For Quick Alerts
ALLOW NOTIFICATIONS  
For Daily Alerts

ಸಿಗರೇಟ್ ಸೇದಿದರೆ ತಲೆ ಬೋಳಾಗುತ್ತೆ, ಹುಷಾರ್!

By Super
|
Smoking Leads to Baldness
ನಿಮ್ಮ ತಲೆ ಕೂದಲು ತುಂಬಾ ಉದುರುತ್ತಿದೆಯಾ? ಹಾಗಾದರೆ ನಿಮ್ಮ ಕೈಲಿರುವ ಸಿಗರೇಟ್ ಕೂಡ ಇದಕ್ಕೆ ಕಾರಣವಾಗಿರಬಹುದು. ಹೌದು. ಸಿಗರೇಟ್ ಸೇದಿದರೆ ತಲೆ ಕೂದಲುದುರಿ ಬೋಳಾಗುವ ಸಾಧ್ಯತೆ ಹೆಚ್ಚು.

ಪುರುಷರಲ್ಲಿ ಕಾಣಿಸಿಕೊಳ್ಳುವ ಬಾಲ್ಡ್ ನೆಸ್ ಸಮಸ್ಯೆಗೂ ಸಿಗರೇಟ್ ಸೇದುವುದಕ್ಕೂ ಹೆಚ್ಚು ಸಂಬಂಧವಿದೆ. ಪುರುಷರಿಗಷ್ಟೇ ಅಲ್ಲ, ಸಿಗರೇಟ್ ಸೇದುವ ಮಹಿಳೆಯರಿಗೂ ಇದು ಅನ್ವಯಿಸುತ್ತದೆ.

ಸಿಗರೇಟ್ ನಿಂದ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದೆ, ಆದರೆ ಕೂದಲಿಗೂ ಸಿಗರೇಟ್ ಗೂ ಎಲ್ಲಿದೆ ಸಂಬಂಧ ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತರ. ಧೂಮಪಾನದಿಂದ ದೇಹದಲ್ಲಿನ ರಕ್ತಸಂಚಲನದ ಮೇಲೆ ಪರಿಣಾಮ ಬೀರುತ್ತದೆ. ಈ ರಕ್ತಸಂಚಲನದ ಏರು ಪೇರು ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತದೆ.

ಸಿಗರೇಟ್ ನಲ್ಲಿ ಸುಮಾರು 4000 ಹಾನಿಕರ ಕೆಮಿಕಲ್ ಗಳನ್ನು ಬಳಸಲಾಗಿರುತ್ತದೆ. ಧೂಮಪಾನದಿಂದ ದೇಹಕ್ಕೆ ಸೇರಿಕೊಳ್ಳುವ ಈ ವಿಷಕಾರಿ ಅಂಶಗಳು ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಅದರಲ್ಲೂ ಸಿಗರೇಟ್ ನಲ್ಲಿರುವ ಅತ್ಯಂತ ಹಾನಿಕಾರಕ ನಿಕೊಟಿನ್ ಮತ್ತು ಕಾರ್ಬನ್ ಮೊನೊಕ್ಸೈಡ್ ರಕ್ತದ ಮೂಲಕ ಸಾಗಣೆಯಾಗುವ ಆಮ್ಲಜನಕ ಮಟ್ಟವನ್ನು ಕುಗ್ಗಿಸಿ ಚಿಕ್ಕವಯಸ್ಸಿಗೆ ಬಿಳಿಕೂದಲಾಗುವ ಸಮಸ್ಯೆ ಮತ್ತು ಬೋಳಾಗುವ ಸಮಸ್ಯೆಗೆ ಕಾರಣವಾಗುತ್ತದೆ. ಕೆಲವೊಂದು ಕೂದಲಿನ ಸಮಸ್ಯೆಗಳು ವಂಶವಾಹಿಯಾಗಿದ್ದರೂ ಸಿಗರೇಟ್ ಸೇವನೆ ಈ ಸಮಸ್ಯೆಗಳಿಗೆ ಪ್ರಚೋದಕ ಎನ್ನುವುದನ್ನು ಮರೆಮಾಚುವಂತಿಲ್ಲ.

English summary

Smoking Leads to Baldness | Cigarette and Hair loss | ತಲೆ ಬೋಳಾಗಲು ಧೂಮಪಾನ ಕಾರಣ

Smoking is not only injurious to health, it can also affect your hair. Smoking may lead to baldness also. Here we will discuss how smoking leads to baldness. Take a look.
Story first published: Friday, March 30, 2012, 16:29 [IST]
X
Desktop Bottom Promotion