For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆ ಕೂಡ ಕೋಮಲತೆಯಿಂದ ಕೂಡಿರಲಿ

By Deepak
|

ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು, ಕೂದಲು ತುಂಡಾಗುವಿಕೆ, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು ಮತ್ತು ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ. ಇದಕ್ಕೆ ಮುಖ್ಯ ಕಾರಣ ಕೂದಲಿನ ಮೇಲೆ ವಿಪರೀತ ರಾಸಾಯನಿಕಗಳನ್ನು ಬಳಕೆ ಮಾಡುವುದಾಗಿರುತ್ತದೆ.

ಈ ರಾಸಾಯನಿಕಗಳು ಕೂದಲನ್ನು ದುರ್ಬಲ ಮಾಡಿ ಅವುಗಳು ತುಂಡಾಗುವಂತೆ ಮಾಡುವುದರ ಜೊತೆಗೆ, ಆವುಗಳ ತುದಿ ಸಹ ಮೊಂಡಾಗುವಂತೆ ಮಾಡುತ್ತವೆ. ಆದರೆ ಕೂದಲು ಬುಡದಿಂದಲೇ ತುಂಡಾಗುವ ಸಮಸ್ಯೆ ಇತ್ತೀಚೆಗೆ ಎಲ್ಲರನ್ನೂ ದೀರ್ಘವಾಗಿ ಕಾಡುತ್ತಿದೆ.

ಒಮ್ಮೆ ಈ ಮೂಲ ಸಮಸ್ಯೆಗಳನ್ನು ಸರಿಯಾಗಿ ಗಮನಿಸಿ ಚಿಕಿತ್ಸೆ ಪಡೆದರೆ ಅಥವಾ ಸಮಸ್ಯೆಯನ್ನು ನಿವಾರಿಸಿದರೆ, ಮತ್ತೆ ಕೂದಲು ಹಾಳಾಗುವ ಸಾಧ್ಯತೆಯೇ ಇರುವುದಿಲ್ಲ. ನಿಮ್ಮ ನಿತ್ಯ ಜೀವನದ ಸಮಸ್ಯೆಗಳು ಸಹ ಕೂದಲು ತುಂಡಾಗುವುದಕ್ಕೆ ಸಹಾಯ ಮಾಡುತ್ತವೆ. ಹೇರ್ ಡ್ರೈಯರ್, ಹೇರ್ ಸ್ಟ್ರೈಟ್‌ನರ್, ಒದ್ದೆಯಾಗಿರುವಾಗ ಕೂದಲನ್ನು ಬಾಚಿಕೊಳ್ಳುವುದು ಮತ್ತು ನಿಮ್ಮ ಕೂದಲನ್ನು ಟ್ವಿಸ್ಟ್ ಮಾಡಿಕೊಳ್ಳುವುದು ಹೀಗೆ ಹಲವಾರು ಕ್ರಮಗಳು ನಿಮ್ಮ ಕೂದಲನ್ನು ಹಾಳು ಮಾಡುತ್ತವೆ. ದಿನನಿತ್ಯ ಶಾಂಪೂ ಬಳಕೆಯ ಹಿಂದಿರುವ ಕರಾಳ ಸತ್ಯ!

ನಿಮ್ಮ ಸೂಕ್ಷ್ಮವಾದ ತ್ವಚೆಯನ್ನು ನೀವು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತೀರೋ, ಹಾಗೆ ನಿಮ್ಮ ಕೂದಲನ್ನು ಸಹ ಕಾಪಾಡಿಕೊಳ್ಳಿ. ಕೂದಲು ಸಹ ತುಂಬಾ ಸೂಕ್ಷ್ಮವಾಗಿದ್ದು, ಇದು ಸಹ ಹಾನಿಗೊಳಗಾಗುತ್ತದೆ ಅಥವಾ ತುಂಡಾಗುತ್ತದೆ. ವಾರಕ್ಕೊಮ್ಮೆ ನಿಮ್ಮ ಕೂದಲಿಗೆ ಬಿಸಿ ಎಣ್ಣೆಯನ್ನು ಲೇಪಿಸಿ ಮತ್ತು ಪ್ರತಿದಿನ ತಲೆಗೆ ಸ್ನಾನ ಮಾಡಬೇಡಿ.

ಪ್ರತಿದಿನ ಸ್ನಾನ ಮಾಡುವುದರಿಂದ ನಿಮ್ಮ ಕೂದಲಿನಲ್ಲಿರುವ ಸ್ವಾಭಾವಿಕ ಎಣ್ಣೆಗಳು ಹಾಳಾಗುತ್ತವೆ ಮತ್ತು ನಿಮ್ಮ ಕೂದಲು ಸಿಕ್ಕು ಹಾಗು ಒಣ ಕೂದಲಾಗುತ್ತದೆ. ಬನ್ನಿ ಅದಕ್ಕಾಗಿ ನಾವು ಇಂದು ನಿಮಗಾಗಿ ಕೆಲವು ಸಲಹೆಗಳನ್ನು ನೀಡುತ್ತೇವೆ. ಇವುಗಳನ್ನು ಪಾಲಿಸಿ, ನಿಮ್ಮ ಕೂದಲನ್ನು ಹಾನಿಯಾಗುವುದರಿಂದ ತಪ್ಪಿಸಿ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

ಕೂದಲನ್ನು ಪ್ರತಿದಿನ ತೊಳೆಯಬೇಡಿ

ಕೂದಲನ್ನು ಪ್ರತಿದಿನ ತೊಳೆಯಬೇಡಿ

ತಲೆ ಸ್ನಾನವನ್ನು ವಾರ ಪೂರ್ತಿ ಮಾಡಬೇಡಿ. ಬದಲಿಗೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾಡಿ. ಕೂದಲನ್ನು ಅಧಿಕವಾಗಿ ತೊಳೆಯುವುದರಿಂದ ಕೂದಲಿನ ಬುಡವು ಒಣಗುತ್ತದೆ ಮತ್ತು ಅದರಲ್ಲಿರುವ ಸ್ವಾಭಾವಿಕ ಎಣ್ಣೆಗಳು ನಿರ್ಮೂಲನೆಯಾಗುತ್ತವೆ. ಆದ್ದರಿಂದ ನಿಮ್ಮ ಕೂದಲು ಹಾನಿಗೊಳಗಾಗುತ್ತದೆ.

ನಿಮ್ಮ ಶಾಂಪೂಗಳ ಲೇಬಲ್ ಪರೀಕ್ಷಿಸಿ

ನಿಮ್ಮ ಶಾಂಪೂಗಳ ಲೇಬಲ್ ಪರೀಕ್ಷಿಸಿ

ಸೋಡಿಯಂ ಲಾರಿಯಲ್ ಸಲ್ಫೇಟ್ ಎಂಬ ರಾಸಾಯನಿಕವನ್ನು ಸೋಪ್ ಮತ್ತು ಡಿಟರ್ಜೆಂಟ್ ಅಲ್ಲದೆ ಶಾಂಪೂಗಳಲ್ಲಿ ಸಹ ಬಳಸಲಾಗುತ್ತದೆ. ಇದು ನಿಮ್ಮ ಕೂದಲನ್ನು ಒಣಗಿಸುತ್ತದೆ ಮತ್ತು ಹಾನಿ ಮಾಡುತ್ತದೆ.ಆದ್ದರಿಂದ ಸಲ್ಫೇಟ್ ಮುಕ್ತ ಶಾಂಪೂವನ್ನೇ ಖರೀದಿಸಿ. ಕೊಳ್ಳುವ ಮೊದಲು ಅದರ ಲೇಬಲನ್ನು ಓದುವ ಅಭ್ಯಾಸವಿರಿಸಿಕೊಳ್ಳಿ.

ಯಾವಾಗಲು ಕಂಡೀಶನರ್ ಬಳಸಿ

ಯಾವಾಗಲು ಕಂಡೀಶನರ್ ಬಳಸಿ

ಕೂದಲು ತೊಳೆದ ನಂತರ ಕಂಡೀಶನರ್ ಬಳಸುವುದನ್ನು ಮರೆಯಬೇಡಿ. ಇದು ಕೂದಲನ್ನು ಮೃದು ಮಾಡುತ್ತದೆ ಮತ್ತು ತುಂಡಾಗುವಿಕೆಯಿಂದ ತಡೆಯುತ್ತದೆ. ಕಂಡೀಶನರ್ ಕೂದಲು ಮತ್ತಷ್ಟು ಹಾನಿಯಾಗುವುದನ್ನು ತಡೆಯುತ್ತದೆ. ಜೊತೆಗೆ ತಲೆ ಬಾಚುವಾಗ ಇದು ಕೂದಲಿಗೆ ಹಾನಿಯಾಗದಂತೆ ಮಾಡುತ್ತದೆ.

ಬ್ಲೋ ಡ್ರೈಯಿಂಗ್ ಮಾಡಬೇಡಿ

ಬ್ಲೋ ಡ್ರೈಯಿಂಗ್ ಮಾಡಬೇಡಿ

ಬ್ಲೋ ಡ್ರೈಯರ್‌ಗಳಿಂದ ಬರುವ ಬಿಸಿ ಗಾಳಿಯು ಕೂದಲಿಗೆ ಹಾನಿಯುಂಟು ಮಾಡಿ, ಅದನ್ನು ತುಂಡು ಮಾಡಲು ಸಹಕರಿಸುತ್ತದೆ. ಜೊತೆಗೆ ಇದು ಕೂದಲಿನಲ್ಲಿರುವ ಸ್ವಾಭಾವಿಕ ಎಣ್ಣೆಯನ್ನು ನಾಶ ಮಾಡುತ್ತದೆ. ಇದರಿಂದ ಕೂದಲು ಸಿಕ್ಕಾಗುತ್ತದೆ ಮತ್ತು ಒಣಗುತ್ತದೆ. ಮತ್ತಷ್ಟು ಹಾಳಾಗುವುದನ್ನು ತಡೆಯಲು ಕೂದಲನ್ನು ಯಾವಾಗಲು ಸ್ವಾಭಾವಿಕವಾಗಿ ಒಣಗಿಸಿ.

 ಕೂದಲನ್ನು ಕರ್ಲಿಂಗ್ ಮತ್ತು ಸ್ಟ್ರೈಟ್‌ನಿಂಗ್ ಮಾಡಿಸಬೇಡಿ

ಕೂದಲನ್ನು ಕರ್ಲಿಂಗ್ ಮತ್ತು ಸ್ಟ್ರೈಟ್‌ನಿಂಗ್ ಮಾಡಿಸಬೇಡಿ

ಕರ್ಲಿಂಗ್ ಮತ್ತು ಸ್ಟ್ರೈಟೆನಿಂಗ್ ಮಾಡಲು ಕೂದಲಿಗೆ ಬಿಸಿಯಾಗಿರುವ ಸಾಧನಗಳನ್ನು ಬಳಸುತ್ತಾರೆ. ಇವುಗಳು ನಿಮ್ಮ ಕೂದಲನ್ನು ನಿರ್ಜೀವ ಮಾಡುತ್ತವೆ ಮತ್ತು ಹೊಳೆಯದಂತೆ ಮಾಡುತ್ತವೆ. ನಿಜವಾಗಿ ಇಂತಹ ಸಾಧನಗಳು ಆ ಸಮಯಕ್ಕೆ ಸರಿ ಎಂದು ತೋರಬಹುದು. ಆದರೆ ಇವುಗಳನ್ನು ಬಳಸಿದ ಕೇವಲ 15 ದಿನಕ್ಕೆ ಇವು ನಿಮ್ಮ ಕೂದಲನ್ನು ಹಾಳು ಮಾಡುತ್ತವೆ.

ಒದ್ದೆ ಕೂದಲನ್ನು ಬಾಚಬೇಡಿ

ಒದ್ದೆ ಕೂದಲನ್ನು ಬಾಚಬೇಡಿ

ಕೂದಲು ಒದ್ದೆಯಾಗಿರುವಾಗ ಬಾಚಲು ಹೋಗಬೇಡಿ. ಅದರಿಂದ ಖಂಡಿತ ನಿಮ್ಮ ಕೂದಲು ತುಂಡಾಗುತ್ತದೆ. ಜೊತೆಗೆ ಇದು ನಿಮ್ಮ ಕೂದಲಿನ ತುದಿಗಳು ಒಡೆಯುವಂತೆ ಮಾಡುತ್ತವೆ. ಕೂದಲು ಒಣಗಿದ ಮೇಲೆ ಅದನ್ನು ಬಾಚಿ. ಈ ಸಲಹೆಗಳನ್ನು ಪಾಲಿಸಿ ನಿಮ್ಮ ಕೂದಲು ಮತ್ತಷ್ಟು ಹಾನಿಗೊಳಗಾಗುವುದನ್ನು ತಡೆಯಿರಿ.

English summary

Simple Ways To Prevent Hair Breakage

Hair breakage is a common problem among both women and men. Due to the excessive usage of chemical products hair shafts get weak and fragile so they break and also develop split ends. Have a look at some ways to protect your hair from damage and to make them healthy.
X
Desktop Bottom Promotion