For Quick Alerts
ALLOW NOTIFICATIONS  
For Daily Alerts

ತ್ವಚೆ ಕಾಂತಿಯುತವಾಗಬೇಕೆ? ಈ ಆಹಾರಗಳನ್ನು ತಿನ್ನಿ

|

ಹೊಳೆಯುವ ಚರ್ಮ ಯಾರಿಗೆ ತಾನೇ ಬೇಡ?, ಆದರೆ, ನಿತ್ಯ ಒತ್ತಡ, ಕೆಲಸ, ಮನೆ, ಕುಟುಂಬ ಎಲ್ಲದರ ನಡುವೆ ನಮ್ಮ ಸೌಂದರ್ಯದ ಬಗ್ಗೆ ಕಾಳಜಿ ಅಥವಾ ಮನೆಮದ್ದಿನ ಪ್ರಯೋಗಗಳನ್ನು ಮಾಡಲು ಆಗವುದೇ ಇಲ್ಲ. ತ್ವಚೆಯ ಕಾಳಜಿಗೆ ನಾವು ಎಷ್ಟೇ ವೇಳಾಪಟ್ಟಿ ಹಾಕಿಕೊಂಡರೂ ಒಂದು ಅಥವಾ ಎರಡು ದಿನಗಳ ನಂತರ ಮತ್ತೆ ನಿರ್ಲಕ್ಷ್ಯ ಮಾಡುವುದು ಬಹುತೇಕರ ಅಭ್ಯಾಸವಾಗಿರುತ್ತದೆ. ಅಲ್ಲದೇ, ಸಾಕಷ್ಟು ರಾಸಾಯನಿಕಗಳಿರುವ ಕ್ರೀಂ, ಸೋಪು, ಲೋಷನ್‌ಗಳು ದೀರ್ಘ ಕಾಲದಲ್ಲಿ ತ್ವಚೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಿಜವಾಗಿಯೂ, ನಮ್ಮ ಚರ್ಮದ ಹೊಳಪು ಇರುವುದು ಆರೋಗ್ಯಕರ ಜೀವನಶೈಲಿ ಮತ್ತು ಆಹಾರಕ್ರಮದ ಮೇಲೆ.

ಹಾಗಿದ್ದರೆ, ನಮ್ಮ ದಿನಚರಿಗೆ ಅನುಗುಣವಾಗಿ ವಿಭಿನ್ನವಾಗಿ ನಾವು ತ್ವಚೆಯ ಕಾಳಜಿ ಹೇಗೆ ಮಾಡಬಹುದು?, ಹೊಳೆಯುವ ಚರ್ಮಕ್ಕಾಗಿ ಆರೋಗ್ಯಕರ ಆಹಾರದ ಮಹತ್ವ ಏನು?, ನಮ್ಮ ನಿತ್ಯದ ಆಹಾರ ಕ್ರಮದಲ್ಲೇ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಾಗೆ ಏನು ಮಾಡಬಹುದು? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲು ನಿಮಗಾಗಿ ನಿತ್ಯ ಸಮಯಾನುಸಾರ ಸೇವಿಸಬಹುದಾದ ಆಹಾರದ ಚಾರ್ಟ್ ಅನ್ನು ಸಿದ್ಧಪಡಿಸಿದ್ದೇವೆ.

ಹೊಳೆಯುವ ನಯವಾದ ತ್ವಚೆಗೆ ಹೀಗಿರಲಿ ನಿಮ್ಮ ಆಹಾರ ಕ್ರಮ

ಹೊಳೆಯುವ ನಯವಾದ ತ್ವಚೆಗೆ ಹೀಗಿರಲಿ ನಿಮ್ಮ ಆಹಾರ ಕ್ರಮ

ಮುಂಜಾನೆ 6ಕ್ಕೆ: ಖಾಲಿ ಹೊಟ್ಟೆಯಲ್ಲಿ ಅರ್ಧ ನಿಂಬೆ ಮತ್ತು ಜೇನುತುಪ್ಪದ ರಸದೊಂದಿಗೆ ಒಂದು ಕಪ್ ನೀರನ್ನು ಕುಡಿಯಿರಿ.

ಪ್ರಯೋಜನಗಳು: ಇದು ಡಿಟಾಕ್ಸ್ ಅಂಶವನ್ನು ಹೊಂದಿರುವುದರಿಂದ ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಬೆಳಗಿನ ಉಪಾಹಾರ 7:30 - 8:00ರ ಒಳಗೆ: 1 ಕಪ್ ಹಾಲು, ಒಂದು ಮಲ್ಟಿಗ್ರೇನ್ ಬ್ರೆಡ್‌ನೊಂದಿಗೆ ಆಮ್ಲೆಟ್.

ಪ್ರಯೋಜನಗಳು: ಹಣ್ಣುಗಳು, ಹಾಲು ಮತ್ತು ಮೊಟ್ಟೆಗಳನ್ನು ಒಳಗೊಂಡಿರುವ ಉಪಾಹಾರವು ಆರೋಗ್ಯಕರ, ಕಾಂತಿಯುತ ಚರ್ಮಕ್ಕೆ ಇದು ಸಹಕಾರಿ.

ಬೆಳಗ್ಗಿನ ಉಪಾಹಾರ ಮತ್ತು ಮಧ್ನಾಹ್ನ ಊಟದ ನಡುವಿನ ತಿಂಡಿ 11ರಿಂದ 11:30ರ ಒಳಗೆ: ದಾಳಿಂಬೆ ರಸ ಅಥವಾ 1 ಕಪ್ ಕಿತ್ತಳೆ ರಸ.

ಪ್ರಯೋಜನಗಳು: ಹಣ್ಣಿನ ರಸಗಳು ಆಂಟಿ ಆಕ್ಸಿಟಡೆಂಟ್‌ ಅಂಶವನ್ನು ಒಳಗೊಂಡಿದೆ ಹಾಗೂ ಜೀವಸತ್ವಗಳು, ಪ್ರೋಟೀನ್ ಮತ್ತು ಖನಿಜಗಳಿಂದ ಸಮೃದ್ಧವಾಗಿವೆ.

ಮಧ್ಯಾಹ್ನದ ಊಟ 1ರಿಂದ 1:30ರ ನಡುವೆ: ನಿಮಗೆ ಇಷ್ಟವಾಗುವಂಥ ಒಂದು ಕಪ್ ಹಸಿ ಅಥವಾ ಅರ್ಧ ಬೇಯಿಸಿದ ತರಕಾರಿಗಳು, ಜೊತೆಗೆ ಎರಡು ಚಪಾತಿಗಳು ಮತ್ತು ಒಂದು ಕಪ್ ಮೊಸರು ಅಂತಿಮವಾಗಿ ಸಲಾಡ್.

ಪ್ರಯೋಜನಗಳು: ತಾಜಾ ಮತ್ತು ಹೊಳೆಯುವ ಚರ್ಮಕ್ಕಾಗಿ ತರಕಾರಿ, ಮೊಸರು ಮತ್ತು ಸಲಾಡ್‌ ನಿಮ್ಮ ದೇಹಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳನ್ನು ಒದಗಿಸುತ್ತದೆ.

ಸಂಜೆಯ ತಿಂಡಿ 3:30ರಿಂದ 4ರ ಒಳಗೆ: 1/2 ಕಪ್ ಬೇಯಿಸಿದ ಸಿಹಿ ಆಲೂಗಡ್ಡೆ ಅಥವಾ ಬದಲಾಗಿ ಯಾವುದೇ ಗಡ್ಡೆಗಳು ಮತ್ತು ಮೊಳಕೆ ಕಾಳಿನ ಸಲಾಡ್

ಪ್ರಯೋಜನಗಳು: ಮೊಳಕೆ ಕಾಳುಗಳು, ಸಿಹಿ ಆಲೂಗಡ್ಡೆ ಅಥವಾ ಆರೋಗ್ಯಕರ ಪಾನೀಯಗಳು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುತ್ತದೆ.

ಭೋಜನ 7 ರಿಂದ 7:30ರ ಒಳಗೆ: ನಿಮ್ಮ ಮೆಚ್ಚಿನ ತರಕಾರಿ ಅಥವಾ ಚಿಕನ್ ಜೊತೆಗೆ ಎರಡು ಚಪಾತಿ ಅಥವಾ ಒಂದು ಕಪ್ ಮೊಸರಿನೊಂದಿಗೆ ಒಂದು ಬಟ್ಟಲು ಅನ್ನ.

ಮಲಗುವ ಮುನ್ನ 10ರಿಂದ 10:30ರ ಒಳಗೆ: ಒಂದು ಲೋಟ ಬೆಚ್ಚಗಿನ ಹಾಲಿ ಒಂದು ಚಮಚ ಅರಿಶಿನವನ್ನು ಹಾಕಿ ಕುಡಿಯಿರಿ.

ಪ್ರಯೋಜನಗಳು: ಹಾಳು ನಿಮ್ಮ ತ್ವಚೆಗೆ ಹೊಳಪನ್ನು ಹೆಚ್ಚಿಸುತ್ತದೆ ಹಾಗೂ ರ್ಯಾಡಿಕಲ್ ಮುಕ್ತವಾಗಿಡಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮಕ್ಕೆ ಯಾವ ಆಹಾರ ಹೇಗೆ ಸಹಕಾರಿ

ಹೊಳೆಯುವ ಚರ್ಮಕ್ಕೆ ಯಾವ ಆಹಾರ ಹೇಗೆ ಸಹಕಾರಿ

1. ಹಸಿರು ಎಲೆಗಳು

ಹೊಳೆಯುವ ಮುಖಕ್ಕೆ ಹಸಿರು ಎಲೆ ತರಕಾರಿಗಳು ಬೆಸ್ಟ್‌ ಆಹಾರವಾಗಿದೆ. ಸೊಪ್ಪಿನಲ್ಲಿ ಜೀವಸತ್ವಗಳು, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ತುಂಬಿರುತ್ತವೆ. ಪಾಲಕ, ಸಾಸಿವೆ ಸೊಪ್ಪು, ಕೇಲ್, ಕೋಸುಗಡ್ಡೆ ಮುಂತಾದ ಸೊಪ್ಪುಗಳಲ್ಲಿ ವಿಟಮಿನ್ ಸಿ, ಎ, ಮತ್ತು ಕೆ ಸತ್ವಗಳು ಸಮೃದ್ಧವಾಗಿವೆ. ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ಇವೆಲ್ಲವೂ ಪ್ರಮುಖವಾಗಿವೆ. ಸೂರ್ಯನ ಕಿರಣಗಳ ಹಾನಿಕಾರಕ ಪ್ರಭಾವದಿಂದ ಇವು ಕೋಶಗಳನ್ನು ರಕ್ಷಿಸುತ್ತವೆ; ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಕಾಪಾಡುತ್ತವೆ ಮತ್ತು ಆರೋಗ್ಯಕರ ಹೊಳಪನ್ನು ನೀಡುತ್ತವೆ.

2. ಬೆಣ್ಣೆಹಣ್ಣು

2. ಬೆಣ್ಣೆಹಣ್ಣು

ಚರ್ಮಕ್ಕೆ ಸಾಕಷ್ಟು ಪ್ರಯೋಜನಕಾರಿಯಾದಂಥ ಅವಕಾಡೋ ಹಣ್ಣನ್ನು ಹಲವು ರೀತಿಯಲ್ಲಿ ಬಳಬಹುದಾಗಿದೆ. ಬೆಣ್ಣೆಹಣ್ಣಿನ ಎಣ್ಣೆ ನಿಮ್ಮ ಚರ್ಮದ ರಂಧ್ರಗಳ ಮೂಲಕ ತ್ವಚೆಯ ಆಳಕ್ಕೆ ಹೋಗುತ್ತದೆ, ಇದು ಚರ್ಮವನ್ನು ಮೃದುವಾಗಿ ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ಚರ್ಮಕ್ಕೆ ತಾರುಣ್ಯದ ಹೊಳಪನ್ನು ನೀಡುತ್ತದೆ ಮತ್ತು ಸುಕ್ಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಲುಟೇನ್ ಅಂಶವು ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ ಮತ್ತು ನಿಮ್ಮ ಚರ್ಮದ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ಮೈಬಣ್ಣಕ್ಕೆ ತ್ವಚೆಯಲ್ಲಿ ಜಲಸಂಚಯನ ಅತೀಮುಖ್ಯ.

3. ನೀರು

3. ನೀರು

ನಿಮ್ಮ ಕೆನ್ನೆಗಳು ಗುಲಾಬಿ ಬಣ್ಣದಂತೆ ಕಾಣುವಂತೆ ಮಾಡಲು ಅಥವಾ ತುಟಿ-ಹೊಳಪನ್ನು ಹೆಚ್ಚಿಸಲು ಸರಿಯಾದ ಪ್ರಮಾಣದ ನೀರಿನ ಸೇವನೆ ಅತ್ಯಗತ್ಯ. ಹೊಳೆಯುವ ಮತ್ತು ದೀರ್ಘಕಾಲೀನ ತ್ವಚೆಯ ಆರೋಗ್ಯಕ್ಕಾಗಿ ದೈನಂದಿನ ಆಹಾರ ಪಟ್ಟಿಯಲ್ಲಿ 3 ಲೀಟರ್ ನೀರನ್ನು ಸೇವಿಸಲೇಬೇಕು. ನೀರಿನ ಸೇವನೆಯ ಕೆಲವು ದಿನಗಳ ನಂತರ ಚರ್ಮದ ಮೈಬಣ್ಣದಲ್ಲಿ ಸುಧಾರಣೆ ಕಾಣುತ್ತದೆ. ಚರ್ಮವು ದೃಢವಾಗಿ, ಬಿಗಿಯಾಗಿ ಮತ್ತು ಮೃದುವಾಗಿ ಕಾಣುತ್ತದೆ.

4. ಸಿಟ್ರಸ್ ಹಣ್ಣುಗಳು

4. ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು ತ್ವಚೆಯ ಸೌಂದರ್ಯದ ಗಣಿ ಎಂದರೆ ತಪ್ಪಾಗಲಾರದು. ಇದು ತ್ವಚೆಗೆ ಅದ್ಭುತಗಳನ್ನು ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಸಿಟ್ರಸ್‌ ಹಣ್ಣುಗಳು ನಿಮ್ಮ ಆರೋಗ್ಯಕರ ಆಹಾರದ ಒಂದು ಭಾಗವಾಗಿ ಇರಲೇಬೇಕು. ಕಿತ್ತಳೆ, ಸಿಹಿ ಸುಣ್ಣ, ಕಿನ್ನೋ ಮತ್ತು ನಿಂಬೆಹಣ್ಣುಗಳು ನಿಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ. ಸಿಟ್ರಸ್ ಹಣ್ಣುಗಳು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ರ್ಯಾಡಿಕಲ್ ವಿರುದ್ಧ ಹೋರಾಡಲು, ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಪ್ರಕಾಶಮಾನವಾಗಿಡಲು ಸಮರ್ಥವಾಗಿವೆ. ಸೂರ್ಯ ಮತ್ತು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಉಂಟಾಗುವ ಯಾವುದೇ ಹಾನಿಯಿಂದ ಅವು ನಿಮ್ಮ ಚರ್ಮವನ್ನು ರಕ್ಷಿಸುತ್ತವೆ. ಅಲ್ಲದೆ, ಇವುಗಳ ಸಿಪ್ಪೆಗಳನ್ನು ಸೌಂದರ್ಯ ವೃದ್ಧಿಗೆ ಜಗತ್ತಿನಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ.

5. ಮೀನು ಮತ್ತು ಮೀನಿನ ಎಣ್ಣೆ

5. ಮೀನು ಮತ್ತು ಮೀನಿನ ಎಣ್ಣೆ

ನಮ್ಮ ದೇಹದಲ್ಲಿ ನೈಸರ್ಗಿಕ ಎಣ್ಣೆಯನ್ನು ನಿಯಂತ್ರಿಸುವಲ್ಲಿ ಮೀನಿನಿಂದ ತಯಾರಿಸಲ್ಪಡುವ ಒಮೆಗಾ -3 ಕೊಬ್ಬಿನಾಮ್ಲಗಳ ಬಹಳ ಸಹಕಾರಿ. ನಿಯಂತ್ರಿತ ತೈಲ ಉತ್ಪಾದನೆ ಎಂದರೆ ಚರ್ಮವು ಎಣ್ಣೆಯುಕ್ತವಾಗದೆ ನಿಮ್ಮ ಚರ್ಮವು ಹೈಡ್ರೇಟ್‌ ಮಾಡುತ್ತದೆ. ಮೀನಿನ ಎಣ್ಣೆ ಚರ್ಮದಲ್ಲಿ ನೀರಿನಂಶ ಹೆಚ್ಚು ಇರಲು ಮತ್ತು ಜಲಸಂಚಯನವನ್ನು ಸುಗಮಗೊಳಿಸಲು ಸಹಕಾರಿ. ಇದರಿಂದ ನಿಮ್ಮ ಚರ್ಮವು ಸುಂದರವಾಗಿ ಮತ್ತು ಯೌವ್ವನವಾಗಿ ಇರುವಂತೆ ಕಾಣುತ್ತದೆ. ಮೀನು ಮತ್ತು ಮೀನು ಎಣ್ಣೆಯನ್ನು ಹೊಳೆಯುವ ಚರ್ಮಕ್ಕೆ ಆರೋಗ್ಯಕರ ಆಹಾರ. ಸಾಲ್ಮನ್, ಟ್ಯೂನ, ಸಾರ್ಡೀನ್‌, ಆಂಚೊವೀಸ್ ಮತ್ತು ಹೆರಿಂಗ್ ಚರ್ಮ ಕಾಂತಿಗೆ ಅತ್ಯುತ್ತಮ ಮೀನುಗಳಾಗಿದೆ.

6. ಬಾದಾಮಿ

6. ಬಾದಾಮಿ

ನೆನೆಸಿದ ಬಾದಾಮಿ ಹೊಳೆಯುವ ಚರ್ಮಕ್ಕೆ ಅತ್ಯುತ್ತಮ ಆಹಾರವಾಗಿದೆ. ಆಂತರಿಕವಾಗಿ ಹಾನಿಗೊಳಗಾದ ಚರ್ಮದ ಅಂಗಾಂಶಗಳನ್ನು ಸರಿಪಡಿಸಲು ಮತ್ತು ಹೊಸ ಕೋಶಗಳ ಬೆಳವಣಿಗೆಯ ವೇಗ ಹೆಚ್ಚಿಸಲು ಇದು ಅಗತ್ಯ. ಇದು ನಿಮ್ಮ ಚರ್ಮದ ಟೋನ್ ಮತ್ತು ವಿನ್ಯಾಸವನ್ನು ಹೆಚ್ಚು ಸುಧಾರಿಸುತ್ತದೆ. ಬಾದಾಮಿ ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸುವ ಜೀವಸತ್ವಗಳನ್ನು ಸಹ ಹೊಂದಿರುತ್ತದೆ. ನೆನೆಸಿದ ಬಾದಾಮಿಗಳಲ್ಲಿ ಕಚ್ಚಾ ಬಾದಾಮಿಗಿಂತ ಗಮನಾರ್ಹವಾದ ವಿಟಮಿನ್ ಇ ಅನ್ನು ಒಳಗೊಂಡಿದೆ.

7. ಟೊಮಾಟೋ

7. ಟೊಮಾಟೋ

ಟೊಮಾಟೋ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹೊಂದಿದ್ದು, ಇದು ಮೊಡವೆ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಚರ್ಮದ ಟೋನ್ ಮತ್ತು ಆರೋಗ್ಯಕರ ಹೊಳಪನ್ನು ಸಹ ಸಾಧಿಸುತ್ತದೆ. ಟೊಮಾಟೋವನ್ನು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಎಂದು ಪರಿಗಣಿಸಲಾಗುತ್ತದೆ ಮತ್ತು ಚರ್ಮದ ಟೋನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.

8. ಕ್ಯಾರೆಟ್

8. ಕ್ಯಾರೆಟ್

ಹೊಳೆಯುವ ಚರ್ಮಕ್ಕಾಗಿ ಸೇವಿಸೇಕಾದ ಪ್ರಮುಖ ರಸಗಳು ಮತ್ತು ಆಹಾರಗಳಲ್ಲಿ ಕ್ಯಾರೆಟ್ ಜ್ಯೂಸ್ ಪ್ರಮುಖ ಸ್ಥಾನ ಪಡೆದಿದೆ. ಇದು ವಿಟಮಿನ್ ಎ ಅನ್ನು ಒಳಗೊಂಡಿರುತ್ತದೆ, ಇದು ಮೊಡವೆಗಳು, ಸುಕ್ಕುಗಳು, ವರ್ಣದ್ರವ್ಯ ಮತ್ತು ಚರ್ಮದ ಟ್ಯಾನ್‌ ಅನ್ನು ನಿವಾರಿಸುತ್ತದೆ. ನಿಮ್ಮ ದೇಹವು ಬೀಟಾ-ಕ್ಯಾರೋಟಿನ್ ಅನ್ನು ನಿಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ.

9. ಸ್ಟ್ರಾಬೆರಿಗಳು

9. ಸ್ಟ್ರಾಬೆರಿಗಳು

ಸ್ಟ್ರಾಬೆರಿಗಳು ವಿಟಮಿನ್ ಸಿ ಅಂಶ ಇರುವ ಅತ್ಯುತ್ತಮ ಹಣ್ಣಾಗಿದ್ದು, ಇದು ಉತ್ತಮ ಚರ್ಮವನ್ನು ಕಾಪಾಡಿಕೊಳ್ಳುತ್ತದೆ ಮತ್ತು ತಾಜಾ, ಹೊಳೆಯುವ ಚರ್ಮ ಪಡೆಯಲು ಉತ್ತಮ ಆಹಾರ. ಅಲ್ಲದೆ, ಇದು ಯುವಿಯಿಂದ ರಕ್ಷಣೆ ನೀಡುತ್ತದೆ, ಸ್ಟ್ರಾಬೆರಿಗಳಲ್ಲಿ ಕಂಡುಬರುವ ಸ್ಯಾಲಿಸಿಲಿಕ್ ಆಮ್ಲ ಮತ್ತು ಎಲಾಜಿಕ್ ಆಮ್ಲವು ಹೈಪರ್‌ ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಸ್ಟ್ರಾಬೆರಿಗಳಲ್ಲಿನ ಆಲ್ಫಾ ಹೈಡ್ರಾಕ್ಸಿ ಆಸಿಡ್ ಹಾನಿಗೊಳಗಾದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಪುನರ್ಯೌವ್ವನಗೊಳಿಸುತ್ತದೆ.

10. ಡಾರ್ಕ್ ಚಾಕೊಲೇಟ್

10. ಡಾರ್ಕ್ ಚಾಕೊಲೇಟ್

ಚಾಕೊಲೇಟ್ ಅನ್ನು ಯಾರು ‌ತಾನೆ ಇಷ್ಟಪಡುವುದಿಲ್ಲ? ಅದರಲ್ಲೂ ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಎಂದರೆ ಯಾರು ತಾನೆ ಇಲ್ಲ ಎಂದು ತಿರಸ್ಕರಿಸುತ್ತಾರೆ. ಹೌದು, ಡಾರ್ಕ್ ಚಾಕೊಲೇಟ್ ಚರ್ಮದ ವರ್ಣದ್ರವ್ಯ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ನಿವಾರಿಸುತ್ತದೆ ಹಾಗೂ ಚರ್ಮ ಪ್ರಕಾಶಮಾನವಾಗಿ ಮತ್ತು ತಾಜಾ ಆಗಿ ಕಾಣುವಂತೆ ಮಾಡುತ್ತದೆ. ಚಾಕೊಲೇಟ್‌ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಯಂ ಅನ್ನು ಒಳಗೊಂಡಿದ್ದು, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.

English summary

Best Foods For Glowing Skin And Ultimate Diet Plan

Here we are discussing about which is the best foods for glowing skin and ultimate diet plan. Aside from lifestyle and genetics, what you eat plays a significant role in your skin health. Be sure to eat foods that provide all the nutrients, and you will reap the benefits of having beautiful, glowing, and healthy skin.Here we are discussing about which is the best foods for glowing skin and ultimate diet plan. Aside from lifestyle and genetics, what you eat plays a significant role in your skin health. Be sure to eat foods that provide all the nutrients, and you will reap the benefits of having beautiful, glowing, and healthy skin.
X
Desktop Bottom Promotion