For Quick Alerts
ALLOW NOTIFICATIONS  
For Daily Alerts

ನೀಳ ಕೇಶರಾಶಿ ಬಯಸುವ ಚೆಲುವೆಗೆ ಸೀಬೆ ಎಲೆಗಳ ಚಿಕಿತ್ಸೆ!

By Manu
|

ಸೊಂಪಾದ ಕೂದಲಿನ ಬಯಕೆ ಯಾರಿಗಿರುವುದಿಲ್ಲ ಹೇಳಿ. ಇಳಿಬಿದ್ದ ಜಲಪಾತದಂತಿರುವ ದಟ್ಟ ಕಪ್ಪು ಕೇಶರಾಶಿಯ ಸೊಬಗಿಗೆ ಬೆರಗಾಗದವರು ಈ ಭೂಮಿಯಲ್ಲಿ ಯಾರೂ ಇರಲಿಕ್ಕಿಲ್ಲ. ಯಕ್ಷ ಗಂಧರ್ವರ ಕಾಲದಿಂದಲೂ ದಟ್ಟ ಕಾರ್ಮೋಡದಂತಿರುವ ತಲೆಗೂದಲು ತನ್ನದೇ ಪ್ರಾಶಸ್ತ್ಯವನ್ನು ಹೊಂದಿದೆ. ಚಿತ್ರಗಳಲ್ಲಿಯೂ ನೀಳಕೇಶರಾಶಿಯುಳ್ಳ ಹೆಂಗಳೆಯರ ಚಿತ್ರವನ್ನೇ ಹೆಚ್ಚು ಬಿಡಿಸಿರುವುದನ್ನು ನೀವು ಗಮನಿಸಿರಬಹುದು. ಅಂದವಾದ ಕೂದಲು ಮಹಿಳೆಗೆ ಆಭರಣಗಳಿಗಿಂತಲೂ ಹೆಚ್ಚು ಮಹತ್ವಪೂರ್ಣವಾಗಿತ್ತು ಎಂಬುದು ಇದರಿಂದ ತಿಳಿದುಕೊಳ್ಳಬಹುದು.

ನೈಸರ್ಗಿಕ ವಿಧಾನಗಳಿಂದಲೇ ಅಂದಿನ ಕಾಲದ ಹೆಂಗಳೆಯರು ತಮ್ಮ ನೀಳ್ಗೂದಲನ್ನು ಪೋಷಿಸುತ್ತಿದ್ದರು. ತಲೆತೊಳೆಯಲು ಸೀಗೆಕಾಯಿ, ಸೊಪ್ಪುಗಳ ಕಂಡೀಶನರಿಂಗ್ ವಿಧಾನವನ್ನು ಇವರು ಹೆಚ್ಚು ಆಯ್ದುಕೊಳ್ಳುತ್ತಿದ್ದರು. ಕೂದಲು ತೊಳೆದುಕೊಂಡ ನಂತರ ಬಿಸಿಲಿನಲ್ಲಿ ಪ್ರಾಕೃತಿಕವಾಗಿ ಒಣಗಿಸಿಕೊಳ್ಳುತ್ತಿದ್ದರು. ತಲೆಗೂದಲಿಗೆ ಹಚ್ಚಿಕೊಳ್ಳುವ ಎಣ್ಣೆ ತಯಾರಿಯಲ್ಲೂ ವಿಶೇಷ ಅಸ್ಥೆಯನ್ನು ಇವರು ವಹಿಸುತ್ತಿದ್ದರು. ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

ಆದರೆ ಈಗ ತಲೆಗೂದಲಿನ ಆರೈಕೆಗೆ ಸಮಯದ ಅಭಾವವಾಗಿದೆ. ಎಣ್ಣೆ ತಯಾರಿಸುವುದನ್ನು ಬಿಟ್ಟು ನೆತ್ತಿಗೆ ಎಣ್ಣೆಯಿಟ್ಟು ಮಾಡುವ ತಲೆಸ್ನಾನ ಕೂಡ ಎರಡು ವಾರಕ್ಕೊಮ್ಮೆ ಅದೂ ಅಮ್ಮ ನೆನಪಿಸಿದಾಗ ಎಂಬಂತಾಗಿದೆ. ದೈನಂದಿನ ಬಿಡುವಿಲ್ಲದ ಬದುಕಿನಲ್ಲಿ ಎಣ್ಣೆ ಹಚ್ಚಿ ತಲೆಸ್ನಾನಗೈಯುವುದು, ಕೂದಲಿಗೆ ವಿಶೇಷ ಆರೈಕೆಯನ್ನು ಮಾಡಲು ಸಮಯವೇ ನಮ್ಮಲ್ಲಿ ಇಲ್ಲ ಎಂಬಂತಹ ಸ್ಥಿತಿ ಬಂದೊದಗಿದೆ. ಆದರೂ ನೀಳವಾದ ದಟ್ಟ ಕೂದಲನ್ನು ನೋಡಿದಾಗ ನಮ್ಮಲ್ಲೂ ಇಂತಹ ಕೂದಲು ನಮಗೂ ಬೇಕು ಎಂಬ ಭಾವನೆ ಮೂಡುವುದು ಸಹಜ. ಹಾಗಿದ್ದರೆ ನೀವು ಸ್ವಲ್ಪ ಸಮಯವನ್ನು ಹೊಂದಿಸಿಕೊಳ್ಳಲೇಬೇಕು.

ನೈಸರ್ಗಿಕ ಪರಿಹಾರಗಳಿಂದ ಕೂದಲಿನ ರಿಪೇರಿ ಮಾಡುವುದು ಶಾಶ್ವತ ಫಲವನ್ನು ನೀಡುತ್ತದೆ. ನಿಯಮಿತ ಎಣ್ಣೆಯ ಬಳಕೆ, ಮೈಲ್ಡ್ ಶ್ಯಾಂಪೂವನ್ನು ಉಪಯೋಗಿಸುವುದು, ಮೊಸರು, ಲಿಂಬೆ, ಮೊಟ್ಟೆಯ ಹೇರ್‌ಪ್ಯಾಕ್‌ನೊಂದಿಗೆಯೇ ಅತಿ ವಿಶೇಷಾಗಿರುವ ಸೀಬೆ ಎಲೆಯ ಮಹತ್ವವನ್ನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

ಸೀಬೆಯ ಎಲೆಗಳು

ಸೀಬೆಯ ಎಲೆಗಳು

ಸೀಬೆಯ ಎಲೆಗಳು ನಿಮ್ಮ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಅಂಶ ನಿಮ್ಮಲ್ಲಿ ಅಚ್ಚರಿ ಮೂಡಿಸಬಹುದು. ಅಧಿಕ ಪ್ರಮಾಣದ ನ್ಯೂಟ್ರೀನ್‎ಗಳನ್ನು ಸೀಬೆ ಎಲೆಗಳು ಒಳಗೊಂಡಿದ್ದು ನಿಮ್ಮ ಆರೋಗ್ಯ, ತ್ವಚೆ ಮತ್ತು ಕೂದಲಿನ ಮೇಲೆ ಕಮಾಲನ್ನೇ ಉಂಟುಮಾಡುತ್ತವೆ.ತ್ವಚೆಯ ಸರ್ವರೋಗಕ್ಕೂ, ಸೀಬೆಹಣ್ಣಿನ ಎಲೆಗಳೇ ಸಾಕು!

ವಿಟಮಿನ್ ಬಿ

ವಿಟಮಿನ್ ಬಿ

ಸೀಬೆಯ ಎಲೆಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹದ ಬೇರೆ ಬೇರೆ ಅಂಗಗಳ ಮೇಲೆ ಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ವಿಟಮಿನ್ ಬಿಯನ್ನು ಯಥೇಚ್ಛವಾಗಿ ಈ ಹಣ್ಣಿನ ಎಲೆಗಳು ಹೊಂದಿರುವುದರಿಂದ ಕೂದಲಿನ ಅಭಿವೃದ್ಧಿ ಇದರಿಂದ ಉಂಟಾಗುತ್ತದೆ. ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳ ಪೂರೈಕೆಯಾದಲ್ಲಿ ಆರೋಗ್ಯಕರ ಕೂದಲು ನಿಮ್ಮದಾಗುವುದರಲ್ಲಿ ಸಂಶಯವೇ ಬೇಡ.

ಸೀಬೆಯ ಎಲೆಗಳಲ್ಲಿರುವ ಇತರೆ ಅಂಶಗಳು

ಸೀಬೆಯ ಎಲೆಗಳಲ್ಲಿರುವ ಇತರೆ ಅಂಶಗಳು

ವಿಟಮಿನ್ ಬಿ ನಿಮ್ಮ ಕೂದಲಿನ ಅಭಿವೃದ್ಧಿಗೆ ಸಹಕಾರಿಯಾದಲ್ಲಿ ಬಿ3, ಬಿ5 ಮತ್ತು ಬಿ6 ನಿಮ್ಮ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ. ವಿಟಮಿನ್ ಬಿ ಕೂದಲಿನ ಪದರಗಳನ್ನು ಬುಡವನ್ನು ರಿಪೇರಿ ಮಾಡುತ್ತದೆ. ಆದ್ದರಿಂದಲೇ ಹೆಚ್ಚಿನ ಸೌಂದರ್ಯ ಉತ್ಪನ್ನಗಳು ಮತ್ತು ಕೂದಲಿನ ಉತ್ಪನ್ನಗಳಲ್ಲಿ ಸೀಬೆಯ ಅಂಶಗಳನ್ನು ಬಳಸುತ್ತಾರೆ.

ಆರೋಗ್ಯಕರ ಕೂದಲಿಗೆ ಸೀಬೆ ಎಲೆಗಳು

ಆರೋಗ್ಯಕರ ಕೂದಲಿಗೆ ಸೀಬೆ ಎಲೆಗಳು

ಸೀಬೆಯ ಹಣ್ಣಿಗಿಂತಲೂ ಎಲೆಗಳು ನಿಮ್ಮ ಕೂದಲಿಗೆ ಹೆಚ್ಚು ಪ್ರಯೋಜವನ್ನುಂಟು ಮಾಡುತ್ತವೆ. ತಜ್ಞರ ಪ್ರಕಾರ, ನಿತ್ಯವೂ ಸೀಬೆ ಎಲೆಗಳನ್ನು ಕೂದಲಿನ ಆರೈಕೆಯಲ್ಲಿ ಬಳಸಿದಾಗ ಕೂದಲುದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಎಲೆಗಳ ಬಳಕೆ ಹೇಗೆ‎

ಎಲೆಗಳ ಬಳಕೆ ಹೇಗೆ‎

ಒಂದು ಲೀಟರ್ ನೀರಿನಲ್ಲಿ 15 ರಿಂದ 20 ನಿಮಿಷಗಳ ಕಾಲ ಮುಷ್ಟಿಯಷ್ಟು ಸೀಬೆಯ ಎಲೆಗಳನ್ನು ಕುದಿಸಿಕೊಳ್ಳಿ. ಚೆನ್ನಾಗಿ ಕುದಿದ ನಂತರ, ತಣ್ಣಗಾಗಲು ಬಿಡಿ. ನೀರನ್ನು ಬಸಿದು ಅದನ್ನು ಕೂದಲ ಬುಡದಿಂದ ತುದಿಯವರೆಗೆ ತಕ್ಷಣವೇ ಹಚ್ಚಿಕೊಳ್ಳಿ. ಸೀಬೆ ಎಲೆಯೊಂದಿಗೆ ಕುದಿಸಿರುವ ನೀರನ್ನು ಕೂದಲಿಗೆ ಬಳಸಿಕೊಳ್ಳುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಮಸಾಜ್ ಪರಿಹಾರ

ಮಸಾಜ್ ಪರಿಹಾರ

ನಿತ್ಯವೂ ಈ ವಿಧಾನವನ್ನು ಬಳಸಿ ಕೂದಲಿಗೆ ಮಸಾಜ್ ಮಾಡುವುದರಿಂದ ಕೂದಲಿನ ಬುಡ ಗಟ್ಟಿಯಾಗುತ್ತದೆ. ಈ ವಿಧಾನ ಕೋಶಗಳನ್ನು ಸುದೃಢಗೊಳಿಸಿ ದಪ್ಪನೆಯ ಹೊಳೆಯುವ ಕೂದಲನ್ನು ನಿಮ್ಮದಾಗಿಸುವಂತೆ ಮಾಡುತ್ತದೆ.

ಸ್ವಾಭಾವಿಕ ಮನೆಮದ್ದು

ಸ್ವಾಭಾವಿಕ ಮನೆಮದ್ದು

ಮೇಲೆ ತಿಳಿಸಿದಂತೆ, ನೈಸರ್ಗಿಕವಾಗಿ ಕೂದಲಿನ ಸಮಸ್ಯೆಗೆ ಸೀಬೆಯ ಎಲೆಗಳು ಪರಿಹಾರವನ್ನು ಒದಗಿಸುತ್ತವೆ. ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಉತ್ಪನ್ನಗಳೂ ಶಾಶ್ವತ ಪರಿಹಾರವನ್ನು ನೀಡಲಾರವು. ಇದರ ಬಳಕೆಯನ್ನು ನಿಮ್ಮ ಕೂದಲಿಗೆ ಮಾಡಿದಲ್ಲಿ ಹೆಚ್ಚಿನ ಹಾನಿಯನ್ನು ಕೂದಲು ಅನುಭವಿಸಬಹುದು. ಸೀಬೆ ಎಲೆಯಂತಹ ಸ್ವಾಭಾವಿಕ ಪರಿಹಾರ ಕೂದಲಿಗೆ ಯಾವುದೇ ಹಾನಿಯನ್ನುಂಟು ಮಾಡದೆಯೇ ಬೆಳವಣಿಗೆಗೆ ಸಹಕಾರಿಯಾಗಿದೆ.

English summary

Guava Leaves Beneficial For Your Hair in kannada

Did you know that your hair can benefit immensely from guava leaves? Have you ever imagined that something as simple as the leaves of guava fruit can do your hair a lot of good? Well, it’s true! Would you like to know more on how guava leaves can improve your hair health? Then keep reading this post.
X
Desktop Bottom Promotion