For Quick Alerts
ALLOW NOTIFICATIONS  
For Daily Alerts

ಆಕರ್ಷಕ ಉಗುರಿಗಾಗಿ ಬೆರಳಿನ ತುದಿಯ ಆರೈಕೆ ಹೀಗಿರಲಿ

|

ಒಬ್ಬ ವ್ಯಕ್ತಿಯ ಆಕರ್ಷಕ ಲುಕ್‌ಗೆ ಉಗುರುಗಳು ಮತ್ತಷ್ಟು ಬೆರಗು ನೀಡುತ್ತದೆ ಎಂಬುವುದಂತೂ ಸತ್ಯ. ನೀಟಾಗಿ ಕತ್ತರಿಸಿ, ಅದಕ್ಕೊಂದು ಶೇಪ್‌ ನೀಡಿದ ಆಕರ್ಷಕವಾದ ಉಗುರುಗಳು ನೋಡುಗರ ಗಮನವನ್ನು ಸೆಳೆಯುವುದು, ಹಾಗೂ ಬೆಳ್ಳಗಿನ ಉಗುರುಗಳು ಆರೋಗ್ಯದ ಸಂಕೇತವೂ ಹೌದು. ನಮ್ಮ ತ್ವಚೆ ಆರೈಕೆಗೆ ಎಷ್ಟು ಗಮನ ಕೊಡುತ್ತೇವೆ, ಅಷ್ಟೇ ಗಮನ ಉಗುರುಗಳ ಆರೈಕೆಗೂ ನೀಡಬೇಕಾಗುತ್ತದೆ.

Caring Cuticles

ಇನ್ನು ಚಳಿಗಾಲದ ಪ್ರಭಾವ ತ್ವಚೆ ಮೇಲೆ ಮಾತ್ರವಲ್ಲ, ಬೆರಳುಗಳ ತುದಿ ಮೇಲೂ ಬೀಳುವುದು, ತುಂಬಾ ಚಳಿ ಇರುವಾಗ ಬೆರಳಿನ ತುದಿಯಲ್ಲಿ ನೋವು ಉಂಟಾಗುವುದು, ಇನ್ನು ಬೆರಳಿನ ತುದಿಯಲ್ಲಿ ಕೊಳೆ ಸೇರಿಕೊಂಡರೆ ಉಗುರುಗಳೂ ಹಾಳಾಗುವುದು. ಆದ್ದರಿಂದ ಬಿಳುಪಾದ, ಆಕರ್ಷಕ ಉಗುರು ಬೇಕೆನ್ನುವವರು ಬೆರಳಿನ ತುದಿಯ ಆರೋಗ್ಯಕ್ಕೆ ಗಮನ ಕೊಡುವುದು ಒಳ್ಳೆಯದು.

ಇನ್ನು ಕೆಲವರಿಗೆ ಉಗುರಿನ ಕೆಳಗಡೆ ತೆಳು ಚರ್ಮ ಕಿತ್ತು ಬರುವುದು, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ರೀತಿ ಉಂಟಾಗುತ್ತದೆ. ಬೆರಳಿನ ಸಮಸ್ಯೆ ತಡೆಗಟ್ಟಿ, ಆಕರ್ಷಕವಾದ ಉಗುರಗಳನ್ನು ಪಡೆಯಲು ಬೆರಳಿನ ತುದಿಯ ಆರೈಕೆ ಹೀಗಿರಲಿ.

1. ವಾರಕ್ಕೊಮ್ಮೆ ನಿಮ್ಮ ಉಗುರಿಗಳಿಗೆ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡಿ

1. ವಾರಕ್ಕೊಮ್ಮೆ ನಿಮ್ಮ ಉಗುರಿಗಳಿಗೆ ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್ ಮಾಡಿ

ಮೆನಿಕ್ಯೂರ್ ಹಾಗೂ ಪೆಡಿಕ್ಯೂರ್‌ ಮಾಡಲು ನೀವೇನು ಪಾರ್ಲರ್‌ಗೆ ಹೋಗಬೇಕಾಗಿಲ್ಲ. ನೀವು ಮನೆಯಲ್ಲಿಯೇ ಮಾಡಬಹುದು. ವಾರದಲ್ಲಿ ರಜೆ ಇದ್ದಾಗ ಬಿಸಿ ನೀರು ಮಾಡಿ ಅದನ್ನು ಬಕೆಟ್‌ಗೆ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು ಇಡಿ, ಮತ್ತೊಂದು ಪಾತ್ರೆಯಲ್ಲಿ ನೀರು ಹಾಕಿ ಕೈಬೆರಳನ್ನು ಹಾಕಿ, ತುಂಬಾ ರಿಲ್ಯಾಕ್ಸ್ ಬೇಕೆಂದರೆ ಎರಡು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ, ಕುರ್ಚಿಯಲ್ಲಿ ಆರಾಮವಾಗಿ ಕೂತು ಕೈಗಳನ್ನು ಆ ನೀರಿನಲ್ಲಿ ನೆನೆಸಿ ಒಂದು 10 ನಿಮಿಷ ವಿಶ್ರಾಂತಿಯನ್ನು ಪಡೆಯಿರಿ. ನೀರು ತುಂಬಾ ಬಿಸಿ ಬೇಡ, ಉಗುರು ಬೆಚ್ಚಗೆ ಇದ್ದರೆ ಸಾಕು, ನಂತರ ಕೈ, ಕಾಲು ತೊಳೆದು, ಮೃದುವಾದ ಟವಲ್‌ನಿಂದ ಒರೆಸಿ, ಆಲ್ಕೋಹಾಲ್‌ ಫ್ರೀ ಮಾಯಿಶ್ಚರೈಸರ್ ಅಥವಾ ಯಾವುದಾದರೂ ವ್ಯಾಸೆಲೈನ್ ಹಚ್ಚಿ. ಇದರಿಂದ ಬೆರಳಿನ ತುದಿ ಸ್ವಚ್ಛವಾಗುವುದು ಹಾಗೂ ಉಗುರುಗಳು ಆಕರ್ಷಕವಾಗಿ ಕಾಣುತ್ತದೆ.

 2. ಸುವಾಸನೆ ರಹಿತ ಮಾಯಿಶ್ಚರೈಸರ್ ಬಳಸಿ

2. ಸುವಾಸನೆ ರಹಿತ ಮಾಯಿಶ್ಚರೈಸರ್ ಬಳಸಿ

ಚಳಿಗಾಲದಲ್ಲಿ ತ್ವಚೆ ಶುಷ್ಕವಾಗುವುದನ್ನು ತಡೆಗಟ್ಟಲು ತ್ವಚೆ ತೇವಾಂಶವಾಗಿರುವಂತೆ ನೋಡಿಕೊಳ್ಳಬೇಕು, ಅದಕ್ಕಾಗಿ ಮಾಯಿಶ್ಚರೈಸರ್ ಹಚ್ಚಬೇಕು, ಆದರೆ ಎಲ್ಲಾ ಬಗೆಯ ಮಾಯಿಶ್ಚರೈಸರ್‌ ಬೆರಳಿನ ತುದಿಗೆ ಒಳ್ಳೆಯದಲ್ಲ. ಸುವಾಸನೆ ರಹಿತ ಮಾಯಿಶ್ಚರೈಸರ್‌ ಚಳಿಗಾಲದಲ್ಲಿ ಉಗುರಿನ ಆರೈಕೆಗೆ ಬಳಸುವುದು ಒಳ್ಳೆಯದು. ಸುವಾಸನೆ ಇರುವ ಮಾಯಿಶ್ಚರೈಸರ್‌ನಲ್ಲಿ ಆಲ್ಕೋಹಾಲ್ (ಮದ್ಯ) ಇರುವುದರಿಂದ ಉಗುರಿಗೆ ಹಾನಿಯುಂಟಾಗುವುದು.

3. ಉಗುರಿನ ತುದಿಗೆ ಲಿಪ್‌ಬಾಮ್‌ ಹಚ್ಚಬಹುದು

3. ಉಗುರಿನ ತುದಿಗೆ ಲಿಪ್‌ಬಾಮ್‌ ಹಚ್ಚಬಹುದು

ತುಟಿಗೆ ಹಚ್ಚುವ ಲಿಪ್‌ಬಾಮ್‌ ಸಾಕು ಬೆರಳಿನ ತುದಿಯ ಆರೈಕೆ ಮಾಡಲು, ಲಿಪ್‌ಬಾಮ್‌ ಉಗುರಿನ ಹೊಳಪನ್ನು ಕೂಡ ಹೆಚ್ಚಿಸುವುದು. ಬೆರಳಿನ ತುದಿ ಚಳಿಯಿಂದಾಗಿ ಒಣಗಿದರೆ ನೋವು ಉಂಟಾಗುವುದು, ಆದ್ದರಿಂದ ಮಾಯಿಶ್ಚರೈಸರ್‌ ಅಥವಾ ಬಾಮ್‌ ಹಚ್ಚಿ ಉಗುರಿನ ಆರೈಕೆ ಮಾಡಿದರೆ ಉಗುರು ಆಕರ್ಷಕವಾಗಿ ಕಾಣುವುದು.

4. ನೇಲ್‌ಪಾಲಿಷ್ ತೆಗೆಯಲು ಎಸಿಟೋನ್ ಫ್ರೀ ನೇಲ್‌ ಪಾಲಿಷ್ ರಿಮೂವರ್ ಬಳಸಿ

4. ನೇಲ್‌ಪಾಲಿಷ್ ತೆಗೆಯಲು ಎಸಿಟೋನ್ ಫ್ರೀ ನೇಲ್‌ ಪಾಲಿಷ್ ರಿಮೂವರ್ ಬಳಸಿ

ಆಗಾಗ ನೇಲ್‌ ಪಾಲಿಷ್‌ ರಿಮೂವರ್ ಬಳಸುತ್ತಿದ್ದರೆ ಬೆರಳಿನ ತುದಿ ಹಾಳಾಗುವುದು. ಕೆಲವರಿಗೆ ಪ್ರತಿದಿನ ನೇಲ್‌ ಪಾಲಿಷ್‌ ಬದಲಾಯಿಸುವ ಅಭ್ಯಾಸವಿರುತ್ತದೆ. ಅಂಥವರು ನೇಲ್‌ಪಾಲಿಷ್‌ ರಿಮೂವರ್ ಅನ್ನು ತುಂಬಾ ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಎಸಿಟೋನ್‌ ಫ್ರೀ ನೇಲ್‌ ಪಾಲಿಷ್‌ ರಿಮೂವರ್ ಆಯ್ಕೆ ನಿಮ್ಮದಾಗಿರಲಿ. ಇನ್ನು ಆಗಾಗ ನೇಲ್‌ ಪಾಲಿಷ್‌ ಹಚ್ಚುವ ಅಭ್ಯಾಸವಿದ್ದರೆ ಚಳಿಗಾಲದಲ್ಲಿ ಸ್ವಲ್ಪ ಕಡಿಮೆ ಮಾಡಿಕೊಳ್ಳಿ. ನೇಲ್‌ ಪಾಲಿಷ್‌ ರಿಮೂವ್‌ ಮಾಡಿದ ಬಳಿಕ ಒಂದೆರಡು ದಿನ ಹಾಗೇ ಬಿಟ್ಟು ನಂತರ ನೇಲ್ ಪಾಲಿಷ್‌ ಹಚ್ಚುವುದು ಒಳ್ಳೆಯದು. ಹೀಗೆ ಮಾಡಿದರೆ ಉಗುರುಗಳು ಕಪ್ಪಾಗುವುದನ್ನು ತಡೆಯಬಹುದು.

 5. ಗ್ಲೌಸ್ ಹಚ್ಚಿ

5. ಗ್ಲೌಸ್ ಹಚ್ಚಿ

ಮನೆಯಲ್ಲಿ ಪಾತ್ರೆ ಉಜ್ಜುವಾಗ, ಯಾವುದಾದರೂ ರಾಸಾಯನಿಕ ವಸ್ತುಗಳನ್ನು ಮುಟ್ಟುವಾಗ ಗ್ಲೌಸ್ ಹಚ್ಚಿ. ಇದರಿಂದ ಕೈ ಹಾಗೂ ಉಗುರುಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೆಲವರಿಗೆ ಕೆಲವೊಂದು ಸಾಬೂನುಗಳು, ಮಾರ್ಜಕಗಳು (ಡಿಟರ್ಜೆಂಟ್‌)ಗಳನ್ನು ಬಳಸಿದಾಗ ಕೈಯ ತ್ವಚೆಯಲ್ಲಿ ಬಿರುಕು ಉಂಟಾಗುವುದು. ಅಂಥವರು ಗ್ಲೌಸ್‌ ಬಳಸಿದರೆ ಒಳ್ಳೆಯದು. ಗ್ಲೌಸ್‌ ಬೆರಳಿನ ತುದಿ ಹಾಗೂ ಉಗುರುಗಳನ್ನು ರಕ್ಷಣೆ ಮಾಡುತ್ತದೆ. ಇನ್ನು ಚಳಿಯಲ್ಲಿ ಹೊರಗಡೆ ಓಡಾಡುವಾಗ ಗ್ಲೌಸ್‌ ಧರಿಸಿದರೆ ಒಳ್ಳೆಯದು.

English summary

Tips for Caring Cuticles During the Winter

Cold and dry winds of the winter season can harm not only harm your skin, it affect your cuticles also. Here are how you can take care cuticles during winter, have a look.
Story first published: Monday, November 11, 2019, 11:57 [IST]
X
Desktop Bottom Promotion