For Quick Alerts
ALLOW NOTIFICATIONS  
For Daily Alerts

ಕೂದಲಿಗೆ ನ್ಯಾಚುರಲ್ ಕಂಡೀಶನರ್ ಹೇಗೆ?

|
Natural Hair Conditioners Treatment
ವಯಸ್ಸು ಯಾವುದಾದರಿರಲಿ, ಎಲ್ಲರಿಗೂ ಕೂದಲನ್ನು ಆಕರ್ಷಿತವಾಗಿಟ್ಟುಕೊಳ್ಳಬೇಕೆಂಬ ಕಾಳಜಿ ಇದ್ದೇ ಇರುತ್ತೆ. ಕೂದಲು ಸೊಂಪಾಗಿ ಆರೋಗ್ಯವಾಗಿರಬೇಕೆಂದು ಬಯಸುವವರು ಕೆಮಿಕಲ್ ಮಿಶ್ರಿತ ಸಾಧನಗಳಿಗೆ ಮೊರೆಹೋಗದೆ, ಮನೆಯಲ್ಲೇ ಕೂದಲನ್ನು ಆರೈಕೆ ಮಾಡಿಕೊಂಡರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತೆ.

ಮನೆಯಲ್ಲೇ ಕೂದಲಿಗೆ ಕಂಡೀಶನಿಂಗ್ ನೀಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

1. ಆಲಿವ್ ಅಥವಾ ಕೊಬ್ಬರಿ ಎಣ್ಣೆ: ಈ ಎರಡೂ ಎಣ್ಣೆಗಳು ನಿಮ್ಮ ಕೂದಲಿಗೆ ಒಳ್ಳೆಯ ಕಂಡೀಶನರ್ ನಂತೆ ಕೆಲಸ ನಿರ್ವಹಿಸುತ್ತವೆ. ರಜಾ ಇದ್ದಾಗ ಸಂಜೆ ವೇಳೆ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ ತಲೆಯನ್ನು ಪೂರ್ತಿ ತೆಳುಬಟ್ಟೆಯಿಂದ ಮುಚ್ಚಿ ಮುಂಜಾನೆ ಎದ್ದು ಸ್ನಾನ ಮಾಡಬೇಕು.

2. ಬೆಣ್ಣೆ ಹಣ್ಣು ಮತ್ತು ಆಲಿವ್ ಎಣ್ಣೆ: ಒಂದು ಬಟ್ಟಲಿನಲ್ಲಿ ಅವಕಾಡೊ (ಬೆಣ್ಣೆ ಹಣ್ಣು) ಹಾಕಿ ಚೆನ್ನಾಗಿ ಹಿಸುಕಿ ಪೇಸ್ಟ್ ನಂತೆ ಮಾಡಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಬೆರೆಸಿ ಚೆನ್ನಾಗಿ ಕದಡಿಸಬೇಕು. ಇದನ್ನು ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ನಂತರ ತೊಳೆದುಕೊಂಡರೆ ಕೂದಲು ಮೃದು ಮತ್ತು ಸೊಂಪಾಗಿ ಬೆಳೆಯುತ್ತದೆ.

3. ಮೊಟ್ಟೆ ಮತ್ತು ನೀರಿನ ಕಂಡೀಶನರ್: ಒಂದು ಮೊಟ್ಟೆಯನ್ನು ನೀರಿಗೆ ಬೆರೆಸಿಕೊಳ್ಳಬೇಕು. ಇದನ್ನು ತಲೆಯ ಬುಡಕ್ಕೆ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿಕೊಂಡು 15-30 ನಿಮಿಷ ಬಿಟ್ಟು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಮೊಟ್ಟೆ ವಾಸನೆ ಹೋಗುವಂತೆ ಚೆನ್ನಾಗಿ ತೊಳೆಯಬೇಕು. ಹೀಗೆ ಮಾಡಿದರೆ ಕೂದಲು ನೈಸರ್ಗಿಕವಾಗಿ ಮಿರುಗುವಂತೆ ಮಾಡುತ್ತದೆ.

ಈ ಮೇಲಿನ ಕೆಲವು ಸಲಹೆಗಳನ್ನು ಅನುಸರಿಸಿ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡಬಹುದು.

English summary

Natural Hair Conditioners Treatment | Hair Care Tips | ಕೂದಲಿಗೆ ನೈಸರ್ಗಿಕ ಕಂಡೀಶನರ್ | ಕೂದಲಿನ ಪೋಷಣೆಗೆ ಟಿಪ್ಸ್

Despite age factor, both men and women crave to have healthy and shining hair. It is advised not to experiment too many products on your hair. Hence it"s suggested by the experts to use natural hair care products. Take a look at some of the best home – made hair conditioners, which can really work-out magic in your dull and unhealthy hair.
Story first published: Friday, October 7, 2011, 15:16 [IST]
X
Desktop Bottom Promotion