ತ್ವಚೆ ಹಾಗೂ ಕೂದಲಿನ ಸೌಂದರ್ಯಕ್ಕೆ ಹಾಲಿನ ಚಿಕಿತ್ಸೆ

By Arshad

ನೈಸರ್ಗಿಕ ಮತ್ತು ಅತ್ಯುತ್ತಮ ಪೋಷಕಾಂಶಗಳುಳ್ಳ ದ್ರವ ಆಹಾರವೆಂದರೆ ಹಾಲು. ನಿತ್ಯವೂ ಕುಡಿಯುವ ಮೂಲಕ ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನ ಒಂದೆರಡಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಸಲ್ಲುವ ಆಹಾರವೂ ಆಗಿದೆ. ಆಹಾರದ ಹೊರತಾಗಿ ಇದು ಔಷಧಿಯ ರೂಪದಲ್ಲೂ ಬಳಕೆಯಾಗುತ್ತದೆ.

ವಿಶೇಷವಾಗಿ ತ್ವಚೆ ಮತ್ತು ಕೂದಲಿಗೆ ಹಾಲು ನೀಡುವ ಆರೈಕೆ ಮಹತ್ವದ್ದಾಗಿದೆ. ಹಾಲಿನ ಸಮರ್ಪಕ ಬಳಕೆಯಿಂದ ತ್ವಚೆ ಮೃದು, ಕಾಂತಿಯುಕ್ತ ಮತ್ತು ಸಹಜವರ್ಣ ಪಡೆಯಲು ನೆರವಾಗುತ್ತದೆ. ಅಷ್ಟೇ ಅಲ್ಲ ಕೂದಲು ನೀಳವಾಗಿರಲು, ಸೊಂಪಾಗಿ ಬೆಳಯಲೂ ನೆರವಾಗುತ್ತದೆ. ತಲೆಯ ಚರ್ಮಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುವ ಮೂಲಕ ಕೂದಲ ಬುಡಗಳು ದೃಢವಾಗುವಂತೆ ಮಾಡುತ್ತದೆ. ನಿಮ್ಮ ಸೌಂದರ್ಯ ಹೆಚ್ಚಿಸಲು ಹಾಲಿನ ಚಮತ್ಕಾರ

ಒಂದು ವೇಳೆ ಹಾಲನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಬೇರೆ ಯಾವುದೇ ದುಬಾರಿ ಪ್ರಸಾಧನಗಳನ್ನು ಕೊಳ್ಳುವ ಅಗತ್ಯವೇ ಇಲ್ಲ. ಚರ್ಮ ಮತ್ತು ಕೂದಲ ಆರೈಕೆಯಲ್ಲಿ ಇದರ ಬಳಕೆಯ ವೈವಿಧ್ಯವೂ ಹೆಚ್ಚು. ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವ ಕ್ಲೀನ್ಸರ್, ತೇವಕಾರಕ, ಕೂದಲ ಕಂಡೀಶನರ್‌ನಂತೆ ಹಾಲು ವರ್ತಿಸುತ್ತದೆ. ನಿತ್ಯವೂ ಹಾಲನ್ನು ಸೌಂದರ್ಯ ಪ್ರಸಾಧನದ ರೂಪದಲ್ಲಿ ಬಳಸುವ ಮೂಲಕ ಚರ್ಮ ಮತ್ತು ಕೂದಲಿನಲ್ಲಿ ಕೆಲವೇ ದಿನಗಳಲ್ಲಿ ಬದಲಾವಣೆಯನ್ನು ಗುರುತಿಸಬಹುದು. ಹಾಲಿನ ಅದ್ಭುತ ಪ್ರಯೋಜನಗಳಲ್ಲಿ ಮಹತ್ವವಾದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವ ಕ್ಲೀನ್ಸರ್‌ನಂತೆ

ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುವ ಕ್ಲೀನ್ಸರ್‌ನಂತೆ

ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸಲು ಹಾಲು ಸಮರ್ಥವಾಗಿದೆ. ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆದು ಅದರಲ್ಲಿದ್ದ ಕಲ್ಮಶ ಮತ್ತು ಕೊಳೆಯನ್ನು ತೆಗೆಯಲು ಹಾಲು ಉತ್ತಮವಾಗಿದೆ. ಇದಕ್ಕಾಗಿ ಒಂದು ಹತ್ತಿಯುಂಡೆಯನ್ನು ತಣ್ಣನೆಯ ಹಾಲಿನಲ್ಲಿ ಅದ್ದಿ ಚರ್ಮದ ಮೇಲೆ ಕೊಂಚವೇ ಒತ್ತಡ ಹೇರಿ ಒರೆಸಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಲ್ಲಿ ತೊಳೆದುಕೊಂಡರೆ ಕಲ್ಮಶಗಳು ನಿವಾರಣೆಯಾಗುತ್ತವೆ. ತಣ್ಣನೆಯ ಹಾಲು ಹಸಿ ಹಾಲಾಗಿದ್ದರೆ ಇನ್ನೂ ಉತ್ತಮ.

ಚರ್ಮದ ಬಣ್ಣ ಸಹಜವರ್ಣವಾಗಿಸುವ ಬ್ಲೀಚ್ ನಂತೆ

ಚರ್ಮದ ಬಣ್ಣ ಸಹಜವರ್ಣವಾಗಿಸುವ ಬ್ಲೀಚ್ ನಂತೆ

ಹಾಲು ಮತ್ತು ಲಿಂಬೆರಸವನ್ನು ಬೆರೆಸಿದರೆ ಇದೊಂದು ಉತ್ತಮ ಬ್ಲೀಚ್ ನಂತೆ ಅಥವಾ ಬಿಳಿಚಿಸುವ ದ್ರವವಾಗಿ ಮಾರ್ಪಾಡುತ್ತದೆ. ಉತ್ತಮ ಪರಿಣಾಮಕ್ಕಾಗಿ ಕೊಂಚ ಕಡಲೆಹಿಟ್ಟಿನಲ್ಲಿ ಹಸಿಹಾಲು ಅಥವಾ ತಣ್ಣನೆಯ ಹಾಲು, ಕೊಂಚ ಜೇನು ಮತ್ತು ಕೊಂಚ ಲಿಂಬೆರಸವನ್ನು ಸೇರಿಸಿ ಮಿಶ್ರಣ ತಯಾರಿಸಿ. ಈ ಲೇಪನವನ್ನು ದಟ್ಟವಾಗಿದ್ದ ಚರ್ಮದ ಮೇಲೆ ದಪ್ಪನಾಗಿ ಲೇಪಿಸಿ ಕೊಂಚ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ವಿಶೇಷವಾಗಿ ಬಿಸಿಲಿನಿಂದ ಕಪ್ಪಗಾಗಿದ್ದ ಚರ್ಮ ಶೀಘ್ರವೇ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ.

ಮುಖದ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ನಿವಾರಕವಾಗಿ

ಮುಖದ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ನಿವಾರಕವಾಗಿ

ಮುಖದ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್‌ಗಳೆಂಬ ಕಪ್ಪು ಮತ್ತು ಬಿಳಿ ಚುಕ್ಕೆಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಶಕ್ತಿ ಹಾಲಿಗಿದೆ. ಇದಕ್ಕಾಗಿ ಕೆಲವು ಬಾದಾಮಿಗಳನ್ನು ಹಾಲಿನಲ್ಲಿ ನುಣ್ಣಗೆ ಅರೆದು ಲೇಪನ ತಯಾರಿಸಿ. ಈ ಲೇಪನವನ್ನು ಬಿಳಿ ಮತ್ತು ಕಪ್ಪು ಚುಕ್ಕೆಗಳ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷಗಳ ವರೆಗೆ ಒಣಗಲು ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ.

ಎಣ್ಣೆ ಜಿಡ್ಡು ನಿವಾರಿಸುವ ಟೋನರ್ ನಂತೆ

ಎಣ್ಣೆ ಜಿಡ್ಡು ನಿವಾರಿಸುವ ಟೋನರ್ ನಂತೆ

ಚರ್ಮದ ಎಣ್ಣೆಜಿಡ್ಡನ್ನು ನಿವಾರಿಸುವ ಟೋನರ್ ರೂಪದಲ್ಲಿ ಹಾಲು ಹಲವಾರು ವರ್ಷಗಳಿಂದ ಬಳಸಲ್ಪಡುತ್ತಾ ಬಂದಿದೆ. ಚರ್ಮದ ಎಣ್ಣೆ ಜಿಡ್ಡು ಮತ್ತು ಲೇಪನ ನಿವಾರಿಸಲು ಒಂದು ಹತ್ತಿಯುಂಡೆಯನ್ನು ಹಸಿ ಅಥವಾ ತಣ್ಣನೆಯ ಹಾಲಿನಲ್ಲಿ ಮುಳುಗಿಸಿ ಮುಖದ ಚರ್ಮದ ಮೇಲೆ ನಸುವಾದ ಒತ್ತಡದೊಂದಿಗೆ ಒರೆಸಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಮೊಡವೆಗಳಿಂದ ಕಾಪಾಡುವ ನಿವಾರಕದಂತೆ

ಮೊಡವೆಗಳಿಂದ ಕಾಪಾಡುವ ನಿವಾರಕದಂತೆ

ಮೊಡವೆಗಳಿಂದ ದೂರವಿರಲು ಹಾಲು ಉತ್ತಮ ಪೋಷಣೆ ನೀಡುತ್ತದೆ. ಚರ್ಮದಿಂದ ಎಣ್ಣೆ ಜಿಡ್ಡು ಪಸೆ ಹಾಗೂ ಚರ್ಮದ ಆಳದಿಂದ ಕಲ್ಮಶಗಳನ್ನು ನಿವಾರಿಸುವ ಮೂಲಕ ಮೊಡವೆಗಳಾಗದಂತೆ ತಡೆಯುತ್ತದೆ ಹಾಗೂ ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನೂ ನಿವಾರಿಸುತ್ತದೆ.

ಮೊಡವೆಗಳಿಂದ ಕಾಪಾಡುವ ನಿವಾರಕದಂತೆ

ಮೊಡವೆಗಳಿಂದ ಕಾಪಾಡುವ ನಿವಾರಕದಂತೆ

ಇದಕ್ಕಾಗಿ ಹಸಿ ಹಾಲಿನಲ್ಲಿ ಅದ್ದಿದ್ದ ಹತ್ತಿಯುಂಡೆಯನ್ನು ಮೊಡವೆಗಳಿರುವ ಸ್ಥಳದಲ್ಲಿ ಕೊಂಚ ಒತ್ತಿ ಒರೆಸಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಆದರೆ ಟವೆಲ್ಲಿನಿಂದ ಮೃದುವಾಗಿ ಒತ್ತಿ ಒಣಗಿಸಿ, ಒರೆಸಲು ಹೋಗಬೇಡಿ.

ಹಾಲು ಮತ್ತು ಜೇನು

ಹಾಲು ಮತ್ತು ಜೇನು

ಸ್ವಲ್ಪ ಹಾಲನ್ನು ತೆಗೆದುಕೊ೦ಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಅದನ್ನು ಒ೦ದು ಪೇಸ್ಟ್ ನ ರೂಪಕ್ಕೆ ತ೦ದುಕೊಳ್ಳಿರಿ. ಫಲಿತಾ೦ಶವನ್ನು ಮತ್ತಷ್ಟು ಉತ್ತಮಗೊಳಿಸಲು ಈ ಮಿಶ್ರಣಕ್ಕೆ ಒ೦ದಿಷ್ಟು ಸ್ಟ್ರಾಬೆರಿ ಅಥವಾ ಬಾಳೆಹಣ್ಣುಗಳನ್ನು ಜಜ್ಜಿ ಸೇರಿಸಿರಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿರಿ. ಅದು ಕೂದಲಲ್ಲಿ ಒಣಗಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ಒ೦ದೂವರೆ ಗಂಟೆಯಷ್ಟು ಕಾಲಾವಧಿಯು ಕಳೆದ ಬಳಿಕ ನಿಮ್ಮ ಕೇಶರಾಶಿಯನ್ನು ನೀರಿನಿ೦ದ ತೊಳೆಯಿರಿ.

X
Desktop Bottom Promotion