Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮನೆಯಲ್ಲೇ ತಯಾರಿಸಿ ನೋಡಿ ಆಲಿವ್ ಎಣ್ಣೆಯ ಬಾಡಿ ವಾಶ್
ದಿನವಿಡಿ ಒತ್ತಡ ಹಾಗೂ ದೈಹಿಕ ಶ್ರಮದ ಬಳಿಕ ಮನೆಗೆ ಬಂದು ಸ್ನಾನಗೃಹಕ್ಕೆ ಹೋಗಿ ಬಿಸಿ ನೀರಿನ ಸ್ನಾನ ಮಾಡಿದರೆ, ಅದು ದೇಹಕ್ಕೆ ಉಲ್ಲಾಸ ನೀಡುವುದರಲ್ಲಿ ಸಂಶಯವೇ ಇಲ್ಲ. ಬಿಸಿ ನೀರು, ಮನಸ್ಸಿಗೆ ಮುದ ನೀಡುವಂತಹ ಸೋಪಿನ ಸುವಾಸನೆ ಹೀಗೆ ಎಲ್ಲವೂ ದೇಹಕ್ಕೆ ಮರು ಚೈತನ್ಯ ನೀಡುವುದು. ಕೆಲವರು ಒಂದೇ ರೀತಿಯ ಬಾಡಿ ವಾಶ್ ಬಳಸಿಕೊಳ್ಳುವರು. ಇದರ ಸುವಾಸನೆಯಿಂದಾಗಿ ಅವರಿಗೆ ಅದನ್ನು ಬದಲಾಯಿಸಿಕೊಳ್ಳಲು ಇಷ್ಟವಿರಲ್ಲ. ಆದರೆ ಕೆಲವೊಂದು ಬಾಡಿ ವಾಶ್ ಗಳನ್ನು ಮನೆಯಲ್ಲೇ ತಯಾರಿಸಬಹುದು. ಇದು ಒಳ್ಳೆಯ ಸುವಾಸನೆ ಕೂಡ ನೀಡುವುದು. ಇದಕ್ಕೆ ಪ್ರಮುಖವಾಗಿ ಆಲಿವ್ ತೈಲವನ್ನು ಬಳಸಿಕೊಳ್ಳಬೇಕು. ಇದನ್ನು ತಯಾರಿಸುವುದು ಹೇಗೆ ಎಂದು ನೀವು ಮುಂದೆ ಓದುತ್ತಾ ತಿಳಿಯಿರಿ.
ಆಲಿವ್ ತೈಲದ ಬಾಡಿ ವಾಶ್ ಮಾಡಲು ಬೇಕಾಗಿರುವ ಸಾಮಗ್ರಿಗಳು
ಜೇನುತುಪ್ಪ: ಜೇನುತುಪ್ಪದಲ್ಲಿ ಆ್ಯಂಟಿಆಕ್ಸಿಡೆಂಟ್, ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಚರ್ಮದ ರಂಧ್ರಗಳಲ್ಲಿ ಇರುವಂತಹ ಕೊಳೆಯನ್ನು ತೆಗೆದುಹಾಕುವುದು. ಇದು ಚರ್ಮದಲ್ಲಿ ನೀರನ್ನು ಹಿಡಿದಿಟ್ಟುಕೊಂಡು ಚರ್ಮವು ತೇವಾಂಶ ಹಾಗೂ ಮೊಶ್ಚಿರೈಸ್ ಆಗಿರುವಂತೆ ಮಾಡುವುದು.
ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿರುವ ಕರಗುವ ಮತ್ತು ಲೀನವಾಗುವ ಗುಣಗಳು ನಮ್ಮ ತ್ವಚೆಗೆ ಅಪರಿಮಿತ ಸಹಕಾರಿಯಾಗಿವೆ. ಈ ಗುಣದಿಂದಾಗಿ ಇದನ್ನು ಮುಖಕ್ಕೆ ಅಥವಾ ತ್ವಚೆಗೆ ಲೇಪಿಸಿಕೊಂಡಾಗ ಅದು ಚರ್ಮದೊಳಗೆ ಇಳಿದು, ಮೊಯಿಶ್ಚರೈಸ್ ಮಾಡುತ್ತದೆ. ಇದರಿಂದ ತ್ವಚೆಯು ತಾಜಾತನದಿಂದ ಕಂಗೊಳಿಸುತ್ತದೆ. ಇದನ್ನು ರಾತ್ರಿ ಅಥವಾ ಹಗಲು ಯಾವಾಗ ಬೇಕಾದರು ಹಚ್ಚಿ, ಒಣ ಚರ್ಮವನ್ನು ಸಹ ಜೀವ ಕಳೆಯಿಂದ ಮಿರುಗುವಂತೆ ಮಾಡಬಹುದು. ತ್ವಚೆಗೆ ಆಲಿವ್ ಎಣ್ಣೆ ಲೇಪಿಸುವುದರಿಂದ ಅಪರಿಮಿತ ಪ್ರಯೋಜನಗಳನ್ನು ನಮ್ಮದಾಗಿಸಿಕೊಳ್ಳಬಹುದು. ಅಲ್ಲದೆ ಆಲಿವ್ ಎಣ್ಣೆ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ತುಂಬಾ ನಯವಾಗಿಡುವುದು.
ಲಿಕ್ವಿಡ್ ಸೋಪ್
ಲಿಕ್ವಿಡ್ ಸೋಪ್ ತುಂಬಾ ಒಳ್ಳೆಯದು ಮತ್ತು ಇದು ಚರ್ಮದ ಮೇಲೆ ಅಷ್ಟು ಗಡುಸಾಗಿ ವರ್ತಿಸಲ್ಲ. ಯಾಕೆಂದರೆ ಇದರಲ್ಲಿನ ಪಿಎಚ್ ಮಟ್ಟವು ಚರ್ಮದ ಸಾಮಾನ್ಯ ಪಿಎಚ್ ಮಟ್ಟಕ್ಕೆ ಹತ್ತಿರದಲ್ಲಿರುವುದು.
ಸಾರಭೂತ ತೈಲಗಳು
ಮೈಕಾಂತಿಯಲ್ಲಿ ಚರ್ಮ ತುಂಬಾ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಉತ್ತಮ ಮತ್ತು ಹೊಳೆಯುವ ಚರ್ಮಕ್ಕೆ ಉತ್ತಮ ಆರೈಕೆ ಅತ್ಯಗತ್ಯ. ಚರ್ಮಕ್ಕೆ ಕಾಂತಿಯುಂಟು ಮಾಡಲು ಎಣ್ಣೆಯಿಂದ ಚರ್ಮದ ಆರೈಕೆ ಮಾಡುವುದು ಒಳ್ಳೆಯ ವಿಧಾನ. ಸಾರಭೂತ ತೈಲಗಳು ಪರಿಮಳಯುಕ್ತ ಸಸ್ಯಗಳ ಸಾರಗಳು ಎಂದು ಯಾವಾಗಲೂ ನೆನಪಿರಲಿ. ಈ ತೈಲಗಳು ಕೆಲವು ವಿಶೇಷ ಗುಣಗಳನ್ನು ಹೊಂದಿದೆ ಮತ್ತು ನಿಮ್ಮಲ್ಲಿರುವ ಒತ್ತಡ ಕಡಿಮೆ ಮಾಡುತ್ತದೆ. ಇವುಗಳು ನೋವು ನಿವಾರಕವಾಗಿ ಮತ್ತು ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ. ಇದೆಲ್ಲವನ್ನು ಹೊರತುಪಡಿಸಿ ಚರ್ಮ ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ.
ವಯಸ್ಸಾಗುವುದರಿಂದ, ಹಾರ್ಮೋನ್ ಅಸಮತೋಲನ ಮತ್ತು ಇನ್ನಿತರ ಹಲವಾರು ಕಾರಣಗಳಿಂದ ಚರ್ಮವು ಸುಕ್ಕು ಗಟ್ಟುವುದು, ನೆರಿಗೆ ಬರುವುದು ಸಾಮಾನ್ಯ. ಸಾರಭೂತ ತೈಲಗಳು ನಿಮ್ಮ ಚರ್ಮಕ್ಕೆ ಹೊಂದಿಕೊಂಡು ಅದಕ್ಕೆ ಬೇಕಾಗಿರುವಂತಹ ಆರೈಕೆ ನೀಡುತ್ತದೆ. ಚರ್ಮಕ್ಕೆ ಎಣ್ಣೆಯ ಆರೈಕೆ ಅತ್ಯುತ್ತಮ ಮತ್ತು ಇದು ಅರೋಮಾಥೆರಪಿಯ ಒಂದು ಭಾಗ. ಇದು ಚರ್ಮದ ಒಳಭಾಗಕ್ಕೆ ಹೋಗಿ ಕೆಲಸ ಮಾಡುತ್ತದೆ. ಇದನ್ನು ದಿನನಿತ್ಯ ನಿಮ್ಮ ಚರ್ಮದ ಆರೈಕೆಗೆ ಬಳಸಬಹುದು ಮತ್ತು ಚರ್ಮವನ್ನು ಸಮಸ್ಯೆಗಳಿಂದ ದೂರ ಮಾಡಬಹುದು. ಇಂದಿನ ದಿನಗಳಲ್ಲಿ ಹಲವಾರು ರೀತಿಯ ಸಾರಭೂತ ತೈಲಗಳು ಲಭ್ಯವಿದೆ. ಆದರೆ ಬಾಡಿ ವಾಸ್ ಗೆ ಪುದೀನಾ ಅಥವಾ ರೋಸ್ಮೆರಿ ತೈಲ ಬಳಸಿ. ಸಾರಭೂತ ತೈಲವು ಬಾಡಿ ವಾಶ್ ಗೆ ಒಳ್ಳೆಯ ಸುಗಂಧ ನೀಡುವುದು. ಪುದೀನಾ ಎಣ್ಣೆಯು ಚರ್ಮವನ್ನು ಪುನರ್ಶ್ಚೇತನಗೊಳಿಸುವುದು ಮತ್ತು ರೋಸ್ಮೆರಿ ತೈಲವು ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಇದ್ದರೆ ಅದನ್ನು ನಿವಾರಿಸುವುದು. ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಂಡು ಬಾಡಿ ವಾಶ್ ಮಾಡಿಕೊಳ್ಳಲು ತಯಾರಾಗಿ.
ಆಲಿವ್ ತೈಲದ ಬಾಡಿ ವಾಶ್ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿಗಳು
1/3 ಕಪ್ ಲಿಕ್ವಿಡ್ ಸೋಪ್
1/3 ಕಪ್ ಜೇನುತುಪ್ಪ
1/3 ಕಪ್ ಆಲಿವ್ ತೈಲ
ಕೆಲವು ಹನಿ ಸಾರಭೂತ ತೈಲ
ವಿಧಾನ
ಒಂದು ಪಾತ್ರೆ ಶುಚಿಗೊಳಿಸಿ, ಅದಕ್ಕೆ ಆಲಿವ್ ತೈಲ ಮತ್ತು ಸಾರಭೂತ ತೈಲ ಹಾಕಿ.
ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಉಳಿದಿರುವ ಸಾಮಗ್ರಿಗಳನ್ನು ಹಾಕಿಕೊಳ್ಳಿ. ದೊಡ್ಡ ಚಮಚ ತೆಗೆದುಕೊಂಡು ಸರಿಯಾಗಿ ಮಿಶ್ರಣ ಮಾಡಿ.
ಒಂದು ಗಾಜಿನ ಪಾತ್ರೆಗೆ ಇದನ್ನು ಹಾಕಿಕೊಂಡು ಮುಚ್ಚಲ ಮುಚ್ಚಿಕೊಳ್ಳಿ.
ಬಳಸುವುದು ಹೇಗೆ?
ಬಳಸುವ ಮೊದಲು ಸರಿಯಾಗಿ ಅಲುಗಾಡಿಸಿಕೊಳ್ಳಿ. ಒಂದು ಸ್ಪಂಜ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಬಾಡಿ ವಾಶ್ ಹಾಕಿಕೊಂಡು ದೇಹಕ್ಕೆ ಹಚ್ಚಿಕೊಳ್ಳಿ. ಪ್ರತಿದಿನ ಇದನ್ನು ಬಳಸಿ.
ಆಲಿವ್ ತೈಲ ಬಾಡಿ ವಾಶ್ ನ ಲಾಭಗಳು
ಒಣ ಚರ್ಮಕ್ಕೆ ಆಲಿವ್ ತೈಲವು ಅತ್ಯುತ್ತಮ ಚಿಕಿತ್ಸೆಯೆಂದು ಪರಿಗಣಿಸಲಾಗಿದೆ ಮತ್ತು ಇದು ಚರ್ಮವನ್ನು ಮೃಧುವಾಗಿಡುವುದು. ಆಲಿವ್ ತೈಲವು ಚರ್ಮದಲ್ಲಿ ಮೊಶ್ಚಿರೈಸ್ ನ್ನು ಕಾಪಾಡಿಕೊಂಡು, ದೀರ್ಘಕಾಲದ ತನಕ ಚರ್ಮದಲ್ಲಿ ತೇವಾಂಶ ಇರುವಂತೆ ಮಾಡುವುದು. ಇದರಲ್ಲಿ ಪಿಎಚ್ ಮಟ್ಟವು ಕಡಿಮೆ ಇರುವ ಕಾರಣದಿಂದ ಎಲ್ಲಾ ರೀತಿಯ ಚರ್ಮಕ್ಕೆ ಇದು ಒಳ್ಳೆಯದು. ಆಲಿವ್ ತೈಲವು ಶುದ್ಧೀಕರಿಸುವುದು ಮತ್ತು ದೇಹದಲ್ಲಿ ನೈಸರ್ಗಿಕ ತೈಲವನ್ನು ಕಾಪಾಡಿಕೊಂಡು ಚರ್ಮವು ಒಣಗದಂತೆ ಮಾಡುವುದು.
ಇನ್ನುಆಲಿವ್ ಎಣ್ಣೆಯ ಜೊತೆಗೆ ಸ್ವಲ್ಪ ಉಪ್ಪನ್ನು ಬೆರೆಸಿ, ಒಣ ಅಥವಾ ನಿರ್ಜೀವ ತ್ವಚೆ ಇರುವ ಭಾಗಕ್ಕೆ ಲೇಪಿಸಿದರೆ ಸಾಕು, ನಿಮ್ಮ ತ್ವಚೆಯು ತನ್ನ ಒಣ ಅಥವಾ ನಿರ್ಜೀವತೆಯನ್ನು ಕಳಚಿಕೊಂಡು ನಳನಳಿಸುತ್ತದೆ. ಆಲಿವ್ ಎಣ್ಣೆಯನ್ನು ಸ್ವಲ್ಪ ಲ್ಯಾವೆಂಡರ್ ಎಣ್ಣೆಯ ಜೊತೆಗೆ ಬೆರೆಸಿ ಸ್ನಾನ ಮಾಡಿದರೆ, ನಿಮಗೆ ಮತ್ತಷ್ಟು ಲವಲವಿಕೆಯು ದೊರೆಯುತ್ತದೆ. ಇದು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡಿ ಮೃದುಗೊಳಿಸುತ್ತದೆ. ಜೊತೆಗೆ ದೇಹದಲ್ಲಿನ ಜೀವಕೋಶಗಳಿಗೆ ವಿಶ್ರಾಂತಿಯನ್ನು ಮತ್ತು ಲವಲವಿಕೆಯನ್ನುಂಟು ಮಾಡುತ್ತದೆ.
ಈಗ ನಿಮಗೆ ನೈಸರ್ಗಿಕ, ಮನೆಯಲ್ಲೇ ತಯಾರಿಸಬಹುದಾಗ ಬಾಡಿ ವಾಶ್ ಸಿಕ್ಕಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ನಮಗೆ ತಿಳಿಸಿ. ಇದನ್ನು ಬಳಸಿಕೊಂಡು ಫಲಿತಾಂಶ ಪಡೆಯಿರಿ. ನೈಸರ್ಗಿಕವಾಗಿರುವುದು ಯಾವಾಗಲೂ ದೇಹಕ್ಕೆ ಒಲ್ಳೆಯದು. ಇದನ್ನು ಬಳಸಿದ ಬಳಿಕ ನಿಮ್ಮ ಸ್ನೇಹಿತರಿಗೆ ಕೂಡ ಇದರ ಬಗ್ಗೆ ತಿಳಿಸಿ. ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಹಾಕಲು ಮರೆಯಬೇಡಿ.