For Quick Alerts
ALLOW NOTIFICATIONS  
For Daily Alerts

ಕೊನೇ ಕ್ಷಣಕ್ಕೆ ಸಹಾಯಕ್ಕೆ ಬರುವ ಈ ಎಮರ್ಜನ್ಸಿ ಬ್ಯೂಟಿ ಟ್ರಿಕ್ ಗಳು

|

ನಾಳೆ ಎಲ್ಲೋ ಹೋಗ್ಬೇಕಾಗಿದೆ, ತುಂಬಾ ಚೆನ್ನಾಗಿ ರೆಡಿ ಆಗಿ ಹೋಗ್ಬೇಕು ಅಂತ ಪ್ಲಾನ್ ಹಾಕೊಂಡು ಕೂತಿರುವಾಗ್ಲೇ ಮುಖದಲ್ಲಿ ಒಂದು ಗುಳ್ಳೆ ಎದ್ದರೆ ಅದೆಷ್ಟು ಬೇಜಾರಾಗುತ್ತೆ ಅಲ್ವಾ? ಇಂತಹ ಸಮಸ್ಯೆಯನ್ನು ಹೆಚ್ಚಿನ ಹುಡುಗಿಯರು ಅನುಭವಿಸಿಯೇ ಇರ್ತಾರೆ. ಇಂತಹ ಎಮರ್ಜನ್ಸಿ ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ಹುಟ್ಟಿಕೊಳ್ಳುವಂತಹ ಕೆಲವೊಂದು ಸೌಂದರ್ಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ ಸಲಹೆಗಳು ಅಗತ್ಯವಿರುತ್ತದೆ. ಏಕೆಂದರೆ ಇಲ್ಲಿ ನಮಗೆ ಜಾಸ್ತಿ ಸಮಯ ಸಿಗೋದಿಲ್ಲ. ಅಂತಹ ಕೆಲವೊಂದು ಪರಿಹಾರಗಳನ್ನು ನಾವಿಂದು ನೀಡಲಿದ್ದೇವೆ. ಇದು ಅನಿರೀಕ್ಷಿತ ಸಮಸ್ಯೆಗೆ ತಕ್ಷಣ ಪರಿಹಾರ ನೀಡುವ ಮಾರ್ಗಗಳು.

ಅನಿರೀಕ್ಷಿತ ಸೌಂದರ್ಯ ಸಮಸ್ಯೆಗೆ ತಕ್ಷಣ ಪರಿಹಾರ ನೀಡುವ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ :

1. ಅನಿರೀಕ್ಷಿತ ಮೊಡವೆ :

1. ಅನಿರೀಕ್ಷಿತ ಮೊಡವೆ :

ಇದನ್ನು ಹೆಚ್ಚಿನವರು ಅನುಭವಿಸಿರುತ್ತಾರೆ. ನಾಳೆ ಪಂಕ್ಷನ್ ಇದೆ ಅಂದ್ರೆ ಇವತ್ತು ಮೊಡವೆ ಬಂದಿರುತ್ತೆ ಎಂ ಇದಕ್ಕೆ ತಾಜಾ ಮತ್ತು ನೈಸರ್ಗಿಕ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಐಸ್ ಕ್ಯೂಬ್ ಟ್ರೇಗೆ ಸುರಿಯಿರಿ. ಜೆಲ್ ಸ್ವಲ್ಪ ಸಮಯದವರೆಗೆ ಫ್ರೀಜ್ ಆಗಲಿ. ನಂತರ ಪಡೆಯುವ ಅಲೋವೆರಾ ಐಸ್ ಕ್ಯೂಬ್ ಗಳು ನಿಮ್ಮ ಮೊಡವೆಯನ್ನು ಶಮನ ಮಾಡುತ್ತವೆ. ಇವುಗಳನ್ನು ನೇರವಾಗಿ ಗುಳ್ಳೆಗಳ ಮೇಲೆ ಬಳಸಿ. ನೀವು ತಕ್ಷಣದ ಫಲಿತಾಂಶಗಳನ್ನು ನೋಡುತ್ತೀರಿ. ಗುಳ್ಳೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಇದನ್ನು ಪ್ರತಿದಿನ ಮಾಡಿ.

2. ಮುರಿದ ಉಗುರು:

2. ಮುರಿದ ಉಗುರು:

ಚೆನ್ನಾಗಿ ಬೆಳೆಸಿದ ಉಗುರು ಏನೋ ತಾಗಿ ಮುರಿದುಹೋದರೆ ಆದರಿಂದ ಆಗುವ ನೋವು ಆ ಹುಡುಗಿಯನ್ನೇ ಕೇಳಬೇಕು. ಅದಕ್ಕಾಗಿ ಒಂದು ಸಣ್ಣ ತುಂಡು ಟಿಸ್ಯು ಪೇಪರ್ ತೆಗೆದುಕೊಂಡು ಅದನ್ನು ನೀರಿನ ಕಲರ್ ಇರುವ ಕ್ಲಿಯರ್ ನೈಲ್ ಪಾಲಿಶ್ ಬಳಸಿ, ನಿಮ್ಮ ಮುರಿದ ಉಗುರಿನ ಮೇಲೆ ಹಚ್ಚಿ. ಒಣಗಿದ ನಂತರ, ಅದರ ಮೇಲೆ ನಿಮ್ಮ ನೆಚ್ಚಿನಬಣ್ಣದ ನೈಲ್ ಪಾಲಿಶ್ ಹಚ್ಚಿಕೊಳ್ಳಿ. ಈಗ ನಿಮ್ಮ ಉಗುರು ಮತ್ತೆ ಹೊಸದಾಗಿ ಬೆಳೆದಂತೆ ಕಾಣುವುದು.

3. ತಲೆಯ ಬೋಳು ಜಾಗ:

3. ತಲೆಯ ಬೋಳು ಜಾಗ:

ತಲೆಯಲ್ಲಿರುವ ಬೋಳು ಜಾಗಗಳನ್ನು ಸರಳವಾಗಿ ಮುಚ್ಚಿಡಲು, ನಿಮಗೆ ಸಹಾಯಕ್ಕೆ ಬರುವುದು ಮಸ್ಕರಾ ಬ್ರಷ್. ನಿಮ್ಮ ಮಸ್ಕರಾ ಬ್ರಷ್ ಬಳಸಿ, ಬೋಳಿರುವ ಜಾಗದ ಮೇಲೆ ಒಮ್ಮೆ ಹಚ್ಚಿಕೊಳ್ಳಿ. ಇದು ಒಮ್ಮೆಗೆ ನಿಮ್ಮ ತಲೆತುಂಬಾ ಕೂದಲಿದ್ದಂತೆ ಕಾಣುವಂತೆ ಮಾಡುತ್ತದೆ. ನೀವು ಬಿಗಿಯಾದ ಕೇಶಾಲಂಕಾರವನ್ನು ಬಯಸಿದಾಗ ಈ ತುರ್ತು ಹ್ಯಾಕ್ ಅನ್ನು ಬಳಸಬಹುದು ಮತ್ತು ಆ ಬೋಳು ಸ್ಥಳವನ್ನು ತಕ್ಷಣ ಅಗೋಚರವಾಗಿ ಮಾಡಬಹುದು.

4. ಕಲೆಗಳು:

4. ಕಲೆಗಳು:

ಟೂತ್ ಬ್ರಷ್ ತೆಗೆದುಕೊಂಡು ಅದರ ಮೇಲೆ ಒಂದು ಲೇಯರ್ ಟೂತ್ ಪೇಸ್ಟ್ ಹಾಗೂ ಒಂದು ಪಿಂಚ್ ಅಡುಗೆ ಸೋಡಾವನ್ನು ಸಿಂಪಡಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಕಲೆಗಳಿರುವ ಜಾಗದ ಹಚ್ಚಿ. ಯಾವುದೇ ಸಮಯವಿಲ್ಲದೇ, ನೀವು ತ್ವರಿತ ಫಲಿತಾಂಶಗಳನ್ನು ನೋಡುತ್ತೀರಿ.

5. ಸೀಳು ಮತ್ತು ಒಣ ತುಟಿಗಳು:

5. ಸೀಳು ಮತ್ತು ಒಣ ತುಟಿಗಳು:

ನಿಮ್ಮ ತುಟಿಗಳ ಗಾತ್ರಕ್ಕೆ ಅನುಗುಣವಾಗಿ ಟಿಶ್ಯೂ ಪೇಪರ್ ತುಂಡನ್ನು ತೆಗೆದುಕೊಂಡು ಆ ತುಂಡನ್ನು ಹಸಿ ಹಾಲಿನಲ್ಲಿ ಅದ್ದಿ. ಇದನ್ನು ನಿಮ್ಮ ತುಟಿಗಳ ಮೇಲೆ 3-4 ನಿಮಿಷಗಳ ಕಾಲ ಅಂಟಿಸಿ. ತ್ವರಿತವಾಗಿ ಮೃದುವಾದ ತುಟಿಗಳನ್ನು ಪಡೆಯುವುದನ್ನು ಕಾಣಬಹುದು.

English summary

List of Emergency Beauty Hacks Every Girl Should Know in Kannada

Here we talking about List of Emergency Beauty Hacks Every Girl Should Know in Kannada, read on
Story first published: Thursday, July 22, 2021, 18:00 [IST]
X
Desktop Bottom Promotion