇ

ಹೇರ್ ಸ್ಪ್ರೇ

ಸಮಪ್ರಮಾಣದಲ್ಲಿ ತೆಂಗಿನೆಣ್ಣೆ ಮತ್ತು ಹರಳೆಣ್ಣೆಯನ್ನು ಬಳಸಿಕೊಂಡು ಇದನ್ನು ಮಿಶ್ರ ಮಾಡಿ ಇದಕ್ಕೆ ಎರಡು ಪಟ್ಟು ನೀರು ಬೆರೆಸಿ. ಬಳಸುವ ಮುನ್ನ ಪ್ರತೀ ಬಾರಿ ಬಾಟಲಿಯನ್ನು ಕುಲುಕಿಸಿಕೊಳ್ಳಿ.

ಲೋಷನ್

ಲೋಷನ್

ನಿಮ್ಮ ಕೂದಲಿನ ಉದ್ದವನ್ನು ಅನುಸರಿಸಿ ಲೋಷನ್ ಹಚ್ಚಿಕೊಂಡು ಮಸಾಜ್ ಮಾಡಿ ಇದರಿಂದ ಕೂಡ ಕೂದಲಿನ ಬೇರು ಮತ್ತು ಬುಡಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿಕೊಳ್ಳಬಹುದಾಗಿದೆ.

ಟ್ರಿಮ್ ಮಾಡಿಕೊಳ್ಳಿ

ಟ್ರಿಮ್ ಮಾಡಿಕೊಳ್ಳಿ

ಕೂದಲಿನ ತುದಿ ಹಾನಿಗೊಳಗಾಗಿದೆ ಎಂದಾದಲ್ಲಿ ಅದನ್ನು ಟ್ರಿಮ್ ಮಾಡಿಕೊಳ್ಳುವುದು ಉತ್ತಮ ಸಲಹೆಯಾಗಿದೆ. ಇದರಿಂದ ಕೂದಲು ಉದ್ದವಾಗುತ್ತದೆ.

English summary

Read This If Your Hair Refuses To Grow Any Longer!

Damaged hair can be really difficult to grow. But with our tips to grow hair longer and faster, you can consider half your battle won! We know how depressing it can be when your hair refuses to grow longer. So, follow these tips to know how to grow hair longer and faster!
Story first published: Saturday, December 10, 2016, 18:39 [IST]
X
Desktop Bottom Promotion