ಒಂದಲ್ಲ, ಎರಡಲ್ಲ, ಮಜ್ಜಿಗೆಯಿಂದ ಹತ್ತಾರು ಪ್ರಯೋಜನಗಳು ಇದೆ

By: Jaya subramanya
Subscribe to Boldsky

ಸೌಂದರ್ಯವನ್ನು ಅತ್ಯುತ್ತಮಗೊಳಿಸುವಲ್ಲಿ ನಿಸರ್ಗದ ಉತ್ಪನ್ನಗಳು ಹಿಂದಿನಿಂದಲೂ ಕಮಾಲನ್ನೇ ಮಾಡುತ್ತಿವೆ. ಆದರೆ ಇಂದಿನ ಗಡಿಬಿಡಿಯ ವಾತಾವರಣಲ್ಲಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ವ್ಯವಧಾನ ನಮ್ಮಲ್ಲಿ ಇಲ್ಲದಿರುವುದರಿಂದ ಮಾರುಕಟ್ಟೆಯಲ್ಲಿರುವ ಕೃತಕ ಸಾಧನಗಳಿಗೆ ನಾವು ಒಗ್ಗಿಕೊಳ್ಳುತ್ತಿದ್ದೇವೆ.

ಆದರೆ ಇಂದಿನ ಲೇಖನದಲ್ಲಿ ನೀವು ಬಳಸಬಹುದಾದ ಅತಿ ಸುಲಭವಾಗಿರುವ ನೈಸರ್ಗಿಕ ಉತ್ಪನ್ನವನ್ನು ತಿಳಿಸುತ್ತಿದ್ದೇವೆ. ಎಷ್ಟೋ ಮನೆಗಳಲ್ಲಿ ಈ ಉತ್ಪನ್ನವನ್ನು ದೇಹದ ಆರೋಗ್ಯಕ್ಕಾಗಿ ಬಳಸುವುದಿದೆ ಆದರೆ ಇದರಿಂದ ನಿಮ್ಮ ಕೂದಲು ಮತ್ತು ತ್ವಚೆಗೂ ಅದ್ಭುತ ಪರಿಣಾಮ ದೊರೆಯಲಿದೆ.

ಬಾಯಾರಿದ ದೇಹಕ್ಕೆ ಕಾಂತಿಯುಕ್ತ ತ್ವಚೆಗೆ ಮಜ್ಜಿಗೆಯ ಮೋಡಿ

ಮಜ್ಜಿಗೆ ಎಂಬ ಅದ್ಭುತ ಉತ್ಪನ್ನದ ಬಗೆಗಿನ ವಿವರಗಳನ್ನು ನಾವು ಇಂದಿನ ಲೇಖನದ ಮೂಲಕ ನಾವು ಹಂಚಿಕೊಳ್ಳುತ್ತಿದ್ದು ಇದು ಲ್ಯಾಕ್ಟಿಕ್ ಆಸಿಡ್ ಅನ್ನು ಹೊಂದಿದೆ ಮತ್ತು ಆಲ್ಫಾ ಹೈಡ್ರೋಕ್ಸೈ ಆಸಿಡ್ ಅಂಶವನ್ನು ಪಡೆದುಕೊಂಡಿದೆ. ವಿಟಮಿನ್ ಎ, ಡಿ ಮತ್ತು ಬಿ12 ಪ್ಲಸ್ ಇದರಲ್ಲಿದ್ದು ಫಾಸ್‌ಫರಸ್, ಪ್ರೊಟೀನ್, ಪೊಟಾಶಿಯಂ, ಸೆಲೇನಿಯಂ ಮತ್ತು ಕ್ಯಾಲ್ಶಿಯಂ ಅನ್ನು ಹೊಂದಿದೆ. ಹಾಗಿದ್ದರೆ ಮಜ್ಜಿಗೆಯನ್ನು ಇತರ ಸಾಮಾಗ್ರಿಗಳೊಂದಿಗೆ ಬಳಸಿಕೊಂಡು ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ....

ಮಜ್ಜಿಗೆ ಮತ್ತು ಕಿತ್ತಳೆ ಸಿಪ್ಪೆ ಹುಡಿ: ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಲು

ಮಜ್ಜಿಗೆ ಮತ್ತು ಕಿತ್ತಳೆ ಸಿಪ್ಪೆ ಹುಡಿ: ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಲು

*1 ಚಮಚ ಕಿತ್ತಳೆ ಹುಡಿ

*3-5 ಚಮಚಗಳಷ್ಟು ಮಜ್ಜಿಗೆ

*ಮೊದಲಿಗೆ ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಹುಡಿಮಾಡಿಟ್ಟುಕೊಳ್ಳಿ ಇದನ್ನು ಗಾಳಿಯಾಡದ ಡಬ್ಬದಲ್ಲಿ ಕೂಡ ಸಂಗ್ರಹಿಸಿಡಬಹುದು.

*ಕಿತ್ತಳೆ ಹುಡಿ ಮತ್ತು ಮಜ್ಜಿಗೆಯನ್ನು ಜೊತೆಯಾಗಿ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ

*ನಿಮ್ಮ ಮುಖದಲ್ಲಿರುವ ಕಲೆಗಳ ಮೇಲೆ ಇದನ್ನು ಹಚ್ಚಿಕೊಳ್ಳಿ ನಂತರ ಸ್ವಲ್ಪ ಹೊತ್ತು ಹಾಗೆಯೇ ಬಿಡಿ

*ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ಮಜ್ಜಿಗೆ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್: ತ್ವಚೆಯ ಕ್ಲೆನ್ಸರ್ ಮತ್ತು ತಾಜಾತನ ಒದಗಿಸುತ್ತದೆ

ಮಜ್ಜಿಗೆ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್: ತ್ವಚೆಯ ಕ್ಲೆನ್ಸರ್ ಮತ್ತು ತಾಜಾತನ ಒದಗಿಸುತ್ತದೆ

*1/2 ಕಪ್ ಮಜ್ಜಿಗೆ

*5-8 ಹನಿಗಳಷ್ಟು ಬಾದಾಮಿ ಎಣ್ಣೆ

*1 ಚಮಚದಷ್ಟು ರೋಸ್ ವಾಟರ್

ಮಜ್ಜಿಗೆ, ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಅನ್ನು ಮಿಶ್ರ ಮಾಡಿಕೊಂಡು ಸ್ಕಿನ್ ಸ್ಕ್ರಬ್ಬರ್‌ನಂತೆ ಕೂಡ ಬಳಸಬಹುದಾಗಿದೆ. ಇದು ನೀರಿನ ರೀತಿಯಲ್ಲಿರಲಿ.

ಮೊದಲಿಗೆ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ - ಮಜ್ಜಿಗೆ, ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಹತ್ತಿಯ ಪ್ಯಾಡ್ ಬಳಸಿಕೊಂಡು ಈ ಮಿಶ್ರಣವನ್ನು ನಿಮ್ಮ ಸಂಪೂರ್ಣ ತ್ವಚೆಗೆ ಹಚ್ಚಿಕೊಳ್ಳಿ ಮತ್ತು ಮುಖದಿಂದ ಕೊಳೆಯನ್ನು ತೆಗೆಯುವಂತೆ ತಿಕ್ಕಿಕೊಳ್ಳಿ ಮುಖದಲ್ಲಿ ಇದು ಅರ್ಧಗಂಟೆಗಳ ಕಾಲ ಹಾಗೆಯೇ ಇರಲಿ ನಂತರ ನೀರಿನಿಂದ ತೊಳೆದುಕೊಳ್ಳಿ

ಮಜ್ಜಿಗೆ, ಜೇನು: ತ್ವಚೆಯನ್ನು ಬಿಳಿಯಾಗಿಸಲು

ಮಜ್ಜಿಗೆ, ಜೇನು: ತ್ವಚೆಯನ್ನು ಬಿಳಿಯಾಗಿಸಲು

*1 ಚಮಚ ಮಜ್ಜಿಗೆ

*1 ಚಮಚದಷ್ಟು ಜೇನು

ಈ ಸ್ಕಿನ್ ವೈಟ್‌ನರ್ ಅನ್ನು ತಯಾರಿಸಲು ನೀವು ಸಮಪ್ರಮಾಣದಲ್ಲಿ ಮಜ್ಜಿಗೆ ಮತ್ತು ಜೇನು ಬಳಸಬೇಕು

ಈ ಮಿಶ್ರಣವನ್ನು ಲೋಶನ್‌ನಂತೆ ಹಚ್ಚಿಕೊಂಡು ಮಸಾಜ್ ಮಾಡಿ

ಇದನ್ನು 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ

ನಿತ್ಯವೂ ನಿಮ್ಮ ತ್ವಚೆಗೆ ಇದನ್ನು ಬಳಸಿಕೊಳ್ಳಬಹುದಾಗಿದೆ.

ಮಜ್ಜಿಗೆ, ಕಡಲೆಹಿಟ್ಟು/ಕಡಲೆಹಿಟ್ಟು ಮತ್ತು ಅರಿಶಿನ - ಆಂಟಿ ಟ್ಯಾನ್ ಪ್ಯಾಕ್

ಮಜ್ಜಿಗೆ, ಕಡಲೆಹಿಟ್ಟು/ಕಡಲೆಹಿಟ್ಟು ಮತ್ತು ಅರಿಶಿನ - ಆಂಟಿ ಟ್ಯಾನ್ ಪ್ಯಾಕ್

*3 ಚಮಚಗಳಷ್ಟು ಮಜ್ಜಿಗೆ

*1 ಚಮಚ ಕಡಲೆಹಿಟ್ಟು

*ಚಿಟಿಕೆಯಷ್ಟು ಅರಿಶಿನ

*1 ಸಣ್ಣ ಪಾತ್ರೆ

ಬೌಲ್‌ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿಕೊಳ್ಳಿ ಮಜ್ಜಿಗೆ, ಕಡಲೆಹಿಟ್ಟು ಮತ್ತು ಅರಶಿನವನ್ನು ಜೊತೆಯಾಗಿ ಪೇಸ್ಟ್ ತಯಾರಿಸಿ

ನಿಮ್ಮ ಬೆರಳುಗಳನ್ನು ಬಳಸಿಕೊಂಡು ನಿಮ್ಮ ಸಂಪೂರ್ಣ ತ್ವಚೆಗೆ ಹಚ್ಚಿಕೊಳ್ಳಿ

ಈ ಪ್ಯಾಕ್ ನಿಮ್ಮ ಮುಖದಲ್ಲಿ 15 ನಿಮಿಷಗಳ ಕಾಲ ಹಾಗೆಯೇ ಇರಲಿ ನಂತರ ಅದನ್ನು ತೊಳೆದುಕೊಳ್ಳಿ.

ಮಜ್ಜಿಗೆ, ಟೊಮೇಟೊ ಆಲೀವ್ ಆಯಿಲ್/ಬಾದಾಮಿ ಎಣ್ಣೆ - ಜಿಡ್ಡಿನ ತ್ವಚೆಗಾಗಿ

ಮಜ್ಜಿಗೆ, ಟೊಮೇಟೊ ಆಲೀವ್ ಆಯಿಲ್/ಬಾದಾಮಿ ಎಣ್ಣೆ - ಜಿಡ್ಡಿನ ತ್ವಚೆಗಾಗಿ

*1/2 ಕಪ್ ಮಜ್ಜಿಗೆ

*1 ಚಮಚದಷ್ಟು ಟೊಮೇಟೊ ರಸ

*5 ಹನಿ ಬಾದಾಮಿ/ಆಲೀವ್ ಎಣ್ಣೆ

*5 ಹನಿ ರೋಸ್ ವಾಟರ್

ಜಿಡ್ಡಿನ ತ್ವಚೆಯಲ್ಲಿ ಹೆಚ್ಚುವರಿ ಕೊಳಕು ಸೇರಿರುತ್ತದೆ. ಮಜ್ಜಿಗೆ ಮತ್ತು ಟೊಮೇಟೊವನ್ನು ಬಳಸಿಕೊಂಡು ಈ ಕೊಳೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ - ಮಜ್ಜಿಗೆ, ಟೊಮೇಟೊ, ಆಲೀವ್/ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಅನ್ನು ಸಮಪ್ರಮಾಣದಲ್ಲಿ ಬೆರೆಸಿಕೊಳ್ಳಿ

ಇದು ದ್ರಾವಣವಾಗಿರುವುದರಿಂದ ನೀವು ಹತ್ತಿಯ ಉಂಡೆಯನ್ನು ತೆಗೆದುಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಹೆಚ್ಚು ಜಿಡ್ಡಿರುವ ಭಾಗದಲ್ಲಿ ಇದನ್ನು ಹೆಚ್ಚು ಹಚ್ಚಿರಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

ವಾರದಲ್ಲಿ ಮೂರು ಬಾರಿ ಇದನ್ನು ಮಾಡಿ ನೋಡಿ

ಮಜ್ಜಿಗೆ ಮತ್ತು ಲಿಂಬೆ - ತಲೆಹೊಟ್ಟು ಸಮಸ್ಯೆಗೆ

ಮಜ್ಜಿಗೆ ಮತ್ತು ಲಿಂಬೆ - ತಲೆಹೊಟ್ಟು ಸಮಸ್ಯೆಗೆ

*1 ಸಣ್ಣ ಕಪ್ ಮಜ್ಜಿಗೆ

*2 ಲಿಂಬೆ (ರಸ ಮಾತ್ರ)

ಲಿಂಬೆ ರಸ ಮತ್ತು ಮಜ್ಜಿಗೆಯನ್ನು ಜೊತೆಯಾಗಿ ಬೆರೆಸಿಕೊಳ್ಳಿ

ನಿಮ್ಮ ಬೆರಳುಗಳನ್ನು ಬಳಸಿಕೊಂಡು ಕೂದಲಿನ ಬುಡದಿಂದ ತುದಿಯವರೆಗೆ ಇದನ್ನು ಹಚ್ಚಿಕೊಳ್ಳಿ

30 ನಿಮಿಷಗಳ ಕಾಲ ಇದನ್ನು ಕೂದಲಿನಲ್ಲಿ ಹಾಗೆಯೇ ಬಿಡಿ

ನಂತರ ಮೃದುವಾದ ಶ್ಯಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ

ಮಜ್ಜಿಗೆ, ಮೊಟ್ಟೆ, ಬಾಳೆಹಣ್ಣು, ಜೇನು - ಕೂದಲಿನ ಹೈಡ್ರೇಟಿಂಗ್ ಮಾಸ್ಕ್

ಮಜ್ಜಿಗೆ, ಮೊಟ್ಟೆ, ಬಾಳೆಹಣ್ಣು, ಜೇನು - ಕೂದಲಿನ ಹೈಡ್ರೇಟಿಂಗ್ ಮಾಸ್ಕ್

*1/2 ಕಪ್ ಮಜ್ಜಿಗೆ

*1 ಸಣ್ಣ ಬಾಳೆಹಣ್ಣು

*1 ಮೊಟ್ಟೆ

*5 ಹನಿಗಳಷ್ಟು ಆಲೀವ್ ಆಯಿಲ್

*2 ಚಮಚಗಳಷ್ಟು ಜೇನು

ಮಿಶ್ರಣ ತಯಾರಿಸಲು ಮೊದಲಿಗೆ ಬಾಳೆಹಣ್ಣನ್ನು ಹೋಳುಗಳನ್ನಾಗಿ ಮಾಡಿಕೊಂಡು ಪೇಸ್ಟ್ ತಯಾರಿಸಿ

ಈ ಪೇಸ್ಟ್‌ಗೆ ಜೇನು ಮತ್ತು ಆಲೀವ್ ಆಯಿಲ್ ಅನ್ನು ಬೆರೆಸಿ

ನಂತರ ಮೊಟ್ಟೆಯನ್ನು ಒಡೆದು ನೀವು ತಯಾರಿಸುತ್ತಿರುವ ಹೇರ್ ಮಾಸ್ಕ್‌ಗೆ ಸೇರಿಸಿ. ಮೊಟ್ಟೆಯನ್ನು ಹಾಗೆಯೇ ಹಾಕಿ ಬ್ಲೆಂಡ್ ಮಾಡಿ.

ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಮತ್ತು 30 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಮೃದುವಾದ ಶ್ಯಾಂಪೂನಿಂದ ಕೂದಲನ್ನು ತೊಳೆದುಕೊಳ್ಳಿ.

English summary

How To Use Buttermilk On Skin And Hair?

The best part is, buttermilk can be used both on the skin and hair in different ways by combining it with other simple ingredients, depending on the present condition of your hair or skin.
Subscribe Newsletter