For Quick Alerts
ALLOW NOTIFICATIONS  
For Daily Alerts

ಬೊಕ್ಕತಲೆ ಸಮಸ್ಯೆ ನಿಮ್ಮನ್ನೂ ಕಾಡಬಹುದು!

|
Men hair care
ಅತಿಯಾದ ಒತ್ತಡ, ಕೆಲಸ, ಕೂದಲೆಡೆಗಿನ ನಿರ್ಲಕ್ಷ್ಯ ಅಥವಾ ವಂಶವಾಹಿಯಿಂದ ಪುರುಷರಲ್ಲಿ ತಲೆಗೂದಲುದುರುವ ಸಮಸ್ಯೆ ಕಾಡುತ್ತದೆ. ಅದರಲ್ಲೂ 25-35 ರ ವಯೋಮಿತಿಯವರಲ್ಲಿ ಬೊಕ್ಕತಲೆ ಮತ್ತು ಬೇಗನೆ ನೆರೆ ಕೂದಲು ಬರುವ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯಿರುವ ಪುರುಷರಿಗೆ ಕೆಲವೊಂದು ಸುಲಭ ಸಲಹೆಯನ್ನು ಇಲ್ಲಿ ನೀಡಲಾಗಿದೆ.

ಕೂದಲುದುರುವಿಕೆ ತಡೆಯಲು ಪುರುಷರು ಅನುಸರಿಸಬೇಕಾದ ಮಾರ್ಗ:

* ಮೃದುವಾದ ಪೋಷಣೆ: ಕೂದಲು ದೇಹದಷ್ಟು ಸದೃಢವಲ್ಲ. ಆದ್ದರಿಂದ ಕೂದಲನ್ನು ಮೃದುವಾಗಿ ಪೋಷಿಸಬೇಕು. ಅದರಲ್ಲೂ ಕೂದಲು ತೇವವಿದ್ದಾಗ ಗಟ್ಟಿಯಾದ ಬಟ್ಟೆಯಿಂದ ಗಡುಸಾಗಿ ಒರೆಸಬಾರದು. ಇದು ಬೆಳೆಯುತ್ತಿರುವ ಕೂದಲನ್ನೂ ಕಿತ್ತುಹಾಕಿ ಕೂದಲಿಗೆ ಹಾನಿಯುಂಟು ಮಾಡುತ್ತದೆ. ಸ್ನಾನವಾದ ನಂತರ ಮೆತ್ತನೆ ಬಟ್ಟೆಯಲ್ಲಿ ತಲೆ ಒಣಗಿಸುವುದೇ ಸೂಕ್ತ ಮಾರ್ಗ.

* ಬೆರಳನ್ನೇ ಬಾಚಣಿಕೆ ಮಾಡಿಕೊಳ್ಳಿ: ತೇವಗೊಂಡಿರುವ ಕೂದಲನ್ನು ಬಾಚಣಿಕೆಯಲ್ಲಿ ಬಾಚುವುದರಿಂದ ಕೂದಲು ಕಿತ್ತು ಬರುವುದು ಗ್ಯಾರಂಟಿ. ಆದ್ದರಿಂದ ಅದು ಒಣಗುವವರೆಗಾದರೂ ಕೇವಲ ಕೈಯ್ಯ ಬೆರಳುಗಳನ್ನಷ್ಟೇ ಉಪಯೋಗಿಸಿಕೊಂಡು ಕೂದಲ ಸಿಕ್ಕನ್ನು ಸರಿಪಡಿಸಿಕೊಂಡರೆ ಉತ್ತಮ.

* ಹೇರ್ ಕಟ್: ಪುರುಷರು ತಮ್ಮ ತಲೆಗೂದಲನ್ನು ತುಂಡಾಗಿ ಕತ್ತರಿಸಿಕೊಳ್ಳುವುದೇ ಒಳ್ಳೆಯದು. ಚಿಕ್ಕ ಕೂದಲಿದ್ದರೆ ಅದನ್ನು ಸಂಬಾಳಿಸುವುದೂ ಕೂಡ ಸುಲಭ. ಇದರಿಂದ ಸ್ನಾನವಾದ ನಂತರ ಕೂದಲು ಬೇಗನೆ ಒಣಗುತ್ತದೆ. ಕೂದಲನ್ನು ತುಂಡಾಗಿ ಕತ್ತರಿಸಿ ಸ್ಟೈಲಿಶ್ ಆಗೂ ಕಾಣಿಸಿಕೊಳ್ಳಬಹುದು.

* ಕೂದಲಿನ ಉತ್ಪನ್ನಗಳನ್ನು ತ್ಯಜಿಸಿ: ನಿಮ್ಮ ಕೂದಲು ತುಂಬಾ ತೆಳುವಾಗುತ್ತಿದ್ದರೆ ನೀವು ಹೇರ್ ಸ್ಟ್ರೇಟನಿಂಗ್ ಅಥವಾ ಕರ್ಲಿಂಗ್ ಮಾಡಿಕೊಳ್ಳುತ್ತಿರುವುದೂ ಕಾರಣವಾಗಬಹುದು. ಸ್ಟೈಲಿಂಗ್ ಉತ್ಪನ್ನಗಳಾದ ಜೆಲ್, ಹೇರ್ ಕಲರ್, ಪೇಸ್ಟ್ ಮುಂತಾದುವುಗಳು ಕೆಮಿಕಲ್ ಒಳಗೊಂಡಿರುವುದರಿಂದ ನಿಮ್ಮ ಕೂದಲಿಗೆ ಸಮಸ್ಯೆ ತಂದೊಡ್ಡಬಹುದು. ಆದ್ದರಿಂದ ಹೆಚ್ಚು ಉತ್ಪನ್ನಗಳನ್ನು ಬಳಸದಿದ್ದರೆ ಉತ್ತಮ.

* ಎಣ್ಣೆ ಎಂಬ ನೈಸರ್ಗಿಕ ಮದ್ದು: ಕೂದಲಿಗೆ ಪೋಷಣೆ ನೀಡುವುದರಲ್ಲಿ ಮನೆ ಮದ್ದಿನಷ್ಟು ಇನ್ನಾವುದೂ ಪರಿಣಾಮಕಾರಿಯಾಗುವುದಿಲ್ಲ. ಸೂಕ್ತ ಎಣ್ಣೆಯಿಂದ ಕೂದಲ ಬುಡವನ್ನು ಮಸಾಜ್ ಮಾಡಿಕೊಂಡರೆ ಸಾಕು, ಅಲ್ಲಿಗೆ ಕೂದಲಿನ ಸಮಸ್ಯೆ ಪರಿಹಾರಗೊಳ್ಳುತ್ತದೆ. ಅಷ್ಟಕ್ಕೂ ಉತ್ಪನ್ನಗಳನ್ನು ಬಳಸಲೇಬೇಕೆಂದಿದ್ದಲ್ಲಿ ಅವುಗಳಲ್ಲಿ ಕೂದಲುದುರುವಿಕೆ ತಡೆಯುವ ಅಂಶ 'ಮೈನಾಕ್ಸಿಡಿಲ್' ಇರುವುದನ್ನು ಖಚಿತಪಡಿಸಿಕೊಂಡು ಖರೀದಿಸಿ.

English summary

How to prevent baldness in men | Hair care tips for men | ಪುರುಷರಲ್ಲಿ ಬೊಕ್ಕತಲೆ ಸಮಸ್ಯೆ ನಿವಾರಣೆ ಹೇಗೆ | ಕೂದಲುದುರುವಿಕೆಗೆ ಸಲಹೆ

Men ranging from the age 25-35 face severe hair loss, baldness and premature greying because of many reasons. Today, let’s introduce all men out there to a few hair care tips on how take a good care and avoid baldness. Take a brief look.
Story first published: Wednesday, August 17, 2011, 17:08 [IST]
X
Desktop Bottom Promotion