ಆಭರಣಕ್ಕಾಗಿ ಚುಚ್ಚಿಸಿಕೊಂಡ ವೇಳೆ ಮಾಡಬಹುದಾದ ಮನೆಮದ್ದುಗಳು

By: Hemanth
Subscribe to Boldsky

ಫ್ಯಾಷನ್ ಯುಗದಲ್ಲಿ ಮಾಡಿದೆಲ್ಲವೂ ಚೆನ್ನಾಗಿ ಕಾಣುವುದು ಮತ್ತು ಅದೇ ಹೊಸ ಫ್ಯಾಷನ್ ಆಗುತ್ತೆ. ಇತ್ತೀಚೆಗೆ ಹುಡುಗಿಯರು ಹಾಗೂ ಹುಡುಗರಲ್ಲಿ ಚುಚ್ಚಿಸಿಕೊಳ್ಳುವ ಹೊಸ ಫ್ಯಾಷನ್ ಹುಟ್ಟಿಕೊಂಡಿದೆ. ಏನಪ್ಪಾ ಇದು ಚುಚ್ಚಿಸಿಕೊಳ್ಳುವುದು ಎಂದು ನಿಮಗನಿಸಬಹುದು. ದೇಹದ ಯಾವ್ಯಾವ ಭಾಗಕ್ಕೆ ಚುಚ್ಚಿಸಿಕೊಳ್ಳಲು ಸಾಧ್ಯವೋ ಆ ಭಾಗಕ್ಕೆ ಚುಚ್ಚಿಸಿಕೊಂಡು ರಿಂಗ್ ಧರಿಸುವುದು. ಹಿಂದೆ ಮೂಗು ಹಾಗೂ ಕಿವಿಗೆ ಮಾತ್ರ ಆಭರಣಗಳನ್ನು ಚುಚ್ಚಿಸಿಕೊಳ್ಳಲಾಗುತ್ತಾ ಇತ್ತು.

ಆದರೆ ಇಂದಿನ ಫ್ಯಾಷನ್ ಯುಗದಲ್ಲಿ ಮೂಗು, ಕಿವಿ, ಕಿವಿಯ ಮೇಲ್ಭಾಗ, ಮೇಲ್ದುಟಿ, ಹೊಕ್ಕಳು ಹೀಗೆ ಎಲ್ಲಿ ಸಾಧ್ಯವೋ ಅಲ್ಲಿಗೆಲ್ಲಾ ರಿಂಗ್ ಚುಚ್ಚಿಸಿಕೊಂಡು ಬಿಡುತ್ತಾರೆ. ಮೊದಲಿಗೆ ಈ ಆಭರಣಗಳನ್ನು ಮೂಗುತಿ, ಕಿವಿಯೋಲೆ ಎನ್ನಬಹುದಾಗಿತ್ತು. ಆದರೆ ಈಗ ಇದನ್ನು ಹೇಗೆ ಕರೆಯಬೇಕೆಂದೇ ತಿಳಿಯದು. 

ಚಿಕ್ಕ ವಯಸ್ಸಿನಲ್ಲಿಯೇ ಕಿವಿ ಚುಚ್ಚಿದರೆ, ಪುಟಾಣಿಗಳ ಆರೋಗ್ಯ ವೃದ್ಧಿ

ಇದು ಕೆಲವರಿಗೆ ತುಂಬಾ ಚೆನ್ನಾಗಿ ಕಾಣಿಸಿದರೂ ಇನ್ನು ಕೆಲವರಿಗೆ ಇವರು ಯಾಕಪ್ಪಾ ಮುಖದ ಸೌಂದರ್ಯ ಹಾಳು ಮಾಡಿಕೊಂಡಿದ್ದಾರೆ ಎಂದು ಅನಿಸುವುದುಂಟು. ಆಭರಣಗಳನ್ನು ಚುಚ್ಚಿಸಿಕೊಳ್ಳುವಾಗ ತುಂಬಾ ನೋವು ಆಗುವುದು ಸಹಜ. ಇಂತಹ ಚುಚ್ಚಿಸಿಕೊಳ್ಳುವ ವೇಳೆ ಆ ಭಾಗವು ಸ್ಪರ್ಶವನ್ನು ಕಳೆದುಕೊಳ್ಳಲು ಔಷಧಿ ನೀಡಲಾಗುತ್ತದೆ. ಹೀಗೆ ಆಭರಣವನ್ನು ತುಂಬಾ ಸಣ್ಣ ವಯಸ್ಸಿನಲ್ಲಿ ಚುಚ್ಚಿಸಿಕೊಳ್ಳಬಹುದು ಅಥವಾ ದೊಡ್ಡವರಾದ ಮೇಲೆ ಚುಚ್ಚಿಸಿಕೊಳ್ಳಬಹುದು.

ಆದರೆ ನೋವು ಮಾತ್ರ ಇದ್ದೇ ಇರುತ್ತದೆ. ಹೀಗೆ ಆಭರಣ ಚುಚ್ಚಿಸಿದ ಬಳಿಕ ನೋವು ಹಾಗೂ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ ಸರಿಯಾದ ಸ್ವಚ್ಛತೆ ಮತ್ತು ಚರ್ಮದ ಆರೈಕೆ ಮಾಡಿದರೆ ಆಗ ಖಂಡಿತವಾಗಿಯೂ ಇದರಿಂದ ಮುಕ್ತಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಔಷಧಿ ಬಳಸುವ ಬದಲು ಮನೆಯಲ್ಲೇ ಕೆಲವೊಂದು ಮದ್ದನ್ನು ತಯಾರಿಸಿ ಬಳಸಿದರೆ ಸೂಕ್ತ. ಚುಚ್ಚಿಸಿಕೊಳ್ಳುವಾಗ ಕಾಣಿಸಿಕೊಳ್ಳುವ ನೋವಿನಿಂದ ಹಿಡಿದು ಚುಚ್ಚಿಸಿಕೊಂಡ ಬಳಿಕ ಆಗುವ ನೋವು ಮತ್ತು ಅದು ಒಣಗಲು ಏನು ಮಾಡಬೇಕು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...

ಸೋಪ್ ನೀರು

ಸೋಪ್ ನೀರು

ದೇಹದ ಯಾವುದೇ ಭಾಗಕ್ಕೆ ಆಭರಣ ಚುಚ್ಚಿಸಿಕೊಂಡಿದ್ದರೂ ಅದನ್ನು ತುಂಬಾ ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಈ ಆಭರಣಗಳನ್ನು ಸ್ವಚ್ಛವಾಗಿಡಲು ಪ್ರತಿದಿನವೂ ಇದನ್ನು ಸ್ವಚ್ಛಗೊಳಿಸುತ್ತಾ ಇರಬೇಕು. ಹೆಚ್ಚಿನ ನೀರು ಹಾಕಿಕೊಳ್ಳಬೇಡಿ. ಯಾಕೆಂದರೆ ಇದು ಆ ಪ್ರದೇಶಕ್ಕೆ ಹಾನಿ ಉಂಟು ಮಾಡಿ ಚರ್ಮದ ರಂಧ್ರಗಳು ತುಂಬಿ ಹೋಗಬಹುದು.

ಅಲೋವೆರಾ ಜೆಲ್

ಅಲೋವೆರಾ ಜೆಲ್

ಆಭರಣ ಚುಚ್ಚಿಕೊಂಡ ಜಾಗಕ್ಕೆ ಶಮನ ನೀಡಲು ತಾಜಾ ಅಲೋವೆರಾ ಜೆಲ್ ನ್ನು ಬಳಸಿಕೊಳ್ಳಬೇಕು. ಅಲೋವೆರಾದ ಒಂದು ಅಥವಾ ಎರಡು ಎಲೆಗಳನ್ನು ತೆಗೆದುಕೊಳ್ಳಿ. ಇದನ್ನು ನಡುವಿನಲ್ಲಿ ತುಂಡು ಮಾಡಿಕೊಂಡು ಅದರ ಲೋಳೆ ತೆಗೆಯಿರಿ. ಅಲೋವೆರಾ ಜೆಲ್ ನ್ನು ಆಭರಣ ಚುಚ್ಚಿಕೊಂಡ ಜಾಗಕ್ಕೆ ಹಾಕಿದಾಗ ನಿಮಗೆ ಶಮನಕಾರಿ ಅನುಭವವಾಗುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಅಲೋವೆರಾ ಜೆಲ್‌ಗಳನ್ನು ಬಳಸಬೇಡಿ.

ಬಿಸಿ ತೆಂಗಿನೆಣ್ಣೆ

ಬಿಸಿ ತೆಂಗಿನೆಣ್ಣೆ

ಚುಚ್ಚಿಸಿಕೊಂಡಿರುವ ಸುತ್ತಲಿನ ಜಾಗಕ್ಕೆ ಬಿಸಿ ಕೊಡಬೇಕು. ಇದರಿಂದ ಸುತ್ತಲಿನ ಕೋಶಗಳು ವೇಗವಾಗಿ ಶಮನವಾಗುವುದು. ಒಂದು ಚಮಚದಲ್ಲಿ ಸ್ವಲ್ಪ ತೆಂಗಿನೆಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿಕೊಳ್ಳಿ. ತೆಂಗಿನೆಣ್ಣೆಯನ್ನು ಅತಿಯಾಗಿ ಬಿಸಿ ಮಾಡಬೇಡಿ. ಅತಿಯಾಗಿ ಬಿಸಿ ಮಾಡಿದರೆ ಚುಚ್ಚಿಸಿಕೊಂಡಿರುವ ಜಾಗಕ್ಕೆ ಹಾಕಿಕೊಳ್ಳುವ ಮೊದಲು ಅದನ್ನು ತಣ್ಣಗೆ ಮಾಡಿ. ಸ್ವಲ್ಪ ಬೆಚ್ಚಗೆ ಇರುವಂತಹ ತೆಂಗಿನೆಣ್ಣೆಯನ್ನು ನೇರವಾಗಿ ಚುಚ್ಚಿಸಿಕೊಂಡ ಜಾಗಕ್ಕೆ ಹಚ್ಚಬಹುದು. ಯಾವುದೇ ರಂಧ್ರಗಳು ಮುಚ್ಚಿಹೋಗದಂತೆ ನೋಡಿಕೊಳ್ಳುತ್ತದೆ.

ಐಸ್ ಪ್ಯಾಕ್

ಐಸ್ ಪ್ಯಾಕ್

ಇದನ್ನು ಮಾಡಲು ಐಸ್ ಮತ್ತು ಒಂದು ಟವೆಲ್ ಬೇಕಾಗಿದೆ. ಐಸ್ ಅನ್ನು ಹುಡಿ ಮಾಡಿಕೊಂಡು ಅದನ್ನು ಒಂದು ಟವೆಲ್‌ಗೆ ಹಾಕಿಕೊಳ್ಳಿ ಮತ್ತು ಅದನ್ನು ಆ ಜಾಗಕ್ಕೆ ಹಚ್ಚಿಕೊಳ್ಳಿ. ನೇರವಾಗಿ ಚುಚ್ಚಿಕೊಂಡ ಜಾಗಕ್ಕೆ ಐಸ್ ಇಡಬೇಡಿ. ಇದರಿಂದ ಬೇರೆ ಪರಿಣಾಮ ಉಂಟಾಗಬಹುದು.

ಉಪ್ಪು ನೀರು

ಉಪ್ಪು ನೀರು

ಚುಚ್ಚಿಸಿಕೊಂಡ ಜಾಗಕ್ಕೆ ಮತ್ತೊಂದು ಮನೆಮದ್ದು ಎಂದೆ ಉಪ್ಪು ನೀರಿನ ಚಿಕಿತ್ಸೆ. ಆಯೋಡಿಕರಿಸಿದೆ ಇರುವ ಉಪ್ಪು ಮತ್ತು ಬಿಸಿ ನೀರನ್ನು 8:1 ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣವು ತಣ್ಣಗೆ ಆದಾಗ ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಂಡು ಆಭರಣ ಚುಚ್ಚಿಸಿಕೊಂಡಿರುವ ಜಾಗಕ್ಕೆ ಹಚ್ಚಿ. ಉಪ್ಪು ನೀರಿನ ಪ್ರಕ್ರಿಯೆಯು ಐದು ನಿಮಿಷ ಕಾಲ ಮತ್ತು ದಿನದಲ್ಲಿ ನಾಲ್ಕು ಸಲ ಮಾಡಬೇಕು.

ಆಲ್ಕೋಹಾಲ್ ಉಜ್ಜಿಕೊಳ್ಳುವುದು

ಆಲ್ಕೋಹಾಲ್ ಉಜ್ಜಿಕೊಳ್ಳುವುದು

ಆಭರಣ ಚುಚ್ಚಿಕೊಂಡ ಜಾಗದಲ್ಲಿ ನೋವು ಮಾಯವಾಗದೆ ಹಾಗೆ ಉಳಿದುಕೊಂಡಿದ್ದರೆ ಮತ್ತು ಅದು ಸೋಂಕಿಗೆ ಒಳಗಾಗಿದ್ದರೆ ಆಗ ಆಲ್ಕೋಹಾಲ್ ನ್ನು ಆ ಜಾಗಕ್ಕೆ ಹಚ್ಚಿಕೊಳ್ಳಬೇಕು. ಹತ್ತಿ ಉಂಡೆಗೆ ಆಲ್ಕೋಹಾಲ್ ಹಾಕಿಕೊಂಡು ಅದನ್ನು ಆಭರಣ ಚುಚ್ಚಿಸಿಕೊಂಡ ಜಾಗಕ್ಕೆ ಹಚ್ಚಿಕೊಳ್ಳಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಸಮಸ್ಯೆ ನಿವಾರಣೆ ಆಗುವ ತನಕ ಹೀಗೆ ಮಾಡಿದರೆ ನಿಮಗೆ ಬೇಕಾದ ಆಭರಣವನ್ನು ನೋವಿಲ್ಲದೆ ಹಾಕಿಕೊಳ್ಳಬಹುದು.

ಅರಿಶಿನ ಹಾಲು

ಅರಿಶಿನ ಹಾಲು

ಚುಚ್ಚಿಸಿಕೊಂಡ ಜಾಗಕ್ಕೆ ಶಮನ ನೀಡಲು ಅರಶಿನ ಮತ್ತು ಹಾಲು ಅದ್ಭುತವಾಗಿ ಕೆಲಸ ಮಾಡುತ್ತದೆ. ತಾಜಾ ತಣ್ಣಗಿನ ಹಾಲು ತೆಗೆದುಕೊಳ್ಳಿ ಮತ್ತು ಇದಕ್ಕೆ ಅರಶಿನ ಹುಡಿ ಹಾಕಿ. ಎರಡು ಚಮಚ ಹಸಿ ಹಾಲಿಗೆ ಒಂದು ಚಿಟಿಕೆ ಅರಿಶಿನ ಹಾಕಿ. ದಪ್ಪಗಿನ ಪೇಸ್ಟ್ ಆಗುವ ತನಕ ಕಲಸಿಕೊಳ್ಳಿ. ಚುಚ್ಚಿಸಿಕೊಂಡ ಜಾಗಕ್ಕೆ ಇದನ್ನು ಹಚ್ಚಿ ಒಣಗಲು ಬಿಡಿ. ಚುಚ್ಚಿಸಿಕೊಂಡ ಜಾಗಕ್ಕೆ ಇರುವ ಇತರ ಕೆಲವೊಂದು ಮನೆಮದ್ದಿನೊಂದಿಗೆ ಇದನ್ನು ದಿನದಲ್ಲಿ ಮೂರು ಸಲ ಪ್ರಯೋಗಿಸಿ.

ಕರಿಬೇವಿಸ ಪೇಸ್ಟ್ ಮತ್ತು ಕಡ್ಡಿ

ಕರಿಬೇವಿಸ ಪೇಸ್ಟ್ ಮತ್ತು ಕಡ್ಡಿ

ಕರಿಬೇವಿನ ಪೇಸ್ಟ್ ಮತ್ತು ಕಡ್ಡಿಯು ಚುಚ್ಚಿಸಿಕೊಂಡಿರುವ ಜಾಗಕ್ಕೆ ಅದ್ಭುತವಾಗಿ ಕೆಲಸ ಮಾಡಲಿದೆ. ಚುಚ್ಚಿಸಿಕೊಂಡ ಮೊದಲ ಮೂರು ದಿನದಲ್ಲಿ ರಾತ್ರಿ ವೇಳೆ ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿಡಿ. ಇದನ್ನು ಬೆಳಿಗ್ಗೆ ತೆಗೆದು ರುಬ್ಬಿಕೊಂಡು ಪೇಸ್ಟ್ ಮಾಡಿ ಚುಚ್ಚಿಕೊಂಡ ಜಾಗಕ್ಕೆ ಹಚ್ಚಿಕೊಳ್ಳಿ. ನೋವು ಕಡಿಮೆಯಾಗಿದೆಯೆಂದು ನಿಮಗನಿಸಿದಾಗ ಕರಿಬೇವಿನ ಕಡ್ಡಿಯನ್ನು ಒಂದು ವಾರ ಕಾಲ ಆಭರಣವಾಗಿ ಬಳಸಿಕೊಳ್ಳಿ. ಇದರ ಬಳಿಕ ನೀವು ಚುಚ್ಚಿಸಿಕೊಂಡಿರುವ ಜಾಗಕ್ಕೆ ಯಾವುದೇ ರೀತಿಯ ಆಭರಣ ಧರಿಸಬಹುದು.

English summary

Home Remedies To Follow After You Get A Piercing On Your Body

There are home remedies for piercing and if those are followed from the very first day, the scope of the piercing getting clogged or septic occurring reduces. Enlist the following home remdies for piercing and ensure you follow these from the novice stage to make sure that your piercing gets healed soon and you can accessorize it with nice danglings or studs.
Subscribe Newsletter