For Quick Alerts
ALLOW NOTIFICATIONS  
For Daily Alerts

ಕೂದಲು ಉದ್ದವಾಗಿ ಬೆಳೆಯಲು ಪವರ್‌ ಫುಲ್ ಮನೆಮದ್ದು....

By Manu
|

ಅಂದವಾದ ನಳನಳಿಸುವ ಆರೋಗ್ಯಕರ ಕೂದಲುನ್ನು ಹೊಂದುವ ಆಸೆ ಯಾವ ಮಹಿಳೆಗೆ ಇರಲಿಕ್ಕಿಲ್ಲ ಹೇಳಿ? ಎಲ್ಲಾ ಸ್ತ್ರೀಯರು ಅಂದವಾದ ದಟ್ಟನೆಯ ನುಣುಪಾದ ಕೇಶರಾಶಿಯನ್ನು ಪಡೆದುಕೊಳ್ಳುವ ಹಂಬಲವನ್ನಿಟ್ಟುಕೊಂಡಿರುತ್ತಾರೆ. ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕೂದಲುದುರುವ ಸಮಸ್ಯೆಗಳು ಕಂಡುಬರುತ್ತಿದ್ದು ಇದಕ್ಕೆ ಹಾರ್ಮೋನುಗಳ ಬದಲಾವಣೆಯೇ ಕಾರಣವಾಗಿದೆ. ಈ ಸಂದರ್ಭದಲ್ಲಿ ಕೂದಲಿನ ಬೇರನ್ನು ಅತ್ಯುತ್ತಮವಾಗಿ ಪೋಷಿಸಿದಲ್ಲಿ ಬುಡ ಸಮೇತ ಕಿತ್ತು ಬರುವ ಕೂದಲಿನ ಉದುರುವಿಕೆಗೆ ಕಡಿವಾಣ ಹಾಕಬಹುದು.

ವಾತಾವರಣದ ಧೂಳು, ನೀರಿನ ಬದಲಾವಣೆ, ಅನಾರೋಗ್ಯಕರ ಆಹಾರ ಪದ್ಧತಿ, ಕೂದಲನ್ನು ಚೆನ್ನಾಗಿ ಪೋಷಿಸದೇ ಇರುವುದು ಮೊದಲಾದ ಅಂಶಗಳು ಕೂದಲುದುರುವಿಕೆಗೆ ಕಾರಣವಾಗಿದೆ. ರಾಸಾಯನಿಕ ಉತ್ಪನ್ನಗಳನ್ನು ನೀವು ಅತಿಯಾಗಿ ಕೂದಲಿಗೆ ಬಳಸುತ್ತಿದ್ದೀರಿ ಎಂದಾದಲ್ಲಿ ಕೂಡ ಕೂದಲು ಉದುರಲು ಆರಂಭವಾಗಿ ದಟ್ಟತೆಯನ್ನು ನೀವು ಕಳೆದುಕೊಳ್ಳುತ್ತೀರಿ. ನೀಳ ಕೇಶರಾಶಿ ಚೆಲುವೆಗೆ ಏಳು ವಿಶೇಷ ಸಲಹೆ

ಕೂದಲಿನ ಪೋಷಣೆಗೆ ಹಿಂದಿನವರು ಅನುಸರಿಸುತ್ತಿದ್ದ ಮಾರ್ಗವನ್ನೇ ಇಂದಿನ ಜನಾಂಗ ಕೂಡ ಅನುಸರಿಸಬೇಕು. ನೈಸರ್ಗಿಕವಾಗಿ ಕೂದಲಿನ ಪೋಷಣೆಯನ್ನು ಮಾಡುವುದರಿಂದ ಬಿಟ್ಟೂ ಬಿಡದೆ ಕಾಡುವ ಕೂದಲುದುರುವಿಕೆ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಾವು ಪರಿಣಾಮಕಾರಿ ನೈಸರ್ಗಿಕ ಸಲಹೆಗಳನ್ನು ಕೂದಲುದುರುವಿಕೆಯನ್ನು ತಡೆಗಟ್ಟಲು ನೀಡುತ್ತಿದ್ದೇವೆ. ಬನ್ನಿ ಅವುಗಳೇನು ಎಂಬುದನ್ನು ನೋಡೋಣ....

ನೆಲ್ಲಿಕಾಯಿ ಎಣ್ಣೆ

ನೆಲ್ಲಿಕಾಯಿ ಎಣ್ಣೆ

ಸ್ವಲ್ಪ ನೆಲ್ಲಿಕಾಯಿಯನ್ನು ತೆಗೆದುಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದಕ್ಕೆ ಮೂರು ಟೇಬಲ್ ಚಮಚ ಮೆಂತೆ ಪುಡಿಯನ್ನು ಮತ್ತು ಅರ್ಧ ಕಪ್ ತೆಂಗಿನ ಎಣ್ಣೆಯನ್ನು ಬೆರೆಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಹೊಂಬಣ್ಣಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಕಾಯಿಸಿ. ನಂತರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಇದನ್ನು ಗಾಳಿಯಾಡದ ಜಾರ್‌ಗೆ ವರ್ಗಾಯಿಸಿ ದಿನನಿತ್ಯ ಕೂದಲಿನ ಬುಡಕ್ಕೆ ಮಸಾಜ್ ಮಾಡಿ, ಫಲಿತಾಂಶಕ್ಕಾಗಿ ಎರಡು ವಾರ ಕಾಯಿರಿ

ಬೇವು

ಬೇವು

ನಿಯಮಿತವಾಗಿ ಬೇವಿನೆಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಳ್ಳುತ್ತಾ ಬರುವ ಮೂಲಕ ಆರೋಗ್ಯಕರ ಮತ್ತು ಸೊಂಪಾದ ಕೂದಲನ್ನು ಪಡೆಯಲು ಸಾಧ್ಯವಿದೆ. ನಿಯಮಿತವಾಗಿ ಕೂದಲ ಬುಡಕ್ಕೆ ಮಸಾಜ್ ಮಾಡುವ ಮೂಲಕ ಕೂದಲ ಬುಡಗಳು ದೃಢಗೊಂಡು ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ. ಅದರಲ್ಲೂ ರಾತ್ರಿ ಮಲಗುವ ಮುನ್ನ ಕೊಂಚ ಬೇವಿನೆಣ್ಣೆಯಿಂದ ತಲೆಗೂದಲ ಬುಡಕ್ಕೆ ಮಸಾಜ್ ಮಾಡಿ ಮಲಗಿ ಬೆಳಿಗ್ಗೆ ಎದ್ದ ಬಳಿಕ ತೊಳೆದುಕೊಳ್ಳುವುದರಿಂದ ಕೂದಲು ಉದುರುವುದು ನಿಲ್ಲುವ ಜೊತೆಗೇ ಕೂದಲಿಗೆ ಕಾಂತಿಯೂ ದೊರಕುತ್ತದೆ. ಇದರೊಂದಿಗೆ ಇತರ ಅವಶ್ಯಕ ತೈಲಳಾದ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿಕೊಳ್ಳುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು.

ದಾಸವಾಳ

ದಾಸವಾಳ

ದಾಸವಾಳದ 6-7 ಹೂವುಗಳನ್ನು ಅರೆದುಕೊಳ್ಳಿ. ಇದಕ್ಕೆ ಸ್ವಲ್ಪ ತೆಂಗಿನೆಣ್ಣೆಯನ್ನು ಸೇರಿಸಿ ಮಿಶ್ರ ಮಾಡಿ ಮತ್ತು ಇದನ್ನು ನೆತ್ತಿಗೆ ಹಚ್ಚಿಕೊಳ್ಳಿ. 20 ನಿಮಿಷಗಳ ಕಾಲ ಈ ಮಿಶ್ರಣ ನಿಮ್ಮ ಕೂದಲಿನಲ್ಲಿ ಇರುವಂತೆ ನೋಡಿಕೊಳ್ಳಿ. ಉಗುರು ಬೆಚ್ಚಗಿನ ನೀರಿನಿಂದ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನುಸರಿಸಿರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?

ಕರಿಬೇವಿನೆಲೆ

ಕರಿಬೇವಿನೆಲೆ

ಕರಿಬೇವಿನ ಎಲೆಗಳಲ್ಲಿ B6 ವಿಟಮಿನ್ ಕೂದಲ ನಷ್ಟವನ್ನು ತಡೆಗಟ್ಟುವ ಹಾರ್ಮೋನಿನ೦ತೆ ಕಾರ್ಯವೆಸಗುತ್ತದೆ. ಅಲ್ಲದೆ B6 ವಿಟಮಿನ್ ಕೂದಲುಗಳನ್ನು ಬೇರುಸಹಿತ ಬಲಯುತಗೊಳಿಸುವುದರ ಮೂಲಕ ಕೇಶರಾಶಿಯು ಆರೋಗ್ಯಕರ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಶಾ೦ಪೂವಿನಿ೦ದ ಇದನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ. ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನುಸರಿಸಿರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಈರುಳ್ಳಿ ರಸ

ಈರುಳ್ಳಿ ರಸ

ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಪೋಷಣೆ ಮಾಡಲು ಈರುಳ್ಳಿ ರಸ ಹೇಳಿ ಮಾಡಿಸಿದ್ದಾಗಿದೆ. ವಾರದಲ್ಲಿ ಎರಡು ಬಾರಿ ಕೂದಲಿಗೆ ಈರುಳ್ಳಿ ರಸವನ್ನು ಹಚ್ಚಿಕೊಳ್ಳಬೇಕು. ಇದರ ವಾಸನೆ ಕೊಂಚ ತೀಕ್ಷ್ಣವಾಗಿರುತ್ತದೆ ಅದಕ್ಕಾಗಿ ನೀವು ಮೃದುವಾದ ಶಾಂಪೂವನ್ನು ಬಳಸಿ ಕೂದಲನ್ನು ತೊಳೆದುಕೊಳ್ಳಬೇಕಾಗುತ್ತದೆ. ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

English summary

Powerful Home Remedies For Hair Growth

To have lovely and gorgeous-looking hair, it is a dream come true for every woman. There are certain natural medicines, which when applied on to the hair can make the roots and tresses look fabulous. According to beauty experts, using natural remedies in the hair is worth it when compared to chemical products that contain harmful properties and give rise to hair fall and other hair-related problems.
X
Desktop Bottom Promotion