ಬ್ಯೂಟಿ ಟಿಪ್ಸ್: ಸುಂದರ ಮುಖದ ಕಾಂತಿಗಾಗಿ ನೈಸರ್ಗಿಕ ಫೇಸ್ ಸ್ಕ್ರಬ್

By: Jaya Subramanaya
Subscribe to Boldsky

ಲಕಲಕ ಹೊಳೆಯುವ ಸುಂದರ ಮುಖಕಾಂತಿಗಾಗಿ ಮನೆಯಲ್ಲೇ ತಯಾರಿಸಬಹುದಾದ ಫೇಸ್ ಸ್ಕ್ರಬ್ ಹೊಳೆಯುವ ಸುಂದರ ಕಾಂತಿಯುಕ್ತ ತ್ವಚೆಯನ್ನು ಪಡೆದುಕೊಳ್ಳುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇಂತಹ ತ್ವಚೆಯು ಪ್ರತಿಯೊಬ್ಬ ಸ್ತ್ರೀಯ ಕನಸಾಗಿರುತ್ತದೆ. ಮೊಡವೆ ರಹಿತ ಗುಳ್ಳೆಗಳು, ಕಪ್ಪು ವರ್ತುಲಗಳು ಇಲ್ಲದೇ ಇರುವ ನವಿರಾದ ಸುಕೋಮಲ ತ್ವಚೆಯನ್ನು ತಾವು ಪಡೆದು ಕೊಳ್ಳಬೇಕೆಂಬುದು ಅವರ ಹಂಬಲವಾಗಿರುತ್ತದೆ.

ಆದರೆ ಈ ಆಸೆಯನ್ನು ನೀವು ಈಡೇರಿಸಿಕೊಳ್ಳಲು ನಿಮ್ಮ ತ್ವಚೆಯ ಕಾಳಜಿಯನ್ನು ನೀವು ಅಷ್ಟೇ ಜಾಗರೂಕತೆಯಿಂದ ಮಾಡಬೇಕಾಗುತ್ತದೆ. ಬೇರೆ ಬೇರೆ ಋತುಮಾನಗಳಿಗೆ ಅನುಸಾರವಾಗಿ ನೀವು ತ್ವಚೆಯ ಪಾಲನೆ ಪೋಷಣೆಯನ್ನು ಮಾಡಬೇಕು ಹಾಗೆ ಮಾಡಿದ್ದಲ್ಲಿ ಮಾತ್ರವೇ ತ್ವಚೆಯನ್ನು ಸುಕೋಮಲವಾಗಿ ಕಾಪಾಡಿಕೊಳ್ಳಬಹುದಾಗಿದೆ.

ನಿಮಗೊಂದು ವಿಷಯ ಗೊತ್ತಿದೆಯೇ ನಮ್ಮ ತ್ವಚೆಯು ಮೃತಗೊಂಡು ಪುನಃ ಹೊಸದಾಗಿ ರೂಪುಗೊಳ್ಳುತ್ತದೆಯಂತೆ! ಆದ್ದರಿಂದಲೇ ಈ ಹೊಸ ತ್ವಚೆಯ ಕಾಳಜಿಯನ್ನು ನಾವು ಕಂದನನ್ನು ಆರೈಕೆ ಮಾಡಿಕೊಳ್ಳುವಂತೆ ಮಾಡಬೇಕಾಗುತ್ತದೆ. ಋತುಮಾನಗಳ ವಿಷಯ ಬಂದಾಗ ಚಳಿಗಾಲದಲ್ಲಿ ತ್ವಚೆಯು ಬೇಗನೇ ಒಣಗಿ ಹೋಗುತ್ತದೆ ಮತ್ತು ನಿಸ್ತೇಜಗೊಳ್ಳುತ್ತದೆ. ಇದರಿಂದಲೇ ಮುಖದಲ್ಲಿ ಬಿಳಿಯ ಸಿಪ್ಪೆಯಂತಹ ಅಂಶಗಳನ್ನು ನೀವು ಕಾಣಬಹುದು. ಆಗ ನೀವು ತ್ವಚೆಯನ್ನು ಹೆಚ್ಚು ಪೋಷಣೆಯನ್ನು ಮಾಡಬೇಕಾಗುತ್ತದೆ. ಈ ಸಮಯದಲ್ಲಿ ತ್ವಚೆಯನ್ನು ಮಸಾಜ್ ಇಲ್ಲವೇ ಸ್ಕ್ರಬ್ಬಿಂಗ್ ಮಾಡುವುದು ಅತ್ಯಗತ್ಯವಾಗಿದೆ.

ಮಸಾಜ್ ಮಾಡುವುದು ನಿಮ್ಮ ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ತ್ವಚೆಯನ್ನು ಊರ್ಜಲೀಕರಣಗೊಳಿಸಿ ಮೃತಕೋಶಗಳನ್ನು ನಿವಾರಿಸಿ ಹೊಸ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತ್ವಚೆಯ ಸರಾಗ ಉಸಿರಾಟಕ್ಕೆ ಕೂಡ ಮಸಾಜ್ ಸ್ಕ್ರಬ್‌ ನೆರವಾಗುತ್ತದೆ. ಈ ಮಸಾಜ್ ಕ್ರಿಯೆಗಾಗಿ ನೀವು ಬ್ಯೂಟಿಪಾರ್ಲರ್‌ಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಇರುವ ಕೆಲವೊಂದು ನೈಸರ್ಗಿಕ ಅಂಶಗಳನ್ನು ಬಳಸಿಕೊಂಡು ಈ ಕ್ರಿಯೆಯನ್ನು ಮಾಡಬಹುದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಯಾವೆಲ್ಲಾ ಸಾಮಾಗ್ರಿಗಳನ್ನು ಸಂಪನ್ಮೂಲಗಳನ್ನು ಬಳಸಿಕೊಂಡು ಮಸಾಜ್ ಮಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳೋಣ.

ಚಳಿಗಾಲದಲ್ಲಿ ಒಣ ತ್ವಚೆಗಾಗಿ ಜೇನು ಮತ್ತು ಉಪ್ಪಿನ ಸ್ಕ್ರಬ್

ಚಳಿಗಾಲದಲ್ಲಿ ಒಣ ತ್ವಚೆಗಾಗಿ ಜೇನು ಮತ್ತು ಉಪ್ಪಿನ ಸ್ಕ್ರಬ್

ನೈಸರ್ಗಿಕ ತೇವಾಂಶವನ್ನು ಜೇನು ಒಳಗೊಂಡಿದ್ದು ಚಳಿಗಾಲದಲ್ಲಿ ತ್ವಚೆಯ ಮೇಲೆ ಉಂಟಾಗುವ ಹಾನಿಯನ್ನು ಇದು ತಡೆಗಟ್ಟುತ್ತದೆ.

ಸಾಮಾಗ್ರಿಗಳು

1 ಚಮಚ ಜೇನು

2 ಚಮಚ ಉಪ್ಪು

3-4 ಹನಿ ಎಸನ್ಶಿಯಲ್ ಎಣ್ಣೆ ನಿಮ್ಮ ಆಯ್ಕೆಗೆ ಬಿಟ್ಟಿದ್ದು

ಮಾಡುವ ವಿಧಾನ

ಒಂದು ಕಪ್‌ನಲ್ಲಿ ಈ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಹಾನಿಗೊಂಡ ಸ್ಥಳಗಳಿಗೆ ಹಚ್ಚಿ. ನಿಮ್ಮ ಕಾಲು ಕೈ, ಸಂಪೂರ್ಣ ದೇಹಕ್ಕೆ ಇದನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ.

ವಾರದಲ್ಲಿ ಮೂರು ಬಾರಿ ಈ ಸ್ಕ್ರಬ್ ಅನ್ನು ನಿಮಗೆ ಬಳಸಬಹುದಾಗಿದೆ.

ತೆಂಗಿನೆಣ್ಣೆ ಸಕ್ಕರೆ ಸ್ಕ್ರಬ್

ತೆಂಗಿನೆಣ್ಣೆ ಸಕ್ಕರೆ ಸ್ಕ್ರಬ್

ನಿಮ್ಮ ತ್ವಚೆಯ ಯಾವುದೇ ಸಮಸ್ಯೆಗಳಿಗೆ ತೆಂಗಿನೆಣ್ಣೆ ಉತ್ತಮ ಪರಿಹಾರವಾಗಿದೆ. ಇದಕ್ಕೆ ಸಕ್ಕರೆಯನ್ನು ಬಳಸಿಕೊಂಡು ಅತ್ಯುತ್ತಮ ಫೇಸ್ ಸ್ಕ್ರಬ್ ಅನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ.

ಸಾಮಾಗ್ರಿಗಳು

1/2 ಕಪ್ ತೆಂಗಿನೆಣ್ಣೆ

1/2 ಕಪ್ ಸಕ್ಕರೆ

ಮಾಡುವ ವಿಧಾನ

ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಬೌಲ್‌ನಲ್ಲಿ ಹಾಕಿ ಮಿಶ್ರ ಮಾಡಿಕೊಳ್ಳಿ

ನಿಮ್ಮ ತ್ವಚೆಯನ್ನು ಸಂಪೂರ್ಣವಾಗಿ ತೊಳೆದುಕೊಂಡ ನಂತರ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಮತ್ತು ಮಸಾಜ್ ಮಾಡಿಕೊಳ್ಳಿ.

ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಮೂರು ಬಾರಿ ಈ ಸ್ಕ್ರಬ್ ಅನ್ನು ಬಳಸಿ

ಅವೊಕಾಡೊ ಮತ್ತು ಬಾದಾಮಿ ಸ್ಕ್ರಬ್

ಅವೊಕಾಡೊ ಮತ್ತು ಬಾದಾಮಿ ಸ್ಕ್ರಬ್

ಅವೊಕಾಡೊ ಮತ್ತು ಬಾದಾಮಿಗಳು ಅಗತ್ಯ ಕೊಬ್ಬಿನ ಅಂಶಗಳನ್ನು ಒಳಗೊಂಡಿರುತ್ತದೆ. ಅವೊಕಾಡೊದಲ್ಲಿ ಒಮೆಗಾ - 3 ಫ್ಯಾಟಿ ಅಂಶವಿದ್ದು ಬಾದಾಮಿ ವಿಟಮಿನ್ ಇ ಯ ಸಾರವಾಗಿದೆ.

ಸಾಮಾಗ್ರಿಗಳು

ಒಂದು ಅವೊಕಾಡೊ

1/3 ಕಪ್‌ಗಳಷ್ಟು ಬಾದಾಮಿ

1/2 ಕಪ್ ಓಟ್‌ಮೀಲ್

ಮಾಡುವ ವಿಧಾನ

ಈ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ

ನಿಮ್ಮ ಸಂಪೂರ್ಣ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ

ಸ್ವಲ್ಪ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ

ಚಳಿಗಾಲದಲ್ಲಿ ಅವೊಕಾಡೊ ಮತ್ತು ಬಾದಾಮಿಯ ನಿಯಮಿತ ಬಳಕೆಯಿಂದ ಹೊಳೆಯುವ ತ್ವಚೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ವಾರದಲ್ಲಿ ಎರಡು ಬಾರಿ ಈ ಸ್ಕ್ರಬ್ ಅನ್ನು ಬಳಸಿ.

ಕಾಫಿಯ ಸ್ಕ್ರಬ್

ಕಾಫಿಯ ಸ್ಕ್ರಬ್

ಕಾಫಿಯು ಕೆಫೇನ್ ಮತ್ತು ಉತ್ಕರ್ಷಣ ನಿರೋಧಿ ಅಂಶವನ್ನು ಒಳಗೊಂಡಿದ್ದು ಇದು ನಿತ್ರಾಣಗೊಂಡ ತ್ವಚೆಗೆ ತಾಜಾತನವನ್ನು ನೀಡುತ್ತದೆ. ಮನೆಯಲ್ಲೇ ಬಳಸಬಹುದಾದ ಉತ್ತಮ ಸ್ಕ್ರಬ್ ಇದಾಗಿದೆ.

ಸಾಮಾಗ್ರಿಗಳು

1/4 ಕಪ್ ಕಾಫಿ

1/4 ಕಪ್ ಸಕ್ಕರೆ

2 ಚಮಚ ವರ್ಜಿನ್ ಆಯಿಲ್

3 ಕ್ಯಾಪ್ಸುಲ್ ವಿಟಮಿನ್ ಇ ಆಯಿಲ್

ಮಾಡುವ ವಿಧಾನ

ನಿಮಗೆ ಮೃದುವಾದ ಪೇಸ್ಟ್ ದೊರೆಯುವವರೆಗೆ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ

ನಿಮ್ಮ ಮುಖವನ್ನು ತೊಳೆದುಕೊಂಡು ಈ ಸ್ಕ್ರಬ್ ಹಚ್ಚಿ ಮತ್ತು ಮಸಾಜ್ ಮಾಡಿಕೊಳ್ಳಿ

ತೊಳೆಯಲು ತಣ್ಣೀರನ್ನು ಬಳಸಿ

ಚಳಿಗಾಲದಲ್ಲಿ ಈ ಸ್ಕ್ರಬ್ ಬಳಕೆಯನ್ನು ವಾರದಲ್ಲಿ ಮೂರು ಬಾರಿ ಬಳಸಿ

ಎಪ್ಸಮ್ ಸಾಲ್ಟ್ ಸ್ಕ್ರಬ್

ಎಪ್ಸಮ್ ಸಾಲ್ಟ್ ಸ್ಕ್ರಬ್

ಇದು ಉತ್ತಮ ಕಾಂತಿಯನ್ನು ತ್ವಚೆಗೆ ನೀಡಲಿದ್ದು ಇದರಿಂದ ಸ್ಕ್ರಬ್ ಮಾಡಿಕೊಳ್ಳುವುದು ನಿಮ್ಮ ಕಾಂತಿಯನ್ನು ವರ್ಧಿಸಲಿದೆ.

ಸಾಮಾಗ್ರಿಗಳು

1 ಕಪ್ ಎಪ್ಸಮ್ ಸಾಲ್ಟ್

3 ಹನಿಗಳಷ್ಟು ಜೊಜೋಬ ಆಯಿಲ್

2 ಹನಿಗಳಷ್ಟು ಎಸನ್ಶಿಯಲ್ ಆಯಿಲ್

ಮಾಡುವ ವಿಧಾನ

ಈ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ

ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ

ಸ್ವಲ್ಪ ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಎರಡು ಬಾರಿ ಈ ಸ್ಕ್ರಬ್ ಅನ್ನು ಬಳಸಿ

ಮೊಸರಿನ ಸ್ಕ್ರಬ್

ಮೊಸರಿನ ಸ್ಕ್ರಬ್

ಮೊಸರು ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಉತ್ತಮ ಕಮಾಲನ್ನೇ ಮಾಡಲಿದ್ದು ನಿಮ್ಮ ತ್ವಚೆಯ ಕಾಂತಿಗೆ ಇದು ಅತ್ಯುತ್ತಮವಾಗಿದೆ. ಇದು ನಿಮ್ಮ ತ್ವಚೆಗೆ ಬೇಕಾದ ತೇವಾಂಶವನ್ನು ನೀಡುತ್ತದೆ.

ಸಾಮಾಗ್ರಿಗಳು

1 ಚಮಚ ಮೊಸರು

1/4 ಕಪ್ ಆಲೀವ್ ಆಯಿಲ್

1 ಚಮಚ ಜೇನು

3 ಚಮಚ ಸಕ್ಕರೆ

ಮಾಡುವ ವಿಧಾನ

ಈ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ

ನಿಮ್ಮ ಸಂಪೂರ್ಣ ತ್ವಚೆಗೆ ಇದನ್ನು ಹಚ್ಚಿಕೊಳ್ಳಿ

ಸ್ವಲ್ಪ ನಿಮಷಗಳ ನಂತರ ಇದನ್ನು ತೊಳೆದುಕೊಳ್ಳಿ

ಓಟ್‌ ಮೀಲ್ ಸ್ಕ್ರಬ್

ಓಟ್‌ ಮೀಲ್ ಸ್ಕ್ರಬ್

ಇದು ನೈಸರ್ಗಿಕ ಕಾಂತಿಯನ್ನು ನಿಮ್ಮ ತ್ವಚೆಗೆ ನೀಡಲಿದ್ದು ಪೋಷಕಾಂಶವನ್ನು ಒಳಗೊಂಡಿದೆ. ಮನೆಯಲ್ಲೇ ಈ ಸ್ಕ್ರಬ್ ಅನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ.

ಸಾಮಾಗ್ರಿಗಳು

1/2 ಕಪ್ ಓಟ್‌ಮೀಲ್

1/2 ಕಪ್ ಬ್ರೌನ್ ಶುಗರ್

1/2 ಕಪ್ ಜೇನು

1/4 ಕಪ್ ಜೊಜಬ ಆಯಿಲ್

2 ಹನಿಗಳಷ್ಟು ಲ್ಯಾವೆಂಡರ್ ಆಯಿಲ್

4 ಹನಿಗಳಷ್ಟು ಗ್ರೇನಿಯಮ್ ಎಸನ್ಶಿಯಲ್ ಆಯಿಲ್

ಮಾಡುವ ವಿಧಾನ

ಎಲ್ಲವನ್ನೂ ಹುರಿದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ.

ನಂತರ ಇದನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಸಂಪೂರ್ಣ ದೇಹಕ್ಕೆ ಮುಖಕ್ಕೆ ಹಚ್ಚಿಕೊಳ್ಳಿ

ಇದನ್ನು ತೊಳೆಯಲು ತಣ್ಣೀರನ್ನು ಬಳಸಿ

ವಾರದಲ್ಲಿ ಎರಡು ಬಾರಿ ಈ ಸ್ಕ್ರಬ್ ಅನ್ನು ಬಳಸಿ

ಅರಿಶಿನದ ಸ್ಕ್ರಬ್

ಅರಿಶಿನದ ಸ್ಕ್ರಬ್

ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ತನ್ನಲ್ಲಿ ಒಳಗೊಂಡಿದ್ದು ಇದು ನಿಮ್ಮ ತ್ವಚೆಗೆ ಅಗತ್ಯ ಪೋಷಕಾಂಶವನ್ನು ನೀಡಿ ಹೊಳೆಯುವಿಕೆಯನ್ನು ಒದಗಿಸುತ್ತದೆ. ಅರಶಿನ ಸ್ಕ್ರಬ್ ಅನ್ನು ನಿಮಗೆ ಮನೆಯಲ್ಲೇ ತಯಾರಿಸಬಹುದಾಗಿದ್ದು ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

ಸಾಮಾಗ್ರಿಗಳು

1 ಕಪ್ ಸಕ್ಕರೆ

2 ಚಮಚ ಅರಿಶಿನದ ಹುಡಿ

1 1/2 ಕಪ್ ತೆಂಗಿನೆಣ್ಣೆ

ಮಾಡುವ ವಿಧಾನ

ಮೊದಲಿಗೆ ಈ ಎಲ್ಲಾ ಸಾಮಾಗ್ರಿಗಳನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಳ್ಳಿ

ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಮೂರು ಬಾರಿ ಈ ಸ್ಕ್ರಬ್‌ನ ಬಳಕೆಯನ್ನು ಮಾಡಿ

ವೆನಿಲ್ಲಾ ಮತ್ತು ಸಕ್ಕರೆ ಸ್ಕ್ರಬ್

ವೆನಿಲ್ಲಾ ಮತ್ತು ಸಕ್ಕರೆ ಸ್ಕ್ರಬ್

ಇದು ಸೂಕ್ಷ್ಮ ತ್ವಚೆಗೆ ಅತ್ಯಂತ ಉಪಯೋಗಕಾರಿಯಾಗಿದ್ದು ಯಾವುದೇ ಅಡ್ಡಪರಿಣಾಮಗಳನ್ನು ನಿಮ್ಮ ತ್ವಚೆಗೆ ಉಂಟುಮಾಡುವುದಿಲ್ಲ

ಸಾಮಾಗ್ರಿಗಳು

1 1/2 ಕಪ್ ಬ್ರೌನ್ ಶುಗರ್

1 ಕಪ್ ಸಕ್ಕರೆ

1 ಚಮಚ ವೆನಿಲ್ಲಾ ರಸ

1 ಕಪ್ ಆಲೀವ್ ಆಯಿಲ್

ಮಾಡುವ ವಿಧಾನ

ಮೊದಲಿಗೆ ಈ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ

ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಮತ್ತು ಮಸಾಜ್ ಮಾಡಿಕೊಳ್ಳಿ

ನಂತರ ಸ್ವಲ್ಪ ಸಮಯ ಬಿಟ್ಟು ಮುಖವನ್ನು ತೊಳೆದುಕೊಳ್ಳಿ

ಲಿಂಬೆ ಮತ್ತು ಸಕ್ಕರೆ ಸ್ಕ್ರಬ್

ಲಿಂಬೆ ಮತ್ತು ಸಕ್ಕರೆ ಸ್ಕ್ರಬ್

ಲಿಂಬೆಯು ವಿಟಮಿನ್ ಸಿಯನ್ನು ಒಳಗೊಂಡಿದ್ದು ಇದು ಕೊಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ನೆರಿಗೆ ಮತ್ತು ಕಪ್ಪು ವರ್ತುಲಗಳು ಮಾಯವಾಗುತ್ತದೆ.

ಸಾಮಾಗ್ರಿಗಳು

2 ಚಮಚ ಸಕ್ಕರೆ

1 ಚಮಚ ಜೇನು

1 ಲಿಂಬೆ ರಸ

ಮಾಡುವ ವಿಧಾನ

ಮೊದಲಿಗೆ ಎಲ್ಲಾ ಸಾಮಾಗ್ರಿಗಳನ್ನು ಬಳಸಿ ಪೇಸ್ಟ್ ತಯಾರಿಸಿಕೊಳ್ಳಿ

ನಿಮ್ಮ ಮುಖಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ

ಆಲೀವ್ ಆಯಿಲ್ ಮತ್ತು ಬ್ರೌನ್ ಶುಗರ್ ಸ್ಕ್ರಬ್

ಇದು ಸೂಕ್ಷ್ಮ ತ್ವಚೆಗೆ ಅತ್ಯಂತ ಉತ್ತಮವಾಗಿದ್ದು ಒಳ್ಳೆಯ ಸ್ಕ್ರಬ್ ಆಗಿದೆ.

ಬ್ರೌನ್ ಶುಗರ್

ಬ್ರೌನ್ ಶುಗರ್

ಸಾಮಾಗ್ರಿಗಳು

1/2 ಕಪ್ ಆಲೀವ್ ಆಯಿಲ್

1 ಕಪ್ ಬ್ರೌನ್ ಶುಗರ್

10 ಹನಿಗಳಷ್ಟು ಪೆಪ್ಪರ್‌ಮೆಂಟ್ ಎಸನ್ಶಿಯಲ್ ಆಯಿಲ್

ಮಾಡುವ ವಿಧಾನ

ಎಲ್ಲಾ ಸಾಮಾಗ್ರಿಗಳನ್ನು ಬಳಸಿಕೊಂಡು ಪೇಸ್ಟ್ ಮಾಡಿಕೊಳ್ಳಿ

ನಿಮ್ಮ ಮುಖಕ್ಕೆ ಈ ಸ್ಕ್ರಬ್ ಅನ್ನು ಹಚ್ಚಿ ಮಸಾಜ್ ಮಾಡಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಕಿತ್ತಳೆ ಸಿಪ್ಪೆ ಸ್ಕ್ರಬ್

ಕಿತ್ತಳೆ ಸಿಪ್ಪೆ ಸ್ಕ್ರಬ್

ಚಳಿಗಾಲದಲ್ಲಿ ಕಿತ್ತಳೆ ಸ್ಕ್ರಬ್ ಅತ್ಯುತ್ತಮವಾಗಿದೆ. ಇದು ಬರಿಯ ಹಣ್ಣಾಗಿರದೇ ನಿಮ್ಮ ತ್ವಚೆಗೆ ಅತ್ಯಂತ ಉತ್ತಮವಾಗಿದೆ. ವಿಟಮಿನ್ ಇದರಲ್ಲಿದ್ದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಿತ್ತಳೆ ಕಮಾಲಿನದ್ದಾಗಿದೆ. ಇದರೊಂದಿಗೆ ಅಲೊವೇರಾವನ್ನು ಬಳಸಿಕೊಂಡು ಅತ್ಯುತ್ತಮ ಸ್ಕ್ರಬ್ ಅನ್ನು ನಿಮಗೆ ತಯಾರಿಸಿಕೊಳ್ಳಬಹುದಾಗಿದೆ.

ಸಾಮಾಗ್ರಿಗಳು

1 ಚಮಚ ಕಿತ್ತಳೆ ಸಿಪ್ಪೆ ಹುಡಿ

1 ಚಮಚ ಅಲೊವೇರಾ ಜೆಲ್

1 ಚಮಚ ಜೇನು

ಮಾಡುವ ವಿಧಾನ

ಎಲ್ಲಾ ಸಾಮಾಗ್ರಿಗಳನ್ನು ಬಳಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ

ನಿಮ್ಮ ಸಂಪೂರ್ಣ ದೇಹಕ್ಕೆ ಮತ್ತು ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ

ವೃತ್ತಾಕಾರವನ್ನು ಮಸಾಜ್ ಮಾಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಎರಡು ಬಾರಿ ಈ ಸ್ಕ್ರಬ್ ಅನ್ನು ಬಳಸಿ

ಟ್ರೀ ಟ್ರೀ ಆಯಿಲ್ ಸ್ಕ್ರಬ್

ಟ್ರೀ ಟ್ರೀ ಆಯಿಲ್ ಸ್ಕ್ರಬ್

ನಿಮ್ಮ ತ್ವಚೆಗೆ ಉತ್ತಮ ಪೋಷಕಾಂಶಗಳನ್ನು ಇದು ಒದಗಿಸಲಿದ್ದು ಸೂರ್ಯನಿಂದ ಹಾನಿಗೊಳಗಾಗಿರುವ ತ್ವಚೆಯನ್ನು ಇದು ರಿಪೇರಿ ಮಾಡುತ್ತದೆ. ಸೂಕ್ಷ್ಮ ತ್ವಚೆಗೆ ಇದು ಅತ್ಯುತ್ತಮವಾಗಿದೆ.

ಸಾಮಾಗ್ರಿಗಳು

6-7 ಹನಿಗಳಷ್ಟು ಟಿ ಟ್ರಿ ಆಯಿಲ್

1 ಚಮಚ ಸಿ ಸಾಲ್ಟ್

1 ಚಮಚ ಬೇಕಿಂಗ್ ಸೋಡಾ

ವಿಧಾನ

ಸಾಮಾಗ್ರಿಗಳನ್ನು ಪೇಸ್ಟ್ ರೂಪದಲ್ಲಿ ಮಿಶ್ರ ಮಾಡಿಕೊಳ್ಳಿ

ನಿಮ್ಮ ಮುಖಕ್ಕೆ ಮತ್ತು ದೇಹಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ

ನಿಮಿಷಗಳ ಕಾಲ ಮಸಾಜ್ ಮಾಡಿ

ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಮೂರು ಬಾರಿ ಈ ಸ್ಕ್ರಬ್ ಅನ್ನು ಬಳಸಿ ನೋಡಿ

ಲೆಮನ್ ಗ್ರಾಸ್ ಪೌಡರ್

ಲೆಮನ್ ಗ್ರಾಸ್ ಪೌಡರ್

ಇದು ಬ್ಯಾಕ್ಟೀರಿಯಲ್ ವಿರೋಧಿ ಅಂಶಗಳನ್ನು ಒಳಗೊಂಡಿದ್ದು ಇದು ನಿಮ್ಮ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ ಇದು ಅತ್ಯುತ್ತಮ ಸ್ಕ್ರಬ್ ಆಗಿದೆ.

ಸಾಮಾಗ್ರಿಗಳು

2 ಚಮಚ ಲೆಮನ್ ಗ್ರಾಸ್ ಪೌಡರ್

4 ಚಮಚ ವರ್ಜಿನ್ ತೆಂಗಿನ ಎಣ್ಣೆ

1 ಚಮಚ ಜೇನು

ವಿಧಾನ

ಇದನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಳ್ಳಿ

ನಿಮ್ಮ ಮುಖಕ್ಕೆ ಮತ್ತು ಸಂಪೂರ್ಣ ದೇಹಕ್ಕೆ ಇದನ್ನು ಹಚ್ಚಿ

ನಿಮಿಷಗಳ ನಂತರ ಮಸಾಜ್ ಮಾಡಿಕೊಳ್ಳಿ

ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಮೂರು ಬಾರಿ ಈ ಸ್ಕ್ರಬ್ ಅನ್ನು ಬಳಸಿ ನೋಡಿ

ಗ್ರೀನ್ ಟೀ ಮತ್ತು ಜೇನಿನ ಸ್ಕ್ರಬ್

ಗ್ರೀನ್ ಟೀ ಮತ್ತು ಜೇನಿನ ಸ್ಕ್ರಬ್

ಇದರಲ್ಲಿ ಉತ್ಕರ್ಷಣ ನಿರೋಧಿ ಅಂಶಗಳಿದ್ದು ಗ್ರೀನ್ ಟಿಯೊಂದಿಗೆ ಜೇನನ್ನು ಬಳಸಿಕೊಂಡು ಸ್ಕ್ರಬ್ ರಚಿಸುವುದರಿಂದ ನಿಮ್ಮ ತ್ವಚೆಗೆ ಉತ್ತಮ ಪೋಷಣೆ ದೊರಕುತ್ತದೆ.

ಸಾಮಾಗ್ರಿಗಳು

1 ಚಮಚ ಗ್ರೀನ್ ಟೀ

1 ಚಮಚ ಸಕ್ಕರೆ

1 ಚಮಚ ಜೇನು

ಮಾಡುವ ವಿಧಾನ

ಮೊದಲಿಗೆ ಇವುಗಳನ್ನು ಪೇಸ್ಟ್‌ನಂತೆ ಮಾಡಿಕೊಳ್ಳಿ

ನಿಮ್ಮ ಸಂಪೂರ್ಣ ದೇಹಕ್ಕೆ ಇದನ್ನು ಹಚ್ಚಿರಿ

ನಿಮಿಷಗಳ ಕಾಲ ವೃತ್ತಾಕಾರವಾಗಿ ಮಸಾಜ್ ಮಾಡಿ

ತೊಳೆಯಲು ತಣ್ಣೀರಿನ ಬಳಕೆ ಮಾಡಿ

ವಾರದಲ್ಲಿ ಎರಡು ಬಾರಿ ಈ ಸ್ಕ್ರಬ್ ಬಳಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಿ.

English summary

Homemade Scrubs For Dry Skin In Winter

Scrubbing is one beauty routine that often goes unappreciated - many of us do not even know why it is necessary. However, when we get a facial, foot spa or a nail spa done at an expensive salon, we can actually feel the skin glowing. It is as if our skin died and was reborn again. Well, what do we know, it really was reborn! In fact, scrubbing is very essential for dry skin in winters.
Subscribe Newsletter