For Quick Alerts
ALLOW NOTIFICATIONS  
For Daily Alerts

ಅಂದವಾಗಿ ಕಾಣಬೇಕೆಂದರೆ ಗಮನಿಸಲೇಬೇಕಾದ 6 ಅಂಶಗಳಿವು

|

ಉತ್ತಮ ತ್ವಚೆ ಪಡೆಯಲು ಮಹಿಳೆಯರು ಸಾಕಷ್ಟು ಹರಸಾಹಸ ಪಡುತ್ತಿರುತ್ತಾರೆ. ವಿವಿಧ ಉತ್ಪನ್ನಗಳನ್ನು ಪ್ರಯತ್ನಿಸುವುದು, ಪಾರ್ಲರ್, ಬ್ಯೂಟಿ ಟ್ರಿಕ್ಸ್ಗಳಿಗೆ ಮೊರೆಹೋಗುವುದು ಹೀಗೆ ಹಲವಾರು ವಿಧಾನ ಅನುಸರಿಸುತ್ತಾರೆ. ಉತ್ತಮ ತ್ವಚೆಗಾಗಿ ನೀವು ಯಾವ ಸೀರಮ್‌ಗಳು ಮತ್ತು ಮಾಯಿಶ್ಚರೈಸರ್‌ಗಳನ್ನು ಅನ್ವಯಿಸಲು ಆರಿಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ಮಾತ್ರವಲ್ಲ.

ಮನೆಯಲ್ಲಿ ಉತ್ತಮ ಅಭ್ಯಾಸವನ್ನು ಸ್ಥಾಪಿಸುವುದು ಅಷ್ಟೇನಿರ್ಣಾಯಕ ಹಂತವಾಗಿದೆ. ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಜನರು ಹಿಂದೆಂದಿಗಿಗಿಂತಲೂ ಹೆಚ್ಚು ಸಮಯವನ್ನು ಮನೆಯಲ್ಲಿ ಕಳೆಯುವುದರೊಂದಿಗೆ, ನಿಮ್ಮ ಸೌಂದರ್ಯವನ್ನು ಸುಧಾರಿಸಲು ಎಷ್ಟು ಸಾಧ್ಯವೋ ಅಲ್ಲಿ ಸುಧಾರಣೆಗಳನ್ನು ಮಾಡಲು ಇದು ಸೂಕ್ತ ಸಮಯ. ಆದ್ದರಿಂದ ನಿಮಗಾಗಿ ಮನೆಯಲ್ಲಿಯೇ ಸುಲಭವಾಗಿ ಪಾಲಿಸಬಹುದಾದಂತಹ ಇದರಿಂದ ನಿಮ್ಮ ತ್ವಚೆ ಹಾಗೂ ಚರ್ಮ ಕಾಂತಿಯುತವಾಗಿ ಕಾಣುವಂತಹ ಮಾರ್ಗಗಳನ್ನು ಹೇಳಿದ್ದೇವೆ.

ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುವ ವಿಧಾನಗಳು:

1. ನಿಮ್ಮ ಚರ್ಮ ತೇವಾಂಶದಿಂದ ಇರಲು ಹ್ಯುಮಿಡಿಫೈರ್ ಬಳಸಿ:

1. ನಿಮ್ಮ ಚರ್ಮ ತೇವಾಂಶದಿಂದ ಇರಲು ಹ್ಯುಮಿಡಿಫೈರ್ ಬಳಸಿ:

ಶುಷ್ಕತೆ ನಿಮ್ಮ ಚರ್ಮದ ಶತ್ರು. ನಿಮ್ಮ ತ್ವಚೆಗೆ ಸರಿಯಾದ ಆರ್ದ್ರಕ ದೊರೆಯದೇ ಇದ್ದಾಗ, ಅದು ಹೆಚ್ಚು ತೈಲ ಉತ್ಪಾದನೆ ಹಾಗೂ ಬ್ರೇಕೌಟ್ಸ್ಗೆ ಕಾರಣವಾಗುತ್ತದೆ. ತಾಪಮಾನದಲ್ಲಿರುವ ತೇವಾಂಶವು ನಿಮ್ಮ ಚರ್ಮದ ಆರೋಗ್ಯಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಚಳಿಗಾಲದಲ್ಲಿ ನಿಮ್ಮ ಗಾಳಿಯಲ್ಲಿ ತೇವಾಂಶದ ಮಟ್ಟ ಕಡಿಮೆ ಇರುವುದರಿಂದ ಕೃತಕ ತೇವಾಂಶ ಉಂಟುಮಾಡುವ ಈ ಹ್ಯುಮಿಡಿಫೈರ್‌ನ್ನು ಬಳಸಿ. ಇದರಿಂದ ನಿಮ್ಮ ಚರ್ಮ ಒಣಗುವುದಿಲ್ಲ. ಸಾಮಾನ್ಯ ಉಷ್ಣತೆಯಲ್ಲಿ ಇರುವಂತೆ ಭಾಸವಾಗುತ್ತದೆ. ಇದರಿಂದ ನಿಮ್ಮ ತ್ವಚೆಗೆ ಅಗತ್ಯವಾದ ತೇವಾಂಶ ದೊರೆಕಿ ನಿಮ್ಮ ಚರ್ಮ ಆರೋಗ್ಯಯುತವಾಗಿರುತ್ತದೆ.

ಫೆಬ್ರವರಿ 2016 ರಲ್ಲಿ ಯುರೋಪಿಯನ್ ಅಕಾಡೆಮಿ ಆಫ್ ಡರ್ಮಟಾಲಜಿ ಮತ್ತು ವೆನೆರಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಕಡಿಮೆ ತಾಪಮಾನ ಮತ್ತು ಕಡಿಮೆ ತೇವಾಂಶವು ಚರ್ಮದ ಸಮಸ್ಯೆಗಳು ಹಾಗೂ ಅಲರ್ಜಿಗಳಿಗೆ ಕಾರಣವಾಗುತ್ತದೆ ಎಂದಿದೆ. ಅದಕ್ಕಾಗಿಯೇ ನಿಮ್ಮ ಮಲಗುವ ಕೋಣೆಯಲ್ಲಿ ಆರ್ದ್ರಕವನ್ನು ಅಥವಾ ಹ್ಯುಮಿಡಿಫೈರ್ ಬಳಸುವುದು ಒಳ್ಳೆಯದು.

2. ನಿಮ್ಮ ತಲೆದಿಂಬಿನ ಕವರ್‌ನ್ನು ರೇಷ್ಮೆಗೆ ಬದಲಾಯಿಸಿ:

2. ನಿಮ್ಮ ತಲೆದಿಂಬಿನ ಕವರ್‌ನ್ನು ರೇಷ್ಮೆಗೆ ಬದಲಾಯಿಸಿ:

ಕೇವಲ ನೀವು ಬಲಸುವ ತಲೆದಿಂಬಿನ ಕವರ್ ಒಂದು ನಿಮ್ಮ ತ್ವಚೆಗೆ ಸಮಸ್ಯೆ ಉಂಟುಮಾಡಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಈ ಸಮಸ್ಯೆ ನಿಂತಿರುವುದು ನೀವು ಮಲಗುವ ಭಂಗಿಯ ಮೇಲೆ ಹೊರತು ತಲೆದಿಂಬಿನಿಂದಲ್ಲ. ನೀವು ಒರಟಾದ ಬಟ್ಟೆಯುಳ್ಳ ತಲೆದಿಂಬಿನ ಕವರ್‌ನ್ನು ಬಳಸಿದರೆ. ನೀವು ಕೇವಲ ಒಂದೇ ಬದಿಗೊರಗಿ ದಿನವಿಡೀ ಮಲಗುವುದರಿಂದ ನಿಮ್ಮ ಮುಖದಲ್ಲಿ ಸುಕ್ಕುಗಳು ಉಂಟಾಗುತ್ತವೆ. ಇದು ನಿಮ್ಮ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ. ಅದಕ್ಕಾಗಿ ರೇಷ್ಮೆ ಬಟೆ ಅಥವಾ ಬಹಳ ಮೃದುವಾಗಿರುವ ಹತ್ತಿಯಂತಹ ತಲೆದಿಂಬಿನ ಕವರ್‌ನ್ನು ಬಳಸಿ. ಇದರಿಂದ ನಿಮ್ಮ ಮುಖದಲ್ಲಿ ಸುಕ್ಕು ಮೂಡುವ ಸಾಧ್ಯತೆ ಕಡಿಮೆಯಿರುತ್ತದೆ. ಅಷ್ಟೇ ಅಲ್ಲ, ಯಾವುದೇ ಗುಣಮಟ್ಟದ ಕವರ್ ಆಗಿರಲಿ ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಹೆಚ್ಚಿನ ಚರ್ಮವೈದ್ಯರು ವಾರಕ್ಕೊಮ್ಮೆ ತಲೆದಿಂಬಿನ ಕವರ್ ಹಾಗೂ ತಿಂಗಳಿಗೊಮ್ಮೆ ಡಿಟರ್ಜೆಂಟಿನಲ್ಲಿ ದಿಂಬನ್ನು ಸ್ವಚ್ಛಗೊಳಿಸುವಂತೆ ಶಿಫಾರಸ್ಸು ಮಾಡುತ್ತಾರೆ.

3. ಉತ್ತಮ ನಿದ್ರೆಗಾಗಿ ನಿಮ್ಮ ಮಲಗುವ ಕೋಣೆಯನ್ನು ಸರಿಯಾಗಿ ಹೊಂದಿಸಿ:

3. ಉತ್ತಮ ನಿದ್ರೆಗಾಗಿ ನಿಮ್ಮ ಮಲಗುವ ಕೋಣೆಯನ್ನು ಸರಿಯಾಗಿ ಹೊಂದಿಸಿ:

ನಿದ್ದೆ ಎಂಬುದು ಅತೀ ಮುಖ್ಯವಾದುದು. ಈ ನಿದ್ದೆಯ ಹಿಂದೆ ಅಡಗಿದೆ ಸಾಕಷ್ಟು ಆರೋಗ್ಯದ ಗುಟ್ಟುಗಳು. ಸರಿಯಾಗಿ ನಿದ್ದೆ ಮಾಡಿದರೆ ಆರೋಗ್ಯದ ಜೊತೆಗೆ ಸೌಂದರ್ಯವೂ ವೃದ್ಧಿಯಾಗುತ್ತದೆ. ಆದರೆ ಈ ನಿದ್ದೆ ಕಡಿಮೆಯಾದರೆ, ಸರಿಯಾಗಿ ನಿದ್ದೆ ಮಾಡದೇ ಇರುವುದು ಹಲವಾರು ಆರೋಗ್ಯ ಸಮಸ್ಯೆಗಳ ಜೊತೆಗೆ ನಿಮ್ಮ ತ್ವಚೆಗೂ ಸಮಸ್ಯೆಯಾಗುತ್ತದೆ. ಅಕಾಲಿಕ ಸುಕ್ಕು, ನೆರಿಗೆಗಳು, ಡಾರ್ಕ್ ಸರ್ಕಲ್, ಚರ್ಮ ಜೋತು ಬೀಳುವುದು ಇಂತಹ ಹ¯ವಾರು ಸಮಸ್ಯೆಗಳು ಉಲ್ಭಣಿಸುತ್ತವೆ. ಆದ್ದರಿಂದ ನೀವು ಸರಿಯಾಗಿ ನಿದ್ದೆ ಮಾಡಬೇಕು. ಸರಿಯಾಗಿ ನಿದ್ದೆ ಬರಲು ನಿಮ್ಮ ಮಲಗುವ ಕೋಣೆ ಸರಿಯಾಗಿರಬೇಕು. ನೀವ 60-67 ಡಿಗ್ರಿಗೆ ಒರಗಿ ಮಲಗಬೇಕು ಎಂದು ಸಂಶೋಧನೆಗಳು ತಿಳಿಸುತ್ತವೆ. ನೀವು ಮಲಗುವ ಒಂದು ಗಂಟೆಯ ಮುನ್ನ ನಿಮ್ಮ ಕೋಣೆಯ ಲೈಟ್‌ನ್ನು ಮಂದಗೊಳಿಸಬೇಕು. ಇದರಿಂದ ನಿಮ್ಮಲ್ಲಿ ನಿದ್ದೆಯ ಮಂಪರು ಮೂಡುತ್ತದೆ. ನಿಮ್ಮ ಬೆಡ್‌ಶೀಟ್, ತಲೆದಿಂಬು ಎಲ್ಲವೂ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಆಗ ಚೆನ್ನಾಗಿ ನಿದ್ದೆ ಆವರಿಸುತ್ತದೆ.

4. ಚರ್ಮಕ್ಕೆ-ಆರೋಗ್ಯಕರವಾದ ಆಹಾರಗಳನ್ನು ನಿಮ್ಮ ಫ್ರಿಜ್‌ನಲ್ಲಿಡಿ:

4. ಚರ್ಮಕ್ಕೆ-ಆರೋಗ್ಯಕರವಾದ ಆಹಾರಗಳನ್ನು ನಿಮ್ಮ ಫ್ರಿಜ್‌ನಲ್ಲಿಡಿ:

ನೀವು ಜಂಕ್ ಫುಡ್ ಅನ್ನು ಸೇವಿಸಿದ ನಂತರ ಬ್ರೇಕೌಟ್‌ಗಳಲ್ಲಿ ಹೆಚ್ಚಳವಾಗುತ್ತದೆಯೇ? ಸಂಶೋಧನೆಯ ಪ್ರಕಾರ ಬ್ರೆಡ್ ಮತ್ತು ಚಿಪ್ಸ್ನಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಅಧಿಕವಾಗಿರುವ ಆಹಾರಗಳು ಮೊಡವೆ ಸೇರಿದಂತೆ ಚರ್ಮದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಒಮೆಗಾ -3 ಮತ್ತು ಒಮೆಗಾ -6 ನಂತಹ ಅಗತ್ಯವಾದ ಕೊಬ್ಬಿನಾಮ್ಲಗಳು ಆರೋಗ್ಯಕರ ಕೋಶಗಳ ಅಡಿಪಾಯವಾಗಿದೆ. ಈ ಕೊಬ್ಬುಗಳು ಚರ್ಮದ ನೈಸರ್ಗಿಕ ತೈಲ ತಡೆಗೋಡೆ ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಚರ್ಮವನ್ನು ಯುವವಾಗಿ ಕಾಣುವಲ್ಲಿ ಮತ್ತು ಹೈಡ್ರೀಕರಿಸಿದಂತೆ ಕಾಣುವಲ್ಲಿ ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಸಿ ಯನ್ನು ಹೆಚ್ಚಿನವರು ಶಿಫಾರಸ್ಸು ಮಾಡುತ್ತಾರೆ. ಇದನ್ನು ನೈಸರ್ಗಿಕವಾಗಿ ಸೇವಿಸಿದರೂ ಅಥವಾ ಮುಖಕ್ಕೆ ಅಪ್ಲೀ ಮಾಡಿದರೂ ಸಹ ಚರ್ಮವನ್ನು ಆರೋಗ್ಯವಾಗಿಡುವ ಪ್ರಮುಖ ಉತ್ಕರ್ಷಣ ನಿರೋಧಕವಾಗಿದೆ. ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಅಂತಿಮವಾಗಿ, ಮೊಸರಿನಲ್ಲಿ ಕಂಡುಬರುವ ಪ್ರೋಬಯಾಟಿಕ್‌ಗಳು ನಿಮ್ಮ ತ್ವಚೆಯ ದಿನಚರಿಗೆ ಯೋಗ್ಯವಾದ ಸೇರ್ಪಡೆಯಾಗಿದೆ. ಪ್ರೋಬಯಾಟಿಕ್‌ಗಳು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಕರುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಕ್ಕೆ ಹೆಸರುವಾಸಿಯಾಗಿದೆ. ಮೊಡವೆ, ರೊಸಾಸಿಯಾ, ಅಟೊಪಿಕ್ ಡರ್ಮಟೈಟಿಸ್ ಮತ್ತು ಫೋಟೊಗೇಜಿಂಗ್‌ಗೆ ಸಹ ಇದು ಸಹಾಯ ಮಾಡುತ್ತದೆ.

5. ಒತ್ತಡ ನಿವಾರಣೆಗೆ ಲಘು ಅರೋಮಾಥೆರಪಿ ಮೇಣದಬತ್ತಿಗಳು:

5. ಒತ್ತಡ ನಿವಾರಣೆಗೆ ಲಘು ಅರೋಮಾಥೆರಪಿ ಮೇಣದಬತ್ತಿಗಳು:

ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆಗಳು ಅಥವಾ ಭವಿಷ್ಯದ ಬಗ್ಗೆ ಆತಂಕದ ಪರಿಣಾಮವನ್ನು ಅದರಿಂದ ನೀವು ಅನುಭವಿಸುತ್ತಿರುವ ಒತ್ತಡವನ್ನು ನಿಮ್ಮ ಮುಖದ ಮೇಲೆ ಕಾಣಬಹುದು. ಒತ್ತಡದಲ್ಲಿದ್ದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುವ ಸಮಯದಲ್ಲಿ ಒತ್ತಡವು ಚರ್ಮದ ಆರೋಗ್ಯ ಮತ್ತು ನೋಟದಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಕಾರ್ಟಿಸೋಲ್ ಚರ್ಮದಲ್ಲಿನ ಗ್ರಂಥಿಗಳಿಗೆ ಹೆಚ್ಚಿನ ಎಣ್ಣೆಯನ್ನು ಉತ್ಪಾದಿಸಲು ಪ್ರೇರೇಪಿಸುತ್ತದೆ, ಇದು ಮೊಡವೆ ಮತ್ತು ಇತರ ಸಮಸ್ಯೆಗಳಿಗೆ ಒಳಗಾಗುವಂತೆ ಮಾಡುತ್ತದೆ.

ಒತ್ತಡದ ಸಮಯದಲ್ಲಿ, ಚರ್ಮದ ಆರೈಕೆ ದಿನಚರಿಯನ್ನು ನಿರ್ಲಕ್ಷಿಸುವುದು ಅಥವಾ ಅವುಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು ಸುಲಭ. ಒತ್ತಡವನ್ನು ನಿವಾರಿಸುವ ವಿಧಾನಗಳು ಚರ್ಮ ಮತ್ತು ಒಟ್ಟಾರೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಶಾಂತ ವಾತಾವರಣವನ್ನು ಉತ್ತೇಜಿಸಲು ನೀವು ಮನೆಯ ಸುತ್ತಲೂ ಕೆಲವು ಪರಿಹಾರಗಳನ್ನು ಮಾಡಬಹುದು. ಇಲ್ಲಿ ಸುಲಭವಾದದ್ದು: ಲ್ಯಾವೆಂಡರ್‌ನಂತಹ ವಿಶ್ರಾಂತಿಗೆ ಪ್ರೇರೇಪಿಸುವ ಪರಿಮಳವನ್ನು ತುಂಬಿದ ಮೇಣದಬತ್ತಿಯನ್ನು ಬೆಳಗಿಸಿ. ಅರೋಮಾಥೆರಪಿಯು ನಿಮ್ಮ ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಉತ್ತಮ ಮನಸ್ಥಿತಿಗೆ ತರುತ್ತದೆ.

6. ಸಾಕಷ್ಟು ನೀರು ಸೇರಿಸಿ:

6. ಸಾಕಷ್ಟು ನೀರು ಸೇರಿಸಿ:

ಹೊಳೆಯುವ ಚರ್ಮಕ್ಕೆ ಅಗ್ಗದ ಮಾರ್ಗವೆಂದರೆ ಹೆಚ್ಚು ನೀರು ಕುಡಿಯುವುದು. ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಸುಕ್ಕುಗಳನ್ನು ತಡೆಯಲು ಚರ್ಮಕ್ಕೆ ಒಳಗಿನಿಂದ ಸರಿಯಾದ ಜಲಸಂಚಯನ ಅಗತ್ಯವಿರುತ್ತದೆ. ಅದಕ್ಕಾಗಿ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ನೀರಿನ ಬಳಕೆಯನ್ನು ಹೆಚ್ಚಿಸಲು, ನೀವು ಸ್ನಾನಗೃಹವನ್ನು ಬಳಸಲು ಎದ್ದಾಗಲೆಲ್ಲಾ ಒಂದು ಲೋಟ ನೀರು ಕುಡಿಯುವುದು ಅಭ್ಯಾಸವಾಗುವಂತೆ ನೋಡಿಕೊಳ್ಳಿ. ಇದರಿಂದ ನೀವು ನೀರು ಕುಡಿಯುವುದು ಹೆಚ್ಚಾಗುತ್ತದೆ. ನೀರನ್ನು ಜಾಸ್ತಿ ಕುಡಿಯುದರಿಂದ ನಿಮ್ಮ ಆರೋಗ್ಯದ ಜೊತೆಗೆ ಸೌಂದರ್ಯವು ವೃದ್ಧಿಯಾಗುತ್ತದೆ. ನೀರು ಕಡಿಮೆ ಕುಡಿದರೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದರಿಂದ ನೀರು ಸಾಕಷ್ಟು ಕುಡಿಯಿರಿ.

English summary

Easy Home Hacks That May Help Promote Healthy Skin

Here we told about Easy Home Hacks That May Help Promote Healthy Skin, read on.
X
Desktop Bottom Promotion