ತುಟಿ ಒಣಗಿದೆಯೇ? ಹಾಗಿದ್ದರೆ ಇವುಗಳಿಂದ ಮಸಾಜ್ ಮಾಡಿ

By: Divya
Subscribe to Boldsky

ತುಟಿ ಒಡೆಯುವುದು, ಒಂದು ಬಗೆಯ ಉರಿ ಎಲ್ಲವೂ ಚಳಿಗಾಲದಲ್ಲಿ ಸಾಮಾನ್ಯವಾದದ್ದು ಎಂದು ಕೆಲವರು ಅಂದುಕೊಳ್ಳುತ್ತಾರೆ. ಇದೇ ರೀತಿಯ ತೊಂದರೆ ಮಳೆಗಾಲದಲ್ಲೂ ಇರುತ್ತದೆ ಎನ್ನುವುದನ್ನು ಮರೆಯಬಾರದು. ಮಳೆಗಾಲದ ಚಳಿಯಲ್ಲೂ ತುಟಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು. ಈ ಸಮಯದಲ್ಲಿ ಸೂಕ್ತವಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ತುಟಿಗಳು ಸದಾ ಒರಟಾಗಿರುತ್ತವೆ.

ತುಟಿ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಹೀಗೆ ಮಾಡಿ

ತ್ವಚೆ ಮತ್ತು ತುಟಿಗಳು ಬಹಳ ಸೂಕ್ಷ್ಮ ಅಂಗಗಳಾದ್ದರಿಂದ ವರ್ಷದ ಎಲ್ಲಾ ಕಾಲದಲ್ಲೂ ಸೂಕ್ತ ರೀತಿಯಲ್ಲಿ ಆರೈಕೆ ಮಾಡಿಕೊಳ್ಳಬೇಕು. ಅದರಲ್ಲೂ ಒಣ ತ್ವಚೆಯವರಾಗಿದ್ದರೆ ಇನ್ನಷ್ಟು ಹೆಚ್ಚಿನ ಗಮನವನ್ನು ನೀಡಬೇಕಾಗುವುದು. ಮುಖದಲ್ಲಿ ಕಣ್ಣು ಮತ್ತು ಬಾಯಿಯೇ ಹೆಚ್ಚು ಆಕರ್ಷಕ ಅಂಗವಾದ್ದರಿಂದ ಅವುಗಳ ಸೌಂದರ್ಯವನ್ನು ಕಾಯ್ದುಕೊಳ್ಳಲೇ ಬೇಕಾಗುವುದು. ಮಳೆಗಾಲದ ವಾತಾವರಣದಲ್ಲಿ ತುಟಿಯ ಮೇಲಾಗುವ ದುಷ್ಟಪರಿಣಾಮವನ್ನು ಹೇಗೆ ತಡೆಗಟ್ಟಬಹುದು ಎನ್ನುವುದರ ಸರಳ ವಿವರಣೆ ಇಲ್ಲಿದೆ ನೋಡಿ......

ತುಟಿಯನ್ನು ಸ್ಕ್ರಬ್ ಮಾಡಬೇಕು

ತುಟಿಯನ್ನು ಸ್ಕ್ರಬ್ ಮಾಡಬೇಕು

ಮಳೆಗಾಲದಲ್ಲಿ ಚಳಿಯ ಪ್ರಮಾಣ ಹೆಚ್ಚಾದಂತೆ ತುಟಿಗಳು ಒಡೆಯಲು ಪ್ರಾರಂಭವಾಗುತ್ತವೆ. ಹೀಗೆ ಒಡೆದ ತುಟಿಗಳ ಮೇಲೆ ಸತ್ತ ಚರ್ಮಗಳು ಅಂಟಿಕೊಂಡಿರುತ್ತವೆ. ಅದನ್ನು ನೀರಿನಲ್ಲಿ ಒದ್ದೆ ಮಾಡಿ, ಮೃದುವಾದ ಬಟ್ಟೆ ಅಥವಾ ಹರಳಿನ ಬ್ರೆಶ್‍ಗಳಿಂದ ಉಜ್ಜಬೇಕು. ಹೀಗೆ ಮಾಡುವುದರಿಂದ ಒಣಗಿದ ಚರ್ಮಗಳು ಉದುರುತ್ತವೆ. ಮತ್ತೊಮ್ಮೆ ನೀರಿನಲ್ಲಿ ತುಟಿಯನ್ನು ತೊಳೆದು, ಉತ್ತಮ ಗುಣಮಟ್ಟದ ಲಿಪ್ ಕೇರ್ ಕ್ರೀಮ್‍ಗಳನ್ನು ಅನ್ವಯಿಸಿ.

ನೀರನ್ನು ಕುಡಿಯಿರಿ

ನೀರನ್ನು ಕುಡಿಯಿರಿ

ಮಳೆಗಾಲದಲ್ಲಿ ಬಾಯಾರಿಕೆಯ ಸಂವೇದನೆ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಈ ಕಾರಣಕ್ಕೆ ನೀರನ್ನು ಕುಡಿಯುವ ಗೋಜಿಗೆ ಹೋಗುವುದಿಲ್ಲ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ಹಾಗೂ ತುಟಿಗಳು ಒಣಗಿ ಜೀವ ಕಳೆದುಕೊಳ್ಳುತ್ತವೆ. ತಾಜಾ ಹಣ್ಣಿನ ರಸ ಮತ್ತು ಪಾನೀಯಗಳನ್ನು ಸೇವಿಸುತ್ತಿದ್ದರೆ ದೇಹಕ್ಕೆ ನೀರಿನಂಶ ರವಾನೆಯಾಗುತ್ತಿರುತ್ತದೆ. ಆಗ ತುಟಿಯೂ ತೇವಾಂಶದಿಂದ ಕೂಡಿರುತ್ತದೆ.

ಎಣ್ಣೆ-ಬೆಣ್ಣೆಗಳ ಬಳಕೆ ಮಾಡಿ

ಎಣ್ಣೆ-ಬೆಣ್ಣೆಗಳ ಬಳಕೆ ಮಾಡಿ

ತುಟಿಯು ಸಂಪೂರ್ಣವಾಗಿ ಒಣಗಲು ಪ್ರಾರಂಭವಾದಮೇಲೆ ಆರೈಕೆ ಪ್ರಾರಂಭಿಸಬೇಡಿ. ದಿನವೂ ಪೆಟ್ರೋಲಿಯಂ ಜೆಲ್ಲಿ, ಆಲಿವ್ ಎಣ್ಣೆ, ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ, ಬೆಣ್ಣೆ ಅಥವಾ ತುಪ್ಪಗಳಂತಹ ಉತ್ಪನ್ನಗಳಲ್ಲಿ ಯಾವುದಾದರೊಂದನ್ನು ಹಚ್ಚುವ ಅಭ್ಯಾಸ ಇಟ್ಟುಕೊಂಡಿರಿ.

ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

ತುಟಿಗಳ ಮಸಾಜ್

ತುಟಿಗಳ ಮಸಾಜ್

ದೇಹದ ಮಸಾಜ್ ಮಾಡಿಕೊಂಡಂತೆ ತುಟಿಗಳ ಮಸಾಜ್ ಮಾಡಬೇಕು. ಮಸಾಜ್ ಮಾಡುವಾಗ ಜೊಜೊಬಾ ಕೆನೆ, ಬೆಣ್ಣೆ, ಆಲಿವ್ ತೈಲ ಮತ್ತು ತುಪ್ಪಗಳಲ್ಲಿ ಯಾವುದಾದರೊಂದನ್ನು ತುಟಿಗೆ ಹಚ್ಚಿ ಮಸಾಜ್ ಮಾಡಬೇಕು. ಆಗ ತುಟಿಯಲ್ಲಿ ರಕ್ತಸಂಚಾರ ಸುಗಮವಾಗಿ ಆಗುತ್ತದೆ. ಜೊತೆಗೆ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.

ಆರೋಗ್ಯ ಪೂರ್ಣ ಆಹಾರ ಸೇವಿಸಿ

ಆರೋಗ್ಯ ಪೂರ್ಣ ಆಹಾರ ಸೇವಿಸಿ

ಎಣ್ಣೆಯುಕ್ತ ಮತ್ತು ಜಂಕ್ ಆಹಾರವನ್ನು ಸೇವಿಸುವುದಕ್ಕಿಂತ ಆದಷ್ಟು ಹಸಿ ತರಕಾರಿಯನ್ನು ಸೇವಿಸಿ. ಇದು ತ್ವಚೆ ಹಾಗೂ ತುಟಿಯ ಆರೋಗ್ಯವನ್ನು ಕಾಪಾಡುತ್ತದೆ. ಮಳೆಗಾಲದಲ್ಲಿ ನೀರಿನ ಮೂಲಕ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತವೆ. ಆದಷ್ಟು ಮನೆಯಿಂದಾಚೆ ಸಿಗುವ ಊಟ ತಿಂಡಿ, ರಸ್ತೆ ಬದಿಯಲ್ಲಿ ಸಿಗುವ ಚಾಟ್ಸ್‍ಗಳನ್ನು ತಿನ್ನದಿರಿ.

ಧೂಮಪಾನದಿಂದ ದೂರ ಇರಿ

ಧೂಮಪಾನದಿಂದ ದೂರ ಇರಿ

ಸಿಗರೇಟ್ ಮತ್ತು ಬೀಡಿಗಳನ್ನು ಸೇದುವುದರಿಂದ ತುಟಿಗಳು ನಿರ್ಜಲೀಕರಣಕ್ಕೆ ಒಳಗಾಗಿ ಒಡೆಯುತ್ತವೆ. ಅಲ್ಲದೆ ತಮ್ಮ ಬಣ್ಣವನ್ನು ಕಳೆದುಕೊಳ್ಳುತ್ತವೆ. ಈ ಚಟದಿಂದ ದೂರವಿದ್ದರೆ ತುಟಿಯೊಂದಿಗೆ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಆರೋಗ್ಯ ಪೂರ್ಣ ಆಹಾರ ಸೇವಿಸಿ

ಆರೋಗ್ಯ ಪೂರ್ಣ ಆಹಾರ ಸೇವಿಸಿ

ಎಣ್ಣೆಯುಕ್ತ ಮತ್ತು ಜಂಕ್ ಆಹಾರವನ್ನು ಸೇವಿಸುವುದಕ್ಕಿಂತ ಆದಷ್ಟು ಹಸಿ ತರಕಾರಿಯನ್ನು ಸೇವಿಸಿ. ಇದು ತ್ವಚೆ ಹಾಗೂ ತುಟಿಯ ಆರೋಗ್ಯವನ್ನು ಕಾಪಾಡುತ್ತದೆ. ಮಳೆಗಾಲದಲ್ಲಿ ನೀರಿನ ಮೂಲಕ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತವೆ. ಆದಷ್ಟು ಮನೆಯಿಂದಾಚೆ ಸಿಗುವ ಊಟ ತಿಂಡಿ, ರಸ್ತೆ ಬದಿಯಲ್ಲಿ ಸಿಗುವ ಚಾಟ್ಸ್‍ಗಳನ್ನು ತಿನ್ನದಿರಿ.

 

English summary

Prevent Your Lips From Getting Dry During This Monsoon

The biggest problem with dry lips is that you cannot hide these with anything. The face gets the most attention and each part of the face gets groomed in a perfect way. Eyes and lips play a crucial role in making one look beautiful. Who would want to go out with cracked and bleeding lips? So, here we list a few effective tips to protect your lips from getting dry this monsoon.
Subscribe Newsletter