For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಶಾಂಪೂ ಹಾಕುವಾಗ, ಗಡಿಬಿಡಿ ಮಾಡಿಕೊಳ್ಳಬೇಡಿ!

By Jaya
|

ಕೇಶ ಕಾಂತಿಯುಕ್ತವಾಗುವುದು ನಾವು ಅದನ್ನು ಕಾಳಜಿಯಿಂದ ನೋಡಿಕೊಂಡಾಗ ಮಾತ್ರ. ಕೂದಲಿಗೆ ಉತ್ತಮ ಪೋಷಣೆಯನ್ನು ಮಾಡದೆಯೇ ಹೊಳೆಯುವ ಕೇಶ ರಾಶಿಯನ್ನು ನಾವು ಬಯಸಿದಲ್ಲಿ ಖಂಡಿತ ಇದು ನಿಷ್ಫಲ ಎಂದೆನಿಸುತ್ತದೆ. ಆದರೆ ಕೂದಲಿನ ಪೋಷಣೆಯೊಂದಿಗೆ ನಿಮ್ಮ ಕೇಶವನ್ನು ತೊಳೆದುಕೊಳ್ಳುವ ವಿಧಾನ ಕೂಡ ಸರಿಯಾಗಿರಬೇಕು ಎಂಬ ಅಂಶ ನಿಮಗೆ ತಿಳಿದಿದೆಯೇ? ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

ಹೌದು. ತಪ್ಪಾದ ಶಾಂಪೂವಿನ ಆಯ್ಕೆ ಮತ್ತು ಕೂದಲಿಗೆ ಸರಿಯಾಗಿ ಶಾಂಪೂ ಬಳಸದೆ ತೊಳೆಯುವುದು, ಕೂದಲು ತೊಳೆಯುವ ವಿಧಾನದಲ್ಲಿ ಮಾಡುವ ತಪ್ಪುಗಳಿಂದ ಕೂಡ ಕೂದಲಿಗೆ ಬೇಕಾದ ಪೋಷಣೆ ದೊರೆಯದೇ ಹೋಗುತ್ತದೆ. ಹಾಗಾಗಿ ಇಂದಿನ ಲೇಖನದಲ್ಲಿ ಈ ತಪ್ಪುಗಳನ್ನು ಸರಿಮಾಡುವ ವಿಧಾನಗಳನ್ನು ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಕೂದಲಿಗೆ ಶಾಂಪೂ ಹಚ್ಚಿ ಅದನ್ನು ಹೇಗೆ ತೊಳೆದುಕೊಳ್ಳಬೇಕು ಎಂಬುದನ್ನು ಹಂತ ಹಂತವಾಗಿ ನಾವು ತಿಳಿಸಿಕೊಡಲಿದ್ದು ಇದರಿಂದ ನೀವು ಕೂದಲು ತೊಳೆಯುವ ವಿಧಾನದಲ್ಲಿ ಏನಾದರೂ ತಪ್ಪು ಮಾಡುತ್ತಿದ್ದೀರಿ ಎಂದಾಗ ಅದನ್ನು ಸರಿಪಡಿಸಿಕೊಳ್ಳಬಹುದು. ಬನ್ನಿ ಅದೇನು ಎಂಬುದನ್ನು ತಿಳಿದುಕೊಳ್ಳೋಣ. ಕೂದಲಿನ ಸಮಸ್ಯೆಗೆ ಮೊಟ್ಟೆಯ ಶಾಂಪೂ ಬಳಸಿ ನೋಡಿ!

ನಿಮ್ಮ ಕೂದಲಿನ ಬುಡಕ್ಕೆ ಪೋಷಣೆ ದೊರಕಿದಲ್ಲಿ ಕೂದಲು ಗಟ್ಟಿಯಾಗಿ ಚೆನ್ನಾಗಿ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕೂದಲು ತೊಳೆಯುವ ವಿಧಾನದಲ್ಲಿ ಮಾಡುತ್ತಿರುವ ತಪ್ಪುಗಳಿಗೆ ಇತಿಶ್ರೀ ಹಾಡಿ ಸರಿಯಾದ ವಿಧಾನಗಳನ್ನು ನಮ್ಮದಾಗಿಸಿಕೊಳ್ಳೋಣ...

ತಪ್ಪಾದ ಶಾಂಪೂ ಆಯ್ಕೆ

ತಪ್ಪಾದ ಶಾಂಪೂ ಆಯ್ಕೆ

ನಿಮ್ಮ ಕೂದಲಿಗೆ ಹೊಂದುವಂತಹ ಶ್ಯಾಂಪೂವನ್ನು ಆಯ್ಕೆಮಾಡಿಕೊಳ್ಳಬೇಕು. ನಿಮ್ಮದು ಯಾವ ಪ್ರಕಾರದ ಕೂದಲು ಎಂಬುದನ್ನು ಅರಿತುಕೊಳ್ಳಿ.ಒಣ, ಜಿಡ್ಡಿನದು, ಸುಲಭವಾಗಿ ಒಡೆದು ಹೋಗುವ ಇಂತಹದ್ದು. ನಿಮ್ಮ ಕೂದಲಿಗೆ ಯಾವುದು ಪರಿಣಾಮಕಾರಿಯಾದುದು ಎಂಬುದನ್ನು ಅರಿತುಕೊಳ್ಳಲು ಅವಶ್ಯವಿದ್ದಲ್ಲಿ ಕೂದಲು ತಜ್ಞರನ್ನು ಹೋಗಿ ಕಾಣಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಪ್ಪಾದ ಶಾಂಪೂ ಆಯ್ಕೆ

ತಪ್ಪಾದ ಶಾಂಪೂ ಆಯ್ಕೆ

ಅಂತೆಯೇ ಶಾಂಪೂ, ಕಂಡೀಷನರ್ ಬಳಕೆಯನ್ನು ಬಿಡಿ. ಯಾವುದೇ ಉತ್ಪನ್ನಕ್ಕೆ ಒಮ್ಮೆಗೇ ಶಾಂಪೂ ಮಾಡುವುದು ಮತ್ತು ಕಂಡೀಷನಿಂಗ್ ಮಾಡುವುದು ಸಾಧ್ಯವಿಲ್ಲದ ಮಾತಾಗಿದೆ. ಅಂತೆಯೇ ಪ್ರತೀ ಬಾರಿ ಒಂದೇ ಶಾಂಪೂವನ್ನು ಬಳಸುವುದರಿಂದ ಕೂಡ ಅಷ್ಟು ಒಳ್ಳೆಯದಲ್ಲ ಇದರಿಂದ ಉತ್ಪನ್ನ ಜಮಾವಣೆ ಮಾತ್ರ ಸಾಧ್ಯ.

ಕೂದಲನ್ನು ಹೆಚ್ಚು ಒದ್ದೆಮಾಡಿಕೊಳ್ಳದಿರುವುದು

ಕೂದಲನ್ನು ಹೆಚ್ಚು ಒದ್ದೆಮಾಡಿಕೊಳ್ಳದಿರುವುದು

ನೀವು ಶಾಂಪೂ ಮಾಡುವ ಮುನ್ನ ಕೂದಲನ್ನು ಸಂಪೂರ್ಣವಾಗಿ ಒದ್ದೆ ಮಾಡಿಕೊಳ್ಳಿ ಇಲ್ಲದಿದ್ದರೆ ಉತ್ಪನ್ನ ಸರಿಯಾಗಿ ಕಾರ್ಯ ನಿರ್ವಹಿಸದು ಮತ್ತು ನಿಮ್ಮ ಕೂದಲನ್ನು ಇದು ಒಣಗಿಸುತ್ತದೆ. ಶಾಂಪೂ ಮಾಡುವ ಮುನ್ನ ಶವರ್ ಅಡಿಯಲ್ಲಿ 2-3 ನಿಮಿಷಗಳ ಕಾಲ ಹಾಗೆಯೇ ನಿಲ್ಲಿ

ಕೂದಲಿನ ಸರಿಯಾದ ಭಾಗಕ್ಕೆ ಶಾಂಪೂ ಮಾಡುವುದು

ಕೂದಲಿನ ಸರಿಯಾದ ಭಾಗಕ್ಕೆ ಶಾಂಪೂ ಮಾಡುವುದು

ಕೂದಲಿನ ತುದಿಗೆ ಶಾಂಪೂ ಮಾಡುವುದಕ್ಕಿಂತ ಬುಡಕ್ಕೆ ಶಾಂಪೂ ಮಾಡಬೇಕು. ನೀವು ಶವರ್ ಅಡಿಯಲ್ಲಿದ್ದಾಗ, ಕೂದಲಿನ ಬುಡಕ್ಕೆ ಶಾಂಪೂ ಮಾಡಿ ತುದಿಗೆ ಕಂಡೀಷನರ್ ಹಚ್ಚಿಕೊಳ್ಳಿ. ಅಂತೆಯೇ ನೆತ್ತಿಯ ಒಂದೇ ಭಾಗಕ್ಕೆ ಶಾಂಪೂ ಮಾಡಬೇಡಿ ಇದು ಕೂದಲನ್ನು ಒಣಗಿಸುತ್ತದೆ.

ಆಗಾಗ್ಗೆ ಕೂದಲು ತೊಳೆಯುವುದು

ಆಗಾಗ್ಗೆ ಕೂದಲು ತೊಳೆಯುವುದು

ಕೂದಲನ್ನು ಆಗಾಗ್ಗೆ ತೊಳೆಯುವುದು ಕೂದಲನ್ನು ಒಣಗಿಸಿಬಿಡುತ್ತದೆ. ದಿನಬಿಟ್ಟು ದಿನ ಕೂದಲು ತೊಳೆಯುವ ಪದ್ಧತಿಯನ್ನು ಮಾಡಿ. ಕೂದಲು ಕೊಳೆಯಾಗಿದೆ ಎಂದೆನಿಸಿದಲ್ಲಿ, ಡ್ರೈ ಶಾಂಪೂವನ್ನು ಬಳಸಿ ಕೊಳೆಯನ್ನು ನಿವಾರಿಸಿ. ಇದು ಕೂಡ ಹೆಚ್ಚುವರಿ ವಿನ್ಯಾಸವನ್ನು ನೀಡುತ್ತದೆ.

ಕೂದಲನ್ನು ಸರಿಯಾಗಿ ತೊಳೆಯದೇ ಇರುವುದು

ಕೂದಲನ್ನು ಸರಿಯಾಗಿ ತೊಳೆಯದೇ ಇರುವುದು

ಕೂದಲಿಗೆ ಶಾಂಪೂ ಹಚ್ಚಿ ಆಗಲೇ ತೊಳೆಯಬೇಡಿ. ನೀವು ಹೀಗೆ ಮಾಡಿದಲ್ಲಿ ಶಾಂಪೂವಿಗೆ ಕಾರ್ಯನಿರ್ವಹಿಸಲು ಸಮಯವೇ ದೊರಕುವುದಿಲ್ಲ. ಶಾಂಪೂ ಹಚ್ಚಿ ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲನ್ನು ಸರಿಯಾಗಿ ತೊಳೆಯದೇ ಇರುವುದು

ಕೂದಲನ್ನು ಸರಿಯಾಗಿ ತೊಳೆಯದೇ ಇರುವುದು

ತಣ್ಣೀರಿನಿಂದ ಕೂದಲು ತೊಳೆದುಕೊಳ್ಳಿ ಇದರಿಂದ ಕೂದಲಿನ ಕ್ಯೂಟಿಕಲ್ ಲಾಕ್ ಮಾಡಲು ಇದು ಸಹಾಯ ಮಾಡುತ್ತದೆ ಇದರಿಂದ ಕೂದಲು ಹೊಳೆಯುತ್ತದೆ ಮತ್ತು ಕೂದಲುದುರುವುದಿಲ್ಲ.

English summary

Biggest Shampoo mistakes you are making...

Shampooing your hair is fairly routine, but you'd be surprised that people make quite a few basic boo-boos in this department. Here are a few shampoo mistakes that you need to avoid committing...
Story first published: Thursday, April 21, 2016, 20:07 [IST]
X
Desktop Bottom Promotion