For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೆ, ಬಾದಾಮಿ ಎಣ್ಣೆ-ಹಾಲಿನ ಹೇರ್ ಮಾಸ್ಕ್

By Hemanth
|

ಸೌಂದರ್ಯವನ್ನು ಅಳೆಯುವುದು ಯಾವುದರಿಂದ ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರಿಸುವುದು ಸ್ವಲ್ಪ ಕಷ್ಟವಾಗಬಹುದು. ಯಾಕೆಂದರೆ ದೇಹದ ಪ್ರತಿಯೊಂದು ಅಂಗವು ಸರಿಯಾಗಿದ್ದು, ಅದು ಹೊಳಪನ್ನು ಹೊಂದಿದ್ದರೆ ಮಾತ್ರ ಸೌಂದರ್ಯವು ಎದ್ದು ಕಾಣುತ್ತದೆ.

ಎಲ್ಲವೂ ಸರಿಯಾಗಿದ್ದು, ಕೂದಲು ಜೀವ ಕಳೆದುಕೊಂಡಿದ್ದರೆ ಆಗ ಅದು ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ನಿರ್ಜೀವ ಕೂದಲನ್ನು ರೇಷ್ಮೆಯ ಹಾಗೆ ಹೊಳೆಯುವಂತೆ ಮಾಡಲು ನೀವು ಹಲವಾರು ಪ್ರಯತ್ನ ಮಾಡಿರಬಹುದು. ಆದರೆ ಇದು ಸಾಲದು. ನೀವು ಮನೆಮದ್ದನ್ನು ಬಳಸಿದರೆ ಖಂಡಿತವಾಗಿಯೂ ರೇಷ್ಮೆಯಂತಹ ಕೂದಲನ್ನು ಪಡೆಯುವುದರಲ್ಲಿ ಸಂಶಯವೇ ಇಲ್ಲ.

Almond Oil & Milk

ಕೂದಲಿನ ಸರಿಯಾದ ಆರೈಕೆ ಮಾಡದಿರುವುದು, ಆಹಾರ ಕ್ರಮ ಮತ್ತು ಧೂಳೂ ಹಾಗೂ ಕಲ್ಮಷ ಕೂದಲು ತನ್ನ ಕಾಂತಿಯನ್ನು ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಆರೋಗ್ಯಕರವಾದ ಕೂದಲು ಪಡೆಯಬೇಕೆಂದರೆ ಪೋಷಕಾಂಶಗಳು ಅಗತ್ಯವಾಗಿ ಬೇಕೇ ಬೇಕು. ಬಾದಾಮಿ ಎಣ್ಣೆಯಲ್ಲಿ ಅಡಗಿದೆ ಸರ್ವರೋಗ ನಿವಾರಕ ಶಕ್ತಿ!

ಕೆಲವರಿಗೆ ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸಲು ಸಮಯವೇ ಸಿಗುವುದಿಲ್ಲ. ಕೂದಲು ಆರೋಗ್ಯಕರ, ಹೊಳೆಯುವ, ರೇಷ್ಮೆಯಂತ ಕೂದಲು ಬೇಕೆಂದರೆ ಬಾದಾಮಿ ಎಣ್ಣೆ ಮತ್ತು ಹಾಲಿನ ಹೇರ್ ಮಾಸ್ಕ್ ಮಾಡಿಕೊಳ್ಳಿ.

ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಬಾದಾಮಿ ಎಣ್ಣೆ 2 ಚಮಚ
*ಹಾಲು 2 ಚಮಚ ತ್ವಚೆ ಹಾಗೂ ಕೂದಲಿನ ಸೌಂದರ್ಯಕ್ಕೆ ಹಾಲಿನ ಚಿಕಿತ್ಸೆ

ತಯಾರಿಸುವ ಹಾಗೂ ಬಳಸುವ ವಿಧಾನ
*ಒಂದು ಸಣ್ಣ ಪಿಂಗಾಣಿಗೆ ಮೇಲೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಇದನ್ನು ಕೂದಲಿಗೆ ಹಚ್ಚಿಕೊಳ್ಳಿ.
*ಕೂದಲಿನ ಬುಡದಿಂದ ತುದಿಯ ತನಕ ಹಚ್ಚಿಕೊಳ್ಳಿ.


*ಕೆಲವು ನಿಮಿಷಗಳ ಕಾಲ ತಲೆ ಬುರುಡೆಯನ್ನು ಮಸಾಜ್ ಮಾಡಿಕೊಳ್ಳಿ.
*20 ನಿಮಿಷಗಳ ಕಾಲ ಹಾಗೆ ಬಿಡಿ.
*ಶಾಂಪೂ ಮತ್ತು ಉಗುರುಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.
*ನಿಯಮಿತವಾಗಿ ಬಳಸಿದರೆ ಫಲಿತಾಂಶ ಪಡೆಯಬಹುದು.
English summary

Apply Almond Oil & Milk On Your Hair, Watch What Happens!

However, many of us do not find the time to eat nutritious foods to improve the health and texture of our tresses. So, if you want to have hair which is healthier, thicker and more radiant, learn how to make the almond oil and milk hair mask, here.
Story first published: Sunday, September 18, 2016, 11:04 [IST]
X
Desktop Bottom Promotion