For Quick Alerts
ALLOW NOTIFICATIONS  
For Daily Alerts

ಕೂದಲು ಉದುರದಿರಲು ತೆಂಗಿನ ಹಾಲಿನಿಂದ ಮದ್ದು

|

ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಅದೇ ರೀತಿಯಲ್ಲಿ ಕೂದಲು ಉದುರುವಿಕೆಯನ್ನು ತಡೆಯಲು ತೆಂಗಿನ ಹಾಲನ್ನು ಬಳಸಿದರೆ ಸಾಕು ಎಂಬ ವಿಷಯ ಗೊತ್ತಿದೆಯೇ?

ನಿಮ್ಮ ಕೂದಲು ಉದುರುತ್ತಿದ್ದರೆ ತೆಂಗಿನ ಹಾಲನ್ನು ಹಚ್ಚಿ ನೋಡಿ ಫಲಿತಾಂಶ ನೀವೇ ಕಾಣುವಿರಿ. ತೆಂಗಿನ ಹಾಲನ್ನು ಮಾತ್ರ ತಲೆಗೆ ಹಚ್ಚಬಹುದು ಅಥವಾ ತಾಜಾ ತೆಂಗಿನ ಹಾಲನ್ನು ಈ ಕೆಳಗಿನ ವಸ್ತುಗಳ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿ ಕೂದಲು ಉದುರುವಿಕೆಯನ್ನು ತಡೆಯಬಹುದು.

Treat Hair Fall With Coconut Milk

ತೆಂಗಿನ ಹಾಲು ಮತ್ತು ಜೇನು: ತೆಂಗಿನ ಹಾಲನ್ನು ಹಿಂಡಿ ಅದಕ್ಕೆ ಜೇನನ್ನು ಮಿಶ್ರಣ ಮಾಡಿ 35 ನಿಮಿಷದ ಬಳಿಕ ಶ್ಯಾಂಪೂ ಹಾಕಿ ತಲೆ ತೊಳೆಯಿರಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವುದು ನಿಲ್ಲತ್ತದೆ.

ತೆಂಗಿನ ಹಾಲು, ಮೊಸರು ಮತ್ತು ನಿಂಬೆ ರಸ: ತಲೆ ಕೂದಲು ಉದುರುವುದರ ಜೊತೆಗೆ ಹೊಟ್ಟಿನ ಸಮಸ್ಯೆ ಇರುವವರು ಈ ಮದ್ದನ್ನು ಪ್ರಯೋಗ ಮಾಡಬಹುದು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬನ್ನಿ.

ತೆಂಗಿನ ಹಾಲು ಮತ್ತು ನೆಲ್ಲಿಕಾಯಿ:
ತೆಂಗಿನ ಹಾಲನ್ನು , ಬಿಸಿ ಮಾಡಿದ ನೆಲ್ಲಿಕಾಯಿ ಎಣ್ಣೆಯ ಜೊತೆ ಮಿಶ್ರಣ ಅದನ್ನು ತಲೆಗೆ ಹಚ್ಚಬೇಕು. ಈ ವಿಧಾನವನ್ನು ಅನುಸರಿಸುವವರು ವಾರದಲ್ಲಿ 3 ಬಾರಿಯಾದರೂ ಮಾಡಿದರೆ ಬೇಗನೆ ಫಲಿತಾಂಶ ಕಾಣಬಹುದು.

ತೆಂಗಿನ ಹಾಲು ಮತ್ತು ಮೆಂತೆ: ಮೆಂತೆಯನ್ನು ಅರೆದು ಪೇಸ್ಟ್ ರೀತಿಯಲ್ಲಿ ಮಾಡಿ ಅದನ್ನು ತೆಂಗಿನ ಹಾಲಿನ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿ 20 ನಿಮಿಷ ಬಿಟ್ಟು ನಂತರ ತಲೆ ತೊಳೆಯಿರಿ.

ಈ ವಿಧಾನವು ತಲೆ ಕೂದಲು ಉುದುರುವುದನ್ನು ತಡೆಯುತ್ತದೆ.

English summary

Treat Hair Fall With Coconut Milk | Tips For Care | ತೆಂಗಿನ ಹಾಲಿನಿಂದ ತಡೆಯಿರಿ ಕೂದಲು ಉದುರುವಿಕೆಯನ್ನು | ಕೂದಲಿನ ಾರೈಕೆಗೆ ಕೆಲ ಸಲಹೆಗಳು

We all know the benefits of massaging hair with hot coconut oil. Did you know that you can treat hair fall by using coconut milk as well? Applying fresh coconut oil nourishes your hair and can help you treat hair fall and scalp problems.
X
Desktop Bottom Promotion