For Quick Alerts
ALLOW NOTIFICATIONS  
For Daily Alerts

ಬಿಯರ್ ನಿಂದ ನಿಮ್ಮ ಕೂದಲಿಗೆ ಹೇಳಿ ಚಿಯರ್ಸ್

|
Hair care
ಬಿಯರ್ ಕೇವಲ ಕುಡಿಯೋದಕ್ಕೆ ಮಾತ್ರವಲ್ಲ, ಕೂದಲಿಗೂ ಒಳ್ಳೆ ಟಾನಿಕ್. ಬಿಯರ್ ಕೂದಲಿಗೆ ನೈಸರ್ಗಿಕ ಕಂಡೀಶರ್ ನಂತೆ ಬಳಕೆಯಾಗುತ್ತದೆ. ಹೊಳಪಿನೊಂದಿಗೆ ದಟ್ಟ ಕೂದಲನ್ನೂ ಕೊಡುವ ಬಿಯರ್ ಅನ್ನು ಬಳಸಿ ನಿಮ್ಮ ಕೂದಲನ್ನೂ ಪೋಷಣೆ ಮಾಡಿಕೊಳ್ಳಿ.

ಬಿಯರ್ ಕೂದಲಿಗೆ ಯಾವ ರೀತಿ ಉಪಯೋಗವಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಬಹುದು:
1. ಕೂದಲಿಗೆ ಬಿಯರ್ ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ ನಂತರ ಅದನ್ನು ಬಿಸಿ ನೀರಿನಿಂದ ತೊಳೆದುಕೊಂಡರೆ ಕೂದಲಿಗೆ ನೈಸರ್ಗಿಕ ಕಂಡೀಶನರ್ ಇದ್ದಂತೆ.

2. ನಿಮ್ಮ ಕೂದಲು ದಟ್ಟವಾಗಿ ಮತ್ತು ಹೊಳೆಯುವಂತೆ ಕಾಣಬೇಕೆಂದರೆ ಬಿಯರ್ ಜೊತೆ ಆಪಲ್ ಸೈಡರ್ ವಿನೆಗರ್ ನೊಂದಿಗೆ ಬೆರೆಸಿಕೊಂಡು ಕೂದಲಿಗೆ ಶಾಂಪೂ ಹಾಕಿದ ನಂತರ ಹಚ್ಚಿಕೊಳ್ಳಬೇಕು.

3. ರಾತ್ರಿಯಿಡೀ ಬಿಯರ್ ಬಾಟಲಿಯ ಮುಚ್ಚುಳವನ್ನು ತೆಗೆದಿರಿಸಿ ನಂತರ ಅದನ್ನು ಒಂದೆರಡು ನಿಮಿಷ ಬಿಸಿ ಮಾಡಿ ಅದಕ್ಕೆ 3-4 ಹನಿ ನಿಂಬೆ ರಸ ಸೇರಿಸಿ ಕೂದಲಿಗೆ ಹಚ್ಚಿ 15 ನಿಮಿಷ ಬಿಟ್ಟು ಚೆನ್ನಾಗಿ ತೊಳೆದುಕೊಳ್ಳಬೇಕು. ಆಗ ಕೂದಲು ದಟ್ಟವಾಗಿ ಮತ್ತು ಹೊಳಪಾಗಿ ಕಾಣುತ್ತದೆ.

4. ನೀರಿನೊಂದಿಗೆ ನಿಂಬೆರಸ, ಬಿಯರ್, ವಿನೆಗರ್ ಬೆರೆಸಿ ಶಾಂಪೂ ನಂತರ ಹಚ್ಚಿಕೊಂಡು 10 ನಿಮಿಷ ಬಿಟ್ಟು ನಂತರ ಚೆನ್ನಾಗಿ ತೊಳೆದುಕೊಳ್ಳಬೇಕು.

5. ಶಾಂಪೂನೊಂದಿಗೆ ಬಿಯರ್ ಬೆರೆಸಿ ಹಚ್ಚಿಕೊಂಡರೆ ಕೂದಲು ಮೃದುವಾಗುವುದಲ್ಲದೆ ಕೂದಲು ಬುಡದಿಂದಲೇ ಬಲಗೊಳ್ಳುವಂತೆ ಮಾಡುತ್ತದೆ.

ಬಿಯರ್ ನಲ್ಲಿರುವ ಮ್ಯಾಗ್ನೀಶಿಯಂ, ಪೊಟಾಶಿಯಂ ಮತ್ತು ಮಾಲ್ಟೋಸ್ ಕೂದಲನ್ನು ಸಂಪೋಷಿತಗೊಳಿಸುತ್ತದೆ. ಇದರಲ್ಲಿನ ಬಯೋಟಿನ್ ಕೂದಲು ಉದುರುವುದನ್ನು ಕಡಿಮೆಗೊಳಿಸಿ ಹೊಟ್ಟನ್ನೂ ತಡೆಗಟ್ಟುತ್ತದೆ ಹಾಗೂ ಮಾಲ್ಟೋಸ್ ಮತ್ತು ವಿಟಮಿನ್ ಸಿ ಕೂದಲು ಹೊಳೆಯುವಂತೆ ಮಾಡುತ್ತದೆ.

English summary

Beer benefits | Beer and hair care | Beer natural conditioner | ಬಿಯರ್ ಬಳಕೆ | ಬಿಯರ್ ಮತ್ತು ಕೂದಲಿನ ಪೋಷಣೆ | ಬಿಯರ್ ನೈಸರ್ಗಿಕ ಕಂಡೀಶನರ್

Beer either alone or with other ingredients can be used as a natural hair conditioner. So don't throw the last few drops left in the beer. Check out some tips to use beer for hair care.
Story first published: Tuesday, August 9, 2011, 11:41 [IST]
X
Desktop Bottom Promotion