ಹಣೆ ಮೇಲೆ ನೆರಿಗೆ ಮೂಡಿದೆಯೇ? ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

Posted By: Hemanth Amin
Subscribe to Boldsky

ವಯಸ್ಸಾಗುವಂತಹ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುವುದು ಹಣೆ ಮೇಲೆ. ಅದು ನಮ್ಮ ಹಣೆ ಬರಹವೆಂದು ಹೇಳಬಹುದೇನೋ? ಆದರೆ ಹಣೆಯಲ್ಲಿ ನೆರಿಗೆ ಮೂಡಿದರೆ ಆ ವ್ಯಕ್ತಿಗೆ ವಯಸ್ಸಾಗಿದೆ ಎನ್ನಬಹುದು. ಆದರೆ ವಯಸ್ಸಾಗುವುದನ್ನು ತಡೆಯಲು ಭೂಮಿ ಮೇಲೆ ಯಾರಿಂದಲೂ ಸಾಧ್ಯವಿಲ್ಲ. ದೇಹದಲ್ಲಿ ವಯಸ್ಸಾಗುವಾಗ ಮೂಡುವಂತಹ ಗುರುತುಗಳನ್ನು ನಿವಾರಿಸಬಹುದು. ಇದು ತುಂಬಾ ಸುಲಭ ವಿಧಾನ.

ಕೆಲವು ಜನರು ಬೊಟೊಕ್ಸ್ ಇತ್ಯಾದಿ ಕಾಸ್ಮೆಟಿಕ್ ಚಿಕಿತ್ಸೆ ಮಾಡಿಕೊಳ್ಳುವರು. ಇದಕ್ಕೆ ಹಣ ಕೂಡ ಖರ್ಚು ಮಾಡ ಬೇಕಾಗುತ್ತದೆ. ಇದರ ಅಡ್ಡಪರಿಣಾಮಗಳು ಕೂಡ ಇದೆ. ಇದಕ್ಕೆ ಬದಲಿಗೆ ನೀವು ತುಂಬಾ ಸುರಕ್ಷಿತ ಹಾಗೂ ನೈಸರ್ಗಿಕ ವಿಧಾನದ ಮೂಲಕ ವಯಸ್ಸಾಗುವಾಗ ಬೀಳುವ ನೆರಿಗೆ ನಿವಾರಣೆ ಮಾಡಬೇಕೆಂದರೆ ಬೋಲ್ಡ್ ಸ್ಕೈ ನಿಮಗೆ ಕೆಲವು ವಿಧಾನಗಳನ್ನು ಹೇಳಿಕೊಡಲಿದೆ. 

ಸುಕ್ಕುಗಳನ್ನು ಹೋಗಲಾಡಿಸುವ ಮನೆಮದ್ದುಗಳು

ನೈಸರ್ಗಿಕವಾಗಿ ಸಿಗುವಂತಹ ಆಲಿವ್ ತೈಲ, ಮೊಟ್ಟೆಯ ಬಿಳಿ ಭಾಗ, ಪಪ್ಪಾಯಿಯನ್ನು ಹಿಂದಿನಿಂದಲೂ ಹಣೆ ಮೇಲೆ ಮೂಡುವಂತಹ ನೆರಿಗೆ ತೆಗೆದುಹಾಕಲು ಬಳಸಿಕೊಳ್ಳುತ್ತಾ ಇದ್ದರು. ವಿಟಮಿನ್ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವಂತಹ ಇಂತಹ ಸಾಮಗ್ರಿಗಳನ್ನು ಬಳಸಿಕೊಂಡರೆ ಅದರಿಂದ ನಿಮ್ಮ ಹಣೆಯ ನೆರಿಗೆ ಸಂಪೂರ್ಣವಾಗಿ ಮಾಯವಾಗುವುದು. ಕೆಲವು ವಾರಗಳ ಕಾಲ ಇದನ್ನು ಬಳಸಿಕೊಂಡರೆ ನಿಮಗೆ ಫಲಿತಾಂಶ ಕನ್ನಡಿ ಮೇಲೆ ಕಂಡುಬರುವುದು. ಹೆಚ್ಚು ದುಬಾರಿಯಾಗು ಇಲ್ಲದ ಕೆಲವೊಂದು ವಿಧಾನಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಇದರಿಂದ ಹಣೆಯ ನೆರಿಗೆ ನಿವಾರಣೆ ಖಚಿತ....

ಪಪ್ಪಾಯಿ

ಪಪ್ಪಾಯಿ

ವಯಸ್ಸಾಗುವ ಲಕ್ಷಣಗಳ ಮೇಲೆ ಅದ್ಭುತವಾಗಿ ಕೆಲಸ ಮಾಡುವಂತಹ ಕಿಣ್ವ ಪಪೈನ್ ಎನ್ನುವುದು ಪಪ್ಪಾಯಿಯಲ್ಲಿದೆ. ಔಷಧೀಯ ಹಣ್ಣಾಗಿರುವ ಪಪ್ಪಾಯಿಯು ಹಣೆ ಮೇಲೆ ಮೂಡಿರುವ ನೆರಿಗೆ ತೆಗೆಯುವುದರಲ್ಲಿ ತುಂಬಾ ಪರಿಣಾಮಕಾರಿ.

ಬಳಸುವ ವಿಧಾನ

*ಒಂದು ಚಮಚ ಪಪ್ಪಾಯಿ ತಿರುಳು ತೆಗೆದುಕೊಳ್ಳಿ.

*ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿಕೊಳ್ಳಿ.

*ತಣ್ಣೀರಿನಿಂದ ತೊಳೆಯಿರಿ.

ಮೊಟ್ಟೆಯ ಬಿಳಿ ಲೋಳೆ

ಮೊಟ್ಟೆಯ ಬಿಳಿ ಲೋಳೆ

ಸಂಕೋಚನ ಗುಣವನ್ನು ಹೊಂದಿರುವಂತಹ ಮೊಟ್ಟೆಯ ಬಿಳಿ ಲೋಳೆಯು ವಯಸ್ಸಾಗುವ ಲಕ್ಷಣಗಳನ್ನು ತಡೆಯುವಲ್ಲಿ ತುಂಬಾ ಪರಿಣಾಮಕಾರಿ. ಇದು ಹಣೆ ಮೇಲಿನ ನೆರಿಗೆ ನಿವಾರಿಸುವುದು.

ಬಳಸುವ ವಿಧಾನ

*ಒಂದು ಮೊಟ್ಟೆಯ ಬಿಳಿ ಲೋಳೆಗೆ ಎರಡು ಚಮಚ ನಿಂಬೆರಸ ಹಾಕಿ ಮಿಶ್ರಣ ಮಾಡಿ.

*ಇದನ್ನು ಹಣೆಗೆ ಹಚ್ಚಿಕೊಳ್ಳಿ.

*15 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ.

ಕಿತ್ತಳೆ ಸಿಪ್ಪೆಯ ಹುಡಿ

ಕಿತ್ತಳೆ ಸಿಪ್ಪೆಯ ಹುಡಿ

ಸಿಟ್ರಸ್ ಗುಣವನ್ನು ಹೊಂದಿರುವ ಕಿತ್ತಳೆ ಸಿಪ್ಪೆಯ ಹುಡಿಯು ಹಣೆ ಮೇಲೆ ನೆರಿಗೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿರಲಿದೆ.

ಬಳಸುವುದು ಹೇಗೆ

*ಒಂದು ಚಮಚ ಕಿತ್ತಳೆ ಸಿಪ್ಪೆಯ ಹುಡಿ ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ.

*ಈ ಪೇಸ್ಟ್ ಅನ್ನು ಹಣಿಗೆ ಹಚ್ಚಿಕೊಳ್ಳಿ.

*15 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ.

ಅನಾನಾಸು

ಅನಾನಾಸು

ಬ್ರೊಮೆಲಿನ್ ಮತ್ತು ವಿಟಮಿನ್ ನಿಂದ ಸಮೃದ್ಧವಾಗಿರುವಂತಹ ಅನಾನಸು ಹಣ್ಣು ಹಣೆಯ ನೆರಿಗೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವುದು.

ಬಳಸುವ ವಿಧಾನ

*ತಾಜಾ ಅನಾನಸಿನ ರಸ ತೆಗೆಯಿರಿ.

*ಈ ರಸಕ್ಕೆ ಹತ್ತಿ ಉಂಡೆ ಅದ್ದಿ ಮತ್ತು ಅದನ್ನು ಹಣೆಗೆ ಇಡಿ.

*ಹತ್ತು ನಿಮಿಷ ಕಾಲ ಚರ್ಮದಲ್ಲಿ ರಸ ಹಾಗೆ ಇರುವಂತೆ ನೋಡಿಕೊಳ್ಳಿ.

*ಬಳಿಕ ನೀರಿನಿಂದ ತೊಳೆಯಿರಿ.

ವಿಚ್ ಹ್ಯಾಜೆಲ್

ವಿಚ್ ಹ್ಯಾಜೆಲ್

ವಿಚ್ ಹ್ಯಾಜೆಲ್ ನಲ್ಲಿ ಇರುವಂತಹ ಟ್ಯಾನಿನ್ ಗಳು ವಯಸ್ಸಾಗುವ ಲಕ್ಷಣ ತೋರಿಸುವಂತಹ ನೆರಿಗೆ ಅದರಲ್ಲೂ ಹಣೆ ಮೇಲೆ ಮೂಡುವ ನೆರಿಗೆ ತೆಗೆದುಹಾಕುವುದು.

ಬಳಸುವ ವಿಧಾನ

*3-4 ಹನಿ ವಿಚ್ ಹ್ಯಾಜೆಲ್ ನೊಂದಿಗೆ 1 ಚಮಚ ಗ್ರೀನ್ ಟೀ ಮಿಶ್ರಣ ಮಾಡಿ.

*ಇದನ್ನು ಹಣೆಗೆ ಹಚ್ಚಿಕೊಳ್ಳಿ.

*10-15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಆಲಿವ್ ತೈಲ

ಆಲಿವ್ ತೈಲ

ವಿಟಮಿನ್ ಇ ಮತ್ತು ತ್ವಚೆಗೆ ಕಾಂತಿ ನೀಡುವಂತಹ ಕೆಲವೊಂದು ಆ್ಯಂಟಿಆಕ್ಸಿಡೆಂಟ್ ಗಳನ್ನು ಒಳಗೊಂಡಿರುವ ಆಲಿವ್ ತೈಲವು ಹಣೆಯ ನೆರಿಗೆ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿರಲಿದೆ.

ಬಳಸುವ ವಿಧಾನ

*ಒಂದು ಚಮಚ ಆಲಿವ್ ತೈಲವನ್ನು ಹಣೆಗೆ ಮಸಾಜ್ ಮಾಡಿ.

ರಾತ್ರಿಯಿಡಿ ಹಾಗೆ ಬಿಡಿ.

*ಬೆಳಗ್ಗೆ ಎದ್ದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಚೆಂಡುಹೂವು

ಚೆಂಡುಹೂವು

ಹಣೆಯಲ್ಲಿ ನೆರಿಗೆ ಮೂಡಿಸುವಂತಹ ಕೆಲವೊಂದು ವಯಸ್ಸಾಗುವ ಲಕ್ಷಣ ಕಂಡುಬರಲು ಪ್ರಮುಖ ಕಾರಣ ಫ್ರೀ ರ್ಯಾಡಿಕಲ್. ಚೆಂಡುಹೂವಿನಲ್ಲಿ ಇರುವ ಅಂಶಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು.

ಬಳಸುವ ವಿಧಾನ

*ಒಂದು ಚಮಚ ಚೆಂಡು ಹೂವನ್ನು ಎರಡು ಚಮಚ ತೆಂಗಿನೆಣ್ಣೆ ಜತೆ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ಹಣೆಗೆ ಹಚ್ಚಿಕೊಳ್ಳಿ.

*10-15 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

English summary

Simple Ways To Get Rid Of Forehead Wrinkles At Home

Forehead wrinkles are inevitable byproducts of ageing and stopping them from occurring is something that is beyond our control. However, reducing the prominence of such signs of ageing is an achievable task. Few people like to get cosmetic procedures done such as botox, etc. But, in case you're someone who wishes to go for treatments that are safe and natural, then today's post is perfect for you. As today at Boldsky, we'll be letting you know about the natural ways in which you can treat creases on your forehead.