ಕಾಲಿನ ಮೊಣಗಂಟು ಕಪ್ಪಾಗಿ ಕಾಣುತ್ತಿದೆಯೇ? ಇಲ್ಲಿದೆ ನೋಡಿ ಮನೆಮದ್ದುಗಳು

Posted By: Arshad
Subscribe to Boldsky

ಮೊಣಗಂಟುಗಳ ಭಾಗದ ಚರ್ಮ ಗಾಢವರ್ಣ ಪಡೆದಿರುವ ಕಾರಣ ಮೊಣಕಾಲಿಗೂ ಮೇಲೆ ಇರುವಂತಹ ಉಡುಗೆಗಳಾದ ಶಾರ್ಟ್ ಸ್ಕರ್ಟ್ ತೊಡಲು ಹಿಂಜರಿಯುತ್ತಿದ್ದೀರಾ? ಹಾಗಾದರೆ ಈ ಲೇಖನ ನಿಮಗಾಗಿಯೇ ಇದೆ. ಎಲ್ಲರಂತೆ ಯಾವುದೇ ಅಳುಕಿಲ್ಲದೇ ನಿಮ್ಮ ನೆಚ್ಚಿನ ಉಡುಗೆಯನ್ನು ತೊಡಲು ಇಂದು ವಿವರಿಸಿರುವ ಕೆಲವು ವಿಧಾನಗಳನ್ನು ಅನುಸರಿಸಿದರೆ ಸಾಕು. ಈ ಭಾಗದಲ್ಲಿರುವ ಚರ್ಮ ಕಾಲು ಮಡಚುವಾಗ ವಿಸ್ತರಿಸಬೇಕಾದ ಅಗತ್ಯವಿರುವ ಕಾರಣ ಹೆಚ್ಚಿನ ನೆರಿಗೆಗಳನ್ನು ಹೊಂದಿದ್ದು ಈ ನೆರಿಗೆಗಳ ಒಳಗೆ ಸಂಗ್ರಹವಾಗುವ ಧೂಳು ಹಾಗೂ ಮಣ್ಣಿನ ಪದರ ಬಣ್ಣ ಗಾಢವಾಗಲು ಕಾರಣವಾಗುತ್ತವೆ.

ಅಲ್ಲದೇ ಗಾಳಿಯಲ್ಲಿರುವ ಕಲ್ಮಶಗಳು ಸಹಾ ತ್ವಚೆಯ ಹೊರಮೈಭಾಗವನ್ನು ಕುಂದಿಸುತ್ತದೆ ಹಾಗೂ ವಿಶೇಷವಾಗಿ ನೆರಿಗೆಗಳು ಹೆಚ್ಚಿರುವ ಭಾಗದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ. ಇಂದಿನ ಲೇಖನದಲ್ಲಿ ಗಾಢವಾಗಿರುವ ಮೊಣಗಂಟುಗಳಿಗಾಗಿ ಕೆಲವು ಸೂಕ್ತ ವಿಧಾನಗಳನ್ನು ಬೋಲ್ಡ್ ಸ್ಕೈ ತಂಡ ಪ್ರಸ್ತುತಪಡಿಸುತ್ತಿದೆ. ಇದಕ್ಕೆ ಬಳಸಲಾಗಿರುವ ಸಾಮಾಗ್ರಿಗಳು ವಿಶೇಷವಾಗಿ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವ ಕ್ಷಮತೆ ಹೊಂದಿವೆ ಹಾಗೂ ಧೂಳು, ಮಣ್ಣಿನ ಪದರ, ಕಲ್ಮಶಗಳನ್ನು ನಿವಾರಿಸುವ ಗುಣವಿರುವ ಆಂಟಿ ಆಕ್ಸಿಡೆಂಟುಗಳೂ ಇವೆ.

ಕೈ ಹಾಗೂ ಕಾಲಿನ ಗಂಟುಗಳ ಕಪ್ಪು ಕಲೆಗಳ ಸಮಸ್ಯೆಗೆ ಸರಳ ಟಿಪ್ಸ್

ಅಷ್ಟೇ ಅಲ್ಲ, ಈ ವಿಧಾನಗಳನ್ನು ನಿಯಮಿತವಾಗಿ ಅನುಸರಿಸುವ ಮೂಲಕ ತ್ವಚೆಯ ಆರೈಕೆಯನ್ನು ಅಗ್ಗವಾಗಿ ಹಾಗೂ ಸುರಕ್ಷಿತವಾಗಿ ಮಾಡಿಕೊಳ್ಳಲೂ ಸಾಧ್ಯವಾಗುತ್ತದೆ. ಬನ್ನಿ, ಈ ಸಾಮಾಗ್ರಿಗಳ ಅತ್ಯುತ್ತಮ ಉಪಯೋಗ ಹೇಗೆ ಎಂಬುದನ್ನು ನೋಡೋಣ..

ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು

ತ್ವಚೆಯನ್ನು ಬಿಳಿಚಿಸಲು ಅಕ್ಕಿ ಹಿಟ್ಟು ಒಂದು ನೈಸರ್ಗಿಕ ಆಯ್ಕೆಯಾಗಿದ್ದು ವಿಶೇಷವಾಗಿ ಮೊಣಕಾಲು, ಮೊಣಕೈ ಯಲ್ಲಿರುವ ತ್ವಚೆಗೆ ಹೆಚ್ಚು ಉಪಯುಕ್ತವಾಗಿದೆ. ಒಂದು ಚಿಕ್ಕ ಚಮಚ ಅಕ್ಕಿಹಿಟ್ಟನ್ನು ಗುಲಾಬಿ ನೀರಿನಲ್ಲಿ ಮಿಶ್ರಣ ಮಾಡಿ ಈ ಲೇಪನವನ್ನು ಮೊಣಗಂಟುಗಳಿಗೆ ತೆಳುವಾಗಿ ಲೇಪಿಸಿಕೊಳ್ಳಿ. ಸುಮಾರು ಹತ್ತು ಹದಿನೈದು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ ನಾಲ್ಕೈದು ಬಾರಿ ಈ ವಿಧಾನವನ್ನು ಪುನರಾವರ್ತಿಸುವ ಮೂಲಕ ಕೆಲವೇ ವಾರಗಳಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.

ಅಡುಗೆ ಸೋಡಾ

ಅಡುಗೆ ಸೋಡಾ

ಒಂದು ವೇಳೆ ಚರ್ಮ ತೀರಾ ದಪ್ಪಗಾಗಿದ್ದು ಅತಿ ಹೆಚ್ಚು ಗಾಢವಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಒಂದು ಚಿಕ್ಕ ಚಮಚ ಅಡುಗೆ ಸೋಡಾವನ್ನು ಸಮಪ್ರಮಾಣದ ನೀರಿನೊಂದಿಗೆ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಗಾಢವಾದ ಚರ್ಮಕ್ಕೆ ಹಚ್ಚಿಕೊಳ್ಳಿ. ಸುಮಾರು ಐದು ನಿಮಿಷ ಒಣಗಲು ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಂದು ಬಾರಿ ಮಾತ್ರವೇ ಅನುಸರಿಸಿ. ಕೆಲವೇ ವಾರಗಳಲ್ಲಿ ಈ ಬಣ್ಣ ತಿಳಿಯಾಗುವುದು ಮಾತ್ರವಲ್ಲ, ದಪ್ಪಗಾಗಿದ್ದ ಚರ್ಮ ಸವೆಯಲೂ ತೊಡಗುತ್ತದೆ.

ಓಟ್ಸ್ ರವೆ

ಓಟ್ಸ್ ರವೆ

ಓಟ್ಸ್ ಅಥವಾ ತೋಕೆಗೋಧಿಯ ರವೆ ಉತ್ತಮ ನೈಸರ್ಗಿಕ ಬಿಳಿಚುಕಾರಕವೂ ಆಗಿದೆ. ಇದು ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಿ ಬಣ್ಣವನ್ನು ತಿಳಿಗೊಳಿಸುತ್ತದೆ. ಎರಡು ಚಿಕ್ಕ ಚಮಚ ಓಟ್ಸ್ ಅನ್ನು ಕೊಂಚ ನೀರಿನಲ್ಲಿ ನಾಲ್ಕೈದು ನಿಮಿಷ ಕುದಿಸಿ ತಣಿಸಿ ಇದಕ್ಕೆ ಕೊಂಚವೇ ಗುಲಾಗಿ ನೀರನ್ನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ದಪ್ಪನಾಗಿ ಹಚ್ಚಿ ಕೊಂಚ ಹೊತ್ತು ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಉಜ್ಜಿಕೊಳ್ಳುತ್ತಾ ನಿವಾರಿಸಿ. ವಾರದಲ್ಲಿ ನಾಲ್ಕೈದು ಬಾರಿ ಈ ವಿಧಾನವನ್ನು ಪುನರಾವರ್ತಿಸುವ ಮೂಲಕ ಕೆಲವೇ ವಾರಗಳಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ಈ ನೈಸರ್ಗಿಕ ಎಣ್ಣೆ ಚರ್ಮವನ್ನು ಬಿಳಿಚಿಸಲು ಹಾಗೂ ಕಲ್ಮಶಗಳನ್ನು ನಿವಾರಿಸಲು ಮತ್ತು ದೊರಗಾಗಿದ್ದ ತ್ವಚೆಯನ್ನು ಮೃದುಗೊಳಿಸಲೂ ನೆರವಾಗುತ್ತದೆ. ರಾತ್ರಿ ಮಲಗುವ ಮುನ್ನ ಒಂದು ವಿಟಮಿನ್ ಎಣ್ಣೆಯ ಗುಳಿಗೆಯನ್ನು ತೆರೆದು ಎಣ್ಣೆಯನ್ನು ಮೊಣಗಂಟಿನ ಮೇಲೆ ಹೆಚ್ಚಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ನಿತ್ಯವೂ ಈ ವಿಧಾನವನ್ನು ಅನುಸರಿಸುವ ಮೂಲಕ ಶೀಘ್ರವೇ ಕಪ್ಪಗಾಗಿದ್ದ ತ್ವಚೆ ಸಹಜವರ್ಣ ಪಡೆಯತೊಡಗುತ್ತದೆ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿಯೂ ತ್ವಚೆಯನ್ನು ಬಿಳಿಚಿಸುವ ಗುಣವಿದೆ ಹಾಗೂ ಮೊಣಗಂಟುಗಳ ಬಣ್ಣ ಬದಲಿಸಲೂ ಸೂಕ್ತವಾಗಿದೆ. ಒಂದು ಹಸಿ ಆಲೂಗಡ್ಡೆಯನ್ನು ಅಡ್ಡಲಾಗಿ ಕತ್ತರಿಸಿದ ಬಿಲ್ಲೆಯೊಂದನ್ನು ಮೊಣಗಂಟಿನ ಮೇಲೆ ಹಚ್ಚಿ ರಸ ತಾಕುವಂತೆ ಮಾಡಿ. ಕೆಲವು ನಿಮಿಷಗಳ ಕಾಲ ಕೆಲವಾರು ಬಿಲ್ಲೆಗಳಿಂದ ಮೊಣಗಂಟುಗಳನ್ನು ಒರೆಸಿಕೊಳ್ಳುತ್ತಾ ಬನ್ನಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ನಿತ್ಯವೂ ಅನುಸರಿಸುವ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು.

ಹಾಲಿನ ಕೆನೆ

ಹಾಲಿನ ಕೆನೆ

ಹಾಲಿನ ಕೆನೆ ನಿಮ್ಮ ಚರ್ಮದ ಕೊಳೆಯನ್ನು ಹೊರಹಾಕುತ್ತದೆ ಹಾಗೂ ಅದರ ಬಣ್ಣವನ್ನು ತಿಳಿಗೊಳಿಸುವುದು ಮತ್ತೊಂದು ಗಮನಾರ್ಹ ಅಂಶವಾಗಿದೆ. ನಿಮ್ಮ ಮೊಣಗಂಟುಗಳ ಮೇಲೆ ತಾಜಾ ಹಾಲಿನ ಕೆನೆಯನ್ನು ತೆಳುವಾಗಿ ಹಚ್ಚಿಕೊಳ್ಳಿ . ಸುಮಾರು 15 ನಿಮಿಷಗಳ ವರೆಗೆ ಹಾಗೇ ಇರಿಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ನಿತ್ಯವೂ ಅನುಸರಿಸುವ ಮೂಲಕ ಗಾಢವರ್ಣ ಶೀಘ್ರವೇ ಸಹಜವರ್ಣ ಪಡೆಯುತ್ತದೆ.

ಕಿತ್ತಳೆಯ ಸಿಪ್ಪೆಯ ಪುಡಿ

ಕಿತ್ತಳೆಯ ಸಿಪ್ಪೆಯ ಪುಡಿ

ಇದೊಂದು ನೈಸರ್ಗಿಕ ಬಿಳಿಚುಕಾರಕವಾಗಿದೆ. ಒಂದು ಚಿಕ್ಕ ಚಮಚ ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿದ ಕಿತ್ತಳೆ ಸಿಪ್ಪೆಯನ್ನು ಕೊಂಚ ಗುಲಾಬಿ ನೀರಿನೊಂದಿಗೆ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನವನ್ನು ಮೊಣಗಂಟುಗಳ ಮೇಲೆ ದಪ್ಪನಾಗಿ ಹಚ್ಚಿ ಸುಮಾರು 15-20 ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ ನಾಲ್ಕೈದು ಬಾರಿ ಈ ವಿಧಾನವನ್ನು ಪುನರಾವರ್ತಿಸುವ ಮೂಲಕ ಕೆಲವೇ ವಾರಗಳಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.

ಬಾದಾಮಿ ಪುಡಿ

ಬಾದಾಮಿ ಪುಡಿ

ಬಾದಾಮಿಯಲ್ಲಿ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುವ ಹಲವಾರು ಗುಣಗಳಿದ್ದು ಇದರಲ್ಲಿ ಗಾಢವರ್ಣವನ್ನು ತಿಳಿಗೊಳಿಸುವ ಗುಣವೂ ಒಂದು. ಬಾದಾಮಿಯ ಪುಡಿಯನ್ನು ಸಮಪ್ರಮಾಣದ ಗುಲಾಬಿ ನೀರಿನೊಂದಿಗೆ ಬೆರೆಸಿ ಈ ಲೇಪನವನ್ನು ಮೊಣಗಂಟುಗಳ ಮೇಲೆ ದಪ್ಪನಾಗಿ ಹಚ್ಚಿ ಸುಮಾರು 15-20 ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ನಿತ್ಯವೂ ಅನುಸರಿಸುವ ಮೂಲಕ ಗಾಢವರ್ಣ ಶೀಘ್ರವೇ ಸಹಜವರ್ಣ ಪಡೆಯುತ್ತದೆ.

ಈರುಳ್ಳಿ ಮತ್ತು ಲಿಂಬೆರಸ

ಈರುಳ್ಳಿ ಮತ್ತು ಲಿಂಬೆರಸ

ಈರುಳ್ಳಿ ಹಾಗೂ ನಿಂಬೆರಸದ ಮಾಸ್ಕ್ ನಲ್ಲಿರುವ ಸಲ್ಫರ್ ಮತ್ತು ಸಿಟ್ರಿಕ್ ಆಮ್ಲವು ಸತ್ತಚರ್ಮದ ಕೋಶಗಳ ಶೇಖರಣೆಯನ್ನು ತೆಗೆದುಹಾಕಿ ಚರ್ಮದ ಚಣ್ಣವನ್ನು ತಿಳಿಯಾಗಿಸುವುದು. ಒಂದು ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಗ್ಲಿಸರಿನ್ ಹಾಕಿ. ಇದನ್ನು ಮೊಣಕೈಗೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಕುಳಿತುಕೊಳ್ಳಿ. ಬಳಿಕ ಸ್ಕ್ರಬ್ ಮಾಡಿ ತೊಳೆಯಿರಿ.

ಅಡುಗೆ ಸೋಡಾ ಮತ್ತು ಹಾಲು

ಅಡುಗೆ ಸೋಡಾ ಮತ್ತು ಹಾಲು

ಮೊಣಕಾಲು ಹಾಗೂ ಮೊಣಕೈಯಲ್ಲಿರುವಂತಹ ಸತ್ತಚರ್ಮದ ಕೋಶಗಳನ್ನು ಅಡುಗೆ ಸೋಡಾವು ತೆಗೆದುಹಾಕುವುದು. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ತೇವಾಂಶವನ್ನು ನೀಡುವುದು. ಒಂದು ಚಮಚ ಅಡುಗೆ ಸೋಡಾಕ್ಕೆ ಹಾಲು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಂಡು ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿಕೊಳ್ಳಿ.ಇದು ಒಣಗಿದ ಬಳಿಕ ಸ್ಕ್ರಬ್ ಮಾಡಿಕೊಳ್ಳಿ. ವಾರದಲ್ಲಿ ಎರಡು ಸಲ ಇದನ್ನು ಬಳಸಿ.

English summary

Quick Remedies To Get Rid Of Dark Knees

As today at Boldsky, we've curated a list of ingredients that can effectively lighten the skin on your knees and also soften its texture. These ingredients possess various exfoliating properties and antioxidants that can remove impurities, dirt and grime from your skin that cause discolouration. Moreover, incorporating the below-stated ingredients in your daily skin care routine is rather easy. So, take a look at these ingredients here and the best way to use them: