For Quick Alerts
ALLOW NOTIFICATIONS  
For Daily Alerts

ಚಿಕ್ಕವಯಸ್ಸಿಗೇ ಬೊಕ್ಕ ತಲೆಯಾದೀತು, ಎಚ್ಚರ!

By C.M.Prasad
|

"ಹುಲ್ಲಿಲ್ಲದ ಬಯಲು, ಎಲೆಯಿಲ್ಲದ ಗಿಡ ಅಥವಾ ಕೂದಲಿಲ್ಲದ ತಲೆ ನಿಜಕ್ಕೂ ಅಸಹ್ಯಕರ" - ಓವಿಡ್.

ಹೌದು, ಒಂದು ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು 100 ಕೂದಲುಗಳಷ್ಟನ್ನು ಜನರು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಕೆಲೂ ಕೆಲವೊಮ್ಮೆ 100 ಕ್ಕಿಂತ ಅಧಿಕ ಕೂದಲೆಳೆಗಳು ದಿನನಿತ್ಯ ಸುಖಾಸುಮ್ಮನೆ ಉದುರುತ್ತಿವೆ. ಕೇಶ ತಜ್ಞರು ಹೇಳುವ ಪ್ರಕಾರ, ಕೂದಲು ಕಾರಣವಿಲ್ಲದೆ ಹೆಚ್ಚು ಉದುರುತ್ತಿರುವುದಕ್ಕೆ ಕಾರಣ ಕೂದಲ ಅಸಮರ್ಪಕ ಆರೈಕೆ ಹಾಗೂ ಕೆಟ್ಟ ಅಭ್ಯಾಸಗಳನ್ನು ಅನುಸರಿಸುತ್ತಿರುವುದು. ಈಗಿನ ವೇಗದ ಬದುಕಿನಲ್ಲಿ ಒತ್ತಡದಿಂದ ಹೊರಬರಲು ಅನೇಕ ಕೆಟ್ಟ ಅಭ್ಯಾಸಗಳಾದ ಧೂಮಪಾನ, ಮಾದಕ ವಸ್ತುಗಳ ಚಟ ಇತ್ಯಾದಿಗಳನ್ನು ಹೆಚ್ಚಾಗಿ ಅನುಸರಿಸುತ್ತಿರುವುದು. ಬೊಕ್ಕ ತಲೆ: ಮನೆ ಮದ್ದಿರುವಾಗ ಚಿಂತೆ ಏತಕ್ಕೆ?

ಈ ಕೆಟ್ಟ ಅಭ್ಯಾಸಗಳು ಒಳಗಿನಿಂದ ದೇಹಕ್ಕೆ ಪರಿಣಾಮ ಬೀರುವುದಲ್ಲದೇ ನಮ್ಮ ಹೊರ ಸೌಂದರ್ಯವನ್ನು ಕುಗ್ಗಿಸುತ್ತದೆ. ಈ ದುರಾಭ್ಯಾಸಗಳಿಗೆ ದಾಸರಾಗಿ ಕೆಟ್ಟ ಪದ್ಧತಿಗಳನ್ನು ಅನುಸರಿಸುತ್ತಿರುವುದರಿಂದ ಅತಿ ಚಿಕ್ಕ ವಯಸ್ಸಿಗೆ ಕೂದಲುಗಳೆಲ್ಲ ಉದುರಿ, ದಿನಕಳೆದಂತೆ ಬೋಳು ತಲೆಯಾಗಲು ಕಾರಣವಾಗುತ್ತಿದೆ. ಈ ದುರಾಭ್ಯಾಸಗಳನ್ನು ನಿಲ್ಲಿಸದಿದ್ದರೆ ನಿಮ್ಮ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತೀರಿ ಜೋಕೆ. ಇದು ನಿಮಗೆ ಸಕಾಲವಾಗಿದ್ದು, ಚಿಕ್ಕವಯಸ್ಸಿನಲ್ಲೇ ಕೂದಲು ಉದುರುವಿಕೆಯನ್ನು ತಡೆಯುವುದು ತುಂಬಾ ಅವಶ್ಯಕವಾಗಿದ್ದು, ಇದಕ್ಕೆ ಪೂರಕವಾಗಿರುವ ಕೆಲವು ಸಂಗತಿಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಮುಂದೆ ಓದಿ...

ಯೋಗ್ಯವಲ್ಲದ ಶಾಂಪೂ ಬಳಕೆ

ಯೋಗ್ಯವಲ್ಲದ ಶಾಂಪೂ ಬಳಕೆ

ತಮ್ಮ ಕೂದಲ ಆರೈಕೆಗೆ ಯೋಗ್ಯವಲ್ಲದ ಶಾಂಪೂವನ್ನು ಅನೇಕ ಜನ ಬಳಸುತ್ತಿರುವುದು ಚಿಕ್ಕ ವಯಸ್ಸಿನಲ್ಲೇ ಕೂದಲ ಹೆಚ್ಚು ಉದುರಿವಿಕೆಗೆ ಮುಖ್ಯ ಕಾರಣ. ನಿಮ್ಮ ಕೂದಲುಗಳು ಮೃದುವಾಗಿದ್ದಲ್ಲಿ, ಸೌಮ್ಯಯುಕ್ತ ಶಾಂಪೂವನ್ನು ಬಳಸಬೇಕು. ಇದರಿಂದ ನಿಮ್ಮ ಕೇಶವು ಸದೃಢಗೊಳ್ಳುತ್ತದೆ. ರಾಸಾಯನಿಕಯುಕ್ತ ಶಾಂಪೂ ಬಳಕೆಯನ್ನು ಅನುಸರಿಸದಿರಿ. ಇದರಿಂದ ದಿನಕಳೆದಂತೆ ಕೂದಲುಗಳಿಗೆ ಹಾನಿಕಾರಕ.

ಹೆಚ್ಚು ಸುಡುವ ಬಿಸಿ ನೀರಿನ ಬಳಕೆ

ಹೆಚ್ಚು ಸುಡುವ ಬಿಸಿ ನೀರಿನ ಬಳಕೆ

ಹೆಚ್ಚು ಸುಡುವ ಬಿಸಿ ನೀರಿನಿಂದ ಕೂದಲುಗಳಿಗೆ ಸ್ನಾನ ಮಾಡುವುದು ಬೇಗ ಬೋಳು ತಲೆ ಹೊಂದಲು ಕಾರಣವಾಗುತ್ತದೆ. ಹೆಚ್ಚು ಬಿಸಿನೀರಿನ ಬಳಕೆಯಿಂದ ಕೂದಲಿನಲ್ಲಿರುವ ಸ್ವಾಭಾವಿಕ ಜಿಡ್ಡನ್ನು ಹೋಗಲಾಡಿಸಿ, ಕೇಶವು ಒಣಗಿ ಅದರ ಕಾಂತಿಯು ಕುಗ್ಗುವಂತೆ ಮಾಡುತ್ತದೆ. ಇದರಿಂದ ಕೂದಲನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಳ್ಳುತ್ತೀರಿ. ಜೋಕೆ!

ಗಡುಸು ನೀರಿನ ಮೇಲೆ ಹೆಚ್ಚು ಪ್ರೀತಿ

ಗಡುಸು ನೀರಿನ ಮೇಲೆ ಹೆಚ್ಚು ಪ್ರೀತಿ

ಗಡುಸು ನೀರಿನ ಹೆಚ್ಚು ಬಳಕೆಯಿಂದ ನಿಮ್ಮ ಸೌಮ್ಯವಾದ ಕೇಶವನ್ನು ನಾಶಪಡಿಸುತ್ತದೆ. ಈ ನೀರು ನಿಮ್ಮ ನೆತ್ತಿಯ ಚರ್ಮವನ್ನು ಹಾನಿಗೊಳಿಸಿ ಕೂದಲ ಬೇರಿನ ದೃಢತೆಯನ್ನು ಕುಗ್ಗಿಸಿ ಕೂದಲುಗಳು ಬೇಗ ಉದುರುವಂತೆ ಮಾಡುತ್ತದೆ. ತಲೆ ಕೂದಲನ್ನು ತೊಳೆಯುವಾಗ ಖನಿಜಯುಕ್ತ ಅಥವಾ ಸಿಹಿ ನೀರಿನ್ನು ಬಳಸುವುದು ಹೆಚ್ಚು ಸೂಕ್ತ

ಹೆಚ್ಚುಚ್ಚು ಕೂದಲ ಆರೈಕೆಯ ಉತ್ಪನ್ನಗಳ ಬಳಕೆ

ಹೆಚ್ಚುಚ್ಚು ಕೂದಲ ಆರೈಕೆಯ ಉತ್ಪನ್ನಗಳ ಬಳಕೆ

ಇದೊಂದು ಕೆಟ್ಟ ಅಭ್ಯಾಸವಾಗಿದ್ದು, ಕೂದಲ ಆರೈಕೆಯ ಉತ್ಪನ್ನಗಳನ್ನು ಹೆಚ್ಚು ಬಳಸುವುದರಿಂದ ಕೂದಲ ಬೇರುಗಳು ಬೇಗ ನಾಶಗೊಂಡು ಚಿಕ್ಕ ವಯಸ್ಸಿನಲ್ಲಿಯೇ ಬೋಳು ತಲೆಯಾಗಲು ಕಾರಣವಾಗುತ್ತದೆ. ನಿಮಗೆ ಕೇಶವನ್ನು ಪೋಷಿಸುವ ಇಚ್ಛೆಯಿದ್ದಲ್ಲಿ ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಿದ ಅಂಶವನ್ನು ಕೂದಲಿಗೆ ಬಳಸಿ.

ಸೂರ್ಯನನ್ನು ದೂರಲೇಬೇಕು

ಸೂರ್ಯನನ್ನು ದೂರಲೇಬೇಕು

ನಿಮ್ಮ ಕೇಶವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುವುದು ಅವಶ್ಯಕ. ಬಿಸಿಲಿನ ತಾಪದಿಂದ ತಲೆಯ ಚರ್ಮದಲ್ಲಿರುವ ತೇವಾಂಶವು ಹೀರಿಕೊಂಡು ಕೂದಲುಗಳು ಒಣಗಲು ಹಾಗೂ ಅಶಕ್ತವಾಗಲು ಕಾರಣವಾಗುತ್ತದೆ. ಇದರಿಂದ ಬೇಗ ತಲೆ ಬೋಳಾಗುತ್ತದೆ.

ಔಷಧಿಗಳನ್ನು ಬಳಸುವುದು

ಔಷಧಿಗಳನ್ನು ಬಳಸುವುದು

ಕೆಲವು ಔಷಧೀಯ ಪದ್ಧತಿಗಳನ್ನು ಅನುಸರಿಸುತ್ತಿರುವುದರಿಂದ ಕೇಶವು ಬೇಗ ಉದುರಲು ಕಾರಣವಾಗುತ್ತಿದೆ. ಮತ್ತೊಂದು ಕಡೆ ಮಹಿಳೆಯರು ಸಂತಾನುತ್ಪತ್ತಿಯನ್ನು ತಡೆಯಲು ಸಂತಾನ ನಿರೋಧಕ ಮಾತ್ರೆಗಳನ್ನು ಹೆಚ್ಚು ಬಳಸುತ್ತಿರುವುದು ಸಹ ಕೂದಲ ಉದುರುವಿಕೆಯನ್ನು ಹೆಚ್ಚಿಸುತ್ತಿದೆ.

 ಒತ್ತಡವೇ ನಿಜವಾದ ಶತ್ರು

ಒತ್ತಡವೇ ನಿಜವಾದ ಶತ್ರು

ಮಾನವ ದೇಹದ ಮೇಲೆ ಸತತವಾಗಿ ಒತ್ತಡ ಹೇರಿದಲ್ಲಿ ತಲೆಯು ಬೇಗ ಬೋಳಾಗಲಿದ್ದು, ಇದೊಂದು ಕೆಟ್ಟ ಅಭ್ಯಾಸವೇ ಸರಿ. ತಜ್ಞರು ಹೇಳುವಂತೆ, ಅತ್ಯಂತ ಒತ್ತಡದಿಂದ ಕೂದಲ ಉದುರುವಿಕೆ ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳು ಬರಲು ಕಾರಣವಾಗುತ್ತದೆ. ಆದ್ದರಿಂದಲೇ ನಿಮ್ಮ ಜೀವನಶೈಲಿಯನ್ನು ಆರೋಗ್ಯವಾಗಿರಿಸಲು ಒತ್ತಡದ ಅಭ್ಯಾಸದಿಂದ ದೂರವಿರಿ.

English summary

Habits That Makes You Bald At A Young Age

In is estimated that humans lose up to 100 stands of hair in a day. And in some cases, it becomes more severe when more than a 100 strands simply fall out. According to hair experts, it is believed that the sole reason behind rapid hair loss is poor hair hygiene and bad habits. Most of us live a sedentary lifestyle filled with harmful habits like smoking, drug addictions, stress etc..
X
Desktop Bottom Promotion