ಅಂದದ ಕಾಲುಗಳಿಗೆ, ಬೇಕಿದೆ ಚೆಂದದ ಆರೈಕೆ...

By: Hemanth
Subscribe to Boldsky

ರೂಪದರ್ಶಿಯರು ಹಾಗೂ ನಟಿಯರು ಕಾಲುಗಳನ್ನು ನೋಡಿದರೆ ಆ ರೀತಿಯ ಸುಂದರ ಕಾಲುಗಳು ನಮಗೂ ಬೇಕು ಎಂದು ಮಹಿಳೆಯರಿಗೆ ಅನಿಸುವುದುಂಟು. ಇಂತಹ ಸುಂದರ ಕಾಲನ್ನು ಪಡೆಯಲು ಅವರು ಹಲವಾರು ರೀತಿಯ ಕ್ರೀಮ್ ಗಳನ್ನು ಬಳಸಿರಬಹುದು ಮತ್ತು ಆಹಾರ ಕ್ರಮವನ್ನು ಸರಿಯಾಗಿಟ್ಟುಕೊಂಡು ವ್ಯಾಯಾಮ ಮಾಡುವುದರಿಂದ ಕಾಲುಗಳು ಸುಂದರವಾಗಿದೆ ಮತ್ತು ಅವರ ದೇಹ ಕೂಡ. ಈ ಟಿಪ್ಸ್ ಅಂದದ ಕೈ ಕಾಲು ಬಯಸುವವರಿಗಾಗಿ ಮಾತ್ರ

ಒಂದು ವೇಳೆ ನೀವು ವಾಕ್ಸಿಂಗ್ ಮಾಡಿದ ಬಳಿಕ ಕಾಲುಗಳ ಅಂದ ಚೆಂದ ಹೆಚ್ಚಾಗಬೇಕೆಂದರೆ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೇವಲ ಕ್ರೀಮ್‌ಗಳನ್ನು ಹಚ್ಚಿಕೊಳ್ಳುವುದರಿಂದ ಕಾಲುಗಳು ಸುಂದರವಾಗಲ್ಲ. ನಿಮ್ಮ ಕಾಲುಗಳು ಕಾಂತಿಯುತ ಹಾಗು ಸುಂದರವಾಗಲು ಏನು ಮಾಡಬೇಕೆಂದು ಈ ಲೇಖನದಲ್ಲಿ ತಿಳಿದುಕೊಳ್ಳುವ...... 

ಕಾಲುಗಳಿಗೆ ಮಸಾಜ್ ಮಾಡಿ

ಕಾಲುಗಳಿಗೆ ಮಸಾಜ್ ಮಾಡಿ

ಸಾರಭೂತ ತೈಲವನ್ನು ತೆಗೆದುಕೊಂಡು ಕಾಲನ್ನು ಕೆಳಮುಖವಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕಾಲುಗಳಲ್ಲಿ ರಕ್ತಸಂಚಾರವು ಉತ್ತಮವಾಗುವುದು. ಮಸಾಜ್ ಮಾಡಿದ ಬಳಿಕ ಸ್ನಾನ ಮಾಡಲು ಹೋಗಿ. ಒಂದು ಗಂಟೆಯಲ್ಲಿ ಇದು ಕಾಂತಿಯುತ ಕಾಲುಗಳನ್ನು ನೀಡುವುದು.

ನೀರಿನ ಬಲ

ನೀರಿನ ಬಲ

ಹೆಚ್ಚಿನ ನೀರು ಕುಡಿಯುವುದರಿಂದ ದೇಹವನ್ನು ತೇವಾಂಶದಿಂದ ಇಡಬಹುದು. ಅದೇ ರೀತಿಯಾಗಿ ಕಾಲುಗಳನ್ನು ತೇವಾಂಶದಿಂದ ಇಡಬೇಕಾದರೆ ಸ್ನಾನದ ಬಳಿಕ ಕಾಲುಗಳಿಗೆ ರೋಸ್ ವಾಟರ್ ಹಾಕಿಕೊಳ್ಳಿ.

ರೋಸ್ ವಾಟರ್

ರೋಸ್ ವಾಟರ್

ಕಾಲುಗಳನ್ನು ಗುಲಾಬಿ ಎಸಲುಗಳನ್ನು ಹಾಕಿರುವ ನೀರಿನಲ್ಲಿ ಇಟ್ಟರೆ ತುಂಬಾ ಲಾಭಕಾರಿ. ಹೀಗೆ ಮಾಡಿದರೆ ದೇಹವು ಒಳ್ಳೆಯ ಸುವಾಸನೆಯನ್ನು ಉಂಟು ಮಾಡುತ್ತದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು ಮತ್ತು ಹಾಲಿನ ಉತ್ಪನ್ನಗಳು

ಹಾಲು ಮತ್ತು ಕ್ರೀಮ್‌ನ್ನು ಬಳಸುವುದರಿಂದ ಕಾಲುಗಳಿಗೆ ನೈಸರ್ಗಿಕ ಕಾಂತಿಯು ಸಿಗುವುದು. ಸ್ನಾನ ಮಾಡುವ ಅರ್ಧ ಗಂಟೆಗೆ ಮೊದಲು ಹಾಲು ಅಥವಾ ಹಾಲಿನ ಕ್ರಿಮ್‌ನಿಂದ ಕಾಲುಗಳಿಗೆ ಮಸಾಜ್ ಮಾಡಿ. ತಂಪಾದ ನೀರಿನಿಂದ ಕಾಲನ್ನು ತೊಳೆದರೆ ಕಾಂತಿಯು ದೀರ್ಘ ಕಾಲು ಉಳಿಯುವುದು.

ಸಿಟ್ರಸ್ ಇರುವ ಹಣ್ಣುಗಳು

ಸಿಟ್ರಸ್ ಇರುವ ಹಣ್ಣುಗಳು

ಕಾಲುಗಳು ದೀರ್ಘಕಾಲ ಕಾಂತಿಯುತ ಹಾಗೂ ಸುಂದರವಾಗಿ ಕಾಣಬೇಕೆಂದರೆ ನಿಂಬೆ ಮತ್ತು ಉಪ್ಪನ್ನು ಬಳಸಿಕೊಳ್ಳಿ. ನಿಂಬೆರಸ ಮತ್ತು ಉಪ್ಪನ್ನು ಕಾಲುಗಳಿಗೆ ಮೇಲ್ಮುಖವಾಗಿ ಉಜ್ಜಿಕೊಳ್ಳಿ. ತಂಪಾದ ನೀರಿನಿಂದ ತೊಳೆದುಕೊಂಡು ಕಾಲನ್ನು ಒರೆಸಿಕೊಳ್ಳಿ. ಕಾಲುಗಳಿಗೆ ಕಾಂತಿಯನ್ನು ನೀಡಲು ಇವು ಕೆಲವೊಂದು ವಿಧಾನಗಳು.

ಆಲೂಗಡ್ಡೆಯ ಸಿಪ್ಪೆ

ಆಲೂಗಡ್ಡೆಯ ಸಿಪ್ಪೆ

ಕಾಲಿನ ಹೊಳಪನ್ನು ಹೆಚ್ಚಿಸಲು ಮತ್ತೊಂದು ವಿಧಾನವೆಂದರೆ ಆಲೂಗಡ್ಡೆ ಸಿಪ್ಪೆಯನ್ನು ಹಾಕಿ ತಿಕ್ಕಿ ಅರ್ಧ ಗಂಟೆಯ ಬಳಿಕ ಕಾಲನ್ನು ಹದ ಬಿಸಿ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ವ್ಯಾಕ್ಸ್ ಕಲೆಗಳನ್ನು ಕೂಡ ಹೋಗಲಾಡಿಸಬಹುದು.

 

 

English summary

Simple beauty Tips For Glowing Legs

These beauty secrets to get glowing legs are not at all time consuming if you set aside some time after or before your shower. Pamper your long and toned legs to get a bright glow. These beauty secrets can be put to use especially if you are heading out to a party later on. Take a look at some of the ways in which you can get your toned legs to glow.
Subscribe Newsletter