For Quick Alerts
ALLOW NOTIFICATIONS  
For Daily Alerts

ಎಳ್ಳೆಣ್ಣೆ: ಚಳಿಗಾಲದಲ್ಲಿ ಬೆಚ್ಚಗಿರಲು ಸಹಾಯ ಮಾಡುವ ನೈಸರ್ಗಿಕ ಉತ್ಪನ್ನ

|

ಚಳಿಗಾಲ ಎಂದಾಗ ಮೊದಲು ಮನಸ್ಸು ಹೇಳುವುದು ಬೆಚ್ಚಗಿರಲು ಸಿದ್ಧರಾಗಬೇಕು ಎಂದು. ವಾತಾವರಣದಲ್ಲಿ ಚಳಿಯು ಹೆಚ್ಚಾದಂತೆ ತಂಪಾದ ಅನುಭವ ನೀಡುವುದು. ಅದೊಂದು ಬಗೆಯಲ್ಲಿ ಸಂತೋಷ ಹಾಗೂ ಸಂಭ್ರಮವನ್ನು ಹೆಚ್ಚಿಸುವುದು. ಅದರೊಟ್ಟಿಗೆ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕಾಗುವುದು. ಇಲ್ಲವಾದರೆ ಅನೇಕ ಅನೇಕ ಸಣ್ಣ ಪುಟ್ಟ ಸಮಸ್ಯೆಗಳು ಕಿರಿಕಿರಿಯನ್ನುಂಟು ಮಾಡುವುದು. ಹಾಗಾಗಿ ಚಳಿಗಾಲ ಆರಂಭವಾಯಿತು ಎಂದಾಕ್ಷಣ ಸಾಕಷ್ಟು ಆರೈಕೆಯ ವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಜೊತೆಗೆ ಅದರ ಅನ್ವಯ ಅಥವಾ ಬಳಕೆ ಮಾಡುವುದರ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು.

ಚಳಿಗಾಲದ ಚಳಿಗೆ ನಮ್ಮ ದೇಹದ ಆರೋಗ್ಯ ಬಹುಬೇಗ ಸೂಕ್ಷ್ಮತೆಯನ್ನು ಪಡೆದುಕೊಳ್ಳುವುದು. ಅದರಲ್ಲೂ ತ್ವಚೆ, ಕೇಶರಾಶಿ ಹಾಗೂ ಆಂತರಿಕ ಆರೋಗ್ಯದಲ್ಲಿ ಅನೇಕ ವ್ಯತ್ಯಾಸಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ ನಮ್ಮ ಪುರಾತನ ಕಾಲದ ಆರೈಕೆ ವಿಧಾನವನ್ನು ಹುಡುಕುವುದು ಸೂಕ್ತ. ಮಾರುಕಟ್ಟೆಯಲ್ಲಿ ಸಾಕಷ್ಟು ಆರೋಗ್ಯಕರ ಉತ್ಪನ್ನಗಳು ದೊರೆಯುತ್ತವೆ. ಆದರೆ ಅವೆಲ್ಲವೂ ಆರೋಗ್ಯದ ಮೇಲೆ ಒಂದೇ ಪರಿಣಾಮ ಬೀರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಆ ನಿಟ್ಟಿನಲ್ಲಿ ಆಯ್ದುಕೊಳ್ಳುವ ಉತ್ಪನ್ನದ ಮೇಲೂ ಸಾಕಷ್ಟು ಅರಿವನ್ನು ಹೊಂದಿರಬೇಕಾಗುವುದು ಅನಿವಾರ್ಯ.

ಚಳಿಗಾಲಕ್ಕೆ ಉಂಟಾಗುವ ತ್ವಚೆಯ ಸಮಸ್ಯೆ ಹಾಗೂ ಕೇಶರಾಶಿಯ ತೊಂದರೆಗಳಿಗೆ ಸಹಾಯ ಮಾಡಲು ಸಾಕಷ್ಟು ಆಯುರ್ವೇದದ ಉತ್ಪನ್ನಗಳು ಸಹಾಯ ಮಾಡುತ್ತವೆ. ಕಾಳುಗಳಿಂದ ತಯಾರಿಸುವ ಎಣ್ಣೆಗಳು ಅದ್ಭುತ ಪರಿಣಾಮವನ್ನು ನೀಡುತ್ತವೆ. ಜೊತೆಗೆ ಅವುಗಳ ಬಳಕೆಯ ವಿಧಾನವನ್ನು ಹಾಗೂ ಉಪಯೋಗಗಳನ್ನು ನಾವು ಅರಿತಿರಬೇಕಷ್ಟೇ. ಅಂತಹ ಒಂದು ಅದ್ಭುತ ಎಣ್ಣೆಗಳಲ್ಲಿ ಎಳ್ಳೆಣ್ಣೆಯು ಒಂದು. ಇದು ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯ ಕಾಪಾಡಲು ಅದ್ಭುತವಾದ ಸಹಕಾರ ನೀಡುವುದು. ಅಲ್ಲದೆ ಇದರ ಉಪಯೋಗದಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು.

ಜಿಂಜೆಲಿ ಎಣ್ಣೆ ಎಂತಲೂ ಕರೆಯುತ್ತಾರೆ

ಜಿಂಜೆಲಿ ಎಣ್ಣೆ ಎಂತಲೂ ಕರೆಯುತ್ತಾರೆ

ಎಳ್ಳೆಣ್ಣೆಯನ್ನು ಜಿಂಜೆಲಿ ಎಣ್ಣೆ ಎಂತಲೂ ಕರೆಯುವುದುಂಟು. ಇದರಲ್ಲಿ ಹೆಚ್ಚು ಪೋಷಣೆಯ ಗುಣ ಹಾಗೂ ಗುಣಪಡಿಸು ಸಾಮರ್ಥ್ಯ ಇರುತ್ತದೆ. ಅಡುಗೆಯ ಸುವಾಸನೆ ಹಾಗೂ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುವ ಎಳ್ಳೆಣ್ಣೆಯು ಸೌಂದರ್ಯದ ಆರೈಕೆ ಹಾಗೂ ವರ್ಧಕ ಸಾಮಥ್ರ್ಯವನ್ನು ಹೊಂದಿದೆ. ಇದರ ದೀರ್ಘಕಾಲದ ಬಳಕೆಯಿಂದ ತ್ವಚೆಯು ಹೆಚ್ಚು ಆರೋಗ್ಯ ಹಾಗೂ ನಯವಾದ ಹೊಳಪಿನಿಂದ ಕೂಡಿರುತ್ತದೆ. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ, ಬಿ, ಕ್ಯಾಲ್ಸಿಯಂ, ಫಾಸ್ಫರಸ್, ಮ್ಯಾಗ್ನೀಸಿಯಮ್ ಮತ್ತು ಖನಿಜಾಂಶಗಳಿಂದ ಹೆಚ್ಚು ಸಮೃದ್ಧವಾಗಿರುತ್ತದೆ. ಹಾಗಾಗಿ ಇದು ಚರ್ಮದ ಆರೋಗ್ಯ ಹಾಗೂ ಕೂದಲನ್ನು ಬಲಪಡಿಸಲು ಆಳವಾದ ಪೋಷಣೆಯನ್ನು ನೀಡುವುದು.

ಎಳ್ಳೆಣ್ಣೆಯು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸುವ ಸಾಮಾನ್ಯವಾದ ಉತ್ಪನ್ನವಾಗಿದೆ. ಸಾವಿರಾರು ವರ್ಷಗಳಿಂದ ಆರೋಗ್ಯ ರಕ್ಷಣೆಗೆ ಅಥವಾ ಔಷಧದ ರೂಪದಲ್ಲಿ ಆರೈಕೆಗೆ ಬಳಸುವ ಒಂದು ಅದ್ಭುತವಾದ ಉತ್ಪನ್ನ. ದೀರ್ಘ ಆರೋಗ್ಯ ಹಾಗೂ ಆಯುಷ್ಯವನ್ನು ನೀಡುವ ಸಾಮಥ್ರ್ಯ ಎಳ್ಳೆಣ್ಣೆ ಪಡೆದುಕೊಂಡಿದೆ. ಶ್ರೀಮಂತ ಪೌಷ್ಟಿಕಾಂಶವನ್ನು ಒಳಗೊಂಡಿರುವ ಎಳ್ಳು ಆರೋಗ್ಯ ವೃದ್ಧಿಯ ಸಂಕೇತವೂ ಹೌದು. ಇದನ್ನು ದೇಹದ ಆರೋಗ್ಯ ಅಥವಾ ಆರೈಕೆಯ ವಿಧಾನದಲ್ಲಿ ಹೆಚು ವರ್ಧಕ ತೈಲವನ್ನಾಗಿ ಬಳಸಲಾಗುವುದು.

ಚಳಿಯಿಂದಾಗಿ ನೀವು ಸಾಕಷ್ಟು ಸೌಂದರ್ಯ ಸಮಸ್ಯೆಯನ್ನು ಹೊಂದಿದೀರಿ, ಅದಕ್ಕಾಗಿ ಸೂಕ್ತ ಆರೈಕೆಯ ವಿಧಾನದ ಹುಡುಕಾಟದಲ್ಲಿ ಇದ್ದೀರಿ ಎಂದಾದರೆ ನಿಮಗೆ ಅತ್ಯುತ್ತಮವಾದ ಆಯ್ಕೆ ಎಳ್ಳೆಣ್ಣೆ ಎನ್ನಬಹುದು. ಎಳ್ಳೆಣ್ಣೆಯನ್ನು ಬಳಸುವುದರ ಮೂಲಕ ಯಾವೆಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಅದರ ಅನ್ವಯ ಅಥವಾ ಬಳಕೆಯ ವಿಧಾನ ಹೇಗೆ? ಅದರಿಂದಾಗುವ ಫಲಿತಾಂಶ ಏನು? ಎನ್ನುವಂತಹ ಸೂಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗಾಗಿ ಲೇಖನದ ಮುಂದಿನ ಭಾಗದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದೆ.

ನಿತ್ಯವೂ ಎಳ್ಳೆಣ್ಣೆಯ ಮಸಾಜ್

ನಿತ್ಯವೂ ಎಳ್ಳೆಣ್ಣೆಯ ಮಸಾಜ್

ಚಳಿಗಾಲದಲ್ಲಿ ಆರೋಗ್ಯವನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುವುದು ಎಳ್ಳೆಣ್ಣೆಯ ಮಸಾಜ್. ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಆಯುರ್ವೇದದಲ್ಲಿ ಎಳ್ಳೆಣ್ಣೆಯ ಮಸಾಜ್ ಅನ್ನು ಅನುಸರಿಸುತ್ತಾರೆ. ಎಳ್ಳೆಣ್ಣೆಯ ಮಸಾಜ್ ಮಾಡುವುದರಿಂದ ಒತ್ತಡಗಳು ನಿವಾರಣೆಯಾಗುವುದು. ಸ್ನಾಯುಗಳು, ಮೂಳೆಗಳು, ಕೀಲುಗಳು ಮತ್ತು ಚರ್ಮವು ಶಕ್ತಿಯನ್ನು ಪಡೆದುಕೊಳ್ಳುವುದರ ಮೂಲಕ ಆರೋಗ್ಯಕರವಾಗಿರುತ್ತದೆ. ನಿದ್ರೆಯ ಸಮಸ್ಯೆ ಹಾಗೂ ವಾತಾವರಣದಲ್ಲಿ ಅತಿಯಾದ ಶುಷ್ಕಗಾಳಿಯ ಚಳಿ ಇದ್ದರೆ ಚರ್ಮದ ಆರೋಗ್ಯವು ಬಹುಬೇಗ ಹಾಳಾಗುವುದು. ಅಂತಹ ಸಂದರ್ಭದಲ್ಲಿ ಎಳ್ಳೆಣ್ಣೆಯ ಪೋಷಣೆ ಹಾಗೂ ಮಸಾಜ್ ಮಾಡುವುದರಿಂದ ಉತ್ತಮ ಆರೈಕೆಯನ್ನು ಪಡೆದುಕೊಳ್ಳಬಹುದು. ಚಳಿಗಾಲದಲ್ಲಿ ತಣ್ಣನೆಯ ಕೈ ಹಾಗೂ ಪಾದಗಳನ್ನು ಹೊಂದುವುದರ ಮೂಲಕ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದರೆ ತಕ್ಷಣದಲ್ಲಿ ಆರೈಕೆ ಮಾಡುವುದರ ಮೂಲಕ ಪೋಷಣೆ ನೀಡುವುದು ಎಳ್ಳೆಣ್ಣೆಯ ಮಸಾಜ್ ಎಂದು ಹೇಳಲಾಗುವುದು.

Most Read: ಎಳ್ಳಿನ ಬೀಜ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಎಳ್ಳೆಣ್ಣೆಯ ಮಸಾಜ್ ಆರೈಕೆಯ ವಿಧಾನ ಹೇಗೆ?

ಎಳ್ಳೆಣ್ಣೆಯ ಮಸಾಜ್ ಆರೈಕೆಯ ವಿಧಾನ ಹೇಗೆ?

ಎಳ್ಳನ್ನು ಕಂದು ಬಣ್ಣಕ್ಕೆ ಬರುವ ತನಕ ಚೆನ್ನಾಗಿ ಹುರಿದು, ಆರಿದ ನಂತರ ಎಣ್ಣೆಯನ್ನು ತೆಗೆಯಲಾಗುವುದು. ಇದು ಸುಂದರವಾದ ಸುವಾಸನೆಯನ್ನು ಹೊಂದಿರುವ ಶುದ್ಧವಾದ ಎಣ್ಣೆಯಾಗಿರುತ್ತದೆ. ನಿತ್ಯವೂ ಮುಂಜಾನೆ ಎದ್ದ ನಂತರ ಶವರ್‍ನಲ್ಲಿ ಸ್ನಾನವನ್ನು ಮಾಡಬೇಕು. ನಂತರ ಎಳ್ಳೆಣ್ಣೆಯ ಮಸಾಜ್ ಹೊಂದುವುದರಿಂದ ಆಹ್ಲಾದಕರವಾದ ಉದ್ಗಾರದೊಂದಿಗೆ ಸುವಾಸನೆಯಿಂದ ಕೂಡಿರುತ್ತದೆ. ಅಲ್ಲದೆ ಬೆಚ್ಚಗಿನ ಅನುಭವ ನೀಡುವುದು.

ಬೆಚ್ಚಗಾಗಲು ಎಳ್ಳೆಣ್ಣೆಯ ಮಸಾಜ್

ಬೆಚ್ಚಗಾಗಲು ಎಳ್ಳೆಣ್ಣೆಯ ಮಸಾಜ್

ಅತಿಯಾದ ಚಳಿಯನ್ನು ಅನುಭವಿಸುತ್ತಿರುವಾಗ ಎಳ್ಳೆಣ್ಣೆಯ ಮಸಾಜ್‍ಅನ್ನು ಅಥವಾ ಎಳ್ಳೆಣ್ಣೆಯನ್ನು ದೇಹಕ್ಕೆ ಅನ್ವಯಿಸಿಕೊಳ್ಳುವುದರಿಂದ ದೇಹವು ಬಹುಬೇಗ ಕೋಣೆಯ ತಾಪಮಾನಕ್ಕೆ ಬರುತ್ತದೆ. ಎಳ್ಳೆಣ್ಣೆಯನ್ನು ಬೆಚ್ಚಗಾಗಲು ಸ್ಟೋ ಮೇಲೆ ಒಂದು ಲೋಹದ ಬೋಗುಣಿಯಲ್ಲಿ ಹಾಕಿ ಬಿಸಿ ಮಾಡಿ. ಅತಿಯಾಗಿ ಕುದಿಹೊಂದುವುದರ ಮೂಲಕ ಹೊಗೆಯು ಉಂಟಾಗ ಬಾರದು. ಬೋಗಣಿಯಲ್ಲಿರುವ ಎಣ್ಣೆಯು ಸ್ವಲ್ಪ ಬಿಸಿಯಾಗುತ್ತಿದ್ದಂತೆ ಅದರ ಹೊಗೆಯನ್ನು ಮುಖಕೊಟ್ಟು ಸ್ವೀಕರಿಸಿ. ಇದರಿಂದಲೂ ದೇಹವು ಹೆಚ್ಚು ಆರೋಗ್ಯ ಹಾಗೂ ಬೆಚ್ಚಗಾಗಿ ಇರುವುದು.

ಆರಾಮದಾಯಕ ಅನುಭವ ಪಡೆಯಲು

ಆರಾಮದಾಯಕ ಅನುಭವ ಪಡೆಯಲು

ಸರಳವಾದ ವಿಧಾನದ ಮೂಲಕವೇ ಆರಾಮದಾಯಕ ಅನುಭವವನ್ನು ಪಡೆಯಬೇಕು ಎಂದಾದರೆ ಎಳ್ಳೆಣ್ಣೆಯಿಂದ ದೇಹದ ಮಸಾಜ್ ಮಾಡಿಕೊಳ್ಳುವುದು ಸೂಕ್ತ. ದೇಹದ ಎಲ್ಲಾ ಭಾಗಕ್ಕೂ ನಿಧಾನಕ್ಕೆ ಎಣ್ಣೆಯನ್ನು ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ. ಅದು ನೆತ್ತಿಯಿಂದ ಪಾದದವರೆಗೂ ಸೂಕ್ತ ರೀತಿಯಲ್ಲಿ ಅನ್ವಯಿಸಬೇಕು. ಇದರಿಂದ ದೇಹದ ಉಷ್ಣತೆ ಸಮಪ್ರಮಾಣದಲ್ಲಿ ಇರುತ್ತದೆ. ಜೊತೆಗೆ ಚರ್ಮವು ತೇವಾಂಶದಿಂದ ಕೂಡುವುದರ ಮೂಲಕ ಹೊಳಪನ್ನು ಪಡೆದುಕೊಳ್ಳುತ್ತದೆ. ಆರಾಮದಾಯಕ ಅನುಭವವನ್ನು ನೀಡುವುದು.

ಮಸಾಜ್ ಮಾಡುವಾಗ ಬೇಕಾದ ಎಚ್ಚರಿಕೆಗಳು

ಮಸಾಜ್ ಮಾಡುವಾಗ ಬೇಕಾದ ಎಚ್ಚರಿಕೆಗಳು

ಮಸಾಜ್ ಮಾಡುವ ಮುನ್ನ ಎಣ್ಣೆಯನ್ನು ಉಗುರು ಬೆಚ್ಚಗಾಗುವಷ್ಟು ಬಿಸಿ ಮಾಡಿಕೊಳ್ಳಬೇಕು. ನಂತರ ಅದನ್ನು ದೇಹಕ್ಕೆ ಅನ್ವಯಿಸದ ನಂತರ, ಚರ್ಮ ಎಣ್ಣೆಯನ್ನು ಹೀರಿಕೊಳ್ಳಲು 15 ನಿಮಿಷಗಳ ಕಾಲ ಬಿಡಬೇಕು. ನಂತರ ನಿಧಾನವಾಗಿ ಮಸಾಜ್ ಮಾಡಿ. ಬಳಿಕ ಮೃದುವಾದ ಸೋಪ್ ಬಳಕೆ ಮಾಡುವುದರ ಮೂಲಕ ಸ್ವಚ್ಛಗೊಳಿಸಬೇಕು.

ಎಳ್ಳೆಣ್ಣೆಯಲ್ಲಿ ಎಂತಹ ಪರಿಣಾಮಕಾರಿ ಗುಣವಿದೆ?

ಎಳ್ಳೆಣ್ಣೆಯಲ್ಲಿ ಎಂತಹ ಪರಿಣಾಮಕಾರಿ ಗುಣವಿದೆ?

ಆಯುರ್ವೇದದ ಪರಿಭಾಷೆಯಲ್ಲಿ ಎಳ್ಳೆಣ್ಣೆಯು ವಾತ ದೋಷವನ್ನು ಸಮತೋಲನಗೊಳಿಸುತ್ತದೆ. ದೇಹದಲ್ಲಿ ಚಲನೆಯನು ನಿಯಂತ್ರಿಸುವ ಗುಣವನ್ನು ಪಡೆದುಕೊಂಡಿದೆ. ಎಳ್ಳೆಣ್ಣೆಯು ಬಹುಬೇಗ ಚರ್ಮದ ಆಳಕ್ಕೆ ಇಳಿದು ನರಮಂಡಲಗಳಲ್ಲಿ ಇರುವ ತೊಂದರೆಗಳನ್ನು ಬಹುಬೇಗ ನಿವಾರಿಸುವುದು. ಜೊತೆಗೆ ನರಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವುದರ ಮೂಲಕ ಆರೋಗ್ಯವಾಗಿರುವಂತೆ ಮಾಡುವುದು. ಶೀತ ಉಂಟಾಗುವುದನ್ನು ಬಹುಬೇಗ ನಿಯಂತ್ರಿಸುವುದು. ಉತ್ತಮವಾದ ಪೋಷಕಾಂಶ ಹಾಗೂ ವಿಟಮಿನ್ ಗುಣಗಳನ್ನು ಹೊಂದಿರುವುದರಿಂದ ಚರ್ಮದ ಮೇಲಿರುವ ದೋಷಗಳನ್ನು ನಿವಾರಿಸುವುದು. ಚರ್ಮದ ಮೇಲ್ಭಾಗದಲ್ಲಿ ಉಂಟಾಗುವ ಉರಿಯೂತಗಳನ್ನು ನಿಯಂತ್ರಿಸುತ್ತದೆ. ಸತ್ತ ಜೀವಕೋಶಗಳನ್ನು ನಿವಾರಿಸಿ, ಹೊಸ ಕೊಶಗಳ ಉತ್ಪಾದನೆಗೆ ಉತ್ತೇಜನ ನೀಡುವುದು. ಜೊತೆಗೆ ಚರ್ಮದಲ್ಲಿ ತೇವಾಂಶ ಇರುವಂತೆ ಮಾಡುವುದು. ಆಗ ಚರ್ಮವು ಆರೋಗ್ಯಕರವಾಗಿ ಕಾಂತಿಯನ್ನು ಪಡೆದುಕೊಳ್ಳುವುದು.

Most Read: ಎಣ್ಣೆಗಳ ರಾಣಿ 'ಎಳ್ಳೆಣ್ಣೆ'ಯ ಆರೋಗ್ಯಕರ ಪ್ರಯೋಜನಗಳು

ತಲೆಗೆ ಎಳ್ಳೆಣ್ಣೆ ಬಳಸುವುದರಿಂದ ಆಗುವ ಪ್ರಯೋಜನಗಳು

ತಲೆಗೆ ಎಳ್ಳೆಣ್ಣೆ ಬಳಸುವುದರಿಂದ ಆಗುವ ಪ್ರಯೋಜನಗಳು

ತಲೆಗೆ ಎಳ್ಳೆಣ್ಣೆ ಬಳಸುವುದರಿಂದ ಶುಷ್ಕ ಗಾಳಿ ಹಾಗೂ ಮಾಲಿನ್ಯಗಳಿಂದ ಬಳಲಿದ ಕೇಶಗಳು ಪುನರ್ ಜೀವವನ್ನು ಪಡೆದುಕೊಳ್ಳುವುದು. ನೆತ್ತಿಗೆ ಎಳ್ಳೆಣ್ಣೆಯ ಬಳಕೆ ಮಾಡಿ ಮಸಾಜ್ ಮಾಡುವುದರಿಂದ ಕೂದಲುದುರುವುದು, ಹೊಟ್ಟು ಉಂಟಾಗುವುದು ಹಾಗೂ ಕೂದಲು ಬಣ್ಣ ಕಳೆದುಕೊಳ್ಳುವುದನ್ನು ನಿವಾರಿಸುತ್ತದೆ. ಕೂದಲ ಬುಡದ ವರೆಗೂ ಹೋಗಿ ಆರೈಕೆ ನೀಡುವುದರಿಂದ ಕೂದಲ ಬೆಳವಣಿಗೆ ಹಾಗೂ ಆರೋಗ್ಯವು ಉತ್ತಮವಾಗುವುದು. ಹೊಳಪಿನಿಂದ ಕೂದಲು ನಯವಾಗಿ ಗೋಚರಿಸುವುದು. ಅಲ್ಲದೆ ಸಾಕಷ್ಟು ಒತ್ತಡಗಳನ್ನು ನಿವಾರಿಸುವುದು. ನಿರಾಳವಾದ ಭಾವನೆ ನೀಡುವುದರ ಮೂಲಕ ಉತ್ಸಾಹವನ್ನು ನೀಡುವುದು. ನಿಯಮಿತವಾಗಿ ಎಳ್ಳೆಣ್ಣೆ ಬಳಕೆ ಅಥವಾ ಮಸಾಜ್ ಮಾಡುವುದರಿಂದ ಆರೋಗ್ಯದಲ್ಲಿ ಉಂಟಾಗುವ ನಿದ್ರಾ ಹೀನತೆ, ಆಯಾಸ ಸೇರಿದಂತೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳು ನಿವಾರಣೆಯಾಗುವವು. ಜೊತೆಗೆ ನಮ್ಮನ್ನು ಚಟುವಟಿಕಾಶೀಲರಾಗಿರುವಂತೆ ಉತ್ತೇಜನ ನೀಡುವುದು. ದೇಹದ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ನಿವಾರಿಸುವುದರ ಮೂಲಕ ಆರೋಗ್ಯವಾಗಿರುವಂತೆ ಮಾಡುವುದು.

ತೈಲ ಮತ್ತು ಪ್ರೀತಿ

ತೈಲ ಮತ್ತು ಪ್ರೀತಿ

ಎಳ್ಳೆಣ್ಣೆಯನ್ನು ಸಂಸ್ಕೃತದಲ್ಲಿ ಸ್ನೇಹ, ಮಾತೃ ಪ್ರೀತಿ, ಪ್ರೀತಿಯ ದಯೆ ಎನ್ನುವ ಅರ್ಥವನ್ನು ನೀಡುವುದು. ಆರೋಗ್ಯಕರವಾದ ಎಳ್ಳೆಣ್ಣೆಯು ತಾಯಿಯ ಪ್ರೀತಿಯಂತೆ ನಮ್ಮ ಆರೋಗ್ಯವನ್ನು ಪೋಷಿಸುವುದು ಎನ್ನುವ ಅರ್ಥವನ್ನು ನೀಡುವುದು.

English summary

Sesame Oil: A simple tips to help you stay warm in winter

Ayurveda extols the virtues of a sesame oil self massage to counter all kinds of ailments: to deal with stress, nourish the muscles, bones, joints and skin and improve sleep patterns; to relieve muscular pain and tension, make the skin healthy and glowing, improve circulation. If you suffer from cold hands and feet in winter you may notice an immediate benefit from improved circulation.
X
Desktop Bottom Promotion