For Quick Alerts
ALLOW NOTIFICATIONS  
For Daily Alerts

ಮಧುಮಗಳು ತ್ವಚೆಯ ಕಾಳಜಿಯಲ್ಲಿ ಇಂಥಾ ಎಡವಟ್ಟು ಮಾಡಲೇಬೇಡಿ

|

ಮದುವೆಗೂ ಮುಂಚೆ ಚರ್ಮದ ಕಾಳಜಿ ತೆಗೆದುಕೊಳ್ಳುವಿಕೆ ಖಂಡಿತ ಜೋಕ್ ಅಲ್ಲ. ಮದುವೆಗಾಗಿ ಫೇಶಿಯಲ್ ಗಳು, ಕ್ಲೀನ್ ಅಪ್ ಗಳು ಮತ್ತು ವ್ಯಾಕ್ಸಿಂಗ್ ಗಳು ಸೇರಿದಂತೆ ಹತ್ತು ಹಲವು ಚರ್ಮದ ಕಾಳಜಿ ಮಾಡಿಕೊಳ್ಳಬೇಕಾಗಿರುವ ಪಟ್ಟಿ ನಮ್ಮಲ್ಲಿದೆ. ಆದರೆ ಇವುಗಳಲ್ಲಿ ಯಾವುದನ್ನು ಯಾವ ಕ್ರಮದಲ್ಲಿ ಮಾಡಿಕೊಳ್ಳುವುದು ಸೂಕ್ತ ಎಂಬುದು ಬಹಳ ಮುಖ್ಯವಾಗಿರುವ ಅಂಶ. ಮದುಮಗಳು ಕಂಗೊಳಿಸಬೇಕು ಎಂದರೆ ಮದುವೆಗೂ ಒಂದು ತಿಂಗಳ ಮುಂಚೆ ಈ ರೀತಿಯ ಬ್ಯೂಟಿ ಕೇರ್ ತೆಗೆದುಕೊಳ್ಳುವುದಕ್ಕೆ ಈಗಿನ ಎಲ್ಲಾ ಹುಡುಗಿಯರು ಮುಂದಾಗುತ್ತಾರೆ. ಆದರೆ ಅವರಿಗೆ ಚರ್ಮದ ವಿಷಯದಲ್ಲಿ ಈ ಸಂದರ್ಬದಲ್ಲಿ ಯಾವುದು ಮಾಡುವುದು ಸರಿ ಮತ್ತು ಯಾವುದು ಮಾಡುವುದು ತಪ್ಪು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಕೆಲವು ತಪ್ಪು ಮಾರ್ಗಗಳಿಂದಾಗಿ ಚರ್ಮ ಹಾಳಾಗಿ ನಿಮ್ಮ ಹೊಳಪು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

Beware All The Brides: Avoid These Pre-Wedding Skincare Mistakes

ಮದುಮಗಳು ಎಂದಾಕ್ಷಣ ಚರ್ಮದ ಚಿಕಿತ್ಸೆಗಾಗಿ ಹಲವು ಸಲಹೆಗಳು ಬರುವುದು ಕೂಡ ಸಹಜ. ಆದರೆ ಮದುವೆಯ ದಿನ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಕೆಲವರು ದುಬಾರಿಯಾಗಿರುವ ಮತ್ತು ಎಂದಿಗೂ ಬಳಸದ ಕೆಲವು ಚಿಕಿತ್ಸೆಗಳು ಕೆಲವರು ಮುಂದಾಗಿ ಬಿಡುತ್ತಾರೆ.

ಹೀಗೆ ತೆಗೆದುಕೊಳ್ಳುವ ಕೆಲವು ಚಿಕಿತ್ಸೆಗಳು ನಿಮ್ಮ ನಿದ್ದೆಗೆಡಿಸಿಬಿಡಬಹುದು. ಯಾಕೆಂದರೆ ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ ನಿಮ್ಮ ಮುಖದಲ್ಲಿ ಕಲೆಗಳು ಇಲ್ಲವೇ ಮೊಡವೆಗಳು ಅಧಿಕವಾಗಿ ನಿಮ್ಮ ಸೌಂದರ್ಯ ಹಾಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನಿಮ್ಮ ಜೀವಮಾನದ ವಿಶೇಷ ದಿನದಂದು ಚೆಂದ ಕಾಣಬೇಕು ಎಂದು ಪ್ರತಿ ಹುಡುಗಿಯೂ ಇಚ್ಛಿಸುತ್ತಾಳೆ. ಆದರೆ ಆ ಮಧುರ ಕ್ಷಣವನ್ನು ಎಂದಿಗೂ ಹಾಳು ಮಾಡಿಕೊಳ್ಳಬೇಡಿ. ಕೆಲವು ಚರ್ಮದ ಕಾಳಜಿಯ ವಿಷಯದಲ್ಲಿ ನಡೆಯುವ ತಪ್ಪು ಹೆಜ್ಜೆಗಳು ನಿಮ್ಮ ಮದುವೆಯ ದಿನದ ಸೌಂದರ್ಯಕ್ಕೆ ಕುಂದು ತರಬಹುದು. ಹಾಗಾಗಿ ಈ ಲೇಖನದಲ್ಲಿ ನಾವು ಪ್ರಿ-ವೆಡ್ಡಿಂಗ್ ಸ್ಕಿನ್ ಕೇರ್ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತಿದ್ದೇವೆ. ಈ ತಪ್ಪುಗಳನ್ನು ಮಾಡದೇ ನಿಮ್ಮ ಮದುವೆಯ ಸುಂದರ ಕ್ಷಣಗಳನ್ನು ಇನ್ನಷ್ಟು ಮಧುರವಾಗಿಸಿಕೊಳ್ಳಲು ಇವು ನೆರವಾಗಲಿದೆ.

1. ನಿರಂತರವಾಗಿ ತೆಗೆದುಕೊಳ್ಳುತ್ತಿದ್ದ ಚರ್ಮದ ಕಾಳಜಿಯನ್ನು ತೊರೆಯುವುದು

1. ನಿರಂತರವಾಗಿ ತೆಗೆದುಕೊಳ್ಳುತ್ತಿದ್ದ ಚರ್ಮದ ಕಾಳಜಿಯನ್ನು ತೊರೆಯುವುದು

ಒಂದು ತಿಂಗಳ ಮುಂಚೆ ಇಲ್ಲವೇ ಒಂದು ವಾರದ ಮುಂಚೆ ನೀವು ಯಾವಾಗಲೂ ತೆಗೆದುಕೊಳ್ಳುತ್ತಿದ್ದ ಚರ್ಮದ ಕಾಳಜಿಯನ್ನು ತೊರೆಯುವುದು ಖಂಡಿತ ಉತ್ತಮ ಉಪಾಯವಲ್ಲ. ಅತ್ಯುತ್ತಮ ಫಲಿತಾಂಶ ಪಡೆಯುವುದಕ್ಕಾಗಿ ನೀವು ನಿರಂತರವಾಗಿ ವರ್ಷಾನುಗಟ್ಟಲೆಯಿಂದ ಅನುಸರಿಸುತ್ತಿದ್ದ ನಿಮ್ಮ ಚರ್ಮದ ಬಗೆಗಿನ ಚಿಕಿತ್ಸೆಯನ್ನು ತೊರೆಯಬೇಡಿ.

ನೀವು ಈಗಾಗಲೇ ಅನುಸರಿಸುತಿದ್ದ ಯಾವುದೋ ವಿಧಾನಕ್ಕೆ ಇನ್ನಷ್ಟು ಹೊಸ ವಿಧಾನವನ್ನು ಸೇರಿಸುವುದು ಇಲ್ಲವೇ ಕೆಲವು ಹಂತಗಳನ್ನು ಬಿಟ್ಟೇ ಬಿಡುವುದರಿಂದ ದೊಡ್ಡ ತೊಂದರೆಯೇ ಆಗಬಹುದು. ಹಾಗಾಗಿ ಯಾವಾಗಲೂ ನೀವು ನಿಮ್ಮ ಚರ್ಮಕ್ಕಾಗಿ ಏನನ್ನು ಅನುಸರಿಸುತ್ತಿದ್ದೀರೋ ಅದನ್ನೇ ಮುಂದುವರಿಸಿ.

ಯಾಕೆಂದರೆ ಅದು ನಿಮ್ಮ ಚರ್ಮದ ಮೇಲೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ನಿಮಗೆ ಖಾತ್ರಿ ಇರುತ್ತದೆ. ಹೊಸ ವಿಧಾನ ಹೇಗೆ ಇರುತ್ತದೆ ಮತ್ತು ಅದು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುತ್ತದೆಯೇ ಎಂಬ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಆ ಪ್ರಯೋಗ ಮಾಡುವುದಕ್ಕೆ ಇದು ಸರಿಯಾದ ಸಮಯವೂ ಅಲ್ಲ ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ.

2. ಹೊಸ ಸ್ಕಿನ್ ಕೇರ್ ಪ್ರೊಡಕ್ಟ್ ಗಳನ್ನು ಪ್ರಯತ್ನಿಸುವುದು

2. ಹೊಸ ಸ್ಕಿನ್ ಕೇರ್ ಪ್ರೊಡಕ್ಟ್ ಗಳನ್ನು ಪ್ರಯತ್ನಿಸುವುದು

ಮಾರುಕಟ್ಟೆಯಲ್ಲಿ ಸ್ಕಿನ್ ಕೇರ್ ಪ್ರೊಡಕ್ಟ್ ಗಳು ಬೇಕಾದಷ್ಟಿವೆ.ಡ್ರಗ್ ಸ್ಕೋರ್ ಗಳಿಂದ ಹಿಡಿದು ದೊಡ್ಡ ದೊಡ್ಡ ಅಂಗಡಿಗಳಲ್ಲಿ ಪ್ರತಿ ದಿನ ಅದೆಷ್ಟೋ ಸ್ಕಿನ್ ಕೇರ್ ಪ್ರೊಡಕ್ಟ್ ಗಳು ಬಿಡುಗಡೆಗೊಳ್ಳುತ್ತಲೇ ಇರುತ್ತವೆ.

ನಿಮಗೆ ನಂಬಿಕೆ ಇರುವ ಸ್ಟೋರ್ ಗಳಲ್ಲಿ ನೀಡುವ ಭರವಸೆಯಿಂದಾಗಿ ದುಬಾರಿಯಾಗಿರುವ ಅಥವಾ ಅತ್ಯುತ್ತಮ ಬ್ರ್ಯಾಂಡಿನ ವಸ್ತುವನ್ನು ಪ್ರಯತ್ನಿಸಿ ಉತ್ತಮ ಫಲಿತಾಂಶ ಪಡೆಯುವುದಕ್ಕೆ ಮತ್ತು ಹೊಳೆಯುವ ತ್ವಚೆಯನ್ನು ಪಡೆಯುವುದಕ್ಕೆ ನೀವು ನಿರೀಕ್ಷಿಸಬಹುದು.

ಆದರೆ ನೀವು ನಿಮ್ಮ ಚರ್ಮ ಇದಕ್ಕೆ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ಆಲೋಚಿಸುವುದನ್ನೇ ಬಿಟ್ಟು ಬಿಡುತ್ತೀರಿ. ನಿಮ್ಮ ಚರ್ಮ ಈ ಹೊಸ ಪ್ರೊಡಕ್ಟ್ ಗೆ ಕೆಟ್ಟದಾಗಿ ಕೂಡ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ನಿಮಗೆ ಆಲೋಚನೆ ಇರಬೇಕು. ನಿಮಗೆ ನೆನಪಿರಬೇಕಾಗಿರುವ ಪ್ರಮುಖ ವಿಚಾರವೆಂದರೆ ಯಾವುದೇ ಪ್ರೊಡಕ್ಟ್ ಕೂಡ ಅತೀ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿದೆ.

3. ರಾಸಾಯನಿಕ ಸ್ಕಿನ್ ಕೇರ್ ಚಿಕಿತ್ಸೆ ತೆಗೆದುಕೊಳ್ಳುವುದು

3. ರಾಸಾಯನಿಕ ಸ್ಕಿನ್ ಕೇರ್ ಚಿಕಿತ್ಸೆ ತೆಗೆದುಕೊಳ್ಳುವುದು

ಕಡಿಮೆ ಅವಧಿಯಲ್ಲಿ ಮದುಮಗಳು ಸುಂದರವಾಗಿ ಕಾಣಬೇಕು ಎಂಬ ಉದ್ದೇಶದಿಂದ ಹಲವರು ರಾಸಾಯನಿಕ ಸ್ಕಿನ್ ಕೇರ್ ಚಿಕಿತ್ಸೆಗಳಿಗೆ ಮುಂದಾಗುತ್ತಾರೆ. ಪಾರ್ಲರ್ ನವರು ಅಥವಾ ಯಾವುದೋ ಸ್ನೇಹಿತೆ ನಿಮಗೆ ಈ ಸಲಹೆ ನೀಡಿರುವ ಸಾಧ್ಯತೆ ಇದೆ. ರಾಸಾಯನಿಕ ಪೀಲಿಂಗ್ ಒಂದು ಸಾಮಾನ್ಯ ಚಿಕಿತ್ಸೆ ಆಗಿದೆ.

ಮದುವೆ ದಿನ ಹತ್ತಿರವಿರುವಾಗ ಖಂಡಿತ ಇಂತಹ ಚಿಕಿತ್ಸೆಗಳಿಗೆ ಹೋಗಬೇಡಿ ಎಂಬ ಸಲಹೆಯನ್ನು ನಾವು ನಿಮಗೆ ನೀಡುತ್ತಿದ್ದೇವೆ. ಯಾಕೆಂದರೆ ಈ ಚಿಕಿತ್ಸೆಗೆ ನಿಮ್ಮ ಚರ್ಮ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಒಳ್ಳೆಯದೇ ಆಗಬೇಕು ಎಂದೇನಿಲ್ಲ ಈ ಚಿಕಿತ್ಸೆ ನಿಮಗೆ ಕೆಟ್ಟದಾಗುವ ಸಾಧ್ಯತೆಯೂ ಇದೆ.

4. ಅತಿಯಾಗಿ ಪರಿಮಳಯುಕ್ತವಾಗಿರುವ ವಸ್ತುಗಳ ಬಳಕೆ

4. ಅತಿಯಾಗಿ ಪರಿಮಳಯುಕ್ತವಾಗಿರುವ ವಸ್ತುಗಳ ಬಳಕೆ

ಹೆಚ್ಚಿನ ಸ್ಕಿನ್ ಕೇರ್ ಮತ್ತು ಹೇರ್ ಕೇರ್ ಪ್ರೊಡಕ್ಟ್ ಗಳು ಬಹಳ ಪರಿಮಳಯುಕ್ತವಾಗಿರುತ್ತದೆ. ನಾವುಗಳು ಕೂಡ ಪರಿಮಳಯುಕ್ತವಾಗಿರುವ ಪ್ರೊಡಕ್ಟ್ ಗಳಿಗೆ ಆಕರ್ಷಿತರಾಗುತ್ತೇವೆ ಮತ್ತು ಅವುಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ನೀವು ಇಷ್ಟ ಪಡುವ ಈ ಪರಿಮಳಯುಕ್ತ ವಸ್ತು ನಿಮ್ಮ ಚರ್ಮಕ್ಕೆ ಇಷ್ಟವಿಲ್ಲದೆ ಇರಬಹುದು.

ಹೆಚ್ಚಿನ ಇಂತಹ ಪರಿಮಳಯುಕ್ತ ವಸ್ತುಗಳು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುತ್ತದೆ ಮತ್ತು ಚರ್ಮದಲ್ಲಿ ಹಲವು ಬದಲಾವಣೆಗಳಿಗೆ ಕಾರಮವಾಗುತ್ತದೆ. ಹಾಗಾಗಿ ಮದುವೆಯ ದಿನ ಹತ್ತಿರವಿರುವ ಸಂದರ್ಬದಲ್ಲಿ ಹೊಸ ಹೊಸ ಪರಿಮಳಯುಕ್ತ ಪ್ರೊಡಕ್ಟ್ ಗಳಿಗೆ ಆಕರ್ಷಿತರಾಗಬೇಡಿ.

5. ಕಲೆಗಳನ್ನು, ಮೊಡವೆಗಳನ್ನು ಚಿವುಟಿಕೊಳ್ಳುವುದು

5. ಕಲೆಗಳನ್ನು, ಮೊಡವೆಗಳನ್ನು ಚಿವುಟಿಕೊಳ್ಳುವುದು

ಆಕ್ನೆ ಮತ್ತು ಮೊಡವೆಗಳಿಗೆ ಪ್ರಮುಖ ಕಾರಣಗಳಲ್ಲೊಂದು ಒತ್ತಡ. ಮಗುವೆಯ ದಿನ ಹತ್ತಿರವಾಗುತ್ತಿದ್ದಂತೆ ಒತ್ತಡ ಹೆಚ್ಚಾಗುವುದು ಸರ್ವೇ ಸಾಮಾನ್ಯ. ಪ್ರತಿಯೊಬ್ಬ ಮದುಮಗಳಿಗೂ ಕೂಡ ಮೊಡವೆ ಮತ್ತು ಆಕ್ನೆ ನಿದ್ದೆಗೆಡಿಸುವ ವಿಷಯವೇ ಆಗಿದೆ.

ಆದರೆ ಇವುಗಳನ್ನು ನೀವು ಚಿವುಟಿಕೊಳ್ಳದೇ ಇದ್ದಲ್ಲಿ ಖಂಡಿತ ಮದುವೆಯ ದಿನ ನೀವು ಸುಂದರವಾಗಿ ಇರುತ್ತೀರಿ. ಮುಖದಲ್ಲಿ ಮೊಡವೆ ಇದ್ದಾಗ ಅದನ್ನು ಮುಟ್ಟಿಕೊಳ್ಳುತ್ತಲೇ ಇರಬೇಕು ಅನ್ನಿಸುತ್ತದೆ ಅಷ್ಟೇ ಅಲ್ಲ ಚಿವುಟಿ ಬಿಡಬೇಕು ಅನ್ನಿಸುತ್ತದೆ. ಆದರೆ ಹಾಗೆ ಮಾಡಿಕೊಳ್ಳಬೇಡಿ. ಮೊಡವೆಗಳು ತನ್ನಷ್ಟಕ್ಕೇ ತಾನೆ ಗುಣವಾಗುತ್ತದೆ. ಹೆಚ್ಚು ಚಿಂತೆಗೊಳಗಾಗಬೇಡಿ.

6. ಸನ್ ಸ್ಕ್ರೀನ್ ಬಳಸದೇ ಇರುವುದು

6. ಸನ್ ಸ್ಕ್ರೀನ್ ಬಳಸದೇ ಇರುವುದು

ಹೆಚ್ಚಿನ ಚರ್ಮದ ಸಮಸ್ಯೆಗಳಿಗೆ ಕಾರಣ ಸೂರ್ಯನ ನೆರಳಾತೀತ ಕಿರಣಗಳು. ಚರ್ಮ ಹಾಳಾಗುವಿಕೆಯಲ್ಲಿ ಸೂರ್ಯನ ಕಿರಣಗಳ ಪಾತ್ರ ಬಹಳ ಪ್ರಮುಖವಾದದ್ದು. ಆಕ್ನೆ, ಪಿಗ್ಮೆಂಟೇಷನ್ ಸಮಸ್ಯೆ ಇದರಿಂದಲೇ ಪ್ರಾರಂಭವಾಗುತ್ತದೆ. ಸನ್ ಸ್ಕ್ರೀನ್ ಬಳಕೆಯನ್ನು ತ್ಯಜಿಸುವುದು ಈ ಸಂದರ್ಬದಲ್ಲಿ ಸರಿಯಾದುದಲ್ಲ.

ಅದರಲ್ಲೂ ಮುಖ್ಯವಾಗಿ ಚರ್ಮದ ಕಾಳಜಿಯನ್ನು ತೆಗೆದುಕೊಳ್ಳಲೇಬೇಕಾಗಿರುವ ಈ ಸಂದರ್ಬದಲ್ಲಿ ಖಂಡಿತ ಸನ್ ಸ್ಕ್ರೀನ್ ನ್ನು ತ್ಯಜಿಸಬೇಡಿ. ಯಾವಾಗ ನೀವು ಮನೆಯಿಂದ ಹೊರಗೆ ಹೊರಡುತ್ತೀರೋ ಆ ಸಂದರ್ಬದಲ್ಲಿ ಸನ್ ಸ್ಕ್ರೀನ್ ಹಚ್ಚಿಕೊಂಡೇ ಹೊರಡಿ. ಅದರಲ್ಲೂ ಮುಖ್ಯವಾಗಿ ಕನಿಷ್ಟ 30 ರಷ್ಟು SPF ಇರುವ ಸನ್ ಸ್ಕ್ರೀನ್ ನ್ನು ಬಳಕೆ ಮಾಡಿ.

7. ಅತಿಯಾಗಿ ಸ್ಕ್ರಬ್ಬಿಂಗ್ ಮಾಡುವುದು

7. ಅತಿಯಾಗಿ ಸ್ಕ್ರಬ್ಬಿಂಗ್ ಮಾಡುವುದು

ಸ್ಕ್ರಬ್ ಮಾಡುವುದು ಖಂಡಿತ ಉತ್ತಮವಾಗಿರುವ ಚರ್ಮದ ಕಾಳಜಿ ಆಗಿದೆ. ಇದು ಚರ್ಮದ ಸತ್ತ ಜೀವಕೋಶಗಳ ನಿವಾರಣೆಗೆ ಮತ್ತು ಕೊಳೆಯನ್ನು ತೆಗೆಯುವುದಕ್ಕೆ ಸಹಕರಿಸುತ್ತದೆ ಜೊತೆಗೆ ಚರ್ಮವನ್ನು ಮೃದುವಾಗಿಸಿ, ಶುದ್ಧವಾಗಿಸಲು ನೆರವಾಗುತ್ತದೆ. ಆದರೆ ಅತಿಯಾಗಿ ಸ್ಕ್ರಬ್ಬಿಂಗ್ ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ.

ಒಂದು ವೇಳೆ ನೀವು ಸ್ಕ್ರಬ್ ಮಾಡಿ ಚರ್ಮವನ್ನು ಸ್ವಚ್ಛಗೊಳಿಸುವುದಕ್ಕೆ ನೀವು ಬಯಸಿದ್ದೇ ಆದಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಮಾಡಿದರೆ ಸಾಕಾಗುತ್ತದೆ. ಅದಕ್ಕಿಂತ ಹೆಚ್ಚು ಬಾರಿ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಪ್ರತಿದಿನ ಅಥವಾ ದಿನ ಬಿಟ್ಟು ದಿನ ಹೀಗೆ ಸ್ಕ್ರಬ್ಬಿಂಗ್ ಮಾಡುವುದರಿಂದಾಗಿ ಚರ್ಮ ಒಣಗಿದಂತಾಗಬಹುದು ಮತ್ತು ಚರ್ಮ ಒಡೆದಂತಾಗುವ ಸಾಧ್ಯತೆ ಇರುತ್ತದೆ.

8. ಪದೇ ಪದೇ ನಿಮ್ಮ ಮುಖವನ್ನು ಸ್ಪರ್ಶಿಸುವುದು

8. ಪದೇ ಪದೇ ನಿಮ್ಮ ಮುಖವನ್ನು ಸ್ಪರ್ಶಿಸುವುದು

ಮದುಮಗಳೇ ಆಗಿರಲಿ ಅಥವಾ ಯಾರೇ ಆಗಿರಲಿ ಪದೇ ಪದೇ ಮುಖವನ್ನು ಸ್ಪರ್ಷಿಸುತ್ತಲೇ ಇರುವುದು ಖಂಡಿತ ಒಳ್ಳೆಯ ಅಭ್ಯಾಸವಲ್ಲ. ನಮ್ಮ ಕೈಗಳು ಯಾವಾಗಲೂ ಸ್ವಚ್ಛವಾಗಿರುವುದಿಲ್ಲ.ಪದೇ ಪದೇ ನೀವು ಕೈಗಳಿಂದ ನಿಮ್ಮ ಮುಖ ಸ್ಪರ್ಷಿಸುವುದರಿಂದಾಗಿ ಬ್ಯಾಕ್ಟೀರಿಯಾದ ಸೋಂಕಾಗುವ ಸಾಧ್ಯತೆ ಇದೆ. ಅದರಿಂದಾಗಿ ಮೊಡವೆಗಳಾಗುವ ಸಾಧ್ಯತೆ ಇದೆ.

ಹಾಗಾಗಿ ಮುಖವನ್ನು ಮುಟ್ಟಿಕೊಳ್ಳಬೇಡಿ. ಒಂದು ಮುಖವನ್ನು ಮುಟ್ಟಿಕೊಳ್ಳುವುದೇ ಆದಲ್ಲಿ ಕೈಗಳನ್ನು ತೊಳೆದುಕೊಳ್ಳಿ. ಎಣ್ಣೆ ತ್ವಚೆಯವರಾಗಿದ್ದಲ್ಲಿ ಪದೇ ಪದೇ ಮುಖವನ್ನು ಸ್ಪರ್ಷಿಸುವುದರಿಂದಾಗಿ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ನಿಮ್ಮ ಮುಖಕ್ಕೆ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ.

English summary

Brides: Avoid These Pre-Wedding Skincare Mistakes

Here we are discussing about beware all the brides avoid these pre-wedding skincare mistakes. We get a lot of advice, we go for skin care treatments that we have never gone for. But the most dangerous of all, we try different and often expensive skincare products. Read more.
X
Desktop Bottom Promotion