For Quick Alerts
ALLOW NOTIFICATIONS  
For Daily Alerts

ಮದುವಣಗಿತ್ತಿಯ ಸೌಂದರ್ಯ ಹೆಚ್ಚಲು 2 ವಾರಗಳ ಮುನ್ನವೇ ಹೀಗೆ ಮಾಡಿ

|

ಸಾಂಪ್ರದಾಯಿಕ ಭಾರತೀಯ ಹೆಣ್ಣಿಗೆ ಮದುವೆ ಎಂದರೆ ಜೀವನದ ಮಹತ್ವಪೂರ್ಣ ಕ್ಷಣ. ಆ ಘಳಿಗೆಯನ್ನು ಸುಮಧುರವಾಗಿಸಬೇಕು ಎಂದು ವಧು ಮಾತ್ರವಲ್ಲ ಆಕೆಯ ಸಂಪೂರ್ಣ ಕುಟುಂಬ ಬಯಸುತ್ತದೆ. ಪ್ರತಿ ವಧುವೂ ಕೂಡ ತಾನು ಮದುವೆಯ ದಿನ ಹೀಗೆ ಕಾಣಬೇಕು,ಹಾಗೆ ಕಾಣಬೇಕು, ಆ ಸೀರೆ ಉಡಬೇಕು, ಈ ಜ್ಯುವೆಲರಿ ತೊಡಬೇಕು ಎಂಬ ಹಲವು ಕನಸು ಕಾಣುತ್ತಾಳೆ ಮತ್ತು ಅದರ ಸಾಕಾರಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಾಳೆ. ಒಟ್ಟಾರೆ ಮದುವೆಯ ದಿನ ವಧುವಿನ ಸೌಂದರ್ಯವೇ ಆ ದಿನದ ಪ್ರಮುಖ ಹೈಲೆಟ್ ಆಗಿರುತ್ತದೆ.

Skincare Treatment Every Bride Must Follow 2 Weeks Before Marriage

ಮದುವೆಯ ದಿನ ವಧು ಸುಂದರವಾಗಿ ಕಾಣಬೇಕು ಎಂದಾದರೆ ಆಕೆಯ ತಯಾರಿ ಮದುವೆಗೂ ಎರಡು ತಿಂಗಳ ಮುನ್ನವೇ ಪ್ರಾರಂವಾಗಬೇಕು. ಡಾ ಬ್ಲಾಸಮ್ ಕೊಚ್ಚರ್ ಎಂಬ ವೈದ್ಯರೊಬ್ಬರು ಈ ಬಗ್ಗೆ ನೀಡಿರುವ ಕೆಲವು ಟಿಪ್ಸ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇವರು ಇವರು ಬ್ಲೋಸಮ್ ಕೊಚ್ಚರ್ ಗ್ರೂಪ್ ಆಫ್ ಕಂಪೆನಿಯ ಚೇರ್ ಪರ್ಸನ್ ಕೂಡ ಆಗಿದ್ದಾರೆ.

ಹಾಗಾದ್ರೆ ಏನೆಲ್ಲಾ ಚಿಕಿತ್ಸೆ ಪಡೆಯಬೇಕು ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಸ್ಪಾ ಚಿಕಿತ್ಸೆ

ಸ್ಪಾ ಚಿಕಿತ್ಸೆ

ಸ್ಪಾ ಚಿಕಿತ್ಸೆಯ ಪ್ರಮುಖ ಉದ್ದೇಶ ಡಿಟಾಕ್ಸ್ ಮಾಡುವುದು, ಖನಿಜಾಂಶಗಳನ್ನು ಪುನಃ ಒದಗಿಸುವುದು, ಮತ್ತು ವಧುವಿನ ಚರ್ಮದ ಕಾಂತಿಯನ್ನು ಇನ್ನಷ್ಟು ಹೆಚ್ಚಿಸುವುದೇ ಆಗಿದೆ. ಇದು ಬಹಳ ರಿಲ್ಯಾಕ್ಸ್ ಮಾಡುವ ಮತ್ತು ಸಮಯಕ್ಕೆ ಸರಿಯಾಗಿ ವಧುವಿನ ಒತ್ತಡವನ್ನು ಕಡಿಮೆ ಮಾಡಿ ಅವಳನ್ನು ಮತ್ತಷ್ಟು ಸುಂದರವಾಗಿಸುವುದಕ್ಕೆ ನೆರವು ನೀಡುವ ಚಿಕಿತ್ಸೆಯಾಗಿದೆ. ಮದುವೆಯ ದಿನ ವಧುವಿನ ಮುಖದಲ್ಲಿ ಒತ್ತಡವಿರುವಂತೆ, ಕಾಳಾಹೀನವಾಗಿರುವಂತೆ ಕಾಣಿಸುವುದಕ್ಕೆ ಯಾರು ತಾನೆ ಇಷ್ಟ ಪಡುತ್ತಾರೆ ಹೇಳಿ?

ಡಯಟ್

ಡಯಟ್

ಮದುವೆಗೂ ಸ್ವಲ್ಪ ದಿನಗಳ ಮುಂಚೆಯೇ ನಿಮ್ಮ ಆಹಾರ ಕ್ರಮದ ಬಗ್ಗೆ ಜಾಗೃತೆ ವಹಿಸುವುದು ಬಹಳ ಮುಖ್ಯ. ಪ್ರತಿದಿನ ಬೆಳಿಗ್ಗೆ ಹದವಾದ ಬೆಚ್ಚಗಿರುವ ನೀರನ್ನು ಕುಡಿಯಿರಿ. ಆ ಮೂಲಕ ನಿಮ್ಮ ದೇಹದ ಶುದ್ಧೀಕರಣ ಪ್ರಕ್ರಿಯೆಯನ್ನು ಉತ್ತಮವಾಗಿ ಇಟ್ಟುಕೊಳ್ಳಿ. ತಾಜಾ ಹಣ್ಣಿನ ರಸಗಳ ಸೇವನೆ ಬಹಳ ಒಳ್ಳೆಯದು. ಪ್ರತಿ ದಿನ ಒಂದೆರಡು ಕೇಸರಿ ದಳಗಳನ್ನು ಸೇರಿಸಿದ ಒಂದು ಲೋಟ ಹಾಲು ಕುಡಿಯುವುದರಿಂದಾಗಿ ಚರ್ಮದ ಕಾಂತಿ ಹೆಚ್ಚಳವಾಗುತ್ತದೆ. ಅಂಜೂರ, ಖರ್ಜೂರ, ಸೇರಿದಂತೆ ಕೆಲವು ಒಣಹಣ್ಣುಗಳ ಸೇವನೆ ಮತ್ತು ಬಾದಾಮಿ ಬೀಜಗಳ ಸೇವನೆ ಬಹಳ ಒಳ್ಳೆಯದು. ಈ ಸಮಯದಲ್ಲಿ ಸಸ್ಯಾಹಾರಿ ಆಹಾರ ಸೇವನೆ ಬಹಳ ಒಳ್ಳೆಯದು.

CTOM

CTOM

ನಿಮ್ಮ ಚರ್ಮದಲ್ಲಿ ಕಾಂತಿ ಬರಲು ಸಿಟಾಮ್ ಚಿಕಿತ್ಸೆಯಿಂದ ಅತ್ಯುತ್ತಮವಾದದ್ದು ಇನ್ನೊಂದಿಲ್ಲ. ಇದರಲ್ಲಿ ಕ್ಲೀನಿಂಗ್, ಟೋನಿಂಗ್, ಆಯಿಲಿಂಗ್ ಮತ್ತು ತೇವಾಂಶ ನೀಡುವಿಕೆ ಪ್ರಕ್ರಿಯೆ ಇರುತ್ತದೆ ಮತ್ತು ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಇದು ಚರ್ಮದ ಉಸಿರಾಟ ಪ್ರಕ್ರಿಯೆಗೆ ಇನ್ನಷ್ಟು ಹೊಳಪು ನೀಡುತ್ತದೆ. ಉತ್ತಮ ಫೇಸ್ ಪ್ಯಾಕ್ ವಧುವಿನ ಚರ್ಮದ ಹೊಳಪನ್ನು ಅಧಿಕಗೊಳಿಸುತ್ತದೆ. ಹೈಡ್ರೇಟ್ ಮಾಡುವ ಪ್ಯಾಕ್ ಚರ್ಮದಲ್ಲಿ ಸರಿಯಾದ ಪ್ರಮಾಣದ ತೇವಾಂಶವಿರುವಂತೆ ನೋಡಿಕೊಳ್ಳುತ್ತದೆ.

ದೇಹದ ಸ್ಕ್ರಬ್ಬಿಂಗ್

ದೇಹದ ಸ್ಕ್ರಬ್ಬಿಂಗ್

ಬಾಡಿ ಮಸಾಜ್ ನ್ನು ವಧುವು ಮಾಡಿಸಿಕೊಳ್ಳುವುದಕ್ಕಿಂತ ಬಾಡಿ ಸ್ಕ್ರಬ್ ಮಾಡಿಸಿಕೊಳ್ಳುವುದು ಬಹಳ ಸೂಕ್ತ. ಕಿತ್ತಲೆ ಸಿಪ್ಪೆಯ ಪುಡಿ, ಗಂಧದ ಪುಡಿ ಮತ್ತು ಕೆಲವು ಗುಲಾಬಿ ದಳಗಳು ಮತ್ತು ನಾಲ್ಕರಿಂದ ಐದು ಗುಲಾಬಿ ನೀರಿನ ಹನಿ ಸೇರಿಸಿ ಸ್ಕ್ರಬ್ಬರ್ ನ್ನು ತಯಾರಿಸಿ. ನಿಮ್ಮ ದೇಹಕ್ಕೆ ಇದನ್ನು ಅಪ್ಲೈ ಮಾಡಿ ಚೆನ್ನಾಗಿ ಸ್ಕ್ರಬ್ ಮಾಡಿ. ಇದನ್ನು ಮಾಡಿಕೊಳ್ಳುವುದರಿಂದಾಗಿ ನಿಮ್ಮ ಚರ್ಮ ಹೊಳಪಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಪ್ಪಿಸಬೇಡಿ: ಚಳಿಗಾಲದಲ್ಲಿ ಚರ್ಮದ ಕಾಳಜಿ ಹೇಗಿರಬೇಕು ಎಂಬ ಬಗ್ಗೆ ಕೂಡ ನೀವು ಸರಿಯಾಗಿ ತಿಳಿದುಕೊಂಡಿರಬೇಕು.

ಕಣ್ಣಿನ ಕಾಳಜಿ

ಕಣ್ಣಿನ ಕಾಳಜಿ

ರಾತ್ರಿಯ ವೇಳೆಯಲ್ಲಿ ಹಲವು ಫಂಕ್ಷನ್ ಗಳು ಮತ್ತು ಓಡಾಟ ಇತ್ಯಾದಿಗಳಿಂದ ರಾತ್ರಿಯ ನಿದ್ದೆ ಕಡಿಮೆಯಾಗಿ ಈ ಸಮಯದಲ್ಲಿ ಡಾರ್ಕ್ ಸರ್ಕಲ್ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಹಾಗಾಗಿ ಕಣ್ಣಿಗೆ ಐಜೆಲ್ ಮತ್ತು ಗ್ಲಾಸಿ ಐ ಪ್ಯಾಕ್ ನ್ನು ಹಚ್ಚಿಕೊಳ್ಳುವುದು ಸೂಕ್ತ. ಆ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಂಡು ಕಣ್ಣಿನ ಕಾಳಜಿ ಮಾಡಿಕೊಳ್ಳಬಹುದು.

ಸ್ನಾನ ಮಾಡುವ ವಿಧಾನ:

ಸ್ನಾನ ಮಾಡುವ ವಿಧಾನ:

ವಧುವಾಗುವ ಸಮಯದಲ್ಲಿ ಅತೀ ಹೆಚ್ಚು ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಹಾಗಾಗಿ ಸ್ನಾನದ ಸಮಯದಲ್ಲಿ ಸ್ವಲ್ಪ ಮಲ್ಲಿಗೆ ಎಣ್ಣೆ ಅಥವಾ ಲ್ಯಾವೆಂಡರ್ ಹೂವಿನ ಎಣ್ಣೆಯನ್ನು ಸ್ನಾನದ ನೀರಿಗೆ ಹಾಕಿಕೊಂಡು ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಮತ್ತು ಒತ್ತಡದಿಂದ ಮುಕ್ತರಾಗಿರುವುದಕ್ಕೆ ನೆರವಾಗುತ್ತದೆ. ನಿಮ್ಮ ದೈನಂದಿನ ಚಟುವಟಿಕೆ ಉಲ್ಲಾಸಭರಿತವಾಗಿ ತುಂಬಿರುವಂತೆ ಮಾಡುವುದಕ್ಕೆ ಇದು ನೆರವು ನೀಡುತ್ತದೆ.

ಚರ್ಮದ ಕಾಳಜಿ ಮಾಡುವುದು ಮತ್ತು ಮದುವೆಗೂ ಮುನ್ನಾ ಕೆಲವು ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಮೂಲಕ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು. ಹರ್ ಜಿಂದಗಿಯನ್ನು ಟ್ಯೂನ್ ಮಾಡಿ ನೀವು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಾ ಇರಲು ಸಾಧ್ಯವಿದೆ.

Read more about: skin care bride marriage
English summary

Skincare Treatment Every Bride Must Follow 2 Weeks Before Marriage

Here are skincare treatment every brode must follow 2 weeks before marriage , read on...
X
Desktop Bottom Promotion