For Quick Alerts
ALLOW NOTIFICATIONS  
For Daily Alerts

ಓಟ್ಸ್ ಹೀಗೆ ಬಳಸಿದರೆ ತ್ವಚೆ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು

|

ಓಟ್ಸ್ ತಿನ್ನುವುದರಿಂದ ತೆಳ್ಳಗಾಗುವುದು ಮಾತ್ರವಲ್ಲ, ಹೃದಯ ಆರೋಗ್ಯ, ಜ್ಞಾಪಕ ಶಕ್ತಿ ಹೆಚ್ಚಿಸಬಹುದು, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು ಹೀಗೆ 10ಕ್ಕೂ ಅಧಿಕ ಪ್ರಯೋಜನಗಳನ್ನು ಪಡೆಯಬಹುದೆಂದು ನಿಮಗೆ ಗೊತ್ತು.ಓಟ್ಸ್ ಆರೋಗ್ಯಕ್ಕೆ ಎಷ್ಟುಒಳ್ಳೆಯದೋ ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಹದಿಹರೆಯದಲ್ಲಿ ಪ್ರಮುಖವಾಗಿ ಕಂಡು ಬರುವ ಮೊಡವೆ ಸಮಸ್ಯೆ ಹೋಗಲಾಡಿಸುವಲ್ಲಿ ಕೂಡ ಓಟ್ಸ್ ತುಂಬಾ ಸಹಕಾರಿಯಾಗಿದೆ. ಮುಖ ತುಂಬಾ ಎಣ್ಣೆ-ಎಣ್ಣೆಯಾಗುತ್ತಿದ್ದರೆ ಮೇಕಪ್‌ ಮಾಡಿದರೂ ಆಕರ್ಷಕವಾಗಿ ಕಾಣುವುದಿಲ್ಲ ಮುಖದಲ್ಲಿರುವ ಜಿಡ್ಡಿನಂಶ ತೆಗೆದು ತ್ವಚೆ ತಾಜಾತನದಿಂದ ಹೊಳೆಯಲು ಓಟ್ಸ್‌ನ ಸಹಾಯದಿಂದ ಸಾಧ್ಯವಾಗುತ್ತದೆ.

Oats

ಇಲ್ಲಿ ನಾವು ತ್ವಚೆ ಹಾಗೂ ಕೂದಲು ಆರೋಗ್ಯಕರವಾಗಿ ಮತ್ತು ಆಕರ್ಷಕವಾಗಿ ಕಾಣಲು ಓಟ್ಸ್ ಅನ್ನು ಯಾವ ರೀತಿ ಬಳಸಬೇಕು, ಯಾವೆಲ್ಲಾ ಸೌಂದರ್ಯ ಸಮಸ್ಯೆಯನ್ನು ಹೆಚ್ಚಿನ ಹಣ ಖರ್ಚುಯಿಲ್ಲದೆ ಓಟ್ಸ್ ಬಳಸಿ ನಿವಾರಿಸಬಹುದು ಎಂದು ಹೇಳಿದ್ದೇವೆ ನೋಡಿ:

1. ಮೊಡವೆ ಹೋಗಲಾಡಿಸಲು ಸಹಕಾರಿ:

1. ಮೊಡವೆ ಹೋಗಲಾಡಿಸಲು ಸಹಕಾರಿ:

ಓಟ್ಸ್‌ ಮುಖದಲ್ಲಿರುವ ಜಿಡ್ಡಿನಂಶ ತೆಗೆಯುವುದರಿಂದ ಮೊಡವೆ ನಿಯಂತ್ರಣದಲ್ಲಿ ಸಹಕಾರಿ. ಇದಕ್ಕಾಗಿ ನೀವು ಅರ್ಧ ಕಪ್‌ ನೀರನ್ನು ತೆಗೆದುಕೊಂಡ ಕಾಯಿಸಿ, ಅದಕ್ಕೆ ಓಟ್‌ಮೀಲ್‌ ಹಾಕಿ ತಿರುಗಿಸಿ, ಆಗ ಪೇಸ್ಟ್ ರೀತಿ ಉಂಟಾಗುತ್ತದೆ, ಈ ಓಟ್‌ಮೇಲ್‌ ಪೇಸ್ಟ್‌ ಅನ್ನು ತಣ್ಣಗಾಗಲು ಬಿಡಿ. ನಂತರ ಮುಖಕ್ಕೆ ಈ ಓಟ್‌ಮೀಲ್‌ ಪೇಸ್ಟ್ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಫೇಸ್‌ ಮಾಸ್ಕ್ ಮಾಡುವುದಾದರೆ ಅದಕ್ಕೆ ಟೊಮೆಟೊ ರಸ ಅಥವಾ ಮೊಟ್ಟೆಯ ಬಿಳಿ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿ ತೆಗೆಯಿರಿ. ಹೀಗೆ ಮಾಡುವುದರಿಂದ ಮುಖದಲ್ಲಿ ಜಿಡ್ಡಿನಂಶ ಇಲ್ಲವಾಗುವುದುಲ.

ಒಟ್ಸ್ ಮೀಲ್ ಸ್ಕ್ರಬ್ ಕೂಡ ಮೊಡವೆಯನ್ನು ಕಡಿಮೆ ಮಡುತ್ತದೆ. ಈ ಸ್ಕ್ರಬ್‌ ನಿರ್ಜೀವ ತ್ವಚೆಯನ್ನು ತೆಗೆದು ಹಾಕಿ ತ್ವಚೆಯನ್ನು ಮೃದುವಾಗಿಸುತ್ತದೆ.

ಓಟ್‌ಮೀಲ್‌ ಸ್ಕ್ರಬ್‌ ರೆಸಿಪಿ

ಓಟ್‌ಮೀಲ್‌ ಪುಡಿ 1 ಚಮಚ, 1 ಚಮಚ ಬ್ರೌನ್‌ ಶುಗರ್, 1 ಚಮಚ ಜೇನು ಹಾಗೂ ಆಲೀವ್ ಅಥವಾ ಜೊಜೊಬಾ ಎಣ್ಣೆ ಹಾಕಿ ಮಿಕ್ಸ್ ಮಾಡಿ, ಅದರಲ್ಲಿ ಸ್ವಲ್ಪ ತೆಗೆದು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಸ್ಕ್ರಬ್‌ ಮಾಡಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಸೂಚನೆ: ಕೆಲವರ ತ್ವಚೆಗೆ ಓಟ್ಸ್ ಅಷ್ಟಾಗಿ ಆಗಿ ಬರುವುದಿಲ್ಲ, ನೀವು ಬಳಸುವ ಮೊದಲು ಕೈಗೆ ಹಚ್ಚಿ ಪರೀಕ್ಷಿಸಿ.

2. ಒಣ ತ್ವಚೆ ಹಾಗೂ ತುರಿಕೆಯನ್ನು ಹೋಲಾಡಿಸುತ್ತದೆ

2. ಒಣ ತ್ವಚೆ ಹಾಗೂ ತುರಿಕೆಯನ್ನು ಹೋಲಾಡಿಸುತ್ತದೆ

ಓಟ್‌ಮೀಲ್ ಉರಿಯೂತ ಕಡಿಮೆ ಮಾಡುವ ಗುಣವಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಒಣ ತ್ವಚೆ, ತುರಿಕೆಯನ್ನು ಗುಣ ಪಡಿಸಲು ಸಹಕಾರಿ. ಇನ್ನು ಓಟ್‌ಮೀಲ್‌ ಅನ್ನು ಸ್ನಾನ ಮಾಡುವಾಗ ಕೂಡ ಬಳಸಬಹುದು. ನಿಮ್ಮ ಬಾತ್‌ ಟಬ್‌ಗೆ ಅಡುಗೆ ಸೋಡಾ ಹಾಗೂ ಓಟ್ಸ್‌ ಹಾಕಿ ಅದರಲ್ಲಿ 15 ನಿಮಿಷ ನಿಮ್ಮ ಮೈಯನ್ನು ಮುಳುಗಿಸಿ, ನಂತರ ಟವಲ್‌ನಿಂದ ಒರೆಸಿ.

ಇದಲ್ಲದಿದ್ದರೆ ಓಟ್‌ ಮೀಲ್‌ ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಗೂ ಆಲೀವ್ ಅಥವಾ ಜೊಜೊಬೊ ಎಣ್ಣೆ ಹಾಕಿ ಮಿಕ್ಸ್ ಮಾಡಿ ಅದನ್ನು ಮೈಗೆ ಹಚ್ಚಿ 15 ನಿಮಿಷ ಬಿಟ್ಟು ಮೈ ತೊಳೆದರೆ ತ್ವಚೆಯಲ್ಲಿ ತುರಿಕೆ ಕಡಿಮೆಯಾಗುವುದು. ಓಟ್‌ ಮೀಲ್‌ಗೆ ನೀರಿನ ಬದಲು ಹಾಲು ಹಾಕಿ ಬಳಸಿದರೆ ತ್ವಚೆಗೆ ಮತ್ತಷ್ಟು ಒಳ್ಳೆಯದು.

3. ತ್ವಚೆಯ ಮಾಯಿಶ್ಚರೈಸರ್ ಕಾಪಾಡುತ್ತದೆ

3. ತ್ವಚೆಯ ಮಾಯಿಶ್ಚರೈಸರ್ ಕಾಪಾಡುತ್ತದೆ

ತ್ವಚೆಯಲ್ಲಿ ತೇವಾಂಶ ಕಾಪಾಡಲು ನೈಸರ್ಗಿಕವಾದ ಮಾಯಿಶ್ಚರೈಸರ್ ಅಂತೆ ಓಟ್‌ಮೀಲ್‌ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಬೇಟಾ ಗ್ಲುಕಾನ್‌ ನಿಮ್ಮ ತ್ವಚೆಗೆ ಉತ್ತಮವಾ ಮಾಯಿಶ್ಚರೈಸರ್ ಆಗಿದೆ.

ಮಾಯಿಶ್ಚರೈಸರ್ ಮಾಡುವುದು ಹೇಗೆ?

2 ಕಪ್ ಓಟ್ಸ್‌ಗೆ 1 ಕಪ್ ಹಾಲು ಹಾಗೂ 1 ಚಮಚ ಜೇನು ಹಾಕಿ ಮಿಶ್ರ ಮಾಡಿ. ಇದನ್ನು ತ್ವಚೆಗೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಮೈ ತೊಳೆದರೆ ತ್ವಚೆಯಲ್ಲಿ ತೇವಾಂಶ ಉಳಿಯುವುದು.

4. ಚಿಕನ್ ಪಾಕ್ಸ್ ಕಲೆ ಹೋಗಲಾಡಿಸುತ್ತದೆ

4. ಚಿಕನ್ ಪಾಕ್ಸ್ ಕಲೆ ಹೋಗಲಾಡಿಸುತ್ತದೆ

ಮುಖದ ಕಾಂತಿ ಮತ್ತಷ್ಟು ಹೆಚ್ಚಬೇಕು, ಮೈ ಬಣ್ಣ ಇನ್ನೂ ಸ್ವಲ್ಪ ಬಿಳಿಯಾಗಬೇಕೆಂದು ಬಯಸುವುದಾದರೆ ಓಟ್ಸ್‌ ಸ್ಕ್ರಬ್ ದಿನಾ ಬಳಸಿದರೆ ಮೈ ಕಾಂತಿ ಹೆಚ್ಚುವುದು. ಇನ್ನು ಚಿಕನ್ ಪಾಕ್ಸ್‌ನಿಂದ ಬಿದ್ದಂತಹ ಕಲೆ ಹೋಗಲಾಡಿಸಲು ಓಟ್ಸ್ ಸಹಕಾರಿ.

5. ನ್ಯಾಚುರಲ್‌ ಕ್ಲೆನ್ಸರ್

5. ನ್ಯಾಚುರಲ್‌ ಕ್ಲೆನ್ಸರ್

ಓಟ್ಸ್‌ನಲ್ಲಿರುವ ಸಪಾಯಿಂಟ್‌ ಎಂಬ ಅಂಶ ನೈಸರ್ಗಿಕವಾದ ಕ್ಲೆನ್ಸರ್ ರೀತಿ ವರ್ತಿಸುತ್ತದೆ. ಇದು ತ್ವಚೆಯಲ್ಲಿರುವ ಕೊಳೆ ಹಾಗೂ ಎಣ್ಣೆಯಂಶ ತೆಗೆದು ಹಾಗೂ ರಂಧ್ರಗಳನ್ನು ಮುಚ್ಚುತ್ತದೆ. ಇದರಿಂದ ತ್ವಚೆ ಆಕರ್ಷಕವಾಗಿ ಕಾಣುತ್ತದೆ. ಇನ್ನು ಮೇಕಪ್ ಬಳಸಿದಾಗ ತ್ವಚೆಗೆ ಹಾನಿಯಂಟಾಗುತ್ತದೆ, ಇದನ್ನುತಡೆಗಟ್ಟುವಲ್ಲಿಯೂ ಓಟ್ಸ್‌ ಸಹಕಾರಿ. ಇದನ್ನು ತ್ವಚೆ ಆರೈಕೆಯಲ್ಲಿ ಬಳಸುವುದರಿಂದ ಆಕರ್ಷಕವಾದ ಹಾಗೂ ಮೃದುವಾದ ತ್ವಚೆ ನಿಮ್ಮದಾಗಿಸಬಹುದು.

ಓಟ್ಸ್ ಬಳಸಿ ಕೂದಲಿನ ಆರೈಕೆಯೂ ಮಾಡಬಹುದಾಗಿದ್ದು, ಇದನ್ನು ಕೂದಲಿನ ಆರೈಕೆಯಲ್ಲಿ ಬಳಸುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

ತಲೆಹೊಟ್ಟು ಹೋಗಲಾಡಿಸುತ್ತದೆ

ತಲೆಹೊಟ್ಟು ಹೋಗಲಾಡಿಸುತ್ತದೆ

ತಲೆಹೊಟ್ಟಿನ ಸಮಸ್ಯೆ ಕಾಣಿಸಿದರೆ 1 ಕಪ್‌ ಓಟ್‌ಮೀಲ್ ಅನ್ನು ಪುಡಿ ಮಾಡಿ. ಅದಕ್ಕೆ 2 ಕಪ್ ನೀರು ಹಾಕಿ, ಅದರಲ್ಲಿ ಓಟ್‌ ಮೀಲ್‌ ಕಲೆಸಿ 10 ನಿಮಿಷ ಇಡಿ. ನಂತರ ಈ ಮಿಶ್ರಣಕ್ಕೆ 1 ಚಮಚ ನಿಂಬೆರಸ ಹಾಗೂ 1 ಚಮಚ ಆ್ಯಪಲ್ ಸಿಡರ್ ಹಾಕಿ, ನಂತರ ತಲೆಗೆ ಹಚ್ಚುವ ಎಣ್ಣೆ 20 ಹನಿ ಹಾಕಿ ಮಿಶ್ರ ಮಾಡಿ ಶ್ಯಾಂಪೂ ಬಾಟಲಿನಲ್ಲಿ ಹಾಕಿಡಿ. ನಂತರ ತಲೆಯನ್ನು ನೆನೆಸಿ ಈ ಮಿಶ್ರಣ ಹಚ್ಚಿ 20 ನಿಮಿಷ ಬಿಟ್ಟು ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ಹೇರ್ ಕಲರ್ ಮಾಡಿದ್ದರೆ ನಿಂಬೆರಸ ಹಾಕಿರುವುದರಿಂದ ಬೇಗನೆ ಕಲರ್ ಹೋಗುತ್ತದೆ. ಓಟ್‌ಸ್ಕ್ರಬ್ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ತಲೆಗೆ ಹಚ್ಚಿದರೆ ಸಾಕು ತಲೆಹೊಟ್ಟಿನ ಸಮಸ್ಯೆ ಇಲ್ಲವಾಗುವುದು.

ಕೂದಲು ಉದುರುವುದನ್ನು ತಡೆಗಟ್ಟುತ್ತದೆ

ಕೂದಲು ಉದುರುವುದನ್ನು ತಡೆಗಟ್ಟುತ್ತದೆ

ಓಟ್‌ ಮೀಲ್‌ ತಲೆಹೊಟ್ಟು ತಡೆಗಟ್ಟುವುದು ಮಾತ್ರವಲ್ಲ ಕೂದಲು ಉದುರುವುದನ್ನು ತಡೆಗಟ್ಟುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಲು ತಾಜಾ ಹಾಲು, ಬಾದಾಮಿ ಹಾಲು ಹಾಗೂ ಓಟ್ಸ್‌ ಮಿಕ್ಸ್ ಮಾಡಿ ಹೇರ್ ಮಾಸ್ಕ್‌ ಮಾಡಿ, ಅರ್ಧ ಗಂಟೆ ಬಿಟ್ಟು ಮೈಲ್ಡ್ ಶ್ಯಾಂಪೂ ಬಳಸಿ ಕೂದಲು ತೊಳೆಯಿರಿ.

ಹೀಗೆ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ಬಲವಾಗುವುದು, ಇದರಲ್ಲಿರುವ ಒಮೆಗಾ 6 ಹಾನಿಯಾದ ಕೂದಲನ್ನು ಸರಿಪಡಿಸುತ್ತದೆ ಹಾಗೂ ಕೂದಲು ನೋಡಲು ಕೂಡ ಸೊಂಪಾಗಿ ಕಾಣುವುದು.

English summary

Benefits Of Oats For Skin, Hair

Do you know oats is very useful to treat beauty related problem. Oats help prevent acne and improve complexion and also avoid hair fall, How to use oats to enhance beauty, here is a tips.
X
Desktop Bottom Promotion