For Quick Alerts
ALLOW NOTIFICATIONS  
For Daily Alerts

ಯಾವ ಸೌಂದರ್ಯ ಉತ್ಪನ್ನಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿದರೆ ಉತ್ತಮ?

|

ನಮ್ಮ ಸೌಂದರ್ಯ ಕಾಪಾಡಲು, ಹಲವಾರು ಮೇಕಪ್ ಉತ್ಪನ್ನಗಳನ್ನು ಪ್ರತಿನಿತ್ಯ ಬಳಸುತ್ತಲೇ ಇರುತ್ತೇವೆ. ಆದರೆ, ಅದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಒಂದೋ ಅಗತ್ಯಕ್ಕಿಂತ ಹೆಚ್ಚಾಗಿ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಿರುತ್ತೇವೆ. ಅದಕ್ಕಾಗಿ ನಾವಿಂದು ಯಾವ ಬ್ಯೂಟಿ ಪ್ರಾಡಕ್ಟನ್ನು, ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದರ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

ಸೌಂದರ್ಯ ಉತ್ಪನ್ನಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಫೌಂಡೇಷನ್:

ಫೌಂಡೇಷನ್:

ಫೌಂಡೇಷನ್ ಬಳಸುವಾಗ ನೀವು ಧಾರಳಾವಾಗಿರಬಹುದು. ಆದರೆ, ಕನಿಷ್ಠ ಮೊತ್ತದಲ್ಲಿ ಮುಖ ಕವರ್ ಮಾಡಲು ಪ್ರಯತ್ನಿಸಿ. ಸರಿಯಾಗಿ ಮಿಶ್ರಣ ಮಾಡುವುದು ಹೇಗೆಂದು ನಿಮಗೆ ತಿಳಿದಿದ್ದರೆ ಫೌಂಡೇಷನ್‌ನ 2 ಪಂಪ್‌ಗಳು ನಿಮ್ಮ ಮುಖ ಮತ್ತು ಕುತ್ತಿಗೆಯನ್ನು ಸಂಪೂರ್ಣವಾಗಿ ಮುಚ್ಚಲು ಸಾಕಾಗುತ್ತದೆ.

ಮಾಯಿಶ್ಚರೈಸರ್:

ಮಾಯಿಶ್ಚರೈಸರ್:

ಇದು ಕೂಡ ಅಷ್ಟೇ, ಮುಖಕ್ಕೆ ಆದ್ರತೆಯ ಅಗತ್ಯವಿರುವುದರಿಂದ, ಒಂದು ಪಂಪ್ ಬೇಕಾಗುತ್ತದೆ. ಒಂದು ವೇಳೆ ಕುತ್ತಿಗೆಗೂ ಮಾಯಿಶ್ಚರೈಸರ್ ಹಚ್ಚವುದಾದರೆ, ಒಂದೂವರೆ ಪಂಪ್ ಅಗತ್ಯವಾಗಿದೆ. ನೆನಪಿಡಿ, ನಿಮ್ಮ ಕುತ್ತಿಗೆಯನ್ನು ತೇವಗೊಳಿಸುವುದು ಮುಖದಷ್ಟೇ ಮುಖ್ಯವಾಗಿದೆ. ಇದಕ್ಕೆ ಸಮಪ್ರಮಾಣದ ಜಲಸಂಚಯನದ ಅಗತ್ಯವಿದ್ದು, ಮುಖದಂತೆ ಹೊಳೆಯುವಂತೆ ಮಾಡುತ್ತದೆ.

ಟೂತ್‌ ಪೇಸ್ಟ್:

ಟೂತ್‌ ಪೇಸ್ಟ್:

ನಮ್ಮ ಟೆಲಿವಿಷನ್ ಜಾಹೀರಾತುಗಳಲ್ಲಿ ತೋರಿಸುವ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ವೈದ್ಯರು ಶಿಫಾರಸು ಮಾಡಿದಂತೆ, ಬಾಯಿಯ ಸೂಕ್ಷ್ಮಾಣುಗಳ ವಿರುದ್ಧ ಹೋರಾಡಲು ನಿಮಗೆ ಬಟಾಣಿ ಗಾತ್ರದ ಟೂತ್‌ಪೇಸ್ಟ್ ಎಷ್ಟೋ ಸಾಕು. ನಾವು ಅಗತ್ಯಕ್ಕಿಂತ ಹೆಚ್ಚೇ ಬಳಸಿ, ವ್ಯರ್ಥ ಮಾಡುತ್ತಿದ್ದೇವೆ.

ಸುಗಂಧ ದ್ರವ್ಯ:

ಸುಗಂಧ ದ್ರವ್ಯ:

ಸುಗಂಧ ದ್ರವ್ಯಗಳಿಗೆ ಬಂದಾಗ, ಅದರ ಪರಿಮಳದ ಸಾಂದ್ರತೆಯ ಮಟ್ಟವು ಒಂದು ಪ್ರಮುಖ ಅಂಶವಾಗಿದೆ. ಸ್ಪ್ರೇ ಮಾಡಿಕೊಳ್ಳುವ ಮೊದಲು ಈ ಅಂಶವನ್ನು ಪರಿಶೀಲಿಸಿ. ಹೆಚ್ಚಿನ ಸಾಂದ್ರತೆಯಿದ್ದರೆ, ಸುಗಂಧ ದ್ರವ್ಯದ 1-2 ಸ್ಪ್ರೇಗಳು ಸಾಕು.

ಫೇಸ್ ಮಾಸ್ಕ್:

ಫೇಸ್ ಮಾಸ್ಕ್:

ಪ್ರತಿ ಚರ್ಮವು ವಿಭಿನ್ನವಾಗಿದ್ದು, ಪ್ರತಿಯೊಂದು ಚರ್ಮದ ಪ್ರಕಾರವು ಭಿನ್ನವಾಗಿರುತ್ತದೆ. ಫೇಸ್ ಮಾಸ್ಕ್‌ಗಳನ್ನು ವಾರಕ್ಕೆ 3 ಬಾರಿ ಹಾಕಿಕೊಳ್ಳಲು ವೈದ್ಯರು ಶಿಫಾರಸು ಮಾಡುತ್ತಾರೆ.

ಕಂಡೀಷನರ್:

ಕಂಡೀಷನರ್:

ಕಂಡೀಷನರ್‌ಗಳನ್ನು ಹೆಚ್ಚು ಬಳಸುವುದರಿಂದ ಕೂದಲು ಭಾರವಾಗುತ್ತದೆ. ಅದಕ್ಕೆ ಉತ್ತಮ ಉಪಾಯವೆಂದರೆ, ನಿಮ್ಮ ಕೂದಲಿನ ದಪ್ಪ ಮತ್ತು ಉದ್ದವನ್ನು ಅವಲಂಬಿಸಿ ಒಂದು ಅಥವಾ ಎರಡು ಗುಳ್ಳೆ ಗಾತ್ರ ಕಂಡಿಷನರ್ ಅನ್ನು ಬಳಸುವುದು. ಕಂಡಿಷನರ್ ನಿಮ್ಮ ಕೂದಲು ಹೇಗೆ ಕಾಣುತ್ತದೆ ಎಂಬುದರ ಮೇಲೆ ಭಾರಿ ಪರಿಣಾಮ ಬೀರುತ್ತದೆ, ಆದ್ದರಿಂದ ಬಳಸುವ ಪ್ರಮಾಣದಲ್ಲಿ ಜಾಗರೂಕರಾಗಿರಿ.

ಬ್ಲಶ್:

ಬ್ಲಶ್:

ನಿಮ್ಮ ಕೆನ್ನೆಗಳ ಮೇಲೆ ಕನಿಷ್ಠ ಪ್ರಮಾಣದ ಬ್ಲಶ್ ಹಚ್ಚುವ ಮೂಲಕ ಪ್ರಾರಂಭಿಸಿ. ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಬ್ಲಶ್ ಆಯ್ಕೆ ಮಾಡುವುದು ಅತ್ಯುತ್ತಮವಾದ ಹೊಳಪಿಗೆ ಅತ್ಯಗತ್ಯ. ಆದ್ದರಿಂದ ಅದಕ್ಕೆ ಸರಿಹೊಂದುವಂತಹ ಬ್ಲಶ್ ಆಯ್ಕೆ ಮಾಡಿ, ಮೃದುವಾಗಿ ಬಳಸಿ.

ಎಣ್ಣೆ ಹಚ್ಚುವುದು:

ಎಣ್ಣೆ ಹಚ್ಚುವುದು:

ಎಣ್ಣೆ ಹಚ್ಚುವುದು ಯುಗಯುಗಗಳಿಂದಲೂ ಅತ್ಯಗತ್ಯವಾದ ಆಚರಣೆಯಾಗಿದೆ. ಆದರೆ, ಅದನ್ನು ಹೆಚ್ಚಾಗಿ ಬಳಸುತ್ತಾರೆ. ಹೆಚ್ಚಿನ ಶಾಂಪೂ ಬಳಸಿದರೂ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ನಿಮ್ಮ ಕೂದಲಿನ ಪ್ರಕಾರ ಮತ್ತು ಉದ್ದವನ್ನು ಅವಲಂಬಿಸಿ, ಕೂದಲಿಗೆ ಮಸಾಜ್ ಮಾಡಲು ನಿಮಗೆ 1 - 2 ಚಮಚ ಎಣ್ಣೆ ಅಥವಾ ಬಹುಶಃ 1/4 ಕಪ್ ಎಣ್ಣೆ ಬೇಕಾಗುತ್ತದೆ.

ಹೇರ್ ಸ್ಪ್ರೇ:

ಹೇರ್ ಸ್ಪ್ರೇ:

ಹೇರ್ ಸ್ಪ್ರೇಗಳನ್ನು ಪ್ರತಿದಿನ ಬಳಸಬಹುದು ಆದರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಈ ಉತ್ಪನ್ನವನ್ನು ಮಿತವಾಗಿ ಬಳಸಿ ಮತ್ತು ಹೇರ್ ಸ್ಪ್ರೇನ ನಿರಂತರ ಬಳಕೆಗಾಗಿ ಕೂದಲನ್ನು ಪ್ರತಿದಿನ ತೊಳೆಯಿರಿ.

English summary

How much of a Skincare Product should you Really use in Kannada

Here we talking about How much of a skincare product should you really use in kannada, read on
Story first published: Saturday, October 30, 2021, 17:08 [IST]
X
Desktop Bottom Promotion