For Quick Alerts
ALLOW NOTIFICATIONS  
For Daily Alerts

ಎದೆಯ ಮೇಲಿನ ಮೊಡವೆ ನಿವಾರಣೆಗೆ ಮನೆಮದ್ದುಗಳು

|

ಸಾಮಾನ್ಯವಾಗಿ ಜನರಿಗೆ ಕಾಡುವಂತಹ ಸಮಸ್ಯೆಯೆಂದರೆ ಅದು ಮೊಡವೆ. ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಮೂಡುವುದು. ಆದರೆ ಕೆಲವೊಂದು ಸಲ ದೇಹದ ಬೇರೆ ಭಾಗದಲ್ಲೂ ಮೊಡವೆಗಳು ಮೂಡುವುದು. ಅದರಲ್ಲೂ ಮುಖ್ಯವಾಗಿ ಎದೆಯ ಭಾಗದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಎದೆಯ ಮೊಡವೆ ಸಮಸ್ಯೆಯನ್ನು ಹೆಚ್ಚಾಗಿ ಹೆಚ್ಚಿನ ಜನರು ಎದುರಿಸಿರುವರು. ಎದೆಯಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಕಾಣದಂತೆ ಬಟ್ಟೆಯಿಂದ ಮುಚ್ಚಬಹುದು. ಆದರೆ ಅದರ ನೋವು ಹಾಗೂ ಉರಿಯೂತವು ಅತಿಯಾಗಿ ಇರುವುದು ಮತ್ತು ಇದನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದಕ್ಕಾಗಿ ಏನಾದರೂ ಚಿಕಿತ್ಸೆ ಮಾಡಿಕೊಳ್ಳಬೇಕು. ನೀವು ಕೂಡ ಎದೆಯಲ್ಲಿನ ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೆ ಪರಿಹಾರವನ್ನು ಹುಡುಕುತ್ತಿದ್ದರೆ ನೀವು ಈ ಲೇಖನವನ್ನು ಖಂಡಿತವಾಗಿಯೂ ಓದಲೇಬೇಕು.

Chest Acne

ಎದೆಯಲ್ಲಿ ಮೊಡವೆ ಮೂಡಲು ಕಾರಣಗಳು ಏನು

ಮೋದೋಗ್ರಂಥಿಯಲ್ಲಿನ ಸ್ರಾವವು ಅತಿಯಾದ ವೇಳೆ ಮೊಡವೆಗಳು ಕಾಣಿಸಿಕೊಳ್ಳುವುದು. ಇದರಿಂದ ಚರ್ಮದಲ್ಲಿನ ರಂಧ್ರಗಳು ಮುಚ್ಚಿ ಹೋಗುವುದು ಮತ್ತು ಕೂದಲಿನ ಕಿರುಚೀಲಗಳಿಗೆ ಸೋಂಕು ಉಂಟು ಮಾಡುವುದು. ಎದೆಯ ಭಾಗದಲ್ಲಿ ಅತೀ ಹೆಚ್ಚಿನ ಮೇದೋ ಗ್ರಂಥಿಗಳು ಇವೆ ಮತ್ತು ಇದರಿಂದಾಗಿ ಮೊಡವೆಗಳು ಕಾಣಿಸಿಕೊಳ್ಳುವುದು.

ಮೇಧೋಗ್ರಂಥಿಯು ಅತಿಯಾಗಿ ಸ್ರವಿಸಿದರೆ ಆಗ ಚರ್ಮದಲ್ಲಿನ ರಂಧ್ರಗಳು ಮುಚ್ಚಿಹೋಗುವುದು ಮತ್ತು ಇದರಿಂದಾಗಿ ಮೊಡವೆ ಕಾಣಿಸಿಕೊಳ್ಳುವುದು. ಧೂಳು ಮತ್ತು ಕಲುಷಿತ ವಾತಾವರಣ, ಹಾರ್ಮೋನು ಅಸಮತೋಲನ, ಅಧಿಕ ಸಕ್ಕರೆ ಇರುವ ಆಹಾರ ಮತ್ತು ಅಲರ್ಜಿ ಪರಿಣಾವು ಇದಕ್ಕೆ ಪ್ರಮುಖ ಕಾರಣವಾಗಿದೆ. ಡಿಟರ್ಜೆಂಟ್ ಮತ್ತು ಪರ್ಫ್ಯುಮ್ ಕೂಡ ಅಲರ್ಜಿಗೆ ಕಾರಣವಾಗಬಹುದು ಮತ್ತು ಇದು ಮೊಡವೆ ಉಂಟು ಮಾಡಬಹುದು.

ಈ ಲೇಖನದಲ್ಲಿ ಎದೆಯಲ್ಲಿನ ಮೊಡವೆ ನಿವಾರಣೆ ಮಾಡಲು ಇರುವಂತಹ ಹಲವಾರು ವಿಧಾನಗಳ ಬಗ್ಗೆ ನಾವು ತಿಳಿದುಕೊಳ್ಳುವ. ಎಲ್ಲಾ ವಿಧಾನಗಳಲ್ಲಿ ಹೆಚ್ಚಾಗಿ ನೈಸರ್ಗಿಕ ವಸ್ತುಗಳನ್ನು ಬಳಸಿಕೊಳ್ಳಲಾಗಿದೆ ಮತ್ತು ಇದನ್ನು ಚರ್ಮಕ್ಕೆ ಬಳಸಿಕೊಳ್ಳುವುದು ತುಂಬಾ ಸುರಕ್ಷಿತವಾಗಿರುವುದು. ನೀವು ಇನ್ನು ಎದೆಯಲ್ಲಿನ ಮೊಡವೆಗಳನ್ನು ನೈಸರ್ಗಿಕವಾಗಿ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಎದೆಯಲ್ಲಿನ ಮೊಡವೆ ನಿವಾರಣೆ ಮಾಡಲು ಮನೆಮದ್ದುಗಳು

*ಅಲೋವೆರಾ

ಇದು ಮೊಡವೆ ನಿವಾರಣೆ ಮಾಡುವಂತಹ ಪ್ರಮುಖ ಸಾಮಗ್ರಿಯಾಗಿದೆ. ಅಲೋವೆರಾದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಮತ್ತು ನಂಜುನಿರೋಧಕ ಗುಣವಿರುವ ಕಾರಣದಿಂದಾಗಿ ಇದು ಎದೆಯಲ್ಲಿರುವಂತಹ ಉರಿಯೂತ ಕಡಿಮೆ ಮಾಡುವುದು ಮತ್ತು ನೋವು ನಿವಾರಿಸುವುದು.
ಬೇಕಾಗುವ ಸಾಮಗ್ರಿಗಳು

  • ತಾಜಾ ಅಲೋವೆರಾ

ಬಳಸುವ ವಿಧಾನ
•ಬಾಧಿತ ಜಾಗಕ್ಕೆ ಅಲೋವೆರಾ ಲೋಳೆ ಹಚ್ಚಿಕೊಳ್ಳಿ.
•ಅದನ್ನು ಹಾಗೆ ಬಿಡಿ ಮತ್ತು ಚರ್ಮವು ಅದನ್ನು ಸರಿಯಾಗಿ ಹೀರಿಕೊಳ್ಳಲಿ.
•ಬೇರೆ ಏನಾದರೂ ಹಚ್ಚಿಕೊಳ್ಳುವ ಮೊದಲು ಇದು ಸರಿಯಾಗಿ ಒಣಗಲಿ.
•ಈ ವಿಧಾನವನ್ನು ನೀವು ಪ್ರತಿನಿತ್ಯವು ಕೆಲವು ತಿಂಗಳುಗಳ ಕಾಲ ಬಳಸಬೇಕು.

*ಲಿಂಬೆ

ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣವು ರಂಧ್ರವನ್ನು ತೆಗೆಯುತ್ತದೆ ಮತ್ತು ಆಳವಾಗಿ ಚರ್ಮದ ರಂಧ್ರಗಳನ್ನು ಶುಚಿಗೊಳಿಸುವುದು. ಇದರಿಂದಾಗಿ ಮೊಡವೆ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗುವುದು. ವಿಟಮಿನ್ ಸಿ ಲಿಂಬೆಯಲ್ಲಿ ಇರುವ ಕಾರಣದಿಂದಾಗಿ ಇದು ಮೊಡವೆ ಹಾಗೂ ಉರಿಯೂತವನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು

  • ಅರ್ಧ ಲಿಂಬೆ

ಬಳಸುವ ವಿಧಾನ
•ಲಿಂಬೆಯನ್ನು ಎರಡು ತುಂಡುಗಳನ್ನಾಗಿ ಮಾಡಿ.
•ಒಂದು ಭಾಗವನ್ನು ತೆಗೆದುಕೊಂಡು ಬಾಧಿತ ಜಾಗಕ್ಕೆ ಸರಿಯಾಗಿ ಉಜ್ಜಿಕೊಳ್ಳಿ.
•2 ಗಂಟೆಗಳ ಕಾಲ ಹಾಗೆ ಬಿಡಿ.
•ಬಳಿಕ ಇದನ್ನು ತೊಳೆಯಿರಿ.
•ಈ ವಿಧಾನವನ್ನು ನೀವು ವಾರದಲ್ಲಿ 1-2 ಸಲ ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

*ಆ್ಯಪಲ್ ಸೀಡರ್ ವಿನೇಗರ್

ಆ್ಯಂಟಿಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವಂತಹ ಆ್ಯಪಲ್ ಸೀಡರ್ ವಿನೇಗರ್ ಬ್ಯಾಕ್ಟೀರಿಯಾದಿಂದ ಉಂಟು ಮಾಡುವಂತಹ ಮೊಡವೆಗಳ ವಿರುದ್ಧ ಹೋರಾಡುವುದು ಮತ್ತು ಚರ್ಮದಲ್ಲಿ ಪಿಎಚ್ ಮಟ್ಟ ಕಾಪಾಡುವುದು.
ಬೇಕಾಗುವ ಸಾಮಗ್ರಿಗಳು
*1 ಚಮಚ ಆ್ಯಪಲ್ ಸೀಡರ್ ವಿನೇಗರ್
*2 ಚಮಚ ನೀರು
ಬಳಸುವ ವಿಧಾನ
•ನೀರಿಗೆ ಆ್ಯಪಲ್ ಸೀಡರ್ ವಿನೇಗರ್ ಹಾಕಿ ಕಲಸಿಕೊಳ್ಳಿ.
•ಇದರಲ್ಲಿ ಹತ್ತಿಉಂಡೆಯನ್ನು ಸರಿಯಾಗಿ ಅದ್ದಿಕೊಳ್ಳಿ.
•ಈಗ ಹತ್ತಿ ಉಂಡೆಯನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ.
•30 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ವಾರದಲ್ಲಿ ಒಂದು ಸಲ ಇದನ್ನು ಬಳಸಿದರೆ ಫಲಿತಾಂಶ ಖಚಿತ

*ಅರಿಶಿನ ಮತ್ತು ರೋಸ್ ವಾಟರ್

ಬಂಗಾರವೆಂದರೆ ಹೇಳಲಾಗುವಂತಹ ಗಿಡಮೂಲಿಕೆಯಾಗಿರುವಂತಹ ಅರಶಿನದಲ್ಲಿ ಆ್ಯಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಮೊಡವೆ ನಾಶ ಮಾಡಿ ಚರ್ಮದ ಸಂಪೂರ್ಣ ಆರೋಗ್ಯ ಕಾಪಾಡುವುದು. ರೋಸ್ ವಾಟರ್ ಸಂಕೋಚನ ಗುಣ ಹೊಂದಿದೆ ಮತ್ತು ಇದು ಚರ್ಮದಲ್ಲಿನ ರಂಧ್ರಗಳನ್ನು ಮುಚ್ಚಿ, ಮೇದೋಗ್ರಂಥಿಗಳ ಸ್ರಾವ ಕಡಿಮೆ ಮಾಡುವುದು ಮತ್ತು ಮೊಡವೆ ನಿವಾರಿಸುವುದು.
ಬೇಕಾಗುವ ಸಾಮಗ್ರಿಗಳು

  • 1 ಚಮಚ ಅರಶಿನ ಹುಡಿ
  • ಕೆಲವು ಹನಿ ರೋಸ್ ವಾಟರ್

ಬಳಸುವ ವಿಧಾನ
•ಒಂದು ಪಿಂಗಾಣಿಯಲ್ಲಿ ಅರಶಿನ ಹುಡಿ ತೆಗೆದುಕೊಳ್ಳಿ.
•ದಪ್ಪಗಿನ ಪೇಸ್ಟ್ ಮಾಡಿಕೊಳ್ಳಲು ಸರಿಯಾಗಿ ರೋಸ್ ವಾಟರ್ ಹಾಕಿಕೊಳ್ಳಿ.
•ಬಾಧಿತ ಜಾಗಕ್ಕೆ ಪೇಸ್ಟ್ ಹಚ್ಚಿಕೊಳ್ಳಿ.
•15-20 ನಿಮಿಷ ಕಾಲ ಒಣಗಲು ಹಾಗೆ ಬಿಡಿ.
•ಉಗುರುಬೆಚ್ಚಗಿನ ನೀರು ಬಳಸಿಕೊಂಡು ತೊಳೆಯಿರಿ.
•ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ಸಲ ನೀವು ಇದನ್ನು ಬಳಸಿಕೊಳ್ಳಿ.

*ಅಡುಗೆ ಸೋಡಾ

ಅಡುಗೆ ಸೋಡಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ತೆಗೆದು ಹಾಕುವುದು. ಇಷ್ಟು ಮಾತ್ರವಲ್ಲದೆ ಇದು ಸತ್ತ ಚರ್ಮವನ್ನು ಇದು ಕಿತ್ತು ಹಾಕುವುದು ಮತ್ತು ಅತಿಯಾಗಿ ಮೇದೋಗ್ರಂಥಿ ಸ್ರಾವ ಆಗುವುದನ್ನು ತಡೆಯುವುದು.
ಬೇಕಾಗುವ ಸಾಮಗ್ರಿಗಳು

  • 1 ಚಮಚ ಅಡುಗೆ ಸೋಡಾ
  • ನೀರು(ಅಗತ್ಯವಿರುವಷ್ಟು)

ಬಳಸುವ ವಿಧಾನ
•ಪಿಂಗಾಣಿಯಲ್ಲಿ ಅಡುಗೆ ಸೋಡಾ ಹಾಕಿಕೊಳ್ಳಿ.
•ಇದು ದಪ್ಪಗೆ ಮಾಡಲು ಸಾಕಷ್ಟು ನೀರು ಹಾಕಿಕೊಳ್ಳಿ.
•ಬಾಧಿತ ಜಾಗಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ.
•ಹತ್ತು ನಿಮಿಷ ಕಾಲ ಹಾಗೆ ಬಿಡಿ.
•ಉಗುರು ಬೆಚ್ಚಗಿನ ನೀರು ಬಳಸಿಕೊಂಡು ತೊಳೆಯಿರಿ.
•ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 1-2 ಸಲ ನೀವು ಇದನ್ನು ಬಳಸಿಕೊಳ್ಳಿ.

*ಚಹಾ ಮರದ ಎಣ್ಣೆ ಮತ್ತು ತೆಂಗಿನ ಎಣ್ಣೆ

ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ನಂಜು ನಿರೋಧಕ ಗುಣ ಹೊಂದಿರುವಂತಹ ಚಾ ಮರದ ಎಣ್ಣೆಯು ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ದೂರ ಮಾಡುವುದು ಮತ್ತು ಚರ್ಮದ ರಂಧ್ರಗಳನ್ನು ಶುಚಿಗೊಳಿಸಿ, ಮೊಡವೆಯನ್ನು ದೂರವಿಡುವುದು. ಚಾ ಮರದ ಎಣ್ಣೆಯ ಜತೆಗೆ ಸ್ವಲ್ಪ ತೆಂಗಿನ ಎಣ್ಣೆ ಬೆರೆಸಿಕೊಂಡು ಬಳಸಬೇಕು.
ಬೇಕಾಗುವ ಸಾಮಗ್ರಿಗಳು

  • 2-3 ಹನಿ ಚಾ ಮರದ ಎಣ್ಣೆ
  • ಒಂದು ಚಮಚ ತೆಂಗಿನ ಎಣ್ಣೆ

ಬಳಸುವ ವಿಧಾನ
•ತೆಂಗಿನ ಎಣ್ಣೆಯ ಜತೆಗೆ ನೀವು ಚಾ ಮರದ ಎಣ್ಣೆ ಮಿಶ್ರಣ ಮಾಡಿಕೊಳ್ಳಿ.
•ಈ ಮಿಶ್ರಣದಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ.
•ಬಾಧಿತ ಜಾಗಕ್ಕೆ ಈ ಎಣ್ಣೆಯನ್ನು ಹಚ್ಚಿಕೊಳ್ಳಿ.
•5-10 ನಿಮಿಷ ಕಾಲ ನೀವು ಇದನ್ನು ಹಾಗೆ ಬಿಡಿ.
•ಉಗುರು ಬೆಚ್ಚಗಿನ ನೀರು ಬಳಸಿಕೊಂಡು ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ಎರಡು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ.

*ದಾಲ್ಚಿನಿ ಮತ್ತು ಜೇನುತುಪ್ಪ

ದಾಲ್ಚಿನಿ ಮತ್ತು ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದು ಮೊಡವೆ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಲಿದೆ.
ಬೇಕಾಗುವ ಸಾಮಗ್ರಿಗಳು
*½ ಚಮಚ ದಾಲ್ಚಿನಿ ಹುಡಿ
*½ ಚಮಚ ಜೇನುತುಪ್ಪ

ಬಳಸುವ ವಿಧಾನ
•ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
•ಈ ಪೇಸ್ಟ್ ನ್ನು ನೀವು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ಬಳಿಕ ತೊಳೆದುಕೊಳ್ಳಿ.
•ಉತ್ತಮ ಫಲಿತಾಂಶ ಪಡೆಯಲು ಪ್ರತಿನಿತ್ಯ ನೀವು ಈ ವಿಧಾನ ಬಳಸಿಕೊಳ್ಳಿ.

*ಪಪ್ಪಾಯಿ

ಪಪ್ಪಾಯಿಯಲ್ಲಿ ಕಂಡುಬರುವಂತಹ ಪಪೈನ್ ಎನ್ನುವ ಅಂಶವು ಶಿಲೀಂಧ್ರ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಮೊಡವೆ ವಿರುದ್ಧ ಇದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ.
ಬೇಕಾಗುವ ಸಾಮಗ್ರಿಗಳು

  • 2-3 ಹಣ್ಣಾದ ಪಪ್ಪಾಯಿ ತುಂಡು

ಬಳಸುವ ವಿಧಾನ
•ಒಂದು ಪಿಂಗಾಣಿಗೆ ಪಪ್ಪಾಯಿ ತುಂಡುಗಳನ್ನು ಹಾಕಿಕೊಳ್ಳಿ.
•ಈ ತುಂಡುಗಳನ್ನು ಜಜ್ಜಿಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಬಹುದು.
•ಬಾಧಿತ ಜಾಗಕ್ಕೆ ಇದನ್ನು ಹಚ್ಚಿಕೊಳ್ಳಿ.
•25-30 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ಉತ್ತಮ ಫಲಿತಾಂಶ ಪಡೆಯಲು ನೀವು ಪ್ರತಿನಿತ್ಯ ಇದನ್ನು ಬಳಸಿಕೊಳ್ಳಿ.

ಬೇವು

ಶಮನ ನೀಡುವ ಗುಣ ಹೊಂದಿರುವಂತಹ ಬೇವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಇದು ಮೊಡವೆ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರಲಿದೆ.
ಬೇಕಾಗುವ ಸಾಮಗ್ರಿಗಳು

  • ಒಂದು ಹಿಡಿ ಬೇವಿನ ಎಲೆಗಳು

ಬಳಸುವ ವಿಧಾನ
•ಬೇವಿನ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ. ಬೇಕಿದ್ದರೆ ನೀವು ಇದಕ್ಕೆ ನೀರು ಹಾಕಿಕೊಳ್ಳಿ.
•ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•15 ನಿಮಿಷ ಕಾಲ ಹಾಗೆ ಬಿಡಿ.
•ಬಳಿಕ ನೀವು ತೊಳೆದುಕೊಳ್ಳಿ.
•ಈ ವಿಧಾನವನ್ನು ನೀವು ಪ್ರತಿನಿತ್ಯ ಬಳಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

10. ಮೊಟ್ಟೆಯ ಬಿಳಿ ಲೋಳೆ

ಪ್ರೋಟೀನ್ ಅಧಿಕವಾಗಿರುವಂತಹ ಮೊಟ್ಟೆಯ ಬಿಳಿ ಲೋಳೆಯು ಚರ್ಮದಲ್ಲಿ ಅತಿಯಾಗಿ ಎಣ್ಣೆಯು ಉತ್ಪತ್ತಿ ಆಗುವುದನ್ನು ತಡೆಯುವುದು. ಎದೆಯಲ್ಲಿ ಮೊಡವೆ ಮೂಡದಂತೆ ಮಾಡಲು ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸುವುದು.
ಬೇಕಾಗುವ ಸಾಮಗ್ರಿಗಳು

  • ಒಂದು ಮೊಟ್ಟೆಯ ಬಿಳಿ ಲೋಳೆ

ಬಳಸುವ ವಿಧಾನ
•ಪಿಂಗಾಣಿಗೆ ಹಾಕಿ ಮೊಟ್ಟೆಯ ಬಿಳಿ ಭಾಗ ಬೇರ್ಪಡಿಸಿಕೊಳ್ಳಿ.
•ಇದನ್ನು ಸರಿಯಾಗಿ ಕಲಸಿಕೊಂಡು ಮಿಶ್ರಣ ಮಾಡಿ.
•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•ಇದು ಒಣಗುವ ತನಕ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿ.

ಟೂಥ್ ಪೇಸ್ಟ್

ತುಂಬಾ ಬೇಗನೆ ಮತ್ತು ಸುಲಭವಾದ ಮೊಡವೆ ನಿವಾರಣೆ ಮದ್ದು ಇದಾಗಿದೆ. ಟೂಥ್ ಪೇಸ್ಟ್ ನ್ನು ಬಳಸಿಕೊಂಡು ಮೊಡವೆ ನಿವಾರಿಸಬಹುದು ಮತ್ತು ಇದನ್ನು ನಿಯಮಿತವಾಗಿ ಬಳಸಿಕೊಳ್ಳಬೇಕು.
ಬೇಕಾಗುವ ಸಾಮಗ್ರಿ

  • ಟೂಥ್ ಪೇಸ್ಟ್

ವಿಧಾನ
•ರಾತ್ರಿ ಮಲಗುವ ಮೊದಲು ಬಾಧಿತ ಜಾಗಕ್ಕೆ ಟೂಥ್ ಪೇಸ್ಟ್ ಹಚ್ಚಿಕೊಳ್ಳಿ.
•ರಾತ್ರಿಯಿಡಿ ಇದು ಹಾಗೆ ಇರಲಿ.
•ಇದರ ಬಳಿಕ ತಣ್ಣೀರು ಬಳಸಿಕೊಂಡು ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ಈ ವಿಧಾನವನ್ನು ಪ್ರತಿನಿತ್ಯ ಬಳಸಿಕೊಳ್ಳಿ.

ಓಟ್ ಮೀಲ್
ನೈಸರ್ಗಿಕವಾಗಿ ಕಿತ್ತೊಗೆಯುವ ಗುಣ ಹೊಂದಿರುವ ಓಟ್ ಮೀಲ್ ಸತ್ತ ಚರ್ಮದ ಕೋಶ, ಧೂಳು ಮತ್ತು ಕಲ್ಮಷವನ್ನು ಚರ್ಮದಿಂದ ತೆಗೆಯುವುದು ಮತ್ತು ಚರ್ಮವನ್ನು ಸುಧಾರಣೆ ಮಾಡಿ ಮೊಡವೆ ನಿವಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
1 ಕಪ್ ಓಟ್ ಮೀಲ್
ಬಳಸುವ ವಿಧಾನ
•ಓಟ್ ಮೀಲ್ ನ್ನು ಬೇಯಿಸಿ.
•ಇದರ ಬಳಿಕ ತಣ್ಣಗಾಗಲು ಬಿಡಿ.
•ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಹಾಗೆ ಮಸಾಜ್ ಮಾಡಿ.
•10-15 ನಿಮಿಷ ಕಾಲ ಹಾಗೆ ಬಿಡಿ.
•ಇದರ ಬಳಿಕ ತೊಳೆಯಿರಿ.
•ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗುವುದು.

ಮುಲ್ತಾನಿ ಮಿಟ್ಟಿ, ಶ್ರೀಗಂಧ ಮತ್ತು ರೋಸ್ ವಾಟರ್

ಮುಲ್ತಾನಿ ಮಿಟ್ಟಿಯು ಚರ್ಮದಲ್ಲಿ ಇರುವಂತಹ ಹೆಚ್ಚುವರಿ ಎಣ್ಣೆ ತೆಗೆಯುವುದು ಮತ್ತು ಚರ್ಮದ ರಂಧ್ರಗಳನ್ನು ಆಳವಾಗಿ ಶುಚಿಗೊಳಿಸುವುದು. ಶ್ರೀಗಂಧವು ನಂಜುನಿರೋಧಕವಾಗಿ ಕೆಲಸ ಮಾಡುವುದು ಮತ್ತು ಇದು ಮೊಡವೆಯಿಂದ ಉಂಟಾಗುವ ತುರಿಕೆ ಮತ್ತು ಉರಿಯೂತ ತಪ್ಪಿಸುವುದು.
ಬೇಕಾಗುವ ಸಾಮಗ್ರಿಗಳು
•1 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಶ್ರೀಗಂಧ ಹುಡಿ
•ಒಂದು ಚಮಚ ರೋಸ್ ವಾಟರ್

ತಯಾರಿಸುವ ವಿಧಾನ
•ಮುಲ್ತಾನಿ ಮಿಟ್ಟಿಯನ್ನು ಪಿಂಗಾಣಿಗೆ ಹಾಕಿ.
•ಇದಕ್ಕೆ ಶ್ರೀಗಂಧದ ಹುಡಿ ಹಾಖಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.
•ಈಗ ರೋಸ್ ವಾಟರ್ ಹಾಕಿ ಮತ್ತು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.
•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•30 ನಿಮಿಷ ಹಾಗೆ ಒಣಗಲು ಬಿಡಿ.
•ಬಳಿಕ ಇದನ್ನು ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿ.

ಸಮುದ್ರ ಉಪ್ಪು

ಸಮುದ್ರದ ಉಪ್ಪು ಮೆಗ್ನಿಶಿಯಂನಿಂದ ಸಮೃದ್ಧವಾಗಿದೆ ಮತ್ತು ಇದು ಮೊಡವೆ ನಿವಾರಣೆ ಮಾಡಲು ಚರ್ಮಕ್ಕೆ ನೆರವಾಗುವುದು ಮತ್ತು ಉರಿಯೂತ ತಗ್ಗಿಸುವುದು.
ಬೇಕಾಗುವ ಸಾಮಗ್ರಿಗಳು

  • 1 ಕಪ್ ಸಮುದ್ರ ಉಪ್ಪು
  • ಒಂದು ಲೀಟರ್ ನೀರು

ವಿಧಾನ
•ಮೇಲೆ ಹೇಳಿದಷ್ಟು ಪ್ರಮಾಣದ ಉಪ್ಪನ್ನು ನೀರಿಗೆ ಹಾಕಿಕೊಳ್ಳಿ ಮತ್ತು ಅದನ್ನು ಸರಿಯಾಗಿ ಕಲಸಿಕೊಳ್ಳಿ.
•ಈ ಮಿಶ್ರಣದಲ್ಲಿ ಒಂದು ಶುದ್ಧ ಬಟ್ಟೆ ಹಾಕಿ ಮತ್ತು ಅದನ್ನು ಅದ್ದಿಕೊಂಡು ಅತಿಯಾದ ನೀರು ತೆಗೆಯಿರಿ.
•ಬಾಧಿತ ಜಾಗದಲ್ಲಿ ಈ ಬಟ್ಟೆಯನ್ನು ಇಡಿ.
•ಇದು ಒಣಗುವ ತನಕ ಹಾಗೆ ಬಿಡಿ.
•ಬಳಿಕ ಬಟ್ಟೆ ತೆಗೆಯಿರಿ ಮತ್ತು ಇದೇ ರೀತಿ 3-4 ಸಲ ಮಾಡಿ.
•ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
•ಪ್ರತಿನಿತ್ಯ ನೀವು ಇದನ್ನು ಬಳಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು.

ಮೆಂತ್ಯೆ ಕಾಳುಗಳು

ಮೆಂತ್ಯೆ ಕಾಳುಗಳಲ್ಲಿ ಕೂಡ ಬ್ಯಾಕ್ಟೀರಿಯಾ ವಿರೋಧಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಮೊಡವೆ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮದ ಆರೋಗ್ಯ ಕಾಪಾಡುವುದು.
ಬೇಕಾಗುವ ಸಾಮಗ್ರಿಗಳು

  • 2 ಚಮಚ ಮೆಂತ್ಯೆ ಕಾಳುಗಳು.

ಬಳಸುವ ವಿಧಾನ
•ರಾತ್ರಿ ಮೆಂತ್ಯೆ ಕಾಳುಗಳನ್ನು ನೀರಿಗೆ ಹಾಕಿ ನೆನೆಸಿ.
•ಬೆಳಗ್ಗೆ ಎದ್ದು ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ.
•ಈ ಪೇಸ್ಟ್ ನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.
•15ನಿಮಿಷ ಕಾಲ ಹಾಗೆ ಒಣಗಲು ಬಿಡಿ.
•ಇದರ ಬಳಿಕ ತೊಳೆಯಿರಿ.
•ಉತ್ತಮ ಫಲಿತಾಂಶ ಪಡೆಯಲು ಎರಡು ದಿನಕ್ಕೊಮ್ಮೆ ಇದನ್ನು ಬಳಸಿ.

English summary

Home Remedies To Get Rid Of Chest Acne

Acne is a skin condition that is caused due to excess production of sebum, clogging of skin pores or a bacterial infestation of the hair follicles. [1] Our chest area does have a large number of sebum-producing glands and thus is quite prone to acne.The excess sebum produced in the chest area clogs the skin pores and this leads to acne. Environmental factors such as dirt and pollution, hormonal factors, high-sugar foods and allergic reaction to some detergents or perfumes might also be the possible causes of chest acne.
X
Desktop Bottom Promotion