For Quick Alerts
ALLOW NOTIFICATIONS  
For Daily Alerts

ಲಿಂಬೆ ಬಳಸಿ ಕಪ್ಪು ತುಟಿಗಳ ಸಮಸ್ಯೆ ನೈಸರ್ಗಿಕವಾಗಿ ಬಗೆಹರಿಸಿ

|

ಮುಖದ ಸೌಂದರ್ಯದಲ್ಲಿ ಎದ್ದು ಕಾಣುವಂತಹದ್ದು ಒಂದು ಕಣ್ಣುಗಳು, ಮತ್ತೊಂದು ತುಟಿಗಳು. ತುಟಿಗಳು ಸುಂದರವಾಗಿದ್ದರೆ ಆಗ ಬೇರೆ ಏನೂ ಬೇಕಾಗಿಲ್ಲ. ಆದರೆ ಕೆಲವು ಮಹಿಳೆಯರ ತುಟಿಗಳು ತುಂಬಾ ಕಪ್ಪಾಗಿರುವುದು. ಇದಕ್ಕಾಗಿ ಲಿಪ್ ಸ್ಟಿಕ್ ಬಳಸಿಕೊಳ್ಳಬಹುದು. ತುಟಿಗಳು ಕಪ್ಪಾಗಿರುವುದನ್ನು ಮರೆಮಾಚಲು ಲಿಪ್ ಸ್ಟಿಕ್ ನೆರವಾಗುವುದು. ಆದರೆ ಇದು ತಾತ್ಕಾಲಿಕ. ಮತ್ತೆ ನಿಮ್ಮ ತುಟಿಗಳು ಕಪ್ಪಾದಂತೆ ಕಂಡುಬರುವುದು. ಅತಿಯಾದ ಧೂಮಪಾನ, ಬಿಸಿಲಿಗೆ ಅತಿಯಾಗಿ ಮೈಯೊಡ್ಡುವುದು, ಕೆಟ್ಟ ರಾಸಾಯನಿಕ, ಕೆಫಿನ್ ಇತ್ಯಾದಿಗಳು ತುಟಿ ಕಪ್ಪಾಗಲು ಕಾರಣವಾಗಿದೆ.

ways to lighten dark lips,using lime

ತುಟಿಗಳು ತುಂಬಾ ಸೂಕ್ಷ್ಮವಾಗಿರುವುದು ಮತ್ತು ನೇರವಾಗಿ ರಾಸಾಯನಿಕ ಬಳಕೆ ಮಾಡಿದಾಗ, ಅದರಿಂದ ಹಾನಿಯಾಗುವುದು. ತುಟಿಗಳಿಗೆ ಕೆಲವು ನೈಸರ್ಗಿಕ ಮನೆಮದ್ದು ಬಳಸಿದರೆ ಒಳ್ಳೆಯದು. ಲಿಂಬೆ ಬಳಸಿಕೊಂಡು ತುಟಿಗಳನ್ನು ಹೇಗೆ ಕಾಂತಿಯುತವಾಗಿಸುವುದು ಎಂದು ಈ ಲೇಖನದಲ್ಲಿ ತಿಳಿಯುವ... ಲಿಂಬೆಯು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ ಮತ್ತು ಇದು ಚರ್ಮದ ಬಣ್ಣ ಸುಧಾರಿಸುವುದು. ನೈಸರ್ಗಿಕ ಕ್ಲೆನ್ಸರ್ ಆಗಿರುವ ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದ ರಂಧ್ರಗಳನ್ನು ಶುದ್ಧೀಕರಿಸುವುದು. ಈಗ ನೀವು ಲಿಂಬೆಯಿಂದ ತಯಾರಿಸಬಹುದಾದ ಮನೆಮದ್ದುಗಳ ಬಗ್ಗೆ ತಿಳಿಯಿರಿ.

ಲಿಂಬೆ ಮತ್ತು ಸಕ್ಕರೆ

ಲಿಂಬೆ ಮತ್ತು ಸಕ್ಕರೆ

ಇದು ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಹೊಸ ಚರ್ಮದ ಕೋಶಗಳು ಬೆಳೆಯಲು ನೆರವಾಗುವುದು. ಮೊದಲು ನೀವು ಲಿಂಬೆ ತೆಗೆದುಕೊಂಡು ಎರಡು ತುಂಡುಗಳನ್ನಾಗಿ ಮಾಡಿ. ಇದರ ಮೇಲಿನ ಭಾಗಕ್ಕೆ ಸ್ವಲ್ಪ ಸಕ್ಕರೆ ಸಿಂಪಡಿಸಿ. ಇದನ್ನು ಮೇಲಿನ ಹಾಗೂ ಕೆಳಗಿನ ತುಟಿಗಳಿಗೆ ವೃತ್ತಾಕಾರದಲ್ಲಿ ಉಜ್ಜಿಕೊಳ್ಳಿ.15 ನಿಮಿಷ ಕಾಲ ಹಾಗೆ ಇರಲಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರದಲ್ಲಿ ಮೂರು ಸಲ ಇದನ್ನು ಮಾಡಿ.

Most Read: ಕೂದಲು ಮತ್ತು ತ್ವಚೆಯ ಸಮಸ್ಯೆಗೆ, 'ತುಳಸಿ ಎಲೆ'ಗಳನ್ನು ಬಳಸಿ ನೋಡಿ

ಲಿಂಬೆ, ಜೇನುತುಪ್ಪ ಮತ್ತು ಗ್ಲಿಸರಿನ್

ಲಿಂಬೆ, ಜೇನುತುಪ್ಪ ಮತ್ತು ಗ್ಲಿಸರಿನ್

ಲಿಂಬೆ, ಜೇನುತುಪ್ಪ ಮತ್ತು ಗ್ಲಿಸರಿನ್ ತುಟಿಗಳ ಮೇಲಿನ ಕಲೆ ನಿವಾರಣೆ ಮಾಡುವುದು. 1/1/2 ಚಮಚ ಲಿಂಬೆರಸ, 1 ಚಮಚ ಗ್ಲಿಸರಿನ್ ಮತ್ತು ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಇದನ್ನು ನಿಧಾನವಾಗಿ ಮಲಗುವ ಮೊದಲು ತುಟಿಗಳಿಗೆ ಸ್ಕ್ರಬ್ ಮಾಡಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಪ್ರತಿನಿತ್ಯ ಮಲಗುವ ಮೊದಲು ಹೀಗೆ ಮಾಡಿ. ನಿಮಗೆ ಕೆಲವೇ ದಿನಗಳಲ್ಲಿ ವ್ಯತ್ಯಾಸವು ಕಂಡುಬರುವುದು.

ಲಿಂಬೆ ಮತ್ತು ಹರಳೆಣ್ಣೆ

ಲಿಂಬೆ ಮತ್ತು ಹರಳೆಣ್ಣೆ

ಸರಳವಾದ ಮನೆಮದ್ದಿನಿಂದ ನೀವು ತುಟಿಗಳಿಗೆ ಚಿಕಿತ್ಸೆ ನೀಡಬಹುದು. ಒಂದು ಪಿಂಗಾಣಿಯಲ್ಲಿ ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಹರಳೆಣ್ಣೆ ಹಾಕಿ ಮಿಶ್ರಣ ಮಾಡಿ. ಇದನ್ನು ಎರಡು ತುಟಿಗಳಿಗೆ ಹಚ್ಚಿಕೊಂಡು ಕೆಲವು ನಿಮಿಷ ಹಾಗೆ ಬಿಡಿ. ರಾತ್ರಿ ನೀವು ಮಲಗುವ ಮೊದಲು ತುಟಿಗಳಿಗೆ ಹಚ್ಚಿಕೊಂಡು ಹಾಗೆ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮಗೆ ಫಲಿತಾಂಶ ಸಿಗುವ ತನಕ ಮುಂದುವರಿಸಿ. ಇದರ ಬಳಿಕ ತುಟಿಗಳಿಗೆ ಲಿಪ್ ಮಲಾಮ್ ಹಚ್ಚಿಕೊಳ್ಳಿ.

ಲಿಂಬೆ ಮತ್ತು ಬಾದಾಮಿ ಎಣ್ಣೆ

ಲಿಂಬೆ ಮತ್ತು ಬಾದಾಮಿ ಎಣ್ಣೆ

ಲಿಂಬೆಯನ್ನು ಬಾದಾಮಿ ಎಣ್ಣೆ ಜತೆಗೆ ಮಿಶ್ರಣ ಮಾಡಿಕೊಂಡಾಗ ಅದು ತುಟಿಗಳಿಗೆ ಪೋಷಣೆ ನೀಡುವುದು ಮತ್ತು ತೇವಾಂಶದಿಂದ ಇಡುವುದು. ಬಾದಾಮಿ ಎಣ್ಣೆ ಮತ್ತು ಲಿಂಬೆ ರಸವನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಬಳಿಕ 2-3 ನಿಮಿಷ ಕಾಲ ಮಸಾಜ್ ಮಾಡಿ. 40 ನಿಮಿಷ ಕಾಲ ಹಾಗೆ ಬಿಡಿ. ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ರಾತ್ರಿ ಮಲಗುವ ಮೊದಲು ಹಚ್ಚಿಕೊಂಡು ಬೆಳಗ್ಗೆ ತೊಳೆಯಬಹುದು.

ಲಿಂಬೆ ಮತ್ತು ಅರಿಶಿನ

ಲಿಂಬೆ ಮತ್ತು ಅರಿಶಿನ

ಕೆಲವು ಹನಿ ಲಿಂಬೆರಸ ತೆಗೆಯಿರಿ ಮತ್ತು ಅದಕ್ಕೆ ಚಿಟಿಕೆ ಅರಿಶಿನ ಹಾಕಿ ಮಿಶ್ರಣ ಮಾಡಿ. ಇದನ್ನು ತುಟಿಗಳಿಗೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ. ತಣ್ಣೀರಿನಿಂದ ಇದನ್ನು ತೊಳೆಯಿರಿ ಮತ್ತು ಒಣಗಲು ಬಿಡಿ. ಪ್ರತಿನಿತ್ಯ ಇದನ್ನು ನೀವು ಬಳಸಿಕೊಳ್ಳಿ.

Most Read: ಆಲೂಗಡ್ಡೆ ಫೇಸ್ ಪ್ಯಾಕ್ ಬಳಸಿ ಹೊಳೆಯುವ ತ್ವಚೆ ಪಡೆದುಕೊಳ್ಳಿ

ಲಿಂಬೆ ಮತ್ತು ಜೇನು

ಲಿಂಬೆ ಮತ್ತು ಜೇನು

ಲಿಂಬೆರಸ ಒಂದು ನೈಸರ್ಗಿಕವಾದ ಬಿಳಿಚುಕಾರಕವಾಗಿದ್ದು ಗಾಢವಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣಕ್ಕೆ ತರಲು ನೆರವಾಗುತ್ತದೆ. ಇದಕ್ಕಾಗಿ. ½ ಚಿಕ್ಕ ಚಮಚ ಲಿಂಬೆರಸ ಮತ್ತು ಒಂದು ಚಿಕ್ಕ ಚಮಚ ಜೇನನ್ನು ಬೆರೆಸಿ ತುಟಿಗಳಿಗೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ.

ಬರೀ ಲಿಂಬೆಯ ರಸ

ಬರೀ ಲಿಂಬೆಯ ರಸ

ಲಿಂಬೆಯ ಉಪಯೋಗ ನಿಜಕ್ಕೂ ಹೆಚ್ಚು ಪರಿಣಾಮಕಾರಿ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಚರ್ಮದ ಕಲೆಗಳನ್ನು ದೂರಮಾಡುತ್ತದೆ. ಅಲ್ಲದೇ ನಿಮ್ಮ ತುಟಿಗಳಿಗೆ ನೈಸರ್ಗಿಕವಾಗಿ ಕಾಂತಿಯನ್ನು ಹೆಚ್ಚಿಸುತ್ತದೆ. ಲಿಂಬೆಯನ್ನು ಹಿಂಡಿ ಅದರ ರಸವನ್ನು ಮಲಗುವ ಮುನ್ನ ತುಟಿಗಳಿಗೆ ಹಚ್ಚಿಕೊಳ್ಳಿ. ಈ ವಿಧಾನವನ್ನು ಕೆಲವು ತಿಂಗಳುಗಳ ಕಾಲ ಕ್ರಮವಾಗಿ ಅನುಸರಿಸಿ. ಇಲ್ಲವಾದಲ್ಲಿ ಲಿಂಬೆಯ ಹೋಳಿನ ಮೇಲೆ ಸಕ್ಕರೆಯನ್ನು ಬೆರೆಸಿ ನಿಮ್ಮ ತುಟಿಗಳಿಗೆ ಸ್ಕ್ರಬ್ ರೀತಿಯಲ್ಲಿ ತಿಕ್ಕಿಕೊಳ್ಳಿ. ಇದರಿಂದ ನಿಮ್ಮ ತುಟಿಗಳ ಮೇಲಿರುವ ಸತ್ತ ಜೀವಕೋಶಗಳು ನಾಶವಾಗುತ್ತವೆ ಅಲ್ಲದೇ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ನೆರವಾಗುತ್ತದೆ.

Most Read: ಮುಖದ ಸೌಂದರ್ಯ ಹೆಚ್ಚಿಸಲು, 'ಸೋರೆಕಾಯಿ' ಪ್ರಯತ್ನಿಸಿ ನೋಡಿ

ಬೆಣ್ಣೆ ಮತ್ತು ಜೇನು

ಬೆಣ್ಣೆ ಮತ್ತು ಜೇನು

ಅರ್ಧ ಚಿಕ್ಕಚಮಚ ಮೃದುವಾಗಿರುವ ಬೆಣ್ಣೆ ಮತ್ತು ½ ಚಿಕ್ಕಚಮಚ ಜೇನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ಚೆನ್ನಾಗಿ ತೊಳೆದ ಹಾಗೂ ಸತ್ತ ಜೀವಕೋಶಗಳನ್ನು ಕೆರೆದು ನಿವಾರಿಸಿರುವ ತುಟಿಗಳಿಗೆ ಹಚ್ಚಿ. ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ಕೆಲವೇ ವಾರಗಳಲ್ಲಿ ತುಟಿ ಗುಲಾಬಿ ವರ್ಣವನ್ನು ಪಡೆಯಲು ಸಾಧ್ಯವಾಗುತ್ತದೆ. ಬೆಣ್ಣೆ ತುಟಿಗಳಿಗೆ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಜೇನು ಆರ್ದ್ರತೆ ನೀಡುತ್ತದೆ. ಅಲ್ಲದೇ ತುಟಿಗೆ ಆವರಿಸಿರುವ ಯಾವುದೇ ಸೋಂಕನ್ನೂ ಇವು ನಿವಾರಿಸುತ್ತವೆ.

ಆಲಿವ್ ಎಣ್ಣೆ ಮತ್ತು ಸಕ್ಕರೆ

ಆಲಿವ್ ಎಣ್ಣೆ ಮತ್ತು ಸಕ್ಕರೆ

ಒಂದು ಚಮಚ ಆಲಿವ್ ಎಣ್ಣೆ ಮತ್ತು ಒಂದು ಚಮಚ ಸಕ್ಕರೆ ಬೆರೆಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಚಿಕ್ಕ ವೃತ್ತಾಕಾರದಲ್ಲಿ ತುಟಿಗಳಿಗೆ ಹಚ್ಚಿ. ಇದರಿಂದ ತುಟಿಗಳ ಹೊರಪದರದ ಸತ್ತ ಜೀವಕೋಶಗಳನ್ನಿ ನಿವಾರಿಸಲು ಸಾಧ್ಯವಾಗುತ್ತದೆ ಹಾಗೂ ಮೃದುವಾಗುತ್ತವೆ. ಸುಮಾರು ಹದಿನೈದು ನಿಮಿಷ ಬಿಟ್ಟು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿಕೊಂಡು ತುಟಿಗಳಿಗೆ ತೇವವನ್ನು ಒದಗಿಸಿ.

English summary

How To Lighten Dark Lips Naturally Using Lime?

Dark, dull and dry lips are something that we don't wish to have. But certain influencing factors like excessive smoking, overexposure to the sun, harsh chemicals, caffeine, etc., can lead to dark and dull lips. Our lips have the most sensitive skin and using harsh chemicals directly will cause more damage to the skin. Thus it is better to go for natural ingredients to treat dark lips. Today, we'll be discussing a few beauty tips using lemon to treat dark and dull lips.
X
Desktop Bottom Promotion