ಬ್ಲ್ಯಾಕ್ ಹೆಡ್‌ಗಳ ಸಮಸ್ಯೆಯೇ? ಹಾಗಿದ್ದರೆ ಇವುಗಳನ್ನು ಮಾಡಿ ನೋಡಿ

By: Divya pandith
Subscribe to Boldsky

ಎಣ್ಣೆ ತ್ವಚೆ, ಧೂಳು, ಮಾಲಿನ್ಯ ಹಾಗೂ ಹಾರ್ಮೋನ್‍ಗಳ ಬದಲಾವಣೆಯಿಂದ ತ್ವಚೆಯ ಮೇಲೆ ಗಣನೀಯ ಪರಿಣಾಮ ಉಂಟಾಗುತ್ತದೆ. ತ್ವಚೆ ಒಡೆಯುವುದು, ಬ್ಲ್ಯಾಕ್ ಹೆಡ್‌ಗಳ ಉತ್ಪತ್ತಿ, ಮೊಡವೆ ಹೀಗೆ ಅನೇಕ ಸಮಸ್ಯೆಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಅವುಗಳಲ್ಲಿ ಅಷ್ಟು ಸುಲಭವಾಗಿ ನಿವಾರಣೆ ಹೊಂದದೆ ತೊಂದರೆ ಕೊಡುವ ಸಮಸ್ಯೆಯೆಂದರೆ ಬ್ಲ್ಯಾಕ್‍ಹೆಡ್ಸ್. ಇವು ತ್ವಚೆಯಲ್ಲಿ ಅಡಗಿ ಕುಳಿತಂತೆ ಇರುತ್ತವೆಯಾದ್ದರಿಂದ ಇವುಗಳನ್ನು ಹೊರ ಹಾಕಲು ಸಾಕಷ್ಟು ಸಾಹಸ ಮಾಡಬೇಕು.

ಇದಕ್ಕಾಗಿ ಪ್ರತಿ ವಾರ ವಿಶೇಷವಾದ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲಿ ಸಿಗುವ ಔಷಧೀಯ ವಸ್ತುಗಳಿಂದ ನಿವಾರಣೆ ಹೊಂದಬಹುದು. ನೀವೂ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೀರಿ ಎಂದಾದರೆ ಇಲ್ಲಿದೆ ನೋಡಿ ಹತ್ತು ಬಗೆಯ ಮನೆ ಔಷಧಿ. ಬಲು ಸರಳ ಹಾಗೂ ಸುಲಭ. ಪರಿಣಾಮವೂ ಉತ್ತಮವಾಗಿರುತ್ತವೆ.

ಜೇಡಿ ಮಣ್ಣು

ಜೇಡಿ ಮಣ್ಣು

* ಒಂದು ಚಮಚ ಜೇಡಿ ಮಣ್ಣು

* 1/2 ಚಮಚ ಆಪಲ್ ಸೈಡರ್ ವಿನೆಗರ್

1. ಈ ಎರಡು ಸಲಕರಣೆಯನ್ನು ಒಂದು ಬೌಲ್‍ನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ.

2. ಈ ಮಿಶ್ರಣವನ್ನು ದಪ್ಪವಾಗಿಯೇ ಮುಖದ ಮೇಲೆ ಅನ್ವಯಿಸಿ. 15 ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ.

3. ಇದು ಮೊದಲು ಗಲ್ಲದ ಬ್ಲ್ಯಾಕ್‍ಹೆಡ್ಸ್‌ಗಳನ್ನು ನಿವಾರಿಸುತ್ತದೆ.

4. ಈ ಮಿಶ್ರಣ ನಿಮಗೆ ಸುಡುವ ಸಂವೇದನೆಯನ್ನು ಉಂಟು ಮಾಡುತ್ತದೆ ಎಂದಾದರೆ ಸ್ವಲ್ಪ ನೀರನ್ನು ಬಳಸಬಹುದು. ಆರಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದು.

ಕಿತ್ತಳೆ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ಸಿಪ್ಪೆ

* ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ

* 3 ಚಮಚ ನಿಂಬು ರಸ

1. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸೂರ್ಯನ ಕಿರಣದಲ್ಲಿಟ್ಟು ಒಣಗಿಸಬೇಕು. ಇದು ಸುಮಾರು ಒಂದು ವಾರ ತೆಗೆದುಕೊಳ್ಳಬಹುದು. ಒಣಗಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು.

2. ಕಿತ್ತಳೆ ಸಿಪ್ಪೆಯ ಪುಡಿಗೆ ನಿಂಬೆ ರಸವನ್ನು ಸೇರಿಸಿ ಮಿಶ್ರಗೊಳಿಸಿ. ಇದನ್ನು ದಿನ ಬಿಟ್ಟು ದಿನ ಹಚ್ಚಿಕೊಳ್ಳಬೇಕು.

3. ಬೇಕಾದ ತ್ವಚೆಯ ಭಾಗಕ್ಕೆ ಇದನ್ನು ಹಚ್ಚಿ 15 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಿರಿ.

4. ತ್ವಚೆಯು ಸಮಸ್ಯೆಯಿಂದ ಮುಕ್ತವಾಗುವುದನ್ನು ನೀವು ಗಮನಿಸಬಹುದು.

ಅಲೋವೆರಾ ಜೆಲ್

ಅಲೋವೆರಾ ಜೆಲ್

* ಒಂದು ಅಲೋವೆರಾ ಎಲೆ

1. ಅಲೋವೆರಾ ಎಲೆಯೊಳಗಿರುವ ಜೆಲ್‍ಅನ್ನು ಬೇರ್ಪಡಿಸಿ.

2. ನಿತ್ಯವೂ ಈ ಜೆಲ್‍ಅನ್ನು ಮುಖದ ಮೇಲೆ ಅನ್ವಯಿಸಿ. 15 ನಿಮಿಷದ ಬಳಿಕ ತೆಗೆಯಿರಿ.

3 ಹೀಗೆ ಮಾಡುವುದರಿಂದ ತ್ವಚೆಗೆ ಉತ್ತಮ ಆರೈಕೆ ದೊರೆಯುವುದು. ಅಲ್ಲದೆ ಬ್ಲ್ಯಾಕ್ ಹೆಡ್‌ಗಳಿಂದ ಮುಕ್ತಿ ಹೊಂದಬಹುದು.

ಹಾಲು ಮತ್ತು ಜೇನುತುಪ್ಪದ ಸ್ಟ್ರಿಪ್ಸ್

ಹಾಲು ಮತ್ತು ಜೇನುತುಪ್ಪದ ಸ್ಟ್ರಿಪ್ಸ್

* ಒಂದು ಚಮಚ ಹಾಲು

* ಒಂದು ಚಮಚ ಜೇನುತುಪ್ಪ

* ಒಂದು ಹತ್ತಿ ಬಟ್ಟೆಯ ಚೂರು

1. ಹಾಲು ಮತ್ತು ಜೇನುತುಪ್ಪವನ್ನು ಮಿಶ್ರಗೊಳಿಸಿ. ಮೈಕ್ರೋವೇವ್‍ನಲ್ಲಿ 30 ನಿಮಿಷ ಬಿಡಿ. ನಂತರ ಆರಲು ಬಿಡಿ.

2. ನಂತರ ಹತ್ತಿ ಬಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ, ಬ್ಲ್ಯಾಕ್ ಹೆಡ್ಸ್ ಆದ ಪ್ರದೇಶದಲ್ಲಿ ಅನ್ವಯಿಸಿ.

3. ಹತ್ತಿ ಬಟ್ಟೆಯು ಅನ್ವಯಿಸಿಕೊಂಡ ಜಾಗದಲ್ಲಿ ಒಣಗಿದ ತಕ್ಷಣ ತೆಗೆಯಿರಿ.

4. ಬ್ಲ್ಯಾಕ್‍ಹೆಡ್ಸ್ ಹೋಗುವುದು. ಈ ವಿಧಾನ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆಯಾದರೂ ಫಲಿತಾಂಶ ಉತ್ತಮವಾಗಿರುತ್ತದೆ.

ದಾಲ್ಚಿನ್ನಿ ಮತ್ತು ಜೇನುತುಪ್ಪದ ಸ್ಟ್ರೈಪ್ಸ್

ದಾಲ್ಚಿನ್ನಿ ಮತ್ತು ಜೇನುತುಪ್ಪದ ಸ್ಟ್ರೈಪ್ಸ್

* 2 ಚಮಚ ದಾಲ್ಚಿನ್ನಿ ಪೌಡರ್

* ಒಂದು ಚಮಚ ಜೇನುತುಪ್ಪ

* ಹತ್ತಿ ಬಟ್ಟೆ

1. ದಾಲ್ಚಿನ್ನಿ ಪೌಡರ್ ಮತ್ತು ಜೇನುತುಪ್ಪವನ್ನು ಮಿಶ್ರಗೊಳಿಸಿ.

2. ಹತ್ತಿ ಬಟ್ಟೆಯನ್ನು ಮಿಶ್ರಣದಲ್ಲಿ ಅದ್ದಿ ತ್ವಚೆಯ ಮೇಲೆ ಅನ್ವಯಿಸಿ. 15 ನಿಮಿಷ ಆರಲು ಬಿಡಿ

3. ಆರಿದ ನಂತರ ತಂಪಾದ ನೀರಿನಲ್ಲಿ ತೊಳೆಯಿರಿ.

ಜೋಜೊಬಾ ಎಣ್ಣೆ ಮತ್ತು ಗ್ರ್ಯಾನ್ಯುಲರ್ ಸಕ್ಕರೆ

ಜೋಜೊಬಾ ಎಣ್ಣೆ ಮತ್ತು ಗ್ರ್ಯಾನ್ಯುಲರ್ ಸಕ್ಕರೆ

* 2 ಚಮಚ ಗ್ರ್ಯಾನ್ಯುಲರ್ ಸಕ್ಕರೆ

* 2 ಚಮಚ ಜೋಜೊಬಾ ಎಣ್ಣೆ

1. ಇವೆರಡು ಸಲಕರಣೆಯನ್ನು ಸೇರಿಸಿ. ಆದರೆ ಸಕ್ಕರೆ ಕರಗುವಷ್ಟು ಮಿಶ್ರಣ ಮಾಡಬಾರದು.

2. ತಕ್ಷಣ ತ್ವಚೆಯ ಮೇಲೆ ಅನ್ವಯಿಸಿ 15 ನಿಮಿಷ ಆರಲು ಬಿಡಿ. ಗಟ್ಟಿಯಾಗಿ ಮಸಾಜ್ ಮಾಡಬಾರದು.

3. ತಂಪಾದ ನೀರಿನಲ್ಲಿ ತೊಳೆಯಿರಿ. ಆರಂಭದಲ್ಲಿ ಮುಖ ಸ್ವಲ್ಪ ಕೆಂಪಾದಂತೆ ಕಾಣಿಸುವುದು.

ಬೇಕಿಂಗ್ ಪೌಡರ್

ಬೇಕಿಂಗ್ ಪೌಡರ್

* ಒಂದು ಚಮಚ ಬೇಕಿಂಗ್ ಪೌಡರ್

* ಒಂದು ಸಣ್ಣ ಬಟ್ಟಲಲ್ಲಿ ಅರ್ಧದಷ್ಟು ನೀರು

1. ನೀರಿನಲ್ಲಿ ಬೇಕಿಂಗ್ ಪೌಡರ್ ಸೇರಿಸಿ ತೆಳುವಾದ ಪೇಸ್ಟ್ ತಯಾರಿಸಿಕೊಳ್ಳಿ.

2. ಗಲ್ಲ ಹಾಗೂ ಮುಖಕ್ಕೆ ಇದನ್ನು ಅನ್ವಯಿಸಿ.

3. 15 ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆಯಿರಿ.

4. ಬಳಿಕ ಯಾವುದೇ ಮಾಯ್ಚುರೈಸ್ ಕ್ರೀಮ್ ಅನ್ವಯಿಸಬಾರದು.

ಮೊಸರು ಮತ್ತು ಓಟ್ಸ್‌ಮೀಲ್

ಮೊಸರು ಮತ್ತು ಓಟ್ಸ್‌ಮೀಲ್

* 1 ಚಮಚ ಮೊಸರು

* 1 ಚಮಚ ಓಟ್ಸ್‌ಮೀಲ್

1. ಓಟ್ಸ್‌ಮೀಲ್ ಅನ್ನು ಮಿಕ್ಸಿಯಲ್ಲಿ ರುಬ್ಬಿ, ಪೌಡರ್ ಮಾಡಿಕೊಳ್ಳಿ.

2. ಈಗ ಓಟ್ಸ್‌ಮೀಲ್ ಪೌಡರ್‍ಅನ್ನು ಮೊಸರಿನಲ್ಲಿ ಸೇರಿಸಿ ಒಂದು ಮಿಶ್ರಣ ತಯಾರಿಸಿ.

3. ಅದನ್ನು ಮುಖಕ್ಕೆ ಅನ್ವಯಿಸಿ, ಆರಲು ಬಿಡಿ.

4. ಹೆಚ್ಚು ಸಮಯ ಒಣಗಲು ಬಿಡಬೇಕೆಂದೇನು ಇಲ್ಲ. ಬೇಗ ತೊಳೆದುಕೊಳ್ಳಬಹುದು.

ಎಪ್ಸಮ್ ಉಪ್ಪು ಮತ್ತು ನೀರು

ಎಪ್ಸಮ್ ಉಪ್ಪು ಮತ್ತು ನೀರು

* 1 ಚಮಚ ಉಪ್ಪು

* 5 ಹನಿ ಆಯೋಡಿನ್

* 1/2 ಕಪ್ ಬಿಸಿ ನೀರು

1. ಬಿಸಿ ನೀರಿಗೆ ಎಪ್ಸಮ್ ಉಪ್ಪನ್ನು ಬೆರೆಸಿ ತಣಿಯಲು ಬಿಡಿ.

2. ಈ ಮಿಶ್ರಣಕ್ಕೆ ಆಯೋಡಿನ್ ಹನಿಯನ್ನು ಸೇರಿಸಿ.

3. ನಂತರ ಬ್ಲ್ಯಾಕ್‍ಹೆಡ್ಸ್ ಪ್ರದೇಶದಲ್ಲಿ ಮಿಶ್ರಣವನ್ನು ಅನ್ವಯಿಸಿ ಸ್ವಚ್ಛಗೊಳಿಸಿ.

4. ಈ ವಿಧಾನದಿಂದ ತಕ್ಷಣ ಪರಿಣಾಮ ಉಂಟಾಗದು. ನಿಧಾನವಾಗಿ ಪರಿಣಾಮ ಬೀರುವುದು.

ಟೂತ್‍ಪೇಸ್ಟ್

ಟೂತ್‍ಪೇಸ್ಟ್

* ಯಾವುದಾದರೂ ಬಿಳಿಬಣ್ಣದ ಟೂತ್‍ಪೇಸ್ಟ್

* ಒಂದು ಹಳೆಯ ಬ್ರೆಶ್

1. ಮುಖದ ಮೇಲಿರುವ ಬ್ಲ್ಯಾಕ್‍ಹೆಡ್ಸ್ ಪ್ರದೇಶದಲ್ಲಿ ಪೇಸ್ಟ್‍ಅನ್ನು ಅನ್ವಯಿಸಿ.

2. ಹಳೆಯ ಬ್ರೆಶ್‍ನಿಂದ ಬ್ಲ್ಯಾಕ್ ಹೆಡ್ಸ್ ಪ್ರದೇಶದಲ್ಲಿ 5-7 ನಿಮಿಷಗಳ ಕಾಲ ಮಸಾಜ್ ಮಾಡಿ.

3. ನಂತರ ತಣ್ಣೀರಿನಲ್ಲಿ ತೊಳೆಯಿರಿ.

4. ಯಾವುದೇ ಕಾರಣಕ್ಕೂ ಹೊಸ ಅಥವಾ ಒರಟಾದ ಬ್ರೆಶ್ ಬಳಸದಿರಿ. ಇದು ತ್ವಚೆಯ ಮೇಲೆ ಗಾಯವನ್ನುಂಟುಮಾಡುವುದು.

English summary

Home Remedies That Will Certainly Clear Your Chin Blackheads

Blackheads happen at different parts of the body and there is no single remedy for it. Depending on which area of the body you are looking at to treat the blackheads, you have to pick a relevant remedy. Chin blackheads can be caused due to the extra oil and sebum buildup on your skin that grabs dirt and grime, leading to blackheads.
Story first published: Wednesday, August 30, 2017, 23:47 [IST]
Subscribe Newsletter